Submission 2017

ಪುಸ್ತಕದ ಶೀರ್ಷಿಕೆ: ದಾಟು

ಪುಸ್ತಕದ ಲೇಖಕರು: ಎಸ್.ಎಲ್. ಭೈರಪ್ಪ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸರಸ್ವತಿ ಟಿ ಎಸ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ದಾಟು ' ಕಾದಂಬರಿ ನಮ್ಮ ಸಮಾಜದ ಜಾತಿ ಸಮಸ್ಯೆಗೆ ಹಿಡಿದ ಕನ್ನಡಿಯಾಗಿದೆ. ಇದರಲ್ಲಿ ಬರುವ ಪಾತ್ರಗಳ ಚಿತ್ರಣ ನಮ್ಮ ಮನಸ್ಸಿನ ಭಾವನೆಗಳನ್ನು ಕಲಕುತ್ತದೆ.ಹಿಂದಿನ ಕಾಲದ ಜಾತಿ ತಾರತಮ್ಯವು ಅತ್ಯಂತ ಕಠಿಣವಾಗಿದ್ದು ಕಾಲಸರಿದಂತೆ ಸಡಿಲಗೊಳ್ಳುತ್ತಿದೆ, ಅಲ್ಲದೆ ಇದು ಸಾಧ್ಯವಾಗಬೇಕಾದರೆ ಮನುಷ್ಯನಿಗೆ ವಿದ್ಯೆಯ ಜೊತೆ ಇತಿಹಾಸದ ಜ್ಞಾನ ಅತೀ ಮುಖ್ಯವಾಗಿದೆ. ವೈಜ್ಞಾನಿಕ ದೃಷ್ಟಿಕೋನ ಇನ್ನೂ ಅಗತ್ಯವಾಗಿದೆ. ಸ್ವಾರ್ಥ ಮನೋಭಾವದಿಂದ ವರ್ತಿಸಿದಾಗ ಇನ್ನೊಬ್ಬರಿಗೆ ಕೇಡು ಬಯಸಿದರೆ ವಿಧಿ ತನ್ನ ಬಾಳಲ್ಲೂ ಆಟವಾಡುತ್ತದೆ ಎಂಬುದನ್ನು ತುಂಬಾ ಚೆನ್ನಾಗಿ ಬರೆದಿದ್ದಾರೆ. ಜಾತಿಯ ವೈಷಮ್ಯದಿಂದ ಬೇರೆಯವರ ನಾಶಪಡಿಸಲು ಯತ್ನಿಸಿದರೆ ಅದು ತನ್ನ ಅಸ್ತಿತ್ವವನ್ನೇ ಸುಟ್ಟುಹಾಕುತ್ತದೆ. ಇದರಿಂದ ಹೊಸ ಸಮಾಜದ ನಿರ್ಮಾಣಕ್ಕೆ ನಾಂದಿ ಯಾಗುತ್ತದೆ. "ಧೀಯೋ ಯೋನಃ ಪ್ರಚೋದಯಾತ್ "ಎಂಬ ಸಾಲುಗಳು ಮನುಷ್ಯನನ್ನು ಹೊಸ ಚಿಂತನೆಗೆ ಪ್ರೆರೇಪಿಸುತ್ತದೆ. ಮಾನವನ ಮನುಷ್ಯತ್ವದ ಜಾಗೃತಿ ಯಾಗಲು ಪ್ರೆರೇಪಿಸುತ್ತದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಇಲ್ಲಿ ಸತ್ಯ, ಬೆಟ್ಟಯ್ಯ, ಹಾಗೂ ಶ್ರೀನಿವಾಸ ಪಾತ್ರಗಳು ತುಂಬಾ ಪ್ರಮುಖ ವಾಗಿವೆ. ಸತ್ಯ ಅನ್ಯ ಜಾತಿಯ ಹುಡುಗನನ್ನು ಮದುವೆಯಾಗಲು ನಿರ್ಧಾರಿಸಿದಾಗ, ಎಲ್ಲಾ ಪಾತ್ರಗಳು ಜಾಗೃತವಾಗುತ್ತವೆ.ಇಲ್ಲಿ ಸತ್ಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅವಳ ಧೈರ್ಯ, ಪ್ರಾಮಾಣಿಕತೆ, ಕರ್ತವ್ಯಪ್ರಜ್ಞೆ, ಕರುಣೆ, ದಯೆ, ಹಾಗೂ ಸ್ವಾಭಿಮಾನ ದಂತಹ ಅನೇಕ ಗುಣಗಳನ್ನು ಚಿತ್ರಿಸಲಾಗಿದೆ. ಒಂದು ಹೆಣ್ಣು ಮನಸ್ಸು ಮಾಡಿದರೆ, ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಉದಾಹರಣೆ ಯಾಗಿದೆ. ಸುತ್ತಲೂ ಇರುವ ಜನಗಳ ಮಾತಿಗೆ ಹೆದರಿ ಬದುಕುವವರ ಮಧ್ಯೆ ದಿಟ್ಟತನದಿಂದ ಬ್ರಾಹ್ಮಣ ಹೆಣ್ಣು ಶೂದ್ರಳಾಗಿ ಬದುಕಬಲ್ಲಳು, ಅಲ್ಲದೆ ನಾವು ಮಾಡುವ ಕೆಲಸ ಮತ್ತು ಮನಸ್ಸು ದೃಢ ವಾಗಿದ್ದರೆ ಸಾಕು. ಶ್ರೀನಿವಾಸ ಪಾತ್ರವು ಗೊಂದಲಮನಸ್ಥಿತಿಗೆ ಕಾರಣವಾಗಿದೆ.ತನ್ನ ಗುರಿ ತಿಳಿದಿದ್ದರೂ ಕುಟುಂಬಸದಸ್ಯರ ಮನೋಭಾವದಿಂದ ಮನಸು ಡೊಲಾಯಮಾನ ಸ್ಥಿತಿ ತಂದುಕೊಳ್ಳುತ್ತಾನೆ, ಬೆಟ್ಟಯ್ಯ ಪಾತ್ರ ಸಮಾಜದ ಕೆಳಜಾತಿಯಜನರ ಕೆಟ್ಟ ಸ್ವಭಾವ ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಪಾತ್ರ ಅತ್ಯಂತ ದೈನ್ಯತೆ, ಅತೀ ಗೌರವ, ಹಾಗೂ ಕಾರ್ಯತತ್ಪರತೆ ಗುಣಗಳನ್ನು ತಿಳಿಸುತ್ತದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಈ ಕಥೆಯು ಇತಿಹಾಸ ಪ್ರಿಯರಿಗೆ ಸೂಕ್ತವಾಗಿದೆ. ಸ್ವಭಾವಿಕವಾಗಿ ಎಲ್ಲರೂ ಓದಬಹುದಾದ ಅತ್ಯದ್ಭುತ ಕಾದಂಬರಿಯಾಗಿದೆ.ಜಾತಿಸಮಸ್ಯೆಯ ಬಗ್ಗೆ ಹೋರಾಡಲು ಬಯಸುವವರು ಪ್ರಥಮಿಕವಾಗಿ ಓದಬಹುದಾದ ಪುಸ್ತಕ ಇದು. ಏಕೆಂದರೆ ಅನಾದಿ ಕಾಲದಿಂದ ಜಾತಿಯ ಬೇರುಗಳು ಹೇಗೆ ತಳುಕು ಹಾಕಿಕೊಂಡಿವೆ ಎಂಬುದನ್ನು ಸೂಕ್ಷ್ಮವಾಗಿ ಇಲ್ಲಿ ವಿವರಿಸಲಾಗಿದೆ. ಜಾತಿಸಮಸ್ಯೆ ಬಗೆಹರಿಯಬೇಕಾದರೆ ಇಲ್ಲಿ ದ್ವೇಷ ಕ್ಕಿಂತ ಅರಿವು ಮುಖ್ಯವಾಗಿದೆ. ಎಲ್ಲರೂ ಒಂದು ಗೂಡಿ ಬದುಕಲು ಪರಸ್ಪರ ಅರ್ಥೈಸಿಕೊಳ್ಳುವಿಕೆ ಆಗಬೇಕಿದೆ. ಒಳ್ಳೆಯದನ್ನು ಎಲ್ಲರಿಗೂ ಹಂಚಿ ಅದನ್ನೇ ಎಲ್ಲರಿಂದಲೂ ಸ್ವೀಕಾರ ಮಾಡುವ ಮನೋಭಾವ ಬೆಳೆಯಬೇಕಾಗಿದೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

8
Votes
159
Views
6 Months
Since posted

Voting Closed!

Scroll to Top