Submission 2039

ಪುಸ್ತಕದ ಶೀರ್ಷಿಕೆ: ನಿಗೂಢ – ಒಂದು ಖೋ ಕಾದಂಬರಿ

ಪುಸ್ತಕದ ಲೇಖಕರು: ಹು. ವಾ. ಶ್ರೀಪ್ರಕಾಶ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ವಿಶ್ರುತಾ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ನಿಗೂಢ – ಒಂದು ಖೋ ಕಾದಂಬರಿ. ಒಟ್ಟು 18 ಲೇಖಕರೊಳಗೊಂಡ ಈ ಪುಸ್ತಕ ಒಂದು ವಿನೂತನ ಕಥಾ ಹಂದರವನ್ನು ನಮ್ಮೆಲ್ಲರ ಮುಂದೆ ತೆರೆದಿಡುತ್ತಾ ಹೋಗುತ್ತೆ. ಸುಬ್ಬಜ್ಜಿಯ ಜೀವನದ ಕಥೆ ಇಂದ ಶುರುವಾಗಿ ಮಧ್ಯದಲ್ಲಿ ಮಾನಸಿಕ ವಿಜ್ಞಾನ , ಹರೆಯದ ಪ್ರೀತಿ , ಕುಟುಂಬದ ಭಾವನೆಗಳ ತುಮುಲಗಳು , ಅತ್ತೆ ಸೊಸೆಯ ಸಣ್ಣ ಕಟಿಪಿಟಿಗಳ ನಡುವಿನ ಪ್ರೀತಿ ಮತ್ತು ವಾತ್ಸ್ಯಲ್ಯ , ಗಂಡನ ಪ್ರೀತಿ , ಹಳೆಯ ನೆನಪುಗಳ ಹಾವಳಿ ಹೀಗೆ ಹಲವಾರು ಮಜಲುಗಳನ್ನು ಹದವಾಗಿ ಹೆಣೆದು ಪೋಣಿಸಿರುವುದನ್ನು ಒಂದೊಂದು ಅಧ್ಯಾಯದಲ್ಲಿ ಕಾಣಬಹುದು. ಮಧ್ಯದಲ್ಲಿ ಲಗಾಮು ಸಡಿಲಾದ ಕುದುರೆಯ ತರ ಅನ್ಸಿದ್ರೂನು , ಅನುಭವಿ ಕುದುರೆಯ ತರ ತನ್ನದೇ ಓಘದಲ್ಲಿ ಹಿಡಿತಕ್ಕೆ ಬಂದಂತೆ ಕಥೆಯು ರಸವತ್ತಾಗಿ ಓದುಗರನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಯಶಸ್ವಿಯಾಗಿ ಒಂದೊಳ್ಳೆ ಚಿತ್ರವನ್ನು ಮನಸಲ್ಲಿ ಮೂಡಿಸಿ ಕೊನೆಗಾಣುತ್ತದೆ . ಕೆಲವೊಮ್ಮೆ ಯಾರ ತಪ್ಪು ಇಲ್ಲದೆ ನಡೆಯುವ ಘಟನೆಗಳು ಯಾರನ್ನೋ ದೂಷಿತನ್ನಾಗಿ ಮಾಡಿ ಇಡೀ ಜೀವನ ಅವರನ್ನ ಮನಸಲ್ಲೇ ದ್ವೇಷಿಸುವಂತೆ ಮಾಡುತ್ತದೆ. “ಕಂಡರೂ ಪರಾಮರ್ಶಿಸಿ ನೋಡು” ಅನ್ನೋದನ್ನ ಹೇಳಿದರೂ ಹೇಳದಂತೆ ತೆಗುದುಕೊಂಡು ಹೋದ ರೀತಿಯೂ ಕೂಡ ಹೊಸದಾಗಿದೆ . ಒಟ್ಟಿನಲ್ಲಿ ಹೇಳಬೇಕೆಂದರೆ ಒಂದೊಳ್ಳೆಯ ಎಲ್ಲರೂ ಓದುವಂತಹ ಕಾದಂಬರಿ .

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

2
Votes
130
Views
4 Months
Since posted

Voting Closed!

Scroll to Top