ಪುಸ್ತಕದ ಶೀರ್ಷಿಕೆ: ಸಂಸ್ಕಾರ
ಪುಸ್ತಕದ ಲೇಖಕರು: ಯು.ಆರ್.ಅನಂತಮೂರ್ತಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಲಕ್ಷ್ಮೀಶ ಕೆ.ಎನ್.
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ನಾನು ಓದಿರುವ ಬಹುಪಾಲು ಪುಸ್ತಕಗಳಲ್ಲಿ ಯು.ಆರ್.ಅನಂತಮೂರ್ತಿಯವರ ಪುಸ್ತಕಗಳದ್ದೇ ಸಿಂಹ ಪಾಲು.ನಾನು ಓದಿರುವ ಪುಸ್ತಕಗಳ ಪಟ್ಟಿಯಲ್ಲಿ ಸಂಸ್ಕಾರ ಎಂಬ ಕಾದಂಬರಿಗೆ ವಿಶೇಷ ಸ್ಥಾನ ಎನ್ನಲೇಬೇಕು. ಈ ಕಾದಂಬರಿ ನಮ್ಮ ಬಹುಕಾಲದ ಆಚರಣೆ ನಂಬಿಕೆಗಳ ಕಡೆಗೆ ಬೊಟ್ಟು ಮಾಡಿ ತೋರಿಸುತ್ತದೆ ಎಂದೇ ಹೇಳಬೇಕು.ನಾರಣಪ್ಪನ ಸಾವಿನ ಜೊತೆ ಆರಂಭವಾಗುವ 'ಸಂಸ್ಕಾರ' ಅಗ್ರಹಾರದ ಬಹುಕಾಲದ ಕಟ್ಟುಪಾಡುಗಳ ಬುಡವನ್ನೇ ಅಲುಗಾಡಿಸಲು ಪ್ರಾರಂಭಿಸುತ್ತದೆ.ನಾರಾಣಪ್ಪನ ಶವ ತಣ್ಣಗೆ ಮಲಗಿದ್ದರೆ ಜೀವಂತವಾಗಿರುವವರ ದ್ವಂದ್ವ ಒಂದೊಂದಾಗಿ ಶಬ್ಧ ಮಾಡಲು ಪ್ರಾರಂಭಿಸುತ್ತವೆ.ನಾರಾಣಪ್ಪನ ಶವಸಂಸ್ಕಾರಕ್ಕಿಂತ ಯಾರೂ ಶವ ಸಂಸ್ಕಾರ ಮಾಡಬೇಕೆಂಬುದೇ ದೊಡ್ಡ ವಿಷಯವಾಗಿ ಕಾದಂಬರಿಯ ಪ್ರಮುಖ ವಸ್ತುವಾಗಿ ಪರಿವರ್ತಿತವಾಗುತ್ತದೆ.ಸಂಪ್ರದಾಯ ನೀತಿ ನಿಯಮಗಳು ಇಲ್ಲಿ ಹಾದು ಹೋಗುತ್ತವೆ. ಇಲ್ಲಿ ಮನುಷ್ಯ ತನ್ನ ಅದಮ್ಯ ಆಸೆಗಳನ್ನು ಅದುಮಿಟ್ಟುಕೊಂಡು ಬದುಕು ಅನಾವರಣಗೊಳ್ಳುತ್ತದೆ.ಈ ಬದುಕಿಗೆ ನಾರಾಣಪ್ಪ ಬದುಕಿದ್ದಾಗ ಪ್ರಶ್ನೆ ಹಾಗೂ ಉತ್ತವವಾಗಿ ಎಲ್ಲರನ್ನು ಕಾಡುತ್ತಾನೆ.ಸತ್ತ ನಂತರವೂ ಕಾಡುತ್ತಾನೆ ಎಂದೂ ಹೇಳಬಹುದು.ಶತಮಾನದ ಕಟ್ಟುಪಾಡುಗಳಿಗೆ ಕಟ್ಟು ಬಿದ್ದರೆ ಜಡತ್ವ ಮೂಢತ್ವ ಎರಡೂ ಮೂಡಿ ಮನುಷ್ಯ ಕೇವಲ ಕೀಲಿ ಕೊಟ್ಟ ಗೊಂಬೆಯ ಹಾಗೆ ಆಗುತ್ತಾನೆ ಎಂಬುದನ್ನು ಪರೋಕ್ಷವಾಗಿ ಈ ಕಾದಂಬರಿ ಹೇಳುತ್ತಾ ಹೋಗುತ್ತದೆ. ನಾರಾಣಪ್ಪನ ಅಭ್ಯಾಸಗಳು ಕೆಟ್ಟವು ಎನಿಸಿದರೂ ಅವುಗಳನ್ನು ಮರೆಮಾಚದ ಅವನ ಗುಣಕ್ಕೆ ಮೆಚ್ಚುಗೆ ಪಡೆಯುತ್ತಾ ಹೋಗುತ್ತಾನೆ.ಒಂದು ಹಂತದಲ್ಲಿ ನಾರಣಪ್ಪನೇ ಸರಿ ಎನಿಸಿ ಉಳಿದವರ ಮೇಲೆಯೇ ಅನುಮಾನ ಶುರುವಾಗುತ್ತದೆ.ಅನುಮಾನ ಕೊನೆಗೆ ನಿಜ ಕೂಡ ಆಗುತ್ತದೆ. ಪ್ರಾಣೇಶಾಚಾರ್ಯರ ಪಾತ್ರ ಈ ಕಾದಂಬರಿಗೆ ಆತ್ಮವಿದ್ದಂತೆ.ಮೊದಲಿಗೆ ಅವರು ಸಂಪ್ರಾದಾಯಗಳ ರೂಪಕ ಎನಿಸಿದರೂ ಚಂದ್ರಿಯೊಂದಿಗೆ ಬೆರೆಯುವದರೊಂದಿಗೆ ಸಂಪ್ರದಾಯ ಬದಿಗೊತ್ತಿ ಹೊರಬಂದು ಅಪ್ಪಟ ಮಾನವನಾಗುವ ಅಂಶವೇ ಈ ಕಾದಂಬರಿಯ ಪ್ರಮುಖಾಂಶ. ಕೊನೆಗೆ ಸಂಸ್ಕಾರ ಆಗುವುದು ಶತ ಶತಮಾನದ ಗೊಡ್ಡು ಸಂಪ್ರದಾಯಗಳಿಗೆ,ಕಟ್ಟು ಪಾಡುಗಳಿಗೆ,ಅರ್ಥ ತರ್ಕವಿಲ್ಲದ ಆಚರಣೆಗಳಿಗೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ನೆನಪಿನಲ್ಲಿ ಉಳಿಯುವ ಪಾತ್ರಗಳು: ಪ್ರಾಣೇಶಾಚಾರ್ಯ,ನಾರಾಣಪ್ಪ ಹಾಗೂ ಚಂದ್ರಿ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.