ಪುಸ್ತಕದ ಶೀರ್ಷಿಕೆ: ಹೇಳಿ ಹೋಗು ಕಾರಣ
ಪುಸ್ತಕದ ಲೇಖಕರು: ರವಿ ಬೆಳಗೆರೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಮಧು ಎ ಹೊಸೂರರ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ರವಿ ಬೆಳಗೆರೆ ಅಂದ್ರೆ ಕೇಳ್ಬೇಕಾ..!!! ಅಕ್ಷರ ಮಾಂತ್ರಿಕ ಇವರು. ಏಕೆಂದರೆ ಅವರ ಬರವಣಿಗೆಯೇ ಅಂತದ್ದು ಕಣ್ರೀ.... ಅವರ ಓದುಗಳಿಗೆ ಒಮ್ಮೆ ದಾಸರಾದರೆ ಮುಗಿತು ಕತೆ...ಅವರ ಬರಹ ಶೈಲಿಯಂತೂ ಓದಿಯೇ ತೀರಬೇಕು. ಇವರ ಬರವಣಿಗೇಲಿ ನಂಗೆ ಹಿಡಿಸೋದು ಓದುಗರನ್ನಾ ಅಂಗೈಲಿ ಹಿಡಿದು ಕೂತಿರುತ್ತಾರೆ. ಒಮ್ಮೆ ಓ ಮನಸೇ ಎಂಬ ಆಡಿಯೋ ಕೇಳಿ ನಿಮಗೆ ಅರ್ಥವಾಗುವುದು. ಇತ್ತೀಚೆಗೆ ತುಂಬಾ ಕಣ್ಣಿಗೆ ಬಿದ್ದಿದ್ದು ಬೆಳಗೆರೆಯವರ " ಹೇಳಿ ಹೋಗು ಕಾರಣ" ಕಾದಂಬರಿ. ತುಂಬ ಜನಪ್ರಿಯ ವಾಗುತ್ತಿರುವ ಈ ಕಾದಂಬರಿಯಲ್ಲಿ ಅಂತಹದ್ದೇನಿದೆ? ಅಷ್ಟೊಂದು ಹುಚ್ಚುಹಿಡಿಸುವಂತಿದ್ದಾ? ಅಥವಾ ಇಲ್ಲಿಯತನಕ ಓದದೆ ಇರುವಂತ ಘಟನೆಗಳಾ? ಇಂತಹ ಪ್ರಶ್ನೆಗಳನ್ನ ನನಿಗೆ ನಾನೇ ಹಾಕಿಕೊಂಡು ಓದಲು ಶುರುಮಾಡಿದೆ. ಅಬ್ಬಾ.....! 339 ಪುಟಗಳನ್ನೊಳಗೊಂಡ ಈ ಕಾದಂಬರಿ ಓದಿ ಮುಗಿಸುವುದರೊಳಗೆ ಹಿಡಿಸಿಕೊಂಡ ಹುಚ್ಚು ಅಷ್ಟಿಷ್ಟಲ್ಲ ಬಿಡಿ. ಪ್ರತಿದಿನ ಪ್ರತಿ ಓದು ಪ್ರತಿ ಪುಟವು ಕುತೂಹಲಕರ. ಮುಂದಿನ ಪುಟದಲ್ಲೇನಿದೆ? ಮುಂದಿನ ಸನ್ನಿವೇಶವೇನು? ಕಥೆ ಏನಾಗುವುದು? ಹಿಮು ಏನಾದ? ಪ್ರಾರ್ಥನಾ ಎಲ್ಲಿಹೋದಳು? ಊರ್ಮಿಳಾ ಅಂದುಕೊಂಡಂಗಾದಳಾ ? ಶಾಂತಪ್ಪ mosa ಮಾಡಿದನಾ? ರಸೂಲ್ ಜಮಾದಾರ್ ಏನಾದನು? ಅಬ್ಬಾ!!!!.... ಒಂದಾ ಎರಡಾ ಪ್ರಶ್ನೆಗಳ ಸರಮಾಲೆ. ಹಾಗೆಯೇ ಇದು ನೈಜ ಘಟನೆಯೂ ಅಥವಾ ಕಾಲ್ಪನಿಕ ಕತೆಯೋ ಗೊತ್ತಿಲ್ಲ ಕಣ್ರೀ ಆದ್ರೆ ಮಾತ್ರ ಓದಿದವರು ಬದಲಾಗುವುದಂತೂ ಸತ್ಯ. ನಾ ಓದಿದ ಹಾಗೆ ಪ್ರತಿಯೊಬ್ಬರಲ್ಲೂ ಮೂಡುವ ಏಕೈಕ ಪ್ರಶ್ನೆ ಪ್ರೀತಿಯೆಂದರೇನು? ಇದಕ್ಕೆ ವ್ಯಾಖ್ಯಾನವೇ e ಕಾದಂಬರಿ ಕಣ್ರೀ...ಇಲ್ಲಿಯತನಕ e ಕಾದಂಬರಿ ಮೀರಿಸುವ ಇನ್ನೊಂದು ಕಾದಂಬರಿ ಬಂದಿಲ್ಲ ಬಿಡಿ. ಇದು ಇಂದಿನ ಯುಗದ ಪ್ರತಿ ನವ ಯುವಕರು ತುಂಬ ಮುಖ್ಯವಾಗಿ ಓದಲೇ ಬೇಕಾಗಿರುವ ಪುಸ್ತಕ ಆದಷ್ಟು ಬೇಗ ಓದಿ ನಿಮ್ಮ ಜೀವನದ ಮಾರ್ಗದರ್ಶಕರಾಗಿ..... ಯುವ ವರ್ಗ ಬದಲಾಗಲಿ..... ಇಂತಿ ಮಧು ಅ ಯಡೂರಬೈಲ್.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಪ್ರೀತಿಮಾಡುತ್ತಿರುವ ಯುವಕರು ತಮ್ಮ ಅಮೂಲ್ಯ ಸಮಯವನ್ನ ಹುಡುಗಿ ಎಂಬ ಮೋಹಕ್ಕೇ ಬಿದ್ದು ವ್ಯರ್ಥ ಮಾಡುತ್ತಿದ್ದಾರೆ ಇದರಿಂದ ಹೊರಗಡೆ ಒಂದು ಪ್ರಪಂಚ ede ಎಂದು ತಿಳಿಯಬೇಕಿದೆ ಎಂದನ್ನೊಮ್ಮೆ ಓಡಿ ಸಮಯ ಮಾಡಿಕೊಂಡು.. ಊರ್ಮಿಳಾ ಪಾತ್ರ ಇಷ್ಟವಾಗುವ ಪಾತ್ರ.ಪ್ರೀತಿಯೆಂದರೇನು ಎಂಬ ವಿಷಯದಮೇಲೆ ರವಿ ಸರ್ ಬರೆದಿರುವ ಸನ್ನಿವೇಶ ಮಾತ್ರ ಈವತ್ತಿಗೂ ಪ್ರತಿದಿನ ಕೇಳಿ ಮಲಗುತ್ತೇನೆ......
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ನವ ಯುವಕರಿಗೆ..
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.