Submission 1979

ಪುಸ್ತಕದ ಶೀರ್ಷಿಕೆ: ಮಹಾಶ್ವೇತೆ

ಪುಸ್ತಕದ ಲೇಖಕರು: ಸುಧಾಮೂರ್ತಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ನೇಹಾ ಹೂಲಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಈ ಕಥೆಯಲ್ಲಿ ಬರುವ ಮುಖ್ಯ ಪಾತ್ರಧಾರಿಯ ಹೆಸರು ಅನುಪಮಾ. ನಿಜವಾಗಿಯೂ ಇವಳು ಉಪಮೇಯವೇ ಇಲ್ಲದ ಸುಂದರಿ. ಅನುಪಮಾ ಎಂ.ಎ ಕೊನೆಯ ವರ್ಷದಲ್ಲಿ ಓದುತ್ತಿರುತ್ತಾಳೆ. ಅನುಪಮಾ ಬಡಮನೆತನದಿಂದ ಬಂದವಳು. ಇವಳ ತಂದೆ ಒಬ್ಬ ಶಾಲಾ ಶಿಕ್ಷಕರು. ಬಾಲ್ಯದಲ್ಲಿಯೇ ಅನುಪಮಾ ತಾಯಿಯನ್ನು ಕಳೆದುಕೊಂಡಿದ್ದಳು. ಇವಳ ತಂದೆ ಮರುಮದುವೆಯಾಗಿ ಹೆಂಡತಿಯ ಕೈಗೊಂಬೆಯಾಗಿದ್ದರು. ಅನುಪಮಾ ಮಲತಾಯಿ ಸಾಬಕ್ಕಳ ತಾತ್ಸಾರ ದಲ್ಲಿಯೇ ಬೆಳೆದಳು. ಸಾಬಕ್ಕಳಿಗೆ ವಸುದಾ ಹಾಗೂ ನಂದ ಎಂಬ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಓದಿನಲ್ಲಿ ಚುರುಕಿದ್ದ ಅನುಪಮ ಸ್ಕಾಲರ್ಶಿಪ್ ಸಹಾಯದಿಂದಲೇ ಇಲ್ಲಿಯವರೆಗಿನ ವಿದ್ಯಾಭ್ಯಾಸ ಮಾಡಿದ್ದಳು.ಈಕೆ ಅಭಿನಯದಲ್ಲೂ ಪ್ರವೀಣೆ. ಅನೇಕ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿದಳು.ಅನುಪಮಾಳ ಆತ್ಮೀಯ ಗೆಳತಿ ಸುಮಾ.ಆಕೆಯ ಸೀರೆ ಹಾಗೂ ಒಡವೆಗಳನ್ನು ಅನುಪಮಾಳ ನಾಟಕಕ್ಕಾಗಿ ತೆಗೆದು ಇಡುತ್ತಿದ್ದಳು.ಡಾಕ್ಟರ ಆನಂದ ಒಬ್ಬ ಸುಂದರ,ಎತ್ತರವಾದ ನಿಲುವುಳ್ಳ ತರುಣ.ಅನುಪಮಾಳ ತಂದೆಯ ಸ್ನೇಹಿತರಾಗಿದ್ದ ಹಾಗೂ ಆನಂದನ ಅಧ್ಯಾಪಕರು ಆಗಿದ್ದ ದೇಸಾಯಿ ಅವರಿಗೆ ಅನುಪಮಾ ನಾಟಕದ ಟಿಕೇಟು ಮಾರಲು ಬಂದಾಗ ಆನಂದ ಹಾಗೂ ಅನುಪಮ ಮೊದಲ ಬಾರಿಗೆ ಭೇಟಿಯಾಗುತ್ತಾರೆ. ಡಾಕ್ಟರ್ ಆನಂದ ಲಕ್ಷ್ಮಿ ಹಾಗೂ ಸರಸ್ವತಿ ಪುತ್ರ. ಇವನ ಮನೆತನದಲ್ಲಿ ತಲೆತಲಾಂತರದಿಂದ ಬಂದಿದ್ದ ಸಿರಿತನ ಮೊದಲ ಭೇಟಿಯಲ್ಲಿಯೇ ಆನಂದ ಅನುಪಮಾ ಒಬ್ಬರನ್ನೊಬ್ಬರು ಪರಸ್ಪರ ಮೆಚ್ಚಿದ್ದರು. ಆನಂದನ ತಾಯಿ ರಾಧಕ್ಕ ಇಂಥದ್ದೇ ದೊಡ್ಡ ಸಿರಿವಂತರ ಮನೆಯಿಂದ ಬಂದಿದ್ದರು. ಜೀವನದಲ್ಲಿ ಕಷ್ಟವನ್ನೇ ನೋಡಿರಲಿಲ್ಲ. ಮುಖದಲ್ಲಿ ಸಿರಿತನದ ಗರ್ವ ಎದ್ದು ಕಾಣುತ್ತಿತ್ತು.ರಾಧಕ್ಕಳಿಗೆ ಬಡವರ ಮನೆಯ ಸೊಸೆ ಬೇಡವಾಗಿದ್ದರೂ ಮುಂದೆ ಆನಂದ್ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವವನಿದ್ದ ಹೀಗಾಗಿ ವಿದೇಶಿ ಸೊಸೆಗಿಂತ ಇವಳೇ ಮೇಲು ಎಂಬ ಅನಿವಾರ್ಯ ಕಾರಣಕ್ಕೆ ರಾಧಕ್ಕ ಮದುವೆಗೆ ಒಪ್ಪಿದಳು. ವಿಜೃಂಭಣೆಯಿಂದ ಮದುವೆಯು ನಡೆದುಹೋಯಿತು. ಅನುಪಮಾ ಹಿಂದೆಂದೂ ಕಾಣದಷ್ಟು ಸಿರಿತನ,ಆಭರಣ, ಸೀರೆಗಳನ್ನು ನೋಡಿದ್ದಳು.ಆನಂದ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ. ಹೋಗುವ ಮುನ್ನ "Only Death can apart us" ಎಂಬ ಮಾತನ್ನು ಅನುಪಮಾಳಿಗೆ ಕೊಟ್ಟಿದ್ದ.6 ತಿಂಗಳ ನಂತರ ಅನುಪಮಾಳು ವಿದೇಶಕ್ಕೆ ಹೋಗುವಗಳಿದ್ದಳು. ಒಂದು ದಿನ ಮನೆಯಲ್ಲಿ ಪೂಜೆ ಮಾಡುವ ಸಮಯದಲ್ಲಿ ಅನುಪಮಾಳ ಕಾಲಿನ ಮೇಲೆ ಕೆಂಡ ಬಿದ್ದು, ಆ ಕಾಲಿನ ಭಾಗ ಬಿಳಿ ಆಗಿರುತ್ತದೆ. ಅನುಪಮಾ ವೈದ್ಯರಲ್ಲಿಗೆ ಹೋದಾಗ ಅದು ಬಿಳುಪು ರೋಗ ಎನ್ನುವುದು ತಿಳಿಯುತ್ತದೆ. ಡಾಕ್ಟರ್ ಹೇಳುವಂತೆ ಇದು ವಂಶಪಾರಂಪರಿಕ ರೋಗವಲ್ಲ. ಆದರೆ ಕೆಲವರಿಗೆ ಕಡಿಮೆಯಾಗುತ್ತದೆ ಇನ್ನು ಕೆಲವರಿಗೆ ಹರಡುತ್ತದೆ. ವೈದ್ಯರು ಔಷಧಿಯನ್ನು ನೀಡಿ ಅನುಪಮಾಳನ್ನು ಕಳಿಸುತ್ತಾರೆ. ಆಕಸ್ಮಿಕವಾಗಿ ಈ ವಿಷಯ ರಾಧಕ್ಕಳಿಗೆ ತಿಳಿದಾಗ ಅನುಪಮಾಳನ್ನು ಮನೆಯಿಂದ ಹೊರಹಾಕುತ್ತಾಳೆ. ನಮಗೆ ಮೋಸ ಆಗಿದೆ,ಮದುವೆಯ ಮೊದಲೇ ಬಿಳುಪು ಇದ್ದರೂ ಅದನ್ನು ಮುಚ್ಚಿಟ್ಟು ಮದುವೆ ಮಾಡಿದ್ದಾರೆ ಎಂದು ರಾಧಕ್ಕ ಹೇಳುತ್ತಾಳೆ. ಇತ್ತ ಅನುಪಮಾ ಆನಂದನಿಗೆ ಸಾಕಷ್ಟು ಪತ್ರ ಬರೆಯುತ್ತಾಳೆ,ಏಕೆಂದರೆ ಆನಂದನೆಗೆ ಮಾತ್ರ ತನಗೆ ಮದುವೆಯ ಮುಂಚೆ ಬಿಳುಪು ರೋಗ ಇರಲಿಲ್ಲ ಎಂಬ ಸತ್ಯ ತಿಳಿದಿತ್ತು. ಅನುಪಮಾ ಆನಂದನ ಪತ್ರಗಳಿಗೆ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾಳೆ, ಆದರೆ ಆನಂದನಿಂದ ಯಾವ ಉತ್ತರವೂ ದೊರೆಯಲಿಲ್ಲ.ಅನುಪಮಾ ತನ್ನ ಬಿಳುಪು ರೋಗ ಕಡಿಮೆಯಾಗಲು ಸಾಕಷ್ಟು ಹರಕೆ,ಪೂಜೆಯನ್ನು ಮಾಡುತ್ತಾಳೆ, ಆದರೆ ಯಾವುದು ಫಲಿಸಲಿಲ್ಲ.ಮಲತಾಯಿಯ ತಾತ್ಸಾರದ ನುಡಿಗಳನ್ನು ಕೇಳಲಾಗದೆ ಅನುಪಮಾ ಕಂದಕದಿಂದ ಹಾರಿ ಪ್ರಾಣ ಬಿಡುವ ನಿರ್ಧಾರವನ್ನು ಮಾಡುತ್ತಾಳೆ. ಆದರೆ ಯಾವುದೋ ಅವ್ಯಕ್ತ ಶಕ್ತಿ ಅವಳನ್ನು ತಡೆಯುತ್ತದೆ. "ಜೀವನದ ಪ್ರೀತಿ" ಆಕೆಯನ್ನು ಆತ್ಮಹತ್ಯೆಯಿಂದ ವಿಮುಖಳನ್ನಾಗಿ ಮಾಡುತ್ತದೆ. ಅನುಪಮಾ ತನ್ನ ಗೆಳತಿ ಸುಮನಳ ಹತ್ತಿರ ಮುಂಬೈಗೆ ಹೋಗುತ್ತಾಳೆ. ಸುಮನಳಿಗೆ ಈಗ ಮದುವೆಯಾಗಿದೆ, ಆಕೆ ತನ್ನ ಗಂಡನ ಜೊತೆ ಮುಂಬೈನಲ್ಲಿ ವಾಸವಿದ್ದಾಳೆ. ಮುಂಬೈನಲ್ಲಿ ಅನುಪಮಾ ಕ್ಲರ್ಕ್ ಕೆಲಸಕ್ಕೆ ಸೇರುತ್ತಾರೆ. ಸ್ವಲ್ಪ ದಿನಗಳ ನಂತರ ತನ್ನ ಸಹೋದ್ಯೋಗಿಯಾದ ಡಾಲಿಯ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಇರುತ್ತಾಳೆ.ಕ್ಲರ್ಕ್ ಕೆಲಸ ಬೇಸರವಾದಾಗ ಬೇರೆ ಕೆಲಸವನ್ನು ಹುಡುಕುತ್ತಾಳೆ. ಇವಳಿಗೆ ಒಂದು ಕಾಲೇಜಿನಲ್ಲಿ ನಾಟಕ ನಿರ್ದೇಶಕಿ ಯಾಗಿ ಕೆಲಸ ಸಿಗುತ್ತದೆ. ಅನುಪಮ ಗೆ ಮುಂಬೈನಲ್ಲಿ ಡಾಕ್ಟರ ವಸಂತನ ಪರಿಚಯವಾಗುತ್ತದೆ. ಈಕೆಗೆ ಆಕ್ಸಿಡೆಂಟ್ ಆದಾಗ ಈತನೇ ಅನುಪಮಾಳ ಆರೈಕೆ ಮಾಡಿರುತ್ತಾನೆ. ಡಾಕ್ಟರ್ ವಸಂತನಿಗೆ ಸಂಸ್ಕೃತದಲ್ಲೂ ಒಳ್ಳೆಯ ಅಭಿರುಚಿ ಇರುತ್ತದೆ. ಅನುಪಮಾ ಹಾಗೂ ವಸಂತ ಒಳ್ಳೆಯ ಸ್ನೇಹಿತರಾಗಿರುತ್ತಾರೆ. ವಸಂತ ಅನುಪಮಾಳ ಹಿಂದಿನ ಜೀವನದ ಕುರಿತು ತಿಳಿದೇ ಅನುಪಮಾಳ ಮುಂದೆ ಮದುವೆಯ ಪ್ರಸ್ತಾಪವನ್ನು ಮಾಡುತ್ತಾನೆ. ತನಗೆ ರೋಗ ಇದ್ದರೂ ತನ್ನ ಕೈ ಹಿಡಿಯುತ್ತೇನೆ ಎನ್ನುವ ವಸಂತನ ಅಂತಕರಣವನ್ನು ಅನುಪಮಾ ನೆನೆಯುತ್ತಾಳೆ. ಆದರೆ ನನಗೆ ಈ ಸಂಸಾರ,ಗಂಡ,ಮನೆ,ಮಕ್ಕಳು, ತಾಯಿ,ಅಣ್ಣ ಮುಂತಾದ ಸಂಬಂಧ ಅಸತ್ಯ ಎನಿಸುತ್ತದೆ. ನನಗೆ ಈ ಸಂಸಾರದ ಜಂಜಾಟವೇ ಬೇಡ ಎಂದು ಈ ಪ್ರಸ್ತಾಪವನ್ನು ಪ್ರೀತಿಯಿಂದಲೇ ನಿರಾಕರಿಸುತ್ತಾಳೆ. "ದೇವರೇ ಐದು ವರ್ಷದ ಹಿಂದೆ ಅನುಪಮಗೆ ಈ ರೋಗ ಬಂದಾಗಲೇ ನನ್ನ ಪರಿಚಯವಾಗಿದ್ದರೆ ಈ ಅನರ್ಘ್ಯ ರತ್ನವನ್ನು ನಾನು ಇಂದು ಕಳೆದುಕೊಳ್ಳುತ್ತಿರಲಿಲ್ಲ"ಎಂದು ವಸಂತನಿಗೆ ಅನ್ನಿಸಿದ್ದು ನಿಜ. ಬಹಳ ದಿನಗಳ ನಂತರ ಆನಂದ ಈಕೆಯನ್ನು ಹುಡುಕಿ ಬಂದಾಗ ನೀವು ಬಹಳ ತಡಮಾಡಿದಿರಿ,ನನ್ನ ಬಾಳಿನ ಗುರಿಯನ್ನು ನಾನು ಕಂಡುಕೊಂಡಿರುವೆ ಈಗ ನನಗೆ ಯಾರ ಊರುಗೋಲು ಬೇಡ ಎನ್ನುತ್ತಾಳೆ.ಇಲ್ಲಿ ಅನುಪಮಾಳ ಆತ್ಮಸ್ಥೈರ್ಯ ಮೆಚ್ಚುವಂತದ್ದು. ಅದೆಷ್ಟೇ ಕಷ್ಟ ಬಂದರೂ ಆಕೆ ಮುನ್ನುಗ್ಗುತ್ತಾಳೆ. ಈ ಕಥೆಯನ್ನು ಸುಧಾಮೂರ್ತಿಯವರು ಮನಮುಟ್ಟುವಂತೆ ವಿವರಿಸಿದ್ದಾರೆ. ಅನುಪಮಾ ಪಾತ್ರ ನನಗೆ ಅತ್ಯಂತ ಇಷ್ಟವಾದ ಪಾತ್ರ. ಅನುಪಮಾಳ ಪಾತ್ರವನ್ನು ಲೇಖಕಿ ಸುಂದರವಾಗಿ ವಿಶ್ಲೇಷಿಸಿದ್ದಾರೆ. ಲೇಖಕಿಯವರೇ ತಿಳಿಸಿದಂತೆ ಸಾಕಷ್ಟು ವೈದ್ಯ ಈ ಪುಸ್ತಕವನ್ನು ಚರ್ಮರೋಗಿಗಳಿಗೆ ಓದಲು ತಿಳಿಸಿದ್ದಾರೆ. ಈ ಪುಸ್ತಕ ಅವರ ಬಾಳಿನಲ್ಲಿ ಒಂದು ಹೊಸ ದಿಕ್ಕು, ಹೊಸ ಆಶಯವನ್ನು ನೀಡುವುದನ್ನು ಖಚಿತ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

2
Votes
124
Views
4 Months
Since posted

Voting Closed!

Scroll to Top