Submission 1973

ಪುಸ್ತಕದ ಶೀರ್ಷಿಕೆ: ಕಾಣದ ಸುಂದರಿ

ಪುಸ್ತಕದ ಲೇಖಕರು: ಬೀಚಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಅಂಜನಿ ಸುನೀಲ್ ಶೆಟ್ಟಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಅಣ್ಣನ ಹಣದ ವ್ಯಾಮೋಹಕ್ಕೆ ತಾಯಿಯನ್ನು ಕಾಣದ ಅಪ್ಪನ ಮಗಳು 'ಸುಂದ್ರಮ್ಮ'ಅರಿಯದ ವಯಸ್ಸಿಗೆ ಲಗ್ನವಾದಳು, ಶ್ರೀಮಂತ ದೇಶಾಯರ ಮನೆಗೆ. ಒಲ್ಲದ ಗಂಡನಿಂದಾಗಿ, ಮಾವನ ಕೈಗೆ ಸಿಕ್ಕಿ, ವಿಷಯ ತಿಳಿದ ಅತ್ತೆಯು ಮನೆಯಿಂದ ಹೊರದಬ್ಬಿದಾಗ ಅಕ್ಷರಶಃ ಬೀದಿಗೆ ಬಿದ್ದಳು, ಪಿಶಾಚಿ ಆಗುವ ಮೊದಲೆ. ತವರು ಸೇರಿದ 'ಸುಂದರಿ' ಕಂಡವರ ಮಾತಿನ ಗಾಳಕ್ಕೆ ಸಿಕ್ಕಿ, ಹೆಸರು ಕೆಡಿಸಿಕೊಂಡು ಕೊನೆಯವರೆಗೂ ನೋವುಂಡಳು. ಅತ್ತಿಗೆಯ ಕುತಂತ್ರ, ಅಣ್ಣನ ಕುರುಡುತನ, ನಂತರದಲ್ಲಿ ಸೀತಮ್ಮನ ಆರ್ಭಟ, ಕೊನೆಗೆ ಲೋಕಾಭಿಯ ವ್ಯಭಿಚಾರಕ್ಕೆ ಸಿಕ್ಕಿ, ನಲುಗಿ, ಕೊನೆಗೆ ಆತ್ಮಹತ್ಯೆಗೆ ಶರಣಾಗಿ ಪಿಶಾಚಿ ಆದಳು 'ಸುಂದ್ರೂ'. ಕೊನೆಗೆ ಮಗಳು ಲಕ್ಷ್ಮಿಯನ್ನು ತನ್ನಲ್ಲಿಗೆ ಕರೆಸಿಕೊಂಡಳು. ಈ ಭಂಡ ಗಂಡಸರ ನಡುವೆ ಆಕೆಯ ಬಾಳು ತನ್ನಂತೆ ಊರ ಪಾಲಾಗುತ್ತದೆ ಎಂದು.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಸುಂದರಿ. ಶುರುವಿನಲ್ಲಿ. ಈಸ್ಪೀಟು ಆಡಲು ಕುಳಿತ ಕವಿಗಳನ್ನು ಹುಡುಗನೊಬ್ಬ "ನಿಮ್ಮ ತಂದೆಯವರಿಗೆ ತುಂಬಾ ಹುಷಾರಿಲ್ಲ"ವೆಂದು ಕರೆದಾಗ, "ನಾನೇನು ಮಾಡೋದು ಬಂದು? ಹೋಗಿ ಡಾಕ್ಟರನ್ನು ಕರಿ." ಅನ್ನುವುದು. ಮತ್ತೆ ಅದೇ ಹುಡುಗ ಬಂದು "ತೀರಿ ಹೋದರು ಬಂದು ಮುಖವನ್ನಾದರೂ ನೋಡಿ." ಅಂದಾಗ, "ಸತ್ತವರ ಮುಖ ನೋಡಲು ಏನು ಅವಸರ.? ಯಾವ ರೈಲಿಗೆ ಹೋಗಬೇಕಾಗಿದೆ ಅದು.?" 'ಸತ್ತ ಮೇಲೆ ಅದು ಹೆಣವೇ'. ಇದು ಒಂದು ಕಟು ಸತ್ಯ. ಸ್ವಂತದವರೇ ಸತ್ತರು, ಉಸಿರು ಹೋದ ಒಂದು ಘಳಿಗೆಗೆ ಮನೆಯವರಿಗೆ ಅವಸರ ಕಳುಹಿಸಿಕೊಡಲು. ಕಲಿಯದ ಹೆಂಗಸು ಎಷ್ಟೆಷ್ಟು ಕೆಡುತ್ತದೋ ಅಷ್ಟಷ್ಟು ಒಳ್ಳೆಯ ಇಂಗ್ಲೀಷ್ ಅನ್ನು ಆಡುತ್ತದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

6
Votes
204
Views
6 Months
Since posted

Voting Closed!

Scroll to Top