ಪುಸ್ತಕದ ಶೀರ್ಷಿಕೆ: "ದೂರ ಸರಿದರು"
ಪುಸ್ತಕದ ಲೇಖಕರು: ಶ್ರೀ ಎಸ್ ಎಲ್ ಭೈರಪ್ಪ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸುನೀಲ್ ಕುಮಾರ್ ಡಿ ದೇಸಾಯಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ದೂರ ಸರಿದರು "ದೂರ ಸರಿದರು"ಕಾದಂಬರಿಯು 1962ರಲ್ಲಿ ಪ್ರಕಟಗೊಂಡ ಶ್ರೀ ಎಸ್ ಎಲ್ ಭೈರಪ್ಪ ಅವರ ಅದ್ಭುತ ಕಾದಂಬರಿ. ಮೈಸೂರಿನ ಕಾಲೇಜೊಂದರಲ್ಲಿ ಸಾಹಿತ್ಯ ಮತ್ತು ತತ್ವಶಾಸ್ತ್ರದ ವಿದ್ಯಾರ್ಥಿಗಳಾದ ಸಚ್ಚಿದಾನಂದ-ವಿನತೆ ಮತ್ತು ವಸಂತ-ಉಮೆ ಇವರ ನಡುವಿನ ಪ್ರೇಮಕಥೆ ಹಾಗೂ ವಾಸನ್-ವಿಜಯಕುಮಾರಿ ಅವರ ಪ್ರೇಮ ಹಾಗೂ ದಾಂಪತ್ಯದಲ್ಲಿ ಎದುರಾಗುವ ಸಂಘರ್ಷಗಳ ಕುರಿತು ಡಾ. ಎಸ್ ಎಲ್ ಭೈರಪ್ಪ ಅವರು ಈ ಕಾದಂಬರಿಯಲ್ಲಿ ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಜಗತ್ತಿನ ಸಾಹಿತ್ಯ ಲೋಕದಲ್ಲಿ ಗಂಡು ಮತ್ತು ಹೆಣ್ಣಿನ ಪ್ರೇಮದ ಕುರಿತಾಗಿ ಸಾಕಷ್ಟು ಪ್ರೇಮಕಥೆಗಳು, ಕಾದಂಬರಿಗಳು ಹೊರಬಂದಿವೆ. ಜಗತ್ತಿನ ಸೃಷ್ಟಿಗೆ ಪ್ರೀತಿಯೇ ಮೂಲಾದಾರವಾಗಿದೆ ಎಂಬುದು ಸರ್ವವೇದ್ಯ ಸಂಗತಿಯಾಗಿದೆ. ಆದರೆ ಈ ಪ್ರೀತಿಯ ಕಾರಣಕ್ಕಾಗಿ ಜಗತ್ತಿನಾದ್ಯಂತ ಅದೆಷ್ಟೋ ದುರಂತಗಳು ಕೂಡ ನಡೆದು ಹೋಗಿವೆ...!! ಲೈಲಾ ಮತ್ತು ಮಜ್ನು ಬಾಲ್ಯದ ಗೆಳೆಯರು, ಅವರು ಪ್ರೀತಿಸುತ್ತಿದ್ದರು. ಆದರೆ ಅವರ ಪ್ರೀತಿಯನ್ನು ಕುಟುಂಬಗಳು ವಿರೋಧಿಸಿದವು. ಲೈಲಾಳನ್ನು ಪ್ರೀತಿಸಿದ್ದಕ್ಕಾಗಿ ಮಜ್ನು ಹತ್ಯೆಯಾಗುತ್ತಾನೆ. ಇದನ್ನು ಕಂಡ ಲೈಲಾ ಕೂಡ ಆತ್ಮಹತ್ಯೆಗೆ ಶರಣಾಗುತ್ತಾಳೆ. ತನ್ಮೂಲಕ ದುರಂತ ಅಂತ್ಯಕ್ಕೀಡಾಗುತ್ತಾರೆ...!! ಅದೇ ರೀತಿ ವಿಲಿಯಂ ಶೇಕ್ಸಪಿಯರ್ ಬರೆದ ರೋಮಿಯೋ-ಜೂಲಿಯಟ್ ಕೂಡ ಇಂಥದ್ದೇ ಒಂದು ದುರಂತ ಅಮರ ಪ್ರೇಮಕಥೆಯಾಗಿದೆ. ಕೌಟುಂಬಿಕ ವಿರೋಧದ ನಡುವೆಯೂ ರಹಸ್ಯವಾಗಿ ಮದುವೆಯಾದ ಈ ಜೋಡಿ ಆ ನಂತರದ ಸಂಘರ್ಷಮಯ ಜೀವನದಲ್ಲಿ ಇಬ್ಬರೂ ದುರಂತ ಅಂತ್ಯವನ್ನು ಕಾಣುತ್ತಾರೆ...!! ಹೀಗೆ ಜಗತ್ತಿನ ಇತಿಹಾಸದಲ್ಲಿ ಪ್ರೇಮಕತೆಗಳು ದುರಂತಕ್ಕೀಡಾಗಿದ್ದೆ ಹೆಚ್ಚು, ಆದರೆ ಭಾರತದಲ್ಲಿ ದುಷ್ಯಂತ ಮತ್ತು ಶಾಕುಂತಲೆಯರ ಪ್ರೇಮಕಥೆಯು ಮಹಾಭಾರತದ ಪ್ರಸಿದ್ಧ ಪ್ರೇಮಕಥೆಯಾಗಿದೆ. ಬೇಟೆಗೆ ಹೋದ ದುಶ್ಯಂತನು ಕಣ್ವ ಮಹರ್ಷಿಗಳ ಆಶ್ರಮದಲ್ಲಿ ಬೆಳೆದ ಶಕುಂತಲೆಯನ್ನು ನೋಡಿ ಮೋಹಗೊಂಡು ಗಾಂಧರ್ವ ವಿವಾಹವಾಗುತ್ತಾನೆ. ಆದರೆ ನಂತರ ಕಣ್ವ ಮಹರ್ಷಿಗಳ ಶಾಪದಿಂದ ಅವಳನ್ನು ಮರೆಯುವುದು, ನಂತರ ಮೀನುಗಾರರ ಕೈಗೆ ಸಿಕ್ಕ ಉಂಗುರದಿಂದಾಗಿ ಮತ್ತೆ ಹಿಂದಿನ ಪ್ರೇಮಾ ಪ್ರಸಂಗ ನೆನಪಾಗಿ, ಶಕುಂತಲೆಯನ್ನು ಸ್ವೀಕರಿಸುವ ಮೂಲಕ ಸುಖಾಂತ್ಯ ಕಾಣುತ್ತದೆ. ಪ್ರಸ್ತುತ ದೂರ ಸರಿದರು ಕಾದಂಬರಿಯ ಪ್ರಮುಖ ಪಾತ್ರವಾದ ಸಚ್ಚಿದಾನಂದ ಒಂದು ವರ್ಷದ ವಯಸ್ಸಿನಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆದವನು. ತಾಯಿ ಗೌರಮ್ಮನಿಗೆ ಮಗ ಆನಂದನೆ ಸರ್ವಸ್ವ. ಯಾವುದೇ ಭೂಮಿಯು ಇಲ್ಲದ ಇವರಿಗೆ ಇನ್ಶುರೆನ್ಸ್ ನಿಂದ ಬಂದ 4000 ರೂ. ಹಣವನ್ನು ತೆಗೆದುಕೊಂಡು ಮೈಸೂರಿನ ಲಕ್ಷ್ಮೀಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ಮೆಣಸಿನಪುಡಿ, ಹಪ್ಪಳ, ಸಂಡಿಗೆ ಮಾಡಿ ಯಾರ ಮನೆಯಲ್ಲಾದರೂ ಮಡಿ ಹುಡಿ ಕಾರ್ಯಗಳಲ್ಲಿ ಅಡುಗೆ ಮಾಡಿ, ಮಗನನ್ನು ಓಡಿಸಿದವರು. ಆನಂದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯಾಗಿ ಬೆಳೆದನು. ಆಂಗ್ಲಸಾಹಿತ್ಯ, ತತ್ವಶಾಸ್ತ್ರದ, ಸಂಸ್ಕೃತ ಮತ್ತು ಹಳಗನ್ನಡ ಸಾಹಿತ್ಯ ಅವನ ಅಚ್ಚುಮೆಚ್ಚಿನ ವಿಷಯಗಳಾಗಿದ್ದವು. ಇಂಗ್ಲೀಷ್ (ಆನರ್ಸ್) ಪದವಿ ಓದುತ್ತಿದ್ದ ಆನಂದ ಅತ್ಯಂತ ಪ್ರತಿಭಾವಂತನಾಗಿದ್ದ ಹಾಗೂ ಪದವಿ ಹಂತದಲ್ಲಿದ್ದಾಗಲೇ ಸಾಹಿತ್ಯದಲ್ಲಿ ಬಹುತೇಕ ಉತ್ತಮ ಕೃಷಿ ಮಾಡಿದ್ದಒಬ್ಬ ಕ್ರಿಯಾಶೀಲ ಓದುಗನಾಗಿದ್ದ. ಅದೇ ತರಗತಿಯಲ್ಲಿ ಓದುತ್ತಿದ್ದ ವಿನತೆಯು ಸಾಹಿತ್ಯ ಮತ್ತು ಕಾವ್ಯದಲ್ಲಿ ಆಸಕ್ತಿ, ಅಭಿರುಚಿ ಹೊಂದಿದ್ದಳು.ಇಬ್ಬರೂ ಕೂಡ ಸಮಾನ ಆಸಕ್ತಿಯುಳ್ಳ ಯುವಜೋಡಿ. ಸಾಹಿತ್ಯದ ಕುರಿತು ಚರ್ಚಿಸುತ್ತಾ ಪ್ರೇಮಲೋಕದಲ್ಲಿ ಬಂಧಿಯಾಗುತ್ತಾರೆ. ತದನಂತರ ಇವರಿಬ್ಬರ ಪ್ರೀತಿಗೆ ವಿನತೆಯ ಅಮ್ಮನ ವಿರೋಧ ಉಂಟಾಗುತ್ತದೆ. ವಿನಟೆಯ ತಾಯಿ ಹಣ ಮತ್ತು ಜಾತಿಯೇ ಮುಖ್ಯ ಎಂದು ಭಾವಿಸಿದ್ದ ಮಹಿಳೆ. ವಿನತೆಯದ್ದು ಬ್ರಾಹ್ಮಣ ಜಾತಿಯ ಶ್ರೀವೈಷ್ಣವ ಪಂಗದವಾದರೆ ಆನಂದನದ್ದು ಸ್ಮಾರ್ತ ಬ್ರಾಹ್ಮಣ ಕುಟುಂಬ. ಜಾತಿ ಒಂದೇ ಆದರೂ ಪಂಗಡಗಳು ಬೇರೆ ಎಂಬ ಕಾರಣ ಒಂದೆಡೆಯಾದರೆ ಸ್ಥಿತಿವಂತನಲ್ಲದ ಒಬ್ಬ ಬಡ ವಿದ್ಯಾರ್ಥಿ. ಆದರೆ ಅವನು ಪ್ರತಿಭಾವಂತ ಮತ್ತು ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬಲ್ಲ ವ್ಯಕ್ತಿಯಾಗಿದ್ದನು. ಆದರೆ ವೀಣತೆಯ ತಾಯಿಯ ವಿರೋಧ ಈ ಇಬ್ಬರೂ ಯುವ ಪ್ರೇಮಿಗಳು ಬೇರೆ ಆಗುವಂತೆ ಮಾಡುತ್ತದೆ. ಅಷ್ಟೇನೂ ಧೈರ್ಯವಂತಳಲ್ಲದ ವಿನತೆಯು ತಾಯಿಯ ಮೇಲಿನ ಭಯ ಮತ್ತು ಪ್ರೀತಿಯ ಕಾರಣಕ್ಕಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೆ, ಮನೆಯ ಜವಾಬ್ದಾರಿ ಹೊತ್ತು ಅರಸೀಕೆರೆಗೆ ಹೋಗಿ ಶಾಲಾ ಶಿಕ್ಷಕಿಯಾಗಿ ಸೇರಿಕೊಂಡು ತನ್ನ ತಮ್ಮಂದಿರ ಶಿಕ್ಷಣದ ಜವಾಬ್ದಾರಿ ಹೊತ್ತುಕೊಂಡು ತನ್ನ ಬದುಕನ್ನೇ ತ್ಯಾಗ ಮಾಡುತ್ತಾಳೆ. ಇದರಿಂದ ಮನನೊಂದ ಆನಂದ ತನ್ನ ಮನಸ್ಸನ್ನು ನಿಯಂತ್ರಿಸಿಕೊಳ್ಳಲು ಬಾಬಾಬುಡನ್ ಗಿರಿತಪ್ಪಲಲ್ಲಿ ಪರಿಸರದೊಂದಿಗೆ ಕಾಲ ಕಳೆಯುತ್ತಾ, ತಾನು ಸಣ್ಯಾಸಿಯಾಗಬೇಕೆಂದು ಬಯಕೆ ಹೊಂದಿ ಕೊನೆಗೆ ತಾಯಿಯ ನೆನಪಾಗಿ ಮತ್ತೆ ಮನೆಗೆ ಬರುತ್ತಾನೆ. ಇನ್ನೊಂದೆಡೆ ಆನಂದನ ಪ್ರೀತಿಗಾಗಿ ಹಂಬಲಿಸಿದ್ದ ರಮೇಗೂ ನಿರಾಸೆಯಾಗುತ್ತದೆ. ತಂದೆ ತಾಯಿ ಇಲ್ಲದ ರಮೆ ಆನಂದನ ಪ್ರತಿಭೆ ಮತ್ತು ಅವನ ಗುಣದಿಂದ ಪ್ರಭಾವಿತಲಾಗಿ ತನ್ನ ಪ್ರೇಮನಿವೇದನೆ ಮಾಡುತ್ತಾಳೆ. ಆದರೆ ವೀನತೆಯ ಪ್ರೇಮದಲ್ಲಿ ಅನುರಕ್ತನಾದ ಆನಂದ ಅವಳ ಪ್ರೇಮವನ್ನು ನಿರಾಕರಿಸುತ್ತಾನೆ. ಹೀಗೆ ತ್ರಿಕೋನ ಪ್ರೇಮಕಥೆಯನ್ನು ಶ್ರೀ ಎಸ್ ಎಲ್ ಭೈರಪ್ಪ ಅವರು ಕಾದಂಬರಿಯಲ್ಲಿ ಭಾವನಾತ್ಮಕವಾಗಿ ಚಿತ್ರಿಸಿದ್ದಾರೆ. ಆನಂದ ಮತ್ತು ವಿನತೆಯನ್ನು ಒಂದಾಗಿಸಲು ವಿನತೆಯ ಸ್ನೇಹಿತೆ ಜಗದಾಂಬಾ ಮಾಡಿದ ಎಲ್ಲಾ ಪ್ರಯತ್ನಗಳೂ ಸಾಕಾರವಾಗದೆ, ಕೊನೆಗೆ ಆನಂದನು ಅಷ್ಟೇನೂ ಓದದ ಸೀತೆಯನ್ನು ತನ್ನ ತಾಯಿಯ ಬಯಕೆಯಂತೆ ಮದುವೆಯಾಗುತ್ತಾನೆ. ಆನಂದ ಮತ್ತು ವಿನತೆಯರ ಪ್ರೇಮವೈಫಲ್ಯ ಒಂದೆಡೆಯಾದರೆ ವಸಂತ ಮತ್ತು ಉಮೆಯರ ಪ್ರೇಮಕಥೆ ಇನ್ನೊಂದು ರೀತಿಯದ್ದು. ಆನಂದನಿಗಿಂತ ಹಿರಿಯನಾದ ವಸಂತನು ತತ್ವಶಾಸ್ತ್ರದ ಒಬ್ಬ ಪ್ರತಿಭಾವಂತ ಭತ್ತು ವಿಚಾರಶೀಲ ವಿದ್ಯಾರ್ಥಿ. ಇವನದು ಅಂತರ್ಮುಖ ವ್ಯಕ್ತಿತ್ವ. ತತ್ವಶಾಸ್ತ್ರ ಮತ್ತು ಸಾಹಿತ್ಯದ ಕುರಿತಾದ ಚರ್ಚೆಗಳಲ್ಲಿ ಸದಾ ಮುಂದು. ಇವನಿಗೆ ಸರಿಸಾಟಿಯಾಗಿ ಇರುವ ಹುಡುಗಿ ಉಮೇ. ವಾದದಲ್ಲಾಗಲಿ, ಚರ್ಚೆಯಲ್ಲಾಗಲಿ ಇಬ್ಬರೂ ಬಹುತೇಕ ಸಮಾನರಾಗಿದ್ದವರು. ವೈಚಾರಿಕತೆ ಮತ್ತು ಧಾರ್ಮಿಕತೆಗೆ ಸಂಬಂಧಿಸಿದ ಒಂದು ಚರ್ಚೆಯಲ್ಲಿ ಇವರಿಬ್ಬರ ಮಾತುಗಳು ಭಿನ್ನವಾಗಿ, ಇಬ್ಬರ ನಡುವಿನ ವೈಚಾರಿಕವಾದ ಅಂತರದ ಕಾರಣ ವಸಂತನು ಆತಂಕಕ್ಕೆ ಒಳಗಾಗುತ್ತಾನೆ. ನನ್ನ ಪತ್ನಿಯಾಗುವವಳು ನನ್ನ ವಿಚಾರಗಳನ್ನು ಒಪ್ಪಬೇಕು, ಅವಳು ಕೇವಲ ನನ್ನ ಪತ್ನಿಯಾಗಿರದೆ ನನ್ನ ಸಹಚಾರಿಣಿಯೂ ಆಗಬೇಕು ಅಂದಾಗ ಮಾತ್ರ ದಾಂಪತ್ಯ ಸುಖಿಯಾಗುತ್ತದೆ, ಇಲ್ಲದಿದ್ದರೆ ಸಾಧ್ಯವಿಲ್ಲ ಎಂಬುದು ವಸಂತನ ಮನದಾಳದಲ್ಲಿ ಹುದುಗಿದ್ದ ಭಾವನೆ...!! ಇಬ್ಬರ ನಡುವಿನ ಈ ವೈಚಾರಿಕ ಸಂಘರ್ಷದ ಕಾರಣ, ಇಬ್ಬರೂ ಕುಟುಂಬದ ಸಮ್ಮತಿ ಇದ್ದಾಗಲೂ ತಮ್ಮ ನಡುವಿನ ಈ ವೈಚಾರಿಕ ಭಿನ್ನತೆಯ ಕಾರಣ ದೂರ ಸರಿಯುತ್ತಾರೆ. ಈ ಮೂಲಕವಾಗಿ ಈ ಜೋಡಿಯು ಕೂಡ ಪ್ರೇಮವೈಫಲ್ಯದಿಂದ ನಲು ಗುತ್ತಾರೆ. ಒಟ್ಟಾರೆ ಪ್ರೀತಿ, ಪ್ರೇಮಾ ಎಂಬುವುದು ಪ್ರಾರಂಭದಲ್ಲಿ ಮನಸ್ಸಿಗೆ ಹಿತ ಮತ್ತು ಸಂತೋಷವಾಗಿ ಪರಿಣಮಿಸಿದ್ದಾರೆ ಕೊನೆಯಲ್ಲಿ ಅದುವೇ ಒಂದು ವಿಷವರ್ತೂಲವಾಗಿ ಹೇಗೆ ನಮ್ಮನು ಕಾಡುತ್ತದೆ ಎಂಬುದನ್ನು ಈ ಕಾದಂಬರಿಯ ವಿಶದವಾಗಿ ಚಿತ್ರಿಸಿದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.