Submission 2053

ಪುಸ್ತಕದ ಶೀರ್ಷಿಕೆ: ಹೇಳಿ ಹೋಗು ಕಾರಣ

ಪುಸ್ತಕದ ಲೇಖಕರು: ರವಿ ಬೆಳಗೆರೆ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಬಸಲಿಂಗಪ್ಪ ತೋಟದ .ಇಳಕಲ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

೩೩೯ ಪುಟಗಳ ಪುಸ್ತಕ ಇಡಿಯಾಗಿ ಓದಿಸಿಕೊಂಡು ಹೋಗುತ್ತೆ. ಇಲ್ಲಿ ಒಂದು ಅಪ್ಪಟ ಪ್ರೀತಿ ಬದುಕಿನ ರೀತಿ ಅತ್ಯಂತ ಮನಮುಟ್ಟುವಂತೆ ದಾಖಲಾಗಿದೆ ಪ್ರೀತಿ ಇಲ್ಲದಿದ್ದರೆ ಕನಸೇ ಇಲ್ಲ ಎನ್ನುವುದು ಸತ್ಯ. ಒಂದು ಕಡೆ ಹಿಮವಂತ್ ನ ನಿಷ್ಕಲ್ಮಶ ಪ್ರೀತಿ ಪ್ರಾರ್ಥನಾಳ ನಂಬಿಕೆ ಮನುಷ್ಯ ಜನ್ಮಕ್ಕೆ ಒಂದು ಕೊಂಡಿಯಂತೆ ಕಂಡರೆ ಮತ್ತೊಂದು ಕಡೆ ಊರ್ಮಿಳೆ , ದೇಬ್, ಇವರ ಪ್ರೀತಿಯ ನೆಪದ ಸ್ವೇಚ್ಛಾಚಾರದ ಬದುಕು . ಹಿಮವಂತ್ ನ ಕನಸಂತೂ ಅದ್ಭುತ. ಕಧೆಯ ತಿರುವುಗಳು , ಗಮ್ಯ್ , ಅತ್ಯಂತ ಕರಾರುವಾಕ್ಕಾಗಿವೆ . ಓದುತ್ತಾ ಹೋದಂತೆ ಎಲ್ಲಾ ಪಾತ್ರಗಳೂ , ಕಾಲೇಜು , ಲೇ ಔಟು , ರಸ್ತೆ ಕೊನೆಗೆ ಬಸ್ಸಿನ ಶಬ್ಧವೂ ಕೇಳಿಸುತ್ತೆ. ನಂದಕ್ಕ ಪದೇ ಪದೇ ನೆನಪಾಗ್ತಾಳೆ. ದೇವರಿಗಾ........ ಅನ್ನುವ ಈ ಪದ ಅದೆಷ್ಟು ಮೊನಚಾಗಿದೆಯೆಂದರೆ , ಅಬ್ಬಾ !! ಧೂಳಾಗಿದ್ದ ದೇಬ್ ನ ಕಾರ್ ತೊಳೆಯುವಾಗ ಹಿಮವಂತನ ಮನಸ್ಸು ಅದೆಷ್ಟು ಶಾಂತವಾಗಿತ್ತು. " ಹೇಳಿ ಹೋಗು ಕಾರಣ " ಇದನ್ನು ಓದಿ ಅನುಭವಿಸದರೇ ಸುಖ. ವಿಮರ್ಶೆ ಬರೆಯಲು ಶಬ್ದಗಳೇ ಇಲ್ಲ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಪ್ರತೀ ಪಾತ್ರವೂ ಸ್ಮರಣೀಯ ದೇವರಿಗಾ ... ಎಂಬ ಪದ. ಶಾಂತಪ್ಪನ ವಠಾರದ ಆ ಸಣ್ಣ ಕೋಣೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಮುಖ್ಯವಾಗಿ ಇಂದಿನ ಯುವ ಜನಾಂಗ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

3
Votes
196
Views
6 Months
Since posted

Voting Closed!

Scroll to Top