Submission 1977

ಪುಸ್ತಕದ ಶೀರ್ಷಿಕೆ: ಹೇಳಿ ಹೋಗು ಕಾರಣ

ಪುಸ್ತಕದ ಲೇಖಕರು: ರವಿ ಬೆಳಗೆರೆ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಮೇಘನಾ ಗಣಿಯಾರ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಆ ರಾತ್ರಿ ಕಾಲ್ನಡಿಗೆಯಲ್ಲಿ ಸಪ್ತಪದಿಯಂತೆ ಎಜ್ಜೆ ಆಕಿ ಬಂದಿದ್ದು ಪ್ರೀತಿಯ... ಈ ರಾತ್ರಿ ಮರ್ಸಿಡಿಸ್ ಕಾರ್ನಲ್ಲಿ ಮೈಮರೆಯುತ್ತಿರುವುದು ಪ್ರೀತಿಯ... ಭವಿಶ್ಯವನ್ನೆಲ್ಲ ಜೊತೆಯಾಗಿ ಬಂದವಳಿಗೆ ಮೂಡುಪಾಗಿರುವುದು ಪ್ರೀತಿಯ....... ಬದುಕೆಂಬುದು ಒಂದೇ ರಾತ್ರಿ ಉಂಡು ಮುಗಿಸುವ ದಾಹ ಎನ್ನುವುದು ಪ್ರೀತಿಯ... ಧ್ಯಾನ, ನಂಬಿಕೆ, ಶ್ಲೋಕದಿಂದ ಶುರುವಾಗಿದ್ದು ಪ್ರೀತಿಯ..... ಡಾಬಾ, ಎಣ್ಣೆ, ಸಿಗರೇಟಿನ ಘಮದಲ್ಲಿ ಲೀನವಾಗಿದ್ದು ಪ್ರೀತಿಯ... ಅಂದು ಕನಸಿನ ವಿದ್ಯೆಯನ್ನು ಬೆನ್ನಟ್ಟಿ ಬಂದಿದ್ದು ಪ್ರೀತಿಯ..... ಇಂದು ಕಾಮದ ಮೋಹಕ್ಕೆ ಮನಸೋಲುವುದು ಪ್ರೀತಿಯ... ಖಾಲಿಯಾದ ಬದುಕಿಗೆ ಕಲ್ಪನೆಗೂ ಮೀರಿದ ಸಾಮ್ರಾಜ್ಯ ಕಟ್ಟಿದ್ದು ಪ್ರೀತಿಯ.... ಕಾಲಕಳೆದಂತೆ ಇವಳಲ್ಲಾ ಇನ್ನೊಬ್ಬಳು ಎನ್ನುವುದು ಪ್ರೀತಿಯ... ಪುಟ್ಟ ಗುಡಿಸಲಲ್ಲಿ ದೊಡ್ಡ ಕನಸಿನೊಂದಿಗೆ ಅರಳಿದ್ದು ಪ್ರೀತಿಯ... ಶ್ರೀಮಂತ ಬಂಗಲೆಯಲ್ಲಿ ಬಣ್ಣ ಬದಲಿಸುವನ ಜೊತೆ ನಿಶ್ಚಯವಾಗಿದ್ದು ಪ್ರೀತಿಯ... ಹೇಳಿ ಹೋಗು ಕಾರಣ..........

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಹೇಳಿ ಹೋಗು ಕಾರಣ ಇದು ಬರೀ ಕಾದಂಬರಿ, ಪುಸ್ತಕವಲ್ಲ ಹಿಮಾವಂತ್, ಪ್ರಾರ್ಥನಾ, ದೇಬ್ ಶಿಶು, ಊರ್ಮಿಳಾ ನಲ್ವರ ಜೀವನದ ಬಹುದೊಡ್ಡ ತಿರುವು. ಬಹುದುಕಿನಲ್ಲಿ ನಿರ್ಧಾರಗಳು, ಗುರಿಗಳು ದೃಢವಾಗಿದ್ದಾರೆ ನಾವು ಕೊನೆಯಲ್ಲಿ ಸರಿಯಾದ ನೆಲೆ ತಲುಪಬಹುದು ಎಂದು ಸಾಬೀತು ಪಡಿಸಿದ ಪಾತ್ರಗಳು ಇಲ್ಲಿವೆ. ಹಿಮವಂತ್ ಭಯಸಿದ್ದು ಪ್ರಾರ್ಥನಾಳ ಪರಿಶುದ್ಧ ಪ್ರೀತಿ, ಪ್ರಾರ್ಥನಾ ಬಿದ್ದಿದ್ದು ದೇಬುವಿನ ಪ್ರಮದ ಆಕರ್ಷಣಗೆ . ದೇಬುವಿಗೆ ಬೇಕಿದ್ದು ಊರ್ಮಿಳೆಯ ಆಗದ ಪ್ರೀತಿ ಆದರೆ ಸಿಕ್ಕಿದ್ದು ಪ್ರಾರ್ಥನಳ ಆಕರ್ಷಣೆಯ ಪ್ರೇಮ. ಕತೆಯಲ್ಲಿ ಪ್ರೀತಿ, ಪ್ರಮದ ವ್ಯತ್ಯಾಸ ತಿಳಿಯದೆ ನಾಲ್ಕು ಜನರ ದಿಕ್ಕು ಬದಲಾಗಿದ್ದು ಉಂಟು, ನಿಜವಾದ ಪ್ರೀತಿಗೆ ನ್ಯಾಯ ಸಿಕ್ಕಿದ್ದು ಉಂಟು. ಪ್ರೀತಿಯಲ್ಲಿ ಮೊಸವಾಗಿದ್ದ ದೇವರಿಗೆ, ಪ್ರೀತಿಯಲ್ಲಿ ಪವಿತ್ರತೆ ಉಡುಕುತ್ತಿದ್ದೆ ದೇವತೆ ಸಿಕ್ಕಿದ್ದು ಉಂಟು.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಪ್ರೀತಿ, ಪ್ರೇಮದ ಅರ್ಥ ತಿಳಿಯದೆ ಮೋಸ ಮಾಡುತ್ತಿರುವವರು ಇದ್ದರೆ ಮೋಸ ಹೋಗುತ್ತಿರುವವರು ಇದ್ದಾರೆ. ತಿಳಿಯದ ಯಾವಸ್ಸಲ್ಲಿ, ಅರಿಯದ ನಿರ್ಧಾರಗಳನ್ನು ಮಾಡಿ ಅರ್ಧ ಅಯಸ್ಸಿಗೆ ಬದುಕು ಹಾಳುಮಾಡಿಕೊಳ್ಳುವವರಿಗೆ ಈ ಕಾದಂಬರಿ ನೇರ ಕನ್ನಡಿಯಾಗಿದೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

2
Votes
124
Views
4 Months
Since posted

Voting Closed!

Scroll to Top