Submission 2019

ಪುಸ್ತಕದ ಶೀರ್ಷಿಕೆ: ಆನಂದ ಮಠ

ಪುಸ್ತಕದ ಲೇಖಕರು: ಬಂಕಿಮ ಚಂದ್ರ ಚಟ್ಟೋಪಾಧ್ಯಾಯ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ವಿನಾಯಕ ಕುಲಕರ್ಣಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

"ಬಂಕಿಮ ಚಂದ್ರ ಚಟ್ಟೋಪಾಧ್ಯಾಯ" ಯಾರಿಗೆತಾನೆ ಗೊತ್ತಿಲ್ಲ, ಕನಿಷ್ಟಪಕ್ಷ ಅವರ ಬಗ್ಗೆ ಗೊತ್ತಿಲ್ಲದಿದ್ದರೂ ಈ ಹೆಸರನಾದರೂ ಕೇಳಿಯೇ ಇರುತ್ತೇವೆ. ಇತ್ತೀಚೆಗೆ 150 ವರ್ಷ ಪೂರೈಸಿದ "ವಂದೇ ಮಾತರಂ" ಗೀತೆಯನ್ನು ಬರೆದವರು. ಈ ಗೀತೆಯನ್ನು ಒಂದು ಕಾದಂಬರಿಗೋಸ್ಕರ ಬರೆಯಲ್ಪಟ್ಟದ್ದು ,ಆ ಕಾದಂಬರಿಯ ಹೆಸರೇ "ಆನಂದ ಮಠ". ಸಾಮಾನ್ಯವಾಗಿ ಕಥೆಗನುಸಾರವಾಗಿ ಹಾಡು ಬರೆಯುತ್ತಾರೆ ಆದರೆ ಇಲ್ಲಿ, ಮೊದಲು ಗೀತೆ ರಚಿಸಿ ಅದರ ಸುತ್ತ ಕಾದಂಬರಿ ಬರೆದದ್ದು ಅಚ್ಚರಿಯ ಸಂಗತಿ! ಮುಸ್ಲಿಂ (ಬ್ರಿಟಿಷ್)ಸಾಮ್ರಾಜ್ಯದ ದೌರ್ಜನ್ಯದ ವಿರುದ್ಧ ಸಿಡಿದೇಳುವ ಭಾರತದ ಸಂನ್ಯಾಸಿಗಳ ಗುಂಪಿನ ಕಥೆ - "ಆನಂದ ಮಠ". ಕಾದಂಬರಿಯಲ್ಲಿ ಮೇಲಾಗಿ ಸಂನ್ಯಾಸಿಗಳ ಗುಂಪು ಮುಸ್ಲಿಂ ಸಾಮ್ರಾಜ್ಯದ ವಿರುದ್ಧವಾಗಿದ್ದರು, ಅದರಾಳದಲ್ಲಿ ಈ ಸಂಘರ್ಷ, ಈ ಹೋರಾಟ ಇದ್ದದ್ದು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧವೇ! ಬಂಕಿಮರು ತಾಯಿ ಭಾರತಿಯನ್ನು ದುರ್ಗೆಗೆ ಹೋಲಿಸಿ ಸನ್ಯಾಸಿಗಳನ್ನು ತಾಯಿಯ ಆರಾಧಕರನ್ನಾಗಿ ಮಾಡಿದ್ದಾರೆ. ಅರ್ಥಾತ್ ತಾಯಿ ಭಾರತಿಯ ಸೇವೆ ಮಾಡಬೇಕಾದರೆ ವ್ಯಾಮೋಹ, ಪದವಿ, ಸಂಸಾರ ಎಲ್ಲವನ್ನೂ ತೊರೆದು ಮಾಡಬೇಕೆಂದು. ಬ್ರಿಟಿಷರ ಭಯಕ್ಕೆ ಮತ್ತು ಯುವ ಜನಾಂಗ ವ್ಯಾಮೋಹಕ್ಕೆ ಸಿಲುಕಿ ಮಾತೆಯ ರಕ್ಷಣೆ ಮರೆತಾಗ ತಾಯಿ ಭಾರತಿ ಮಹೇಂದ್ರಸಿಂಹ ನ ಹೆಂಡತಿಯ ಕನಸಿನಲ್ಲಿ ಬಂದು ಆಕೆಗೆ "ನಿನ್ನ ವ್ಯಾಮೋಹದಿಂದಾಗೀಯೆ ನನ್ನ ಸೇವೆಯನ್ನು ನನ್ನ ಮಗ ಮರೆತದ್ದು" ಎನ್ನುವಂತಹ ಮಾತು ಆಗಿನ ಯುವ ಜನಾಂಗಕ್ಕೆ ಮಾತ್ರವಲ್ಲ ಈಗಿನ ಯುವ ಜನಾಂಗಕ್ಕೂ ನಾಟಿ ನಮ್ಮೆಲ್ಲರ ಹೃದಯ ಸ್ಪರ್ಶಿಸುತ್ತವೆ ಮತ್ತು ತಾಯಿ ಭಾರತಿಯ ಸೇವೆಗೆ ಅಣಿವಾಸಿಸುತ್ತದೆ. ಕೊನೆಗೆ ಎಲ್ಲ ಸನ್ಯಾಸಿಗಳು ಬ್ರಿಟೀಷರನ್ನು (ಸಾಮಾನ್ಯವಾಗಿ ಯುದ್ಧ ಮುಸಲ್ಮಾನರ ವಿರುದ್ಧ ವಾದರೂ, ಕೊನೆ ಯುದ್ಧ ಸಂನ್ಯಾಸಿಗಳ ಉದ್ದೇಶಕ್ಕೆ ಕಾಲೋಡ್ಡುವ ಬ್ರಿಟಿಷರೋಡನೆಯೇ) ಬಡಿದು ಸೋಲಿಸಿ, ಭಾರತ ಮಾತೆಯನ್ನು ಸ್ವತಂತ್ರಗೊಳಿಸುತ್ತಾರೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಮಹೇಂದ್ರ ಸಿಂಹ: ನೀವೆಲ್ಲ ಸನ್ಯಾಸಿಗಳೋ, ಹಾಗಿದ್ದರೆ ದರೋಡೆ ಮಾಡುವುದೇಕೆ ? ಸನ್ಯಾಸಿ: ದರೋಡೆ?, ಇದು ದರೋಡೆ ಅಲ್ಲ,ಇದು ನಮ್ಮ ದುಡ್ಡು, ನಮ್ಮ ಜನರ ದುಡ್ಡು. ಇದನ್ನು ಕಂದಾಯ ಕಟ್ಟಲಾಗುವುದಿಲ್ಲ. ಮಹೇಂದ್ರ ಸಿಂಹ: ಇದು ಸರ್ಕಾರದ ದುಡ್ಡು. ಸನ್ಯಾಸಿ: ಇಲ್ಲ, ಜನರ ಯೋಗ ಕ್ಷೇಮ ಮತ್ತು ಸ್ವತಂತ್ರ ಕಸಿದುಕೊಳ್ಳುವ ಸರ್ಕಾವನ್ನು ,ನಮ್ಮ ಸರ್ಕಾರ ಎಂದು ಒಪ್ಪಬಾರದು.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

40
Votes
244
Views
6 Months
Since posted

Voting Closed!

Scroll to Top