Submission 1971

ಪುಸ್ತಕದ ಶೀರ್ಷಿಕೆ: ಡಾಲರ್ ಸೊಸೆ

ಪುಸ್ತಕದ ಲೇಖಕರು: ಸುಧಾಮೂರ್ತಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ವಾಣಿ ಸುಹಾಸ ಹೆಗಡೆ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಪರಿಚಯ : - ಸುಧಾಮೂರ್ತಿ ಅಂದಾಕ್ಷಣ ನೆನಪಾಗುವುದೇ ಸರಳತೆ, ಸೇವಾ ಮನೋಭಾವ. ಪ್ರತಿಯೊಬ್ಬರು ಅನುಸರಿಸುವಂತ ವ್ಯಕ್ತಿತ್ವ ಅವರದು. " ಡಾಲರ್ ಸೊಸೆ " ಸುಧಾಮೂರ್ತಿ ಅವರ ಪ್ರಮುಖ ಕಾದಂಬರಿಗಳಲ್ಲಿ ಒಂದು. ಇದೊಂದು ಕೌಟುಂಬಿಕ ಸಮಸ್ಯೆಯ ಕುರಿತ ಕಾದಂಬರಿ. "ಡಾಲರ್ ಸೊಸೆ" ಹೆಸರೇ ಸೂಚಿಸುವಂತೆ "ವಿದೇಶಿ ಮೋಹ" ಒಳಗೊಂಡಿದೆ . ಸಾರಾಂಶ : - ಬೆಂಗಳೂರಿನಲ್ಲಿ ಗೌರಮ್ಮ ಮತ್ತು ಶಾಮಣ್ಣ ದಂಪತಿಗಳ ವಾಸ. ಅವರಿಗೆ ಮೂವರು ಮಕ್ಕಳು. ಮನೆಯಲ್ಲಿ ಗೌರಮ್ಮನದೇ ಕಾರುಬಾರು. ಹಣದ ವ್ಯಾಮೋಹ ಉಳ್ಳವಳು. ಮೊದಲನೇಯವ ಚಂದ್ರು ಅಮೇರಿಕಾ ಕನಸು ಕಂಡವನು. ಜಮುನಾ ಎಂಬ ಶ್ರೀಮಂತ ಹುಡುಗಿ ಮದುವೆ ಆಗಿ ಅಮೇರಿಕಾದಲ್ಲಿ ಇದ್ದ. ಎರಡನೇಯವ ಗಿರೀಶ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ಸರಳ ಸ್ವಭಾವದ ವಿನುತೆ ಎಂಬುವಳನ್ನು ಮದುವೆಯಾಗಿ ಮನೆಯಲ್ಲಿದ್ದ. ಮೂರನೇಯವಳು ಸುರಭಿ ತುಂಬಾ ಸೋಮಾರಿ ಹುಡುಗಿ.. "ವಿದೇಶಿ ಮೋಹ " ಈ ಕಾದಂಬರಿಯ ಸಾರಾಂಶ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ವಿನುತೆಯಂತ ಒಳ್ಳೆಯ ಗುಣ, ಪರಿಸ್ಥಿತಿಗೆ ತಕ್ಕಾಗೇ ಮನಸು ಹೊಂದಿರುವಂತ ಮನೆಯ ಕಿರಿಸೊಸೆಯನ್ನು ಹೀನಳಾಗಿ ಕಂಡು ಅಮೇರಿಕಾ ಹಿರಿ ಸೊಸೆ ಜಮುನಾಳಂತ ಅಹಂಕಾರದ ಸೊಸೆಯನ್ನು ಮೆರೆಸುವುದು ಇಲ್ಲಿ ತುಂಬಾ ವಿಶಾದ. ಈಗಲೂ ಎಷ್ಟೋ ಕುಟುಂಬಗಳಲ್ಲಿ ಹತ್ತಿರವಿದ್ದೂ ನೋಡಿಕೊಳ್ಳುವ ಸೊಸೆಗಿಂತ ದೂರದಲ್ಲಿರೋ ಸೊಸೆಯ ಮೇಲೆ ಪ್ರೀತಿ ಹೆಚ್ಚು. ಕನಸು ಕಂಡಂತೆ ಅಮೇರಿಕಾಗೆ ಹೋದ ಗೌರಮ್ಮ ನಿಗೆ ದಿನ ಕಳೆದಂತೆ ಅಲ್ಲಿನ ಪ್ರಾಯೋಗಿಕ , ಯಾಂತ್ರಿಕ ಜೀವನಗಳನ್ನ ನೋಡಿ ನಮ್ಮ ಸಂಸ್ಕೃತಿಗೆ ವಿರುಧ್ಧವಾಗಿದೆ ಅನಿಸಿದ್ದಂತು ನಿಜ. ಡಾಲರ್ ಸೊಸೆ ಮೋಹದಲ್ಲಿದ್ದ ಗೌರಮ್ಮನಿಗೆ ದೂರದಿಂದ ನೋಡಿದ ಜಮುನಾಳ ಗುಣಗಳು ಅರ್ಥವಾಗಿದ್ದು, ಅಮೇರಿಕಾಗೆ ಹೋದ ಮೇಲೆ. ಅವಳ ಉಡುಗೆ-ತೊಡುಗೆ, ರೂಲ್ಸ್, ತಾತ್ಸಾರ ಮನೋಭಾವ ಇವೆಲ್ಲ ಗೌರಮ್ಮನಿಗೆ ವಿಚಿತ್ರವೆನಿಸಿತು. ""ದುಡ್ಡು ಬೀಸಾಡಿದರೆ ಎಲ್ಲರೂ ನಮ್ಮ ಕಾಲ ಕೆಳಗೆ ಇರುತ್ತಾರೆ. ಬೇಕಾದ ಹಾಗೇ ಅವರನ್ನು ಬಳಸಿಕೊಳ್ಳಬಹುದು"" ಎಂದು ಗೆಳತಿಯರ ಬಳಿ ಜಮುನಾ ಹೇಳಿದ ಖಟು ಮಾತು ಗೌರಮ್ಮನ ಭಾವನೆಗೆ ಪೆಟ್ಟು ಬಿತ್ತು. ಅಲ್ಲಿಂದ ಗೌರಮ್ಮನವರಿಗೆ ""ಬೆಳ್ಳಗಿರುವುದು ಹಾಲಲ್ಲ "" ಅನ್ನೋ ಸತ್ಯ ಅರಿವಾಯಿತು. ಡಾಲರ್ ಸೊಸೆಯ ಮೋಹದಲ್ಲಿ ಕುರುಡಾಗಿದ್ದ ಗೌರಮ್ಮನಿಗೆ ವಿನುತೆಯ ಗುಣ, ಪ್ರೀತಿ, ಕಾಳಜಿ ,ಸೇವಾ ಮನೋಭಾವ ತಿಳಿಯಲು ವಿದೇಶಿ ವಾಸವೇ ಬೇಕಾಯಿತು. ಪರದೇಶಗಳು ನೋಡಲಷ್ಟೇ ಸುಂದರ, ವಾಸ ಅಂತ ಬಂದಾಗ ನಮ್ಮ ದೇಶವೇ ಸೂಕ್ತ ಅನ್ನೋದು ಅರ್ಥವಾಯಿತು. ದುಡ್ಡೇ ದೇವ್ರು ಅನ್ನೋ ಭ್ರಮೆಯ ಮೇಲೆ ಮನುಷ್ಯ ಬಾಂಧವ್ಯಗಳನ್ನು ಮರೆತಿದ್ದಾನೆ. ಮನುಷ್ಯನಿಂದಲೇ ತಯಾರಾದ ದುಡ್ಡು ಮನುಷ್ಯನನ್ನೇ ಗುಲಾಮನಾಗಿ ಮಾಡಿಕೊಂಡಿದೆ. ದುಡ್ಡಿಗೆ ಎಲ್ಲ ಸಂಬಂಧಗಳನ್ನು ಬೇರ್ಪಡಿಸುವಂತ ಶಕ್ತಿ ಇದೆ. ಈಗ ಜಗತ್ತು ಓಡುತ್ತಿರುವುದು ದುಡ್ಡಿನ ಹಿಂದೆಯೇ. ವಿದೇಶದ ಡಾಲರ್ ಗಳಿಗೆ ಆಸೆ ಪಟ್ಟು ದೇಶಿಯ ರೂಪಾಯಿ ಮೇಲಿನ ಭಾವ ಮರೆಯುವುದು ಸರಿಯಲ್ಲ. ""ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ"" ಎಂಬ ಗಾದೆಯಂತೆ ವಿದೇಶದ ಮೋಹದಲ್ಲಿ ಕುರುಡಾಗಿದ್ದ ಗೌರಮ್ಮನ ಪೊರೆ ಕೊನೆಗೂ ಕಳಚಿತ್ತು. ಡಾಲರ್ ಸೊಸೆಯ ಮೇಲಿನ ಮೋಹಕ್ಕಿಂತ ರೂಪಾಯಿ ಸೊಸೆಯ ಮೇಲೆ ಅಭಿಮಾನ ಹೆಚ್ಚಾಗಿತ್ತು ಎಂಬಲ್ಲಿಗೆ ಈ ಕಾದಂಬರಿಯ ವಿಮರ್ಶೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಎಲ್ಲ ರೀತಿ ವರ್ಗದವರು ಓದಬಹುದು. ಆದರೆ ಕೌಟುಂಬಿಕ ಪ್ರಾಪಂಚಿಕದಲ್ಲಿರುವವರಿಗೆ ಅತಿ ಸೂಕ್ತ. ಹಣದ ಮೋಹ ಇರುವವರು ಓದಾಬೇಕಾದ ಪುಸ್ತಕ ಇದಾಗಿರುತ್ತದೆ. ವಿದೇಶಿ ಆಕರ್ಷಣೆಗಳಿಗೆ ಮಾರುಹೋಗುವವರಿಗೂ ಒಳ್ಳೆಯ ಸಲಹೆ ಈ ಪುಸ್ತಕದಿಂದ ದೊರೆಯುತ್ತದೆ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

38
Votes
281
Views
7 Months
Since posted

Voting Closed!

Scroll to Top