Submission 2041

ಪುಸ್ತಕದ ಶೀರ್ಷಿಕೆ: ಪ್ರೇಮಸಾಫಲ್ಯ

ಪುಸ್ತಕದ ಲೇಖಕರು: ಸಾಯಿಸುತೆ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸುವರ್ಣಾ ಭಟ್ಟ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಪ್ರೇಮಸಾಫಲ್ಯ ಸಾಯಿಸುತೆಯವರ ಸಾಮಾಜಿಕ ಕಾದಂಬರಿ. ಸದಾಶಿವ ರಾಯರು ಮತ್ತು ಭಾಗಮ್ಮನ ಕುಟುಂಬವೆಂದರೆ, ಶ್ರೀಕಾಂತ್ ಮತ್ತು ನಿರುಪಮಾ ಮಗ ಸೊಸೆಯಾದರೆ ವಸಂತ್ ಮತ್ತು ಹೇಮಂತ್ ಮೊಮ್ಮಕ್ಕಳಾಗಿದ್ದರು. ವಸಂತ್ ನ ಮಡದಿ ರಶ್ಮಿ. ಶ್ರೀಕಾಂತ್ ಮಡದಿ ಮಕ್ಕಳ ಜೊತೆಗೆ ಬೇರೆಡೆ ಇದ್ದ. ಭಾಗಮ್ಮ ಬಡತನದ ಮನೆತನದಿಂದ ಬಂದ ಸೊಸೆಯ ಚೆನ್ನಾಗಿ ನೋಡಿಕೊಂಡರು ಆದರೆ,‌ನಿರುಪಮಾ ಮಧ್ಯಮವರ್ಗದ ರಶ್ಮಿಯ ವರದಕ್ಷಿಣೆಯ ಸಲುವಾಗಿ ಏನಾದರು ಹೇಳುತ್ತಲೇ ಇರುತ್ತಿದ್ದರು. ವಸಂತ್ ನು ಮಡದಿಯ ಕಡೆ ಪ್ರೀತಿಯ ನೋಟ ಹರಿಸಿದವನಲ್ಲ. ಅಣ್ಣ ಮತ್ತು ತಾಯಿಯ ಈ ಗುಣ ಹೇಮಂತ್ ಗೆ ಇಷ್ಟವಾಗುತ್ತಿರಲಿಲ್ಲ. ರಶ್ಮಿಯ ಹೊಂದಾಣಿಕೆ ಸ್ವಭಾವದಿಂದ ಆ ಮನೆಯಲ್ಲಿ ಬದುಕಿದಳು. ಅತ್ತೆ ಮತ್ತು ಗಂಡನ ವರ್ತನೆ ಅತಿಯಾದಾಗ ತಿರುಗಿ ನಿಂತಳು. ನಿರುಪಮಾ ಅತ್ತೆ ಮಾವನ ಕಾಟಾಚಾರಕ್ಕೆ ಮಾತನಾಡಿಸಿದರು,ಅಲ್ಲಿಗೆ ಹೋದಾಗಲೆಲ್ಲ ಏನಾದರೂ ವಸ್ತುಗಳ ತಂದಿಕೊಳ್ಳುವ ಬುದ್ಧಿ ಹೊಂದಿದ್ದಳು. ವಯಸ್ಸಾಗಿ ದೇಹ ಮುಪ್ಪಾದರು ಭಾಗಮ್ಮ ದಂಪತಿಗಳ ಪ್ರೀತಿ ಮುಪ್ಪಾಗಿರಲಿಲ್ಲ. ಪರಸ್ಪರ ಒಬ್ಬರಿಗೊಬ್ಬರು ಹೆಗಲಾಗಿದ್ದರು. ಹೇಮಂತ್ ಗೆ ಇವರ ಕಂಡರೆ ಪ್ರೀತಿ ಜಾಸ್ತಿ ಆಗಿತ್ತು. ರಾಯರ ಅಂತಃಕರಣ ತುಡಿತ ಅಪಾರ. "ಮಾತು ಕಡಿಮೆ. ಯಾವುದನ್ನೇ ಆಗಲಿ ತಡೆದಿಡುವಂಥ ಸಂಯಮವಿತ್ತು.ಮತ್ತು ಇವರದ್ದು ಸಾತ್ವಿಕ ಸ್ವಭಾವ. ಪ್ರತಿಯೊಂದರಲ್ಲೂ ಕೆಟ್ಟದ್ದನ್ನೇ ಕಾಣುವುದು ,ಹುಡುಕುವುದು ಅವರ ಸ್ವಭಾವಕ್ಕೆ ವಿರುದ್ಧ". ಹೇಮಂತ್ ಅಪರೂಪಕ್ಕೇನು ಬರುವವನಲ್ಲ.ಆದರೂ ಪ್ರತಿ ಬಾರಿಯೂ ಆತ ಬರುವಾಗ ಭಾಗಮ್ಮನಿಗೆ ಉದ್ವೇಗ ಕಾತರ ತಪ್ಪಿದ್ದಲ್ಲ. ಕಾಲೇಜಿಗೆ ರಜೆ ಇದ್ದಾಗ 'ಅಥವಾ' ಆಗಾಗ ಇಲ್ಲಿಗೆ ಬರುತ್ತಿದ್ದ . ಇತನ ಶಿಷ್ಯೆ ರೇಖಾ. ರಾಜಗೋಪಾಲ್ ಎಂಬ ಶ್ರೀಮಂತರ ಮಗಳು ಅಣ್ಣಂದಿರ ಮುದ್ದಿನ ತಂಗಿ. ಹೇಮಂತನ ಮನಸಾರೆ ಪ್ರೀತಿಸುತ್ತಾಳೆ. ಕಾರು ಬಂಗಲೆಯ ಆಸೆಗೆ ನಿರುಪಮ ಮಗನಿಗೆ ಇವಳ ಮದುವೆಯಾಗಲು ಒತ್ತಾಯಿಸುತ್ತಾರೆ. ಊರಿನಲ್ಲಿ ಅಜ್ಜಿ ತಾತನ ಜೊತೆಗಿದ್ದ ಭಟ್ಟ ನಂಬಿಕಸ್ತನಾಗಿದ್ದು ಸರಸ್ವತಿ ಎಂಬಾಕೆ ಮದುವೆಯಾಗಿ ಬೇರೆ ಕಡೆ ಹೋಗುವ. ಗೋಪಾಲಯ್ಯನವರ ಮೊಮ್ಮಗಳು ವಸುಮತಿ ಭಾಗಮ್ಮನವರಿಗೆ ಒಂದು ಸುತ್ತು ಕೆಲಸ ಮಾಡಿಕೊಡುತ್ತಿದ್ದಳು. ಹೇಮಂತ್ ಬಂದಾಗ ಭಾಗಮ್ಮನವರೆ ಪರಸ್ಪರ ಪರಿಚಯಿಸಿದರು. ಗೋಪಾಲಯ್ಯನವರು ಮುಪ್ಪಿನ ಕಾಲಕ್ಕೆ ಮಗಳು ಅಳಿಯನ ಕರೆಸಿಕೊಂಡಿದ್ದರು. ಮೊಮ್ಮಗಳ ಮದುವೆ ಜವಾಬ್ದಾರಿ ಹೊತ್ತವರು ರಾಯರಿಗೆ ವರನ ಹುಡುಕಲು ತಿಳಿಸಿದ್ದರು.ಭಟ್ಟನ ಕುರಿತು ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿತ್ತು ಹೇಮಂತನಿಗೆ .‌ ವಸುಮತಿಗೆ ಒಂದೆರಡು ಕಡೆ ಮದುವೆಗೆ ಪ್ರಯತ್ನಿಸಿದರು ಮದುವೆ ನಿಶ್ಚಯವಾಗದಿದ್ದಾಗ ಅಲ್ಲಿನ ಪರಿಸ್ಥಿತಿ ಅರಿತ ಹೇಮಂತ ಅವಳ ಮದುವೆಯಾಗುವುದಾಗಿ ತಿಳಿಸಿದ.ಆತನ ತಾಯಿಯು ವಸುಮತಿಯ ಒಪ್ಪಲೆ ಇಲ್ಲ ಯಾಕೆಂದರೆ ಬಡಕುಟುಂಬದವಳು ಹಾಗೂ ರೇಖಾ ಎಂಬ ಶ್ರೀಮಂತ ಹುಡುಗಿ ತನ್ನ ಸೊಸೆಯಾಗಬೇಕೆಂದು ಬಯಸಿದ್ದಳು. ಹೇಮಂತ ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡಲು ಇಚ್ಛಿಸಿದ. ಇಂಗ್ಲೆಂಡಿಗೆ ಹೋದವನು ಪತ್ರದ ಮೂಲಕ ಅಜ್ಜಿ ತಾತನ ಜೊತೆ ಮಾತುಕತೆ ನಡೆಸುತ್ತಿದ್ದ. ಭಾಗಮ್ಮನವರ ಸಾವಿನಿಂದ ರಾಯರು ಬಡವಾಗುತ್ತಾರೆ. ಪುನಃ ಆ ಮನೆಗೆ ಭಟ್ಟನ ಆಗಮನವಾಗುತ್ತೆ. ರಶ್ಮಿಗೆ ಮಗಳು ಹುಟ್ಟಿ 'ಭಾಗ್ಯಲಕ್ಷ್ಮಿ' ಎಂದು ನಾಮಕರಣ ಮಾಡುತ್ತಾರೆ. ವಸಂತನ ಗುಣ ಬದಲಾಗುತ್ತೆ. ಅಜ್ಜಿ ತಾತನ ಪ್ರೀತಿಯ ನೋಡಿ ನಿಧಾನವಾಗಿ ಸರಿ ಆಗುವ. ಮಡದಿಯ ಮೇಲೆ ಕೋಪ ಕಡಿಮೆಮಾಡಿಕೊಳ್ಳುವ. ನಿರುಪಮ ಮೊದಲು ಹೆಣ್ಣೆಂದು ಬೇಸರ ಪಟ್ಟರು ಮಗುವಿನ ತೊದಲು ಮಾತು ಕೇಳಿ ಸೊಸೆಗೆ ಚುಚ್ಚು ಮಾತು ಕಡಿಮೆ ಆಗಿತ್ತು. ರೇಖಾ! ಹೇಮಂತನನ್ನೆ ಮನದಲ್ಲಿಟ್ಟುಕೊಂಡವಳು ತನ್ನ ಪ್ರೀತಿಯ ಗೆಲ್ಲುವಳ? ಇದು ಈ ಕಾದಂಬರಿಯ ಕೊನೆಯ ಘಟ್ಟ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಭಾಗಮ್ಮ ಮತ್ತು ರಾಯರ ನಡುವಿನ ಪರಸ್ಪರ ಪ್ರೀತಿ ಗೌರವ , ಊರಿನವರ ಜೊತೆಗೆ ಅವರ ಒಡನಾಟ, ಅಡಿಗೆ ಭಟ್ಟನನ್ನು ಸಾಕಿ ಅವನನ್ನು ತಮ್ಮೊಳಗೊಬ್ಬ ಅಂತ ಕಂಡ ರೀತಿ ಮನಸ್ಸಿಗೆ ಹಿಡಿಸುತ್ತದೆ. ಓದಿದ ನಂತರ ಪದೇ ಪದೇ ಅದರಲ್ಲಿನ ಪಾತ್ರಗಳು ನಮ್ಮ ಸ್ಮೃತಿಗೆ ಬಂದಾಗ ಪುಸ್ತಕ ಓದಿದ ಸಂತೋಷ ನಮ್ಮದಾಗುತ್ತದೆ. ಕಲಿತ ಪಾಠ- ರಶ್ಮಿಯೆಂಬ ಹೆಣ್ಮಗಳು ಗಂಡ ಮತ್ತು ಅತ್ತೆಯಿಂದ ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಬಡವಾದರು ಗಂಡನ ಮನೆ ಬಿಟ್ಟು ತವರು ಸೇರುವುದಿಲ್ಲ. ಬಂದಿದ್ದನ್ನ ಅನುಭವಿಸಿದಳು. ಹೆಣ್ಮಗಳಾಗಿ ಗಟ್ಟಿಯಾಗಿ ನಿಂತಳು, ತಡೆಯಲಾಗದೆ ಇದ್ದಾಗ ತಿರುಗಿ‌ ನಿಂತಳು. ಇದರಲ್ಲಿ ಮತ್ತೊಂದು ಅಂಶ ಇಷ್ಟವಾಗಿದ್ದು ವಸಂತ ಹೆಂಡತಿಯ ತವರಿನವರ ಮೇಲೆ ಅಸಮಧಾನ ಹೊರಗಾಕಿದರು ಮತ್ತೊಂದು ಹೆಣ್ಣಿನ ಸಹವಾಸ ಮಾಡಲಿಲ್ಲ. ಮತ್ತೊಂದು ಮದುವೆಯಾಗುತ್ತೆನೆಂದು ಮಡದಿಯ ಹೆದರಿಸಿದರು ಇನ್ನೊಂದು ಹೆಣ್ಣ ಮದುವೆಯಾಗಲಿಲ್ಲ. ಈ ಕಾದಂಬರಿ ಓದಿದ ಹೆಣ್ಮಕ್ಕಳು ಮದುವೆಯ ನಂತರ ಬಂದ ಸಮಸ್ಯೆಯ ಎದುರಿಸಲು ಸಾಧ್ಯವಾಗಹೆಚ್ಚು ಒತ್ತು ತಾಳ್ಮೆಗೆ ಕೊಟ್ಟಾಗ ಸಮಸ್ಯೆಯ ಪರಿಹರಿಸಬಹುದು. ತನ್ನ ಒಳ್ಳೆಯ ಗುಣದಿಂದಲೇ ಆಕೆ ಬದುಕಿ ಬಾಳಿದಳು.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಇದೊಂದು ಸಾಮಾಜಿಕ ಕಾದಂಬರಿ ಆಗಿರುವುದರಿಂದ ಎಲ್ಲರೀತಿಯ ಓದುಗರು ಇಷ್ಟಪಡಬಹುದು.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

1
Votes
160
Views
6 Months
Since posted

Voting Closed!

Scroll to Top