Submission 1969

ಪುಸ್ತಕದ ಶೀರ್ಷಿಕೆ: ಸಕ್ಕರೆ ಬೊಂಬೆ ಹಾಗೂ ಇತರೆ ಕಥೆಗಳು

ಪುಸ್ತಕದ ಲೇಖಕರು: ಶ್ರೀ ರಾಮಚಂದ್ರ ಕುಲಕರ್ಣಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಶ್ರೀ ಜೋಸೆಫ್ ಯೇಸಪ್ಪ ಮಲ್ಲಾಡಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಸುಂದರವಾದ ಕಟ್ಟಡ ಸುತ್ತ ಎಲ್ಲಿಯೂ ಇಂತಹ ಕಟ್ಟಡವಿಲ್ಲ, ಮುಗಿಲೆತ್ತರಕ್ಕೆ ಕೈ ಚಾಚಿ ನಿಂತಿತು. ಇನ್ನೇನು ಅಪಾರ್ಟಮೆಂಟಿಗೆ ಬಣ್ಣ ಬಳಿಯುವ ಸಲುವಾಗಿ ಒಂದು ಸಣ್ಣ ಚರ್ಚೆ. ಈ ಬಿರ್ಡಿಂಗ ಕಟ್ಟುವಾಗ ಇಲ್ಲದ ಸಮಸ್ಯೆಗಳು ಈಗ ಮೊಳಕೆಯೊಡೆದುವು. ಎಲ್ಲರೂ ಸೇರಿ ಪೇಂಟರನನ್ನು ಕರೆದರು. ಅಪಾರ್ಟಮೆಂಟಿನ ಬಣ್ಣ ಯಾವುದಿರಬೇಕು ಎಂದು ಚರ್ಚೆ. ಅದೇ ಅಪಾರ್ಟಮೆಂಟನಲ್ಲಿ ಇರುವ ಕವಿಗಳು ಹಸಿರು ಬಣ್ಣ ಇರಲಿ ಯಾಕಂದ್ರೆ ಪ್ರಕೃತಿ, ಪರಿಸರ, ಹಸಿರತೋಟ ಮನಸ್ಸಿಗೆ ಮುದನೀಡುತ್ತದೆ ಎಂದಾಗ ಉಳಿದ ಎಲ್ಲರೂ ಒಮ್ಮೆಲೇ ಕವಿಯ ಮೇಲೆ ಎರಗುತ್ತಾರೆ. ಏನ್ರಿ ಹಸಿರಂದ್ರ ಅದು ಸಾಬರ ಬಣ್ಣ, ಅವರು ಆ ಬಣ್ಣ ತಮಗೆ ಹುಟ್ಟಿದೆ ಅನ್ನುವ ಹಾಗೆ ಮೆರಿತಾರೆ. ಇವರ ತಿರಸ್ಕಾರ ನೋಡಿ ಕವಿಗೆ ಮಾತ್ರವಲ್ಲ ಹಸಿರು ಬಣ್ಣಕ್ಕೂ ವಾಕರಿಕೆ ಬಂದಾಯ್ತು. ಬ್ರಾಹ್ಮಣರೊಬ್ಬರು ಮುಂದೆ ಕೇಸರಿ, ಅಕ್ಕಪಕ್ಕ ಕಾವಿ ಮತ್ತು ಹಿಂದೆ ಮಡಿ ಬಣ್ಣ ಬಂದರೆ ಸುಂದರ ಎಂದಾಗ ಲಿಂಗಾಯತರು ಒಪ್ಪಿದರು ಆದರೆ ಉಳಿದವರು ಕಡಾಕಂಡಿತವಾಗಿ ಬೇಡ ಎಂದರು. ಮದ್ಯ ಬಾಯಿ ಹಾಕಿ ಕವಿಗಳು ಆಕಾಶ, ಸಮುದ್ರ ನಿಲಮಯವಾಗಿದೆ 'ನೀಲಿ ಇರಲಿ' ಎಂದರು. ಸಮುದ್ರಾಕಾಶ ಮುಟ್ಟಿದ ನೀಲಿ ಬಣ್ಣ ಅಪಾರ್ಟಮೆಂಟನ ಉಳಿದವರ ತಲೆಗೆ ಮುಟ್ಟಲಿಲ್ಲ. ಅದಕ್ಕೊಬ್ಬರು ಕೂತಲ್ಲಿಂದ ಎದ್ದು 'ಇವಾಗ ನೀಲಿ ಬಣ್ಣಕ್ಕೆ ಕಿಮ್ಮತ್ತು ಇಲ್ಲದ ಹಾಗಾಗಿದೆ, ಊರಿನ ದಲಿತರು ಹಾಸೊದಕ್ಕೂ ಹೊದ್ದುಕೊಳ್ಳೋದಕ್ಕೂ ಅದನ್ನೇ ಮಾಡಿದ್ದಾರೆ ನೀಲಿ ಬೇಡ ' ಎಂದು ಇನ್ನೊಬ್ಬನೆಂದ ಅದಕ್ಕೆ ಎಲ್ಲರೂ ಧ್ವನಿಗೂಡಿಸಿದರು. ಹಾಗಾದ್ರೆ ಶುದ್ಧ, ಪರಿಶುದ್ಧ, ಪುರಾಣಗಳಲ್ಲೂ ಮಹಾಶ್ವೇತವರ್ಣ ಬಳಕೆಯಾಗಿದೆ, ಹಿಮಾಲಯ, ಕೈಲಾಸಪರ್ವತ ಎಲ್ಲವೂ ಬಿಳಿ ಬಣ್ಣದಿಂದ ಕೂಡಿದೆ ಎಂದರು ಕವಿಗಳು. ಅದಕ್ಕೂ ಉತ್ತರ ತಯಾರಿ ಮಾಡಿಕೊಂಡ ಅವರು ಬಂದೂಕಿನಿಂದ ಗುಂಡು ಹಾರಿಸಿದಂತೆ 'ಬಿಳಿ ಅಂದರೆ ಕೊಳಕು ಜಾಸ್ತಿ, ನಿಮ್ಮ ಹಳೆಯಮನೆ ಬಿಳಿ ಇದೆ. ಶ್ವೇತಭವನ ಎಂದು ನೀವು ಹೆಸರಿಟ್ಟು ಕರೀತೀರಿ, ಆದ್ರೆ ಜನ ಅದನ್ನ ಮಸೀದಿ ಅಂತ ಕರೀತಾರೆ, ಅದರಲ್ಲೂ ಬಿಳಿಯ ಬಣ್ಣ ಕ್ರಿಶ್ಚಿಯನ್ನರ ಬಣ್ಣ ಗೊತ್ತಿಲ್ವಾ ನಿಮ್ಗೆ ?' ಎಂದನು ಮಗದೊಬ್ಬ. ಹೀಗೆ ಪರ್ಪಲ್ ಕಲರ್ ಹುಚ್ಚುತನದ ಸಂಕೇತ, ಮೇರುನ್ ಭಯಂಕರವಾಗಿ, ನೇರಳೆ ಮ್ಲಾನತೆ ಸಂಕೇತ, ಕಪ್ಪು ಕತ್ತಲೆಯ ಸಂಕೇತ ಎಂದು ಚರ್ಚೆಗಳಾದವು. ಕವಿ ಎದ್ದುನಿಂದು ಕೆಂಪು ಬಣ್ಣವಿರಲಿ ಎಂದರು ಎಲ್ಲರೂ ಕತ್ತಿಹಿಡಿದು ಯುದ್ಧಕ್ಕೆ ಬಂದುಬಿಟ್ಟರು. ಕೆಂಪು ಅಂದ್ರೆ ರಕ್ತದ ಸಂಕೇತ ಆಮೇಲೆ ನಮ್ಮನ್ನ ಜನ ನಕ್ಸಲ್ಸಗಳು ಅಂತಾರೆ. ಕೆಂಪು ನಿಲುಗಡೆಯ ಸಂಕೇತ, ಡೇಂಜರ್ ಸಂಕೇತ ಎಂದು ಕೆಂಪು ಬಣ್ಣ ಕೆಮ್ಮಣ್ಣಿಗೆ ಹಾಕಿ ತುಳಿದು ಕೊಂಡುಬಿಟ್ಟರು. ಕವಿ ಪೆಚ್ಚಾಗಿರೋದನ್ನ ನೋಡಿ ಉಳಿದವರು ನಗುತ್ತಾರೆ. ಇದು ಬಗೆ ಹರಿಯದ ಸಮಸ್ಯೆ ಎಂದು ಪೇಂಟರ್ ಗಮನಕ್ಕೆ ಬಂದಾಗ ಅವನ ಜೋಳಿಗೆಯಲ್ಲಿರುವ ಬಣ್ಣದ ಬುಕ್ಲೆಟ್ ತೆಗೆದು ಮುಂದಿಟ್ಟ ಅಲ್ಲಿಯೂ ಒಮ್ಮತ ಇಲ್ಲದ ಮನಸುಗಳ ಕಚ್ಚಾಡತೊಡಗಿದಾಗ ಕೊನೆಗೆ ಪೇಂಟರ್ ಈ ಬಣ್ಣ ಇರಲಿ ಇದು ತಂಪು ನೀಡುವುದರ ಸಂಕೇತ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಹೇಳಿದಾಗ ಎಲ್ಲರೂ ಆಶ್ಚರ್ಯ ಚಕಿತರಾಗಿ ಆಹಾ!! ಎಂತಹ ಬಣ್ಣ!! ಬಣ್ಣ ಎಂದರೆ ಹೀಗಿರಬೇಕೆಂದು ಹೇಳುತ್ತಾರೆ. ಇದೆ ಬಣ್ಣ ಇರಲೆಂದು ಪಕ್ಕ ಮಾಡಿ ಅದೇ ಬಣ್ಣ ಬಳಿಯುತ್ತಾರೆ.... ""ಅಷ್ಟೊಂದು ತಕರಾರುಗಳ, ಜಗಳಗಳ ವೈಮನಸುಗಳ ಮದ್ಯ ಅವರು ಹಚ್ಚಿದ ಬಣ್ಣ ಯಾವುದು ಗೊತ್ತಾ ಸಗಣಿ ಬಣ್ಣ"" ಈಗ ಇದು ಸಗಣಿ ಬಿರ್ಡಿಂಗ್ ಎಂದೇ ಹೆಸರುವಾಸಿಯಾಗಿದೆ... ಇಲ್ಲಿ ಕವಿಯು ಅಪಾರ್ಟಮೆಂಟ್ ಸಂಕೇತವೆಂದರೆ ನಮ್ಮ ಭಾರತ ದೇಶ, ಜಾತಿಗಳ ತೊಟ್ಟಿಲು, ಭಾಷೆಗಳ ಸಾಗರ, ಜನಾಂಗಗಳ ವೈವಿಧ್ಯತೆ, ಪ್ರಾಂತಿಯವ ಭಿನ್ನತೆ ಎಲ್ಲವು ನನಗೆ ಸಂಭ್ರಮ. ಅಲ್ಲಿ ವಾಸಿಸುವ ನಾವುಗಳು ಭಿನ್ನ ಜಾತಿ ಧರ್ಮ, ಕುಲಗೋತ್ರಗಳಿಂದ ಕೊಂಡಿದ್ದೇವೆ. ಆದರೆ ನಾವೆಲ್ಲಾ ಚನ್ನಾಗಿದ್ದೇವೆ, ನೆಮ್ಮದಿಯಾಗಿದ್ದೇವೆ ಸುಂದರ ಸಂಬಂಧಗಳನ್ನು ಕಟ್ಟಿಕೊಂಡಿದ್ದೇವೆ. ಆದರೆ ಯಾರೋ ನಮ್ಮ ಮದ್ಯ ಬಣ್ಣಗಳ ರಾಜಕೀಯ ಮಾಡುತ್ತಿದ್ದಾರೆ. ನಮಗೆ ಗೊತ್ತೇ ಇಲ್ಲದ ಹಾಗೆ ನಾವು ಅವರ ಗುಲಾಮರಾಗಿದ್ದೇವೆ, ಕಟ್ಟುವ ಕೆಲಸ ಇನ್ನೂ ಇದೆ ಆದರೆ ನಾವು ಬಣ್ಣಗಳಿಗೆ ಜಾತಿ ಧರ್ಮದ ಲೇಬಲ್ ಅಂಟಿಸಿ ಕತ್ತು ಕತ್ತರಿಸಲು ದುಂಬಾಲು ಬಿದ್ದಿವೆ. ಎದುರಿಗಿನ ಜೀವಗಳನ್ನು ಕೊಲ್ಲುವ ಮನಸ್ಥಿತಿಗೆ ಬಂದು ನಿಂತಿದ್ದೇವೆ. ಕೊನೆಗೆ ನಮ್ಮೊಳಗಿನ ಭಾವೈಕ್ಯತೆಗೆ, ನಿಷ್ಕಲ್ಮಶ ಸಂಬಂಧಗಳಿಗೆ ಭಾರತದ ಬಹುತ್ವ ಸಂಸ್ಕೃತಿಗೆ ಸಗಣಿ ಬಡಿಯುವ ಕೆಲಸ ಮಾಡುತ್ತಿದ್ದೇವೆ. ನಾವು ನಮ್ಮ ಭಾರತವನ್ನು ಕಟ್ಟುವ ಕೆಲಸವಾಗಬೇಕು ಹೊರಟು ಕೆಡುವುವ ಕೆಲಸಬೇಡವೆಂದು ಕವಿಗಳು ತಿಳಿಸಲು ಮುಂದಾಗಿದ್ದಾರೆ. ಈಗಾಗಲೇ ಮಹಾನ್ ವ್ಯಕ್ತಿಯ ಹೆಸರುಗಳಿಗೆ ಕಳಂಕ ಹಚ್ಚುವ ಕೆಲಸ , ಇತಿಹಾಸ ತಿರುಚುವ ಕೆಲಸ, ಮಾಡಿ ಬಳಿಯುವ ಸಾಹಸಕ್ಕೆ ಒಂದಿಷ್ಟು ಜನರನ್ನು ಸಿದ್ಧಮಾಡಿ ಕುರಿಗಳ ಹಿಂಡಿನಲ್ಲಿ ತೋಳುಗಳನ್ನು ಬಿಟ್ಟಿದ್ದಾರೆ. ಹಾಲಿನಂತಹ ಮನಸಿನಲ್ಲಿ ಹುಳಿ ಹಿಂಡಿದ್ದಾರೆ. ಮುಂದಿನ ದಿನದಲ್ಲೂ ಮಕ್ಕಳು ಬಿಡಿಸಿದ ಅಂಗಿ ಚಿತ್ರಕ್ಕೆ ಬಣ್ಣ ಬರಿಸಲು ಅನುಮತಿ ಪಡೆಯಬೇಕಾಗಬಹುದು. ನಮ್ಮ ಭಾರತವೆಂದರೆ ಸರ್ವ ಜನಶಾಂತಿಯ ತೋಟ, ಈ ಪರಂಪರೆಗೆ ದೇಶದ ಇತಿಹಾಸಕ್ಕೆ ದಕ್ಕಿರುವ ,ಮಡಿಬಳಿಯುವ ಕೆಲಸ ನಾಗರಿಕರಾದವರು ಮಾಡಬಾರದು. ಇರುವಷ್ಟು ದಿನ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾ, ಮಾತಾಡುತ್ತಾ, ನಗುತ್ತಾ,ನಗಿಸುತ್ತಾ ಮುಂದಿನ ತಲೆಮಾರುಗಳಿಗೆ ದೇಶದ ಸಂಪತ್ತನ್ನು ಉಳಿಸುತ್ತಾ ಜೀವನ ಸಾಗಿಸಬೇಕಾಗಿದೆ. ಇಲ್ಲದಿದ್ದರೆ ನಮ್ಮ ದೇಶದ ವ್ಯವಸ್ಥೆಯನ್ನು ನಾವೇ ಹಾಳುಮಾಡಿ ಕೆಸರು ಬಡಿಯುತ್ತೇವೆ ಎನ್ನುವ ಕಲ್ಪನೆಯನ್ನು ಕವಿಗಳಾದ ಶ್ರೀ ರಾಮಚಂದ್ರ ಕುಲಕರ್ಣಿಯವರು ಕಟ್ಟಿಕೊಟ್ಟಿದ್ದಾರೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಓದಿನ ಕ್ಷಣಗಳು:- ಇಲ್ಲಿ ಬರುವ ಪಾತ್ರಗಳು ಓದುಗನ ಮನಸಿನಾಳಕ್ಕೆ ಸತ್ಯವನ್ನು ಹೊತ್ತು ತಂದು ನನ್ನೊಳಗಿನ ಸುಳ್ಳನ್ನು ಹೊರ ಹಾಕುತ್ತವೆ. ನಿಜದ ತಕ್ಕಡಿಗೆ ಓದುಗನನ್ನು ಹತ್ತಿರಕ್ಕೆ ತರುತ್ತದೆ. ಪಾತ್ರಗಳು:- ಬಣ್ಣಗಳ ತಿರಸ್ಕರಿಸುವ ಸಣ್ಣ ಮನಸ್ಸುಗಳ ಮದ್ಯ ಕವಿ ಸಿಲುಕಿರುವ ಪರಿಸ್ಥಿತಿ, ಬಣ್ಣಗಳನ್ನು ಒಪ್ಪದ ಆ ದರಿದ್ರ ಮನಸುಗಳು.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

119
Votes
562
Views
7 Months
Since posted

Voting Closed!

Scroll to Top