Submission 2037

ಪುಸ್ತಕದ ಶೀರ್ಷಿಕೆ: ಫೂ ಮತ್ತು ಇತರ ಕಥೆಗಳು

ಪುಸ್ತಕದ ಲೇಖಕರು: ಮಂಜುನಾಯಕ ಚಳ್ಳೂರು

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ನಾಗರಾಜ ಗಂಗಾನಾಳ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ನಾನು ಎರಡು ಕಾರಣಕ್ ಪುಸ್ತಕ ಓದ್ತೀನಿ ಒಂದ್ ಪುಸ್ತಕ್ ಫೇಮಸ್ ಇರ್ಬೇಕು ಇಲ್ಲ ಪುಸ್ತಕ್ ಬರದವ್ರು ಫೇಮಸ್ ಇರ್ಬೇಕು ಅಷ್ಟೇ ಆದ್ರ ಫೂ.. ಓದಕ ಬ್ಯಾರೆ ಕಾರಣ ಇದ್ವು ಒಂದ್, ಇವ್ರು ಬರೆದ ಮೊದ್ಲನೆ ಕಥಾ ಸಂಕಲನಕ್ಕ ಕೇಂದ್ರ ಯುವ ಪುರಸ್ಕಾರ ಬಂದಿದ್ದು, ಇನ್ನೊಂದ್ ಇವ್ರು ನಮ್ಮ ಊರವ್ರೆ ಅಂತ ಅಷ್ಟೇ. ಫೂ.. ಅನ್ನೋ ಹೆಸರು ಕೇಳಿನೆ ಇದು ಯಾವ್ದೋ ಹೂವಿನ್ ಕಥೆ ಇರ್ಬೇಕು ಅಂದ್ಕೊಂಡ್ ಓದೋಕೆ ಶುರು ಮಾಡಿದ್ದು ಆದ್ರ ಇಲ್ಲಿ ಇರೋ ಕತಿನೇ ಬ್ಯಾರೆ ಐತಿ. ಒಟ್ಟ್ 7 ಕತಿ ಇದಾವ ಇದ್ರಗ ಎಲ್ರಿಗೂ ಇಷ್ಟ ಆಗೋದು ನಂಗೂ ಇಷ್ಟ ಆಗಿದ್ದು ಫೂ... ಈ ಎಲ್ಲಾ ಕತಿಗಳು ಉತ್ತರ ಕರ್ನಾಟಕದಾಗ ಪ್ರತೀ ಹಳ್ಳ್ಯಾಗು ನಡೆಯುವಂತವ, ಒಂದೊಂದ್ ಸಾರಿ ಅನ್ಸೋದು ನಾನೇ ಬರೀಬೇಕಿದ್ ಇಲ್ಲಾ ನನ್ನದೇ ಕತೆಗಳನ್ನ ಇವ್ರು ಬರ್ದಾರೋ ಅನ್ನೋವಸ್ಟ್ ಹತ್ತಿರ್ದವ. ಫೂ ಕತ್ಯಾಗ ಬರೋ ಅವಿವಾಹಿತೆ ಜಯಮ್ಮತ್ತೆ, ತೇರು ಸಾಗಿತಮ್ಮ ನೋಡಿರೆ ಅಲ್ಲಿ ಬರೋ ಶ್ರೀಶೈಲ, ಪಾತಿ ಎಲ್ಲಾ ನಮ್ಮೂರಿನ ಪಾತ್ರಗಳು. ನಮ್ಮಲ್ಲಿ ಆಚರಿಸೋ ಮೊಹರಂ ಹಬ್ಬದ ಹಿನ್ನೆಲೆ ಇಟ್ಕೊಂಡ್ ಬರೆದ ಖತಲ್ ರಾತ್ರಿ ಒಳಗ ಬರೋ ಪ್ರಶಾಂತ ಆತನ ಸಿಟ್ಟು ಮೊಹರಂದಾಗ ಅಲೆ ಕುಣಿಯಾಗ ಹಚ್ಚಿದ ಬೆಂಕಿ ಹಂಗ ತೋರ್ಸ್ಯರ . ಉತ್ತರ ಕರ್ನಾಟಕದ ಕುರಿತು, ಇಲ್ಲಿಯ ಆಚರಣೆ, ಸಂಸ್ಕೃತಿ, ಭಾಷೆ, ಎಲ್ಲಾನು ಅಚ್ಚುಕಟ್ಟಾಗಿ ತೋರಿಸಿಕೊಟ್ಟರ. ಉತ್ತರ ಕರ್ನಾಟಕದ ಜವಾರಿ ಭಾಷೆದಾಗ ಬರೀ ತಮಾಷೆ ಅಲ್ದಾ ಅದರಗೂ ಪ್ರೀತಿ, ದುಃಖ, ಮನಸ್ಸಿನ ಒಡಲಾಟ,ಬಡತನ,ಅನಾಥಪ್ರಜ್ಞೆ, ಅಸಹಾಯಕತೆ, ಅವಮಾನ, ಹುಚ್ಚು ,ಕ್ರೌರ್ಯ ಎಲ್ಲಾ ಇದಾವ ಅನ್ನೋದು ಈ ಪುಸ್ತಕ ಓದಿದ್ರ ಗೊತ್ತಾಗುತ್ತಾ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಫೂ ಕಥೆಯಲ್ಲಿ ಬರುವ ಜಯಮ್ಮತ್ತೆ ಪಾತ್ರ ಇದು ಉತ್ತರ ಕರ್ನಾಟಕದ ಎಷ್ಟೋ ಹಳ್ಳಿಗಳಲ್ಲಿ ಕಾಣಿಸಿಗುವ ನಿಜ ಜೀವನದ ಪಾತ್ರ, ಖತಲ್ ರಾತ್ರಿ ಕಥೆ, ಭಜನೆ ಹುಚ್ಚಿನ ಶ್ರೀಶೈಲ, ಪಾತಿ ತುಂಬಾ ಕಾಡುವ ಪಾತ್ರ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

7
Votes
287
Views
6 Months
Since posted

Voting Closed!

Scroll to Top