Submission 2057

ಪುಸ್ತಕದ ಶೀರ್ಷಿಕೆ: ಕರ್ವಾಲೋ

ಪುಸ್ತಕದ ಲೇಖಕರು: ಪೂರ್ಣಚಂದ್ರ ತೇಜಸ್ವಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಗುಣವತಿ ಕೆ.ಪಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಲೇಖಕರು ಕಥೆಯ ಪ್ರಾರಂಭದಿ ಜೇನುತುಪ್ಪ ಖರೀದಿಗೆಂದು ಹೋಗಿದ್ದಾಗ ಇವರು ಸಿನಿಮಾ ನೆಂಟಿರುವರು ಎಂದು ತಿಳಿದು ಮಂದಣ್ಣ-ಲಕ್ಷ್ಮಣರು ತೋರಿದ ಗೌರವಾತಿಥ್ಯ. ಗುರ್ಗಿ ಅಥವಾ ನೀಲಿಕುರಂಜಿ ಹೂವು, ಇದು ಮಲೆನಾಡಿನಲ್ಲಿ ಹನ್ನೆರಡು ವರ್ಷಕ್ಕೊಮ್ಮೆ ಅರಳುತ್ತದೆ, ಇದರ ಜೇನುತುಪ್ಪ ತುಂಬಾ ವಿಶಿಷ್ಟ, ಹಲವಾರು ತಿಂಗಳವರೆಗೆ ಕೆಡುವುದಿಲ್ಲ ಎಂದು 78 ರೂಗೆ ಒಂದು ಟಿನ್ ಜೇನು ನೀಡಿದ್ದು ಅಲ್ಲಿ ನಡೆದ ಘಟನೆಗಳೊಂದು ಸ್ವಾರಸ್ಯ. ತದನಂತರ ಡೀಸೆಲ್ ಇಲ್ಲದೆ ಜೀಪ್ ನಿಂತದ್ದು, ಜೇನಿನ ವಾಸನೆಗೆ ಜೇನುಹುಳು ಮುತ್ತಿದ್ದು, ಇಬ್ಬರೂ ಹುಡುಗರು ಡೀಸೆಲ್ ತಂದದ್ದು, ಜೇನು ಕಚ್ಚಿದ್ದು, ಮನೆಗೆ ಜೇನು ತುಪ್ಪ ತಂದಾಗ ಪ್ಯಾರನ ಹಾಸ್ಯ, ಹೆಂಡತಿ ಹಾಗೂ ಚಿಕ್ಕ ಮಗಳ ಅಚ್ಚರಿ ತುಂಬಿದ ನೋಟ ಲೇಖಕರ ವಿವರಣೆಯು ಸುಂದರ. ಸಭೆ ಸಮಾರಂಭಗಳಲ್ಲಷ್ಟೇ ವಿಜ್ಞಾನಿಯಾದ 'ಕರ್ವಾಲೊ' ಬಗ್ಗೆ ತಿಳಿದಿದ್ದ ಲೇಖಕರು ತಾವು ಬೆಳೆದಿದ್ದ ಭತ್ತದ ಪೈರಿಗೆ ರೋಗ ಬಂದು ಅದರ ಬಗ್ಗೆ ತಿಳಿಯಲು ಹೋದಾಗಿನ ಕರ್ವಾಲೋರ ಪರಿಚಯ, ಅತ್ಯಧ್ಭುತ ಛಾಯಾಗ್ರಕ ಪ್ರಭಾಕರನ ಪರಿಚಯ ನಂತರದ ಬೆಸುಗೆ ಎಲ್ಲವೂ ಸಮಾನ ಮನಸ್ಕತೆಯ ಮಧುರ ಸ್ಪಂಧನ. ಕರ್ವಾಲೋ ಕಛೇರಿಯಲ್ಲಿದ್ದ ನಾಗರಾಜನ ವ್ಯಕ್ತಿತ್ವದ ಪರಿಚಯ, ಕರ್ವಾಲೋರ ಬಗ್ಗೆ ಅವನಿಗಿದ್ದ ಉಡಾಪೆ ಸ್ವಭಾವ ಎಲ್ಲದರ ಸಾದೃಶತೆ ಬಹಳ ಚೆನ್ನ. ಜೇನು ಸಾಕಾಣಿಕೆಯ ಹಲವು ವೈಶಿಷ್ಟ್ಯಗಳು, ಮಡಕೆಯನ್ನು ಬೋರಲಾಗಿಟ್ಟು ಜೇನು ಸಾಕುವ ಹಲಕೆಯ ಸಾಂಪ್ರದಾಯಿಕ ಶೈಲಿಯ ಪರಿಚಯ, ಇವೆಲ್ದರ ಬಗ್ಗೆ ಮಂದಣ್ಣನಿಗಿದ್ದ ಜ್ಞಾನ ಯಾವಪದವೀಧರನಿಗೂ ಕಡಿಮೆಯಿಲ್ಲ. ಪ್ಯಾರ ಲೇಖಕರ ಮನೆಯಲ್ಲಿದ್ದ ಹುಡುಗ ಇವನ ಜೀವನ ಗತ ಲೇಖಕರೊಂದಿಗಿನ ಬೆಸುಗೆ, ಜರ್ಮನ್ ಷಪರ್ಡ್ ಬೇಟೆ ನಾಯಿಯಾದ 'ಕಿವಿ' ಗೂ ಲೇಖರಿಗೂ ಅವಿನಾಭಾವ ಮಮತೆಯ ನೆಂಟು. ಕಿವಿ ಅನಾರೋಗ್ಯಕ್ಕೆ ತುತ್ತಾದಾಗಿನ ಲೇಖಕರ ಚಡಪಡಿಕೆ, ಕಿವಿಯ ಸೂಕ್ಷ್ಮ ಗ್ರಾಹಿ ಬುದ್ಧಿ, ಬೇಟೆಯಾಡುವ ವೈಖರಿ, ಮನೆಮಂದಿಯಲ್ಲರೊಟ್ಟಿಗೆ ಅದು ಪ್ರಾಣಿಯಾಗದೆ ಮನೆಯ ಸದಸ್ಯನಾಗಿ ಉಳಿದುಕೊಂಡಿದ್ದು, ಸಾಕು ಪ್ರಾಣಿಯೊಂದಿಗಿನ ಅನನ್ಯತೆಯ ಅನುಬಂಧಕ್ಕೆ ಉದಾಹರಣೆ ಈ ಕಥೆಯಲ್ಲಿ ಮಂದಣ್ಣನದೊಂದು ತಮಾಷೆಯ ವ್ಯಕ್ತಿತ್ವ ಜೊತೆಗೆ ಅಪರೂಪದ ಜೀವಿಗಳ ಇರುವಿಕೆ, ಹುಳ-ಉಪ್ಪಟೆಗಳ ಬಗೆಗಿನ ಇವನ ತಿಳುವಳಿಕೆ ಅವುಗಳನ್ನು ಅಭ್ಯಸಿಸಿರುವ ರೀತಿ ಯಾವ ವಿಜ್ಞಾನಿಗಳಿಗೂ ಕಡಿಮೆಯಿಲ್ಲ. ಆದ್ದರಿಂದಲೆ ಜೀವವೈವಿಧ್ಯತೆಯ ಅಪರೂಪದ ಪ್ರಾಣಿ-ಪ್ರಭೇದಗಳ ಹುಡುಕಾಟ ಅಧ್ಯಯನದಲ್ಲಿ ನಿರತರಾಗಿದ್ದ ವಿಜ್ಞಾನಿಯು ಆದ ವಿಶಿಷ್ಟ ಮೇರು ವ್ಯಕ್ತಿತ್ವದ ಕರ್ವಾಲೋರಿಗೂ ಮಂದಣ್ಣನಿಗೂ ನೆಂಟು ಬೆಳೆದಿತ್ತು. ಮಂದಣ್ಣನ ಸ್ವಾರಸ್ಯಗಳು ಹಲವಾರು. ಬೀಮನ್ ಕೆಲಸಕ್ಕೆ ಅರ್ಜಿ ಹಾಕುವಾಗಿನಿಂದಿಡಿದು ತದ ನಂತರ ನಡೆದ ಘಟನಾವಳಿಗಳು, ರಾಮಣ್ಣ ಎಂಬುವವನು ತನ್ನ ಮಗಳು ರಾಮಿಯನ್ನು ಮಂದಣ್ಣನಿಗೆ ಕೊಡುವುದಿಲ್ಲವೆಂದದ್ದು, ಲೇಖಕರು, ಕರ್ವಾಲೊ, ಪ್ರಭಾಕರ, ಲಕ್ಷಮಣ ಇವರೆಲ್ರ ಮಧ್ಯಸ್ಥಿಕೆಯಲ್ಲಿ ರಾಮಿಯೊಂದಿಗಿನ ಮದುವೆ, ಆನಂತರ ಕಳ್ಳಭಟ್ಟಿ ಕೇಸಿನಲ್ಲಿ ಪೋಲೀಸಿನವರು ಬಂದಿಸಿದ್ದು, ಲೇಖಕರು ಹಾಗೂ ಕರ್ವಾಲೊ ಇಬ್ಬರೂ ಅವನಿಗೆ ಜಾಮೀನಾಗಿ ಬಿಡಿಸಿ ಕೇಸಿನಿಂದ ಖುಲಾಸೆಗೊಳಿಸಿ ಸಮಾಜದ ಗಣ್ಯರ ಕೆಂಗಣ್ಣಿಗೆ ಗುರಿಯಾಗಿದ್ದು, ಮಂದಣ್ಣನ ಊರಾದ ನಾರ್ವೆಯ ಸಮೀಪದ ಮಹಾಮಲೆಯಲ್ಲಿ ಹಾರುವ ಓತಿಕ್ಯಾತದ ಶೋಧನೆಗೆ ಲೇಖಕರಾದಿಯಾಗಿ ಕಿವಿ, ಕರ್ವಾಲೊ, ಪ್ರಭಾಕರ, ಮಂದಣ್ಣ ಬಿರಿಯಾನಿ ಕರಿಯಣ್ಣಎಲ್ಲರೂ ಎತ್ತಿನ ಗಾಡಿಯಲ್ಲಿ ಮಹಾಮಲೆ ಕಾಡಿನತ್ತ ಹೊರಟಿದ್ದು, ಗಾಧಫಿಯ ಕುಲುಕಾಟ ತನ್ನ ಸೂಕ್ಸ್ಮ ವಾಗಿರುವ ತನ್ನ ಛಾಯಗ್ರಪಿ ಯಂತ್ರಗಳು ಹಾಳಾಗಿಬಿಡುತ್ತವೆಂದು ಕರಿಯಣ್ಣನನ್ನು ಶಪಿಸುತ್ತಾ ತಾನು ಗಾಡಿಯೇರಿ ಕುಳಿತ ಪ್ರಭಾಕರನ ಆಸ್ತತೆ, ಇದಕ್ಕೂ ಮುನ್ನ ಇದ್ದಲು ಸುಡುವವನೊಬ್ಬ ಉಡವನ್ನೆ ಹಾರುವ ಓತಿಕ್ಯಾತ ಎಂದು ಹೇಳಿ ಬಿಲದೊಳಗೆ ನುಗ್ಗುತ್ತಿದ್ದನ್ನು ಹಗ್ಗ ಹಾಕಿ ಬಂದಿಸಿದ್ದಾಗಿಯೂ ಅದು ಬಿಲದಲ್ಲಿಯೇ ಬಂದಿಯಾಗಿದ್ದೆಂದು ಹೇಳಿದ್ದು, ಎಲ್ಲರ ಪರಿಶ್ರಮದ ನಂತರ ಮಹಾಮಲೆಯ ಪರ್ಯಟನೆ ಅಲ್ಲಿ ಕರಿಯಣ್ಣ ಮಂದಣ್ಣನ ಬೇಟೆಯ ಹುಡುಗಾಟಿಕೆ, ಕರಿಯಣ್ಣನ ಗಿರ್ಮಿ ಮಸಾಲೆಯ ಹೆಣ್ಣಿನ ವಾಂಛೆಯ ವಿಚಾರಕ್ಕಾಗಿ ಕರ್ವಾಲೊರನ್ನು ಬಿಟ್ಟು ಎಲ್ಲರ ಮುಸುಮುಸಿ ನಗು, ಲೆಖಕರು ಮೌಮೌ ಬಿ ಬಂದೀತೆಂದು ಪುಕ್ಕುಲತನದಿಂದಿದ್ದದ್ದು, ಕರಿಯಣ್ಣ ನ ಪಾಕವೈಖರಿಗೆ ಕಿವಿ ಮತ್ತು ಪ್ರಭಾಕರನ ಓಲೈಕೆ, ಕರ್ವಾಲೋರ ಪ್ರಕೃತಿಯ ಅವಲೋಖನ, ಅಲ್ಲಿ ಸಿಗುವ ಅಲೆಮಾರಿ ವೆಂಕಟನ ಜೀವನಕ್ರಮ, ಮಂದಣ್ಣ ವೆಂಕಟನ ಸೆಣಸಾಟ, ವೆಂಕಟನ ನಾಯಿಯ ಮರ್ಮಾಂಗವನ್ನು ಕಿವಿ ಮೂಸಿ ನೋಡಿದ ಪರಿಯ ಲೇಖಕರ ವಿವರಣೆಯ ಸ್ವಾರಸ್ಯ, ವೆಂಕಟನ ಹೆಂಡತಿಯು ಅರಣ್ಯ ಸಿಬ್ಬಂಧಿಯ ವಾಂಛೆ ತೀರಿಸಲು ಹೋಗುವುದನ್ನು ವೆಂಕಟ ಹೇಳಿದ್ದು ಅವನ ಜೀವನ ಕ್ರಮ ತಿಳಿಸಿದ್ದು, ಸರೀಸೃಪಗಳ ಭೇಟೆಯಾಡಿ ಅವುಗಳ ಚರ್ಮವನ್ನು ಜೀವಂತವಾಗಿದ್ದಾಗಲೆ ಸೀಳುವ ಅವನ ಕೌಶಲ್ಯಕ್ಕೆ ಕರ್ವಾಲೋರು ಬೆರಗಾಗಿದ್ದು, ವೆಂಕಟನೂ ಜೊತೆಗೂಡಿ ಹಾರುವ ಓತಿಕ್ಯಾತದ ಅನ್ವೇಷಣೆಯಲ್ಲಿ ತೊಡಗಿದ್ದು, ಮರದ ಮೇಲೆ ಗೂಡುಕಟ್ಟಿದ್ದ ಕೆಂಪಿರುವೆಗಳನ್ನು ತಿನ್ನುತ್ತಾ ಹಾರುವ ಓತಿಕ್ಯಾತವು ಲೇಖಕರ ಕಣ್ಣಿಗೆ ಬಿದ್ದು ಅವರು ಅದನ್ನು ದೃಷ್ಟಿ ಕದಲಿಸದೆ ನೋಡುತ್ತಾ ಎಲ್ಲರನ್ನು ಕರೆದದ್ದು, ಸ್ನಾಕ್ಕೆಂದು ಹೋಗಿದ್ದ ಕರ್ವಾಲೊ ಹಾಗೂ ಪ್ರಭಾಕರ ಲಂಗೋಟಿಯಲ್ಲಿಯೇ ಓಡಿಬಂದು ನೋಡಿದರೆ ಅವರ ಕಣ್ಣಿಗೆ ಮರದ ಬಣ್ಣದಲ್ಲಿಯೇ ಇದ್ದ ಆ ಅಪರೂದ ಪ್ರಾಣಿಯು ಇವರ ಕಣ್ಣಿಗೆ ಕಾಣಿಸಲಿಲ್ಲ, ಕರಿಯಣ್ಣನಿಗೆ ಮರ ಹತ್ತಲು ಹೇಳಿದರೆ ಅದರ ಕಾಂಡ ದಪ್ಗಿದ್ದರಿಂದ ಅಸನ್ನು ಹತ್ತಲಾಗದ ಪರಿಸ್ಥಿತಿಯಿಂದಾಗಿ ಲೇಖಕರೆ ಕರ್ವೋಲರು ಕೇಳುವ ಪ್ರಶ್ನೆಗೆ ಹಾರುವ ಓತಿಕ್ಯಾತದ ಪ್ರತಿ ಚಲನೆಯನ್ನು ನೋಡುತ್ತಾ ವಿಸ್ತೃತವಾಗಿ ವಿವರಣೆಯನ್ನು ನೀಡಿದ್ದು, ಅದು ಮರದ ಕೊಂಬೆಯ ಮರೆಲಿದ್ದ ಪಾಚಿಯ ಬಳಿ ಬಂದಾಗ ಪ್ರಭಾಕರನು ವಿಡಿಯೋಕರಣಕ್ಕಾಗಿ ಛಾಯಚಿತ್ರೀಕರಣ ರೀತಿ, ಮಂದಣ್ಣ ಬೇರೆ ಕೊಂಬೆಯ ಮುಖಾಂತರ ಹಾರುವ ಓತಿಕ್ಯಾತದ ಬಳಿ ಬಂದು ಅದನ್ನು ಹಿಡಿಯಲು ಯತ್ನಿಸಿದ್ದು, ಅದು ತಪ್ಪಿಸಿಕೊಳ್ಳಲೆತ್ನಿಸುವಾಗ ಅದರ ಬಾಲ ಹಿಡಿದದ್ದು, ವೆಂಕಟನು ಮರ ಏರಿ ಮಂದಣ್ಣನಿಗೆ ಓತಿಕ್ಯಾತ ಹಿಡಿಯಲು ಸಹಕರಿಸುವ ವೇಳೆಗೆ ಅದು ಬಲವಾಗಿ ಒದರಿ ಮುಂಗಾಲುಗಳನ್ನು ರೆಕ್ಕೆಯಂತೆ ಚಾಚಿ ಹಾರಿ ಒಂದು ಬಂಡೆಯತ್ತ ಹಾರಿ ಕುಳಿತು ಬಂಡೆಯೇರಲು ಪ್ರಾರಂಭಿಸಿದ್ದು, ಇವರೆಲ್ಲರೂ ಅದನ್ನಿಡಿಯಲು ಬಂಡೆಯೇರುವ ವೇಳೆಗೆ ಆಳ ಕಣಿವೆಯ ನೀಲನಭದತ್ತ ಹಾರಿ ಪ್ರಕೃತಿಯಲ್ಲಿ ಅಂತರ್ಧಾನವಾಗಿದ್ದು ಎಲ್ಲವೂ ಎಲ್ಲವೂ ಜೀವವೈವಿಧ್ಯತೆಯ ಅನ್ವೇಷಣೆಯ ಭಾಗದ ಅಪರೂಪದ ಕ್ಷಣ. ಅದು ಕೈಗೆ ಸಿಕ್ಕದಿದ್ದರೂ ಅದರ ಇರುವಿಕೆ ನೋಡಿದ್ದು ಕರ್ವಾಲೋರಿಗೆ ಸಂತಸ. ಹಲವಾರು ದೇಶಗಳು ಇದರ ಮೇಲೆ ಸಂಶೋದನೆ ನಡೆಸುತ್ತಿವೆ, ಇದು ಆರರ ಮುಂದೆ ಒಂಬತ್ತು ಸೊನ್ನೆ ಹಾಕಿದರೆ ಬರುವ ವರ್ಷದಷ್ಟು ಹಳೆಯ ಜೀವ ಸಂಕುಲ. ಜೀವವಿಕಾಶವನ್ನು ಹೊಂದದೆ ಇನ್ನು ತನ್ನ ಮೂಲರೂಪದಲ್ಲಿ ಉಳಿದಿರುವುದೊಂದೆ ವಿಸ್ಮಯ. ಇದರ ಬಗೆಗಿನ ಲೇಖಕರ ಕುತೂಹಲ ಎಲ್ಲವೂ ಪ್ರಕೃತಿಯ ಮಾಂತ್ರಿಕ ಕ್ಷಣಕ್ಕೆ ಸಾಕ್ಷಿ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಪ್ರಕೃತಿಯೊಂದು ಹಲವು ವಿಸ್ಮಯಗಳ ಜೀವವೈವಿಧ್ಯತೆಯ ತಾಣ. ಅದರಂತೆಯೇ ಕರ್ನಾಟಕದ ಪಶ್ಚಿಮಘಟ್ಟದಲ್ಲಿ ಅಳಿವಿನಂಚಿನ, ಈಗಾಗಲೇ ಅಳಿದು ಹೋಗಿವೆ ಎಂದುಕೊಂಡಿರುವ ಅಪರೂಪದ ಜೀವಸಂಕುಲವು ಕಾಣಸಿಗುವ ಬೇಧ್ಯ-ಅಬೇಧ್ಯ ತಾಣ ಇದಾಗಿದೆ ಎಂದರೆ ಸರಿ. ಈ ನಿಟ್ಟಿನಲ್ಲಿ ಸಾಗುವುದೇ 'ಕರ್ವಾಲೊ' ಕಾದಂಬರಿಯ ಅನರ್ಘ್ಯತೆ. ಮಲೆನಾಡಸಿರಿಯ ಗ್ರಾಮ್ಯಸೊಗಡಿನ ಕಥಾಹಂದರ, ನಿರೂಪಣೆಯ ಶೈಲಿಯು ಎಲ್ಲವೂ ಅದ್ಭುತವೆ ಸರಿ. ಇದರಲ್ಲಿ ಬರುವ ಪ್ರತಿಯೊಂದ ಪಾತ್ರಗಳು ಪ್ರಕೃತಿಯೊಂದಿಗೆ, ಜೀವವೈವಿದ್ಯ ನೆಲೆಗಳೊಂದಿಗೆ ಬೆಸೆದುಕೊಂಡ ಕೊಂಡಿಯಾಗಿವೆ. ಮಂದಣ್ಣ ಹಾಸ್ಯ ಹಾಗೂ ಕರ್ವಾಲೋರ ಜೀವ ವೈವಿಧ್ಯತೆಯ ಅಭ್ಯಸಿಸುವ ಕ್ರಮ ಲೇಖರ ಆಗಾಧ ಚಿಂತನೆಗಳು ನನ್ನನ್ನು ಸೆಳೆದುಬಿಟ್ಟವು

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ವೈಜ್ಞಾನಿಕ ಕುತೂಹಲ ಪೃಕೃತಿ ಪ್ರಿಯರಿಗೆ ಅದ್ಭುತ ಕಾದಂಬರಿ ಇದಾಗಿದೆ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

8
Votes
204
Views
6 Months
Since posted

Voting Closed!

Scroll to Top