ಪುಸ್ತಕದ ಶೀರ್ಷಿಕೆ: ಕಡಲಾಚೆಯ ಕತೆಗಳು
ಪುಸ್ತಕದ ಲೇಖಕರು: ಡಾ ಲತಾ ಗುತ್ತಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ನೀರಜಾ ನಾರಾಯಣ ಗಣಾಚಾರಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಕಡಲಾಚೆಯ ಕಥೆಗಳು ಕನ್ನಡ ನಾಡಿನ ಹೆಸರಾಂತ ಲೇಖಕಿ ಶ್ರೀಮತಿ ಲತ್ತಾಗುತ್ತಿ. ಪದ್ಯಗದ್ಯಗಳೆರಡೂ ಸಾಹಿತ್ಯ ಕೃಷಿಯಲ್ಲಿ ನುರಿತರು. ಅದರಲ್ಲೂ ಸ್ತ್ರೀ ವಾದಿ ಚಿಂತನೆ ಕ್ರಿಯಾರೂಪ ಸಾಧಿಸಲು ಮುಂದಾದವರು. ಕನ್ನಡ ಸರಸ್ವತ ಲೋಕಕ್ಕೆ 'ವರ್ತಮಾನ' 'ಗಾಂಜಾ ಡಾಲಿ' ' ಬೆಳ್ಳಿ ಹೂವು' ಕವನ ಸಂಕಲನಗಳನ್ನು ಮತ್ತು 'ಯುರೋನಾಡಿನಲ್ಲಿ' 'ನಾನು ಕಂಡಂತೆ ಅರೇಬಿಯಾ' ಪ್ರವಾಸ ಕಥನಗಳನ್ನು ನೀಡಿ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ. ಕಡಲಾಚೆ ಕಥೆಗಳು ಲತಾಗುತ್ತಿಯವರ ಚೊಚ್ಚಲ ಕೃತಿ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕಥೆಗಳ ಸಂಕಲನ ವಾಗಿದೆ. ಹತ್ತು ಕತೆಗಳು ಇದರಲ್ಲಿವೆ. ದಶಕಗಳವರೆಗೆ ಭಾರತದಿಂದ ದೂರವಿದ್ದು ವಿದೇಶಗಳಲ್ಲಿ ಬದುಕು ಕಳೆದ ಅವರು ಅಲ್ಲಿರುವ ಅವಧಿಯಲ್ಲಿ ಅಲ್ಲಿನ ಬದುಕನ್ನು ಕಂಡು ಅನುಭವಿಸಿ ಕಥಾರೂಪದಲ್ಲಿ ಚಿತ್ರಿಸಿದ್ದಾರೆ. ಕಡಲಾಚೆ ಕಥೆಗಳು ಪ್ರಸ್ತುತ ಕಥಾ ಸಂಕಲನವನ್ನು ನಾಡಿನ ಹೆಸರಾಂತ ಸಂಶೋಧಕ ಡಾಕ್ಟರ್ ಎಂ ಎಂ ಕಲಬುರ್ಗಿ ಅವರಿಗೆ ಗೌರವದರಗಳೊಂದಿಗೆ ಸಮರ್ಪಿಸಿದ್ದಾರೆ. ಸಾಹಿತಿಕ ನಿರ್ದೇಶಕಿ ಪ್ರಕಾಶಕರ ನುಡಿ ಬರೆದಿದ್ದಾರೆ. ನಾಡಿನ ಪ್ರಸಿದ್ಧ ಕವಿ ಕೆ ಎಸ್ ನಿಸಾರ್ ಅಹ್ಮದ್ ನಲ್ನುಡಿಯನ್ನೂ, ಶ್ರೀ ವ್ಯಾಸರಾಯ ಬಲ್ಲಾಳ್ ಮುನ್ನುಡಿಯನ್ನು, ಶ್ರೀಮತಿ ಹನುಮಾಕ್ಷಿ ಗೋಗಿ ಬೆನ್ನುಡಿಯನ್ನು ಬರೆದಿದ್ದಾರೆ. ಕಡಲಾಚೆಯ ಕಥೆಗಳು ಹೆಸರೇ ಹೇಳುವಂತೆ ಎಲ್ಲ ಕಥೆಗಳು ಕಡಲಾಚೆಯವೇ. ಭಾರತೀಯರು ಸಮುದ್ರ ದಾಟಿ ವಿವಿಧ ಕೆಲಸಗಳನ್ನು ಹುಡುಕಿಕೊಂಡು ಹೋದಂತೆ, ಜಗತ್ತಿನ ಬೇರೆ ಬೇರೆ ದೇಶಗಳ ಜನರು ಕೂಡ ಸಮುದ್ರ ದಾಟಿ ಆಚೆ ಈಚೆ ಹೋಗಿ ಅನೇಕ ದೇಶಗಳಲ್ಲಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಹಣ ಗಳಿಸಲು, ಬುದ್ಧಿ ಬೆಳೆಸಿಕೊಳ್ಳಲು, ದೇಶ ನೋಡಲು ಎಂದು ಅನೇಕ ಕಾರಣಗಳಿವೆ. ಜಗತ್ತಿನಾದ್ಯಂತ ಜನರು ಸುಂದರ ಕನಸುಗಳನ್ನು ಕಟ್ಟಿಕೊಂಡು ಭ್ರಮಾಲೋಕದಲ್ಲಿ ವಿದೇಶಗಳಲ್ಲಿ ಕಾಲಿಟ್ಟಾಗ ಅನೇಕರು ಒಂದಿಲ್ಲ ಒಂದು ರೀತಿಯಲ್ಲಿ ಮಾನಸಿಕ ತೊಳಲಾಟಕ್ಕೆ ಸಿಲುಕಿರುತ್ತಾರೆ. ಇಂತಹ ಸನ್ನಿವೇಶಗಳು ಕಥೆಗಳಲ್ಲಿ ಬಿಂಬಿತವಾಗಿವೆ. ಅನಿರೀಕ್ಷಿತರು- ಮಳೆ ಇಲ್ಲದ ದೇಶ ಹಸಿರಿಲ್ಲದ ಮರುಭೂಮಿ ಎಂಬ ಚಿಂತನೆ ಕಥೆಯಲ್ಲಿದೆ. ಪೂರ್ವ ಮತ್ತು ಪಶ್ಚಿಮ ಸಂಸ್ಕೃತಿಗಳ ಘರ್ಷಣೆ, ಅಲ್ಲಿ ಉಂಟಾಗುವ ತಳಮಳವನ್ನು, ಮಾನಸಿಕಬ್ಬಂದಿತನವನ್ನು ಕಥೆ ಸಾಂಕೇತಿಕವಾಗಿ ಚಿತ್ರಿಸುತ್ತದೆ. ಬದುಕಿದ್ದಾರೆ - ಈ ಕಥೆ ಅರಬ್ ದೇಶಗಳಲ್ಲಿ ಸಂಪ್ರದಾಯದ ಸಂಕೋಲೆಗಳನ್ನು ಮುರಿಯಲಿತ್ನಿಸಿದ ಪ್ರಣಯಿಗಳು ಕಲ್ಲೆಸೆತದ ಮರಣವನ್ನು ಅನುಭವಿಸುವಂತಾದ ಘಟನೆಯನ್ನು ವಿವರಿಸುತ್ತದೆ. ಪ್ರೇಮಿಗಳು ಸಾಯುವುದು ಸಹಜ. ಆದರೆ ಪ್ರಣಯ ಮರು ಹುಟ್ಟು ಪಡೆಯುವ ಚಿರಂತನ ಸತ್ಯ ಎನ್ನುವ ಧ್ವನಿ ಇಲ್ಲಿದೆ. ನೋರಾ - ಈಜಿಪ್ಟಿನ ಪಿರಮದ್ದುಗಳ ಹಿನ್ನೆಲೆಯಲ್ಲಿ ಅರಳಿದ ದಾಂಪತ್ಯದಲ್ಲಿ ವಿಧಿಯ ಕೈವಾಡ ಎಂಬಂತೆ ಮಣ್ಣು ಕುಸಿದು ಮಣ್ಣಾಗಿ ಮಮ್ಮಿಯಾದ ನೋರಾಳ ಕಥೆ ಇದೆ. ಕಾಯಕದಲ್ಲಿ ಕೈಲಾಸ ಕಂಡ ಆಂಗ್ಲ ತರುಣಿ ನೋರಾ. ನೂರಾಳ ಪ್ರೇಮವನ್ನು ಚಿರಸ್ಥಾಯಿಗೊಳಿಸಲು ಆಕೆಯ ಪ್ರೇಮಿ ಪಿರಾಮಿಡ್ ನಿರ್ಮಿಸುವ ಸನ್ನಿವೇಶದ ಚಿತ್ರಣವಿದೆ. ಕಥೆಯುದ್ಧಕ್ಕೂ ಈಜಿಃತ್ ಯುವಕನ ಮಾನವೀಯ ಗುಣ ಹೃದಯವನ್ನು ಆದ್ರ ಗೊಳಿಸುತ್ತದೆ. ತಿರುವು- ಭಾರತೀಯ ಪರಿಸರದಲ್ಲಿ ಆಶ್ಚರ್ಯ ಪಡಬಹುದಾದ ಮುಕ್ತ ಲೈಂಗಿಕತೆಯ ಕುತೂಹಲ ಪ್ರೇರಿತ ಅನುಭವಗಳು ಈ ಕಥೆಯಲ್ಲಿವೆ. ಕಥಾನಾಯಕಿ ಸ್ಟೇಲ್ಲಾ ಮುಕ್ತ ಲೈಂಗಿಕತೆ ಯುಳ್ಳ ವಿದೇಶಿ ಮಹಿಳೆ. ಭಾರತೀಯ ಸಂಪ್ರದಾಯದ ಇತಿಮಿತಿಯಲ್ಲಿರುವಳು ಆಕೆಯ ಆಪ್ತ ಗೆಳತಿಯಲ್ಲಿ ಮುಕ್ತ ಲೈಂಗಿಕತೆಯ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾಳೆ . ಪ್ರೇಮ ಕಾಮ ಕುಡಿಯುವುದು ಸೇದುವುದು ಈ ಎಲ್ಲಾ ಸ್ವಚ್ಛಾಚಾರವನ್ನು ಅನುಭವಿಸಿದವಳು ಮಾನಸಿಕ ನೆಮ್ಮದಿ ಹುಡುಕುತ್ತಾ ಭಾರತ ದೇಶಕ್ಕೆ ಬಂದ ಸನ್ನಿವೇಶ ಕಥೆಯಲ್ಲಿ ವ್ಯಕ್ತವಾಗಿದೆ. ಒಪ್ಪಂದದ ಮದುವೆ- ಭಾರತೀಯ ಸಮಾಜದಲ್ಲಿ ತೀರಾ ಅಪರಿಚಿತವೆಂದು ಹೇಳಲಾಗುವ ಮುಕ್ತ ಲೈಂಗಿಕ ಪರಿಸರವನ್ನು ಸೃಷ್ಟಿ ಮಾಡಿಕೊಂಡು ಜೊತೆಗೆ ಸ್ವಾರ್ಥ ಸಾಧಿಸ ಬಯಸುವ ಹೊರದೇಶಗಳ ಸಾಮಾಜಿಕ ಸಂಸ್ಕಾರಗಳನ್ನು ಒಪ್ಪಂದದ ಮದುವೆ ಕಥೆ ಪರಿಚಯಿಸುತ್ತದೆ. ಫಿಲಿಪಿನ ಹುಡುಗಿ ರೂಬಿಯ ಲೈಂಗಿಕ ಜೀವನ ಮತ್ತು ಅದನ್ನು ಬಂಡವಾಳವಾಗಿಸಿಕೊಂಡು ಶೋಷಣೆಗೆ ತೊಡಗುವ ಜರ್ಮನ್ ಸಂಗಾತಿ ಜೋನಾಥನ್ ನಾ ಕುಟಿಲೋಪಾಯ ಎಂಥವರ ಮನಸ್ಸನ್ನು ಕದಡುತ್ತದೆ. ಹಾಗೆಂದುಕೊಂಡಂತೆ- ಕಥೆಯಲ್ಲಿ ನಾಯಕಿ ಕ್ಯಾಥರಿನ್ ತಾನೊಬ್ಬ ಉದ್ದಟ ಸರ್ವಸ್ವತಂತ್ರ ಸ್ತ್ರೀ ವಾದಿ ಹೆಣ್ಣಂತೆ ಕಥೆಯುದ್ಧಕ್ಕೂ ಕಾಣುತ್ತಾಳೆ. ಆದರೂ ಕೊನೆಯಲ್ಲಿ ನಮ್ಮ ಕಲ್ಪನೆಗೆ ವ್ಯತರಿಕ್ತವಾಗಿ ಸಂಸಾರಿಕ ಮರ್ಯಾದೆಯನ್ನು ಸ್ತ್ರೀ ಕುಲದ ಮೇಲ್ಮೈಯನ್ನು ಸಾರುವ ಪರಿ ನಮ್ಮ ಅಂತರಂಗವನ್ನು ಸಂಪ್ರೀತಗೊಳಿಸುತ್ತದೆ. ಕನಸಿನ ಕಿಚ್ಚು- ಬಡತನದ ನಿಷ್ಠೂರ ಏಕಾಕಿತನದಲ್ಲಿ ಬದುಕು ಸವಿಸುವ ಕಥಾನಾಯಕ ಅರಬ್ ನಾಡಿನಲ್ಲಿ ಕೆಲಸ ದೊರಕಿಸಿಕೊಂಡು ಬದುಕು ಸಿಹಿ ಮಾಡಿಕೊಳ್ಳಬೇಕೆಂಬ ಕನಸನ್ನು ಹೊಂದಿರುತ್ತಾನೆ. ಕನಸು ಒಡೆದು ವಿಧಿ ಬರಹ ಬೇರೆಯದನ್ನೇ ಸೃಷ್ಟಿಸುತ್ತದೆ. ಪ್ರಣಯಕ್ಕೆ ಸಿಲುಕಿ ದಾಂಪತ್ಯ ಮುಳು ವಾಗುವ ಸ್ಥಿತಿ ಕಥೆಯಲ್ಲಿ ವ್ಯಕ್ತವಾಗಿದೆ. ಮುದುಕ ಮತ್ತು ನನ್ನ ಗಾಗಲ್- ಮರಳುಗಾಡಿನ ಹಡಗು ಒಂಟೆ. ಒಂಟೆಯನ್ನು ಮಕ್ಕಳಿಗಿಂತ ಹೆಚ್ಚು ಪ್ರೀತಿಸುವ ಮುದುಕ ಅಹಮದ್. ಮಕ್ಕಳು ಮೊಮ್ಮಕ್ಕಳ ಆಧುನಿಕ ವರ್ತನೆ ಸಹಿಸದವ. ಅಹಮದ್ದನ ಒಂಟೆಗಳನ್ನು ಮಾರಿ ಮರ್ಸಿಡಿಸ್ ಕಾರು ತರುವ ಮೊಮ್ಮಕ್ಕಳ ವರ್ತನೆಯಿಂದ ಬೇಸರಗೊಳ್ಳುತ್ತಾನೆ. ಕಿವಿ ಕೇಳಿಸಿದ ಮುದುಕ ಅನುಭವಿಸುವ ಮಾನಸಿಕ ವ್ಯಾಕುಲತೆ ಕಥೆಯಲ್ಲಿ ವ್ಯಕ್ತವಾಗಿದೆ. ಕಿವಿ ಕೇಳಿಸದ ತೀಕ್ಷ್ಣ ದೃಷ್ಟಿ ಯುಳ್ಳ ಅಹಮದ್ ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡು ಮನಸ್ಸಿನ ದುಃಖವನ್ನು ಮರೆಯ ಬಯಸುವ ಸನ್ನಿವೇಶ ಹೃದಯವನ್ನು ಹಿಂಡುವಂತಿದೆ. ಬದುಕಿಗಾಗಿ- ತುತ್ತು ಅನ್ನಕ್ಕಾಗಿ ಚೂರು ಹೊಟ್ಟೆಗಾಗಿ ಎಲ್ಲೆಲ್ಲಿಯೂ ಉಸಿರೆ ತಿಕ್ಕುವ ಹಮೀದಾ ಅವಳ ಮಕ್ಕಳು ಸುಖವಾಗಿರಲೆಂದು ಬಯಸುತ್ತಾಳೆ . ತಾಯಿಯ ಕಷ್ಟವನ್ನು ಅರಿತ ಮಕ್ಕಳು ತಾಯಿಗೆ ಆಸರೆ ಆಗಬೇಕೆಂಬ ಉತ್ಕಟ ಇಚ್ಚೆಯಿಂದ ಕೆಲಸ ಅರಸಿ ಪರ ಊರಿಗೆ ಹೋಗುತ್ತಾರೆ. ಆದರೆ ವಿಧಿಯಾಟ ಪ್ರಾಮಾಣಿಕ ಮಕ್ಕಳ ಜೀವವನ್ನು ಜೀವವನ್ನು ತೆಗೆದುಕೊಳ್ಳುತ್ತದೆ. ಕೊನೆಗೆ ಮತ್ತೆ ಒಂಟಿಯಾದ ಅಮೀಬಾ ಓದುವ ರೈಲಿಗೆ ಸಿಕ್ಕು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಕಡಲಾಚೆಯ ಕಥೆ- ಸುಂದರ ಕನಸುಗಳನ್ನು ಹೊತ್ತು ವಿದೇಶಕ್ಕೆ ತೆರಳಿದ ಭಾರತೀಯ ದಂಪತಿಗಳಿಬ್ಬರ ಕತೆ ಯಾಗಿದೆ. ನಿಯಂತ್ರಿಸಲಾಗದ ಕಾಮುಕನಿಗೆ ಬಲಿಯಾದ ಸುಚರಿತಾ, ಸುಂದರಿ ಹೆಂಡತಿಯನ್ನು ಕಳೆದುಕೊಂಡ ರಾಜೇಂದ್ರ ಮುಂದೆ ಪ್ರತಿಕಾರಕ್ಕೆ ಕೊಲೆಗಳನ್ನು ಮಾಡಲು ಪ್ರೇರಣೆ ನೀಡುವ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಸುಶಿಕ್ಷಿತ ಎನಿಸಿಕೊಳ್ಳುವುದರಲ್ಲಿ ವಿದೇಶದ ಪರಿಸರದಲ್ಲಿ ಸಾಂಸ್ಕೃತಿಕ ಎಚ್ಚರವನ್ನು ಮರೆಸುತ್ತವೆ. ಒಟ್ಟಿನಲ್ಲಿ ಕಡಲಾಚೆಯ ಕಥೆಗಳು ಕೃತಿ ಕಥಿಗಾಟಿ ಲತಾಗುತ್ತಿಯವರ ವಿದೇಶ ಅನುಭವ ಮತ್ತು ಅಲ್ಲಿಯ ಸ್ವಾಭಾವಿಕ ಚಿಂತನೆಗಳಿಂದ ರೂಪಿತವಾಗಿದೆ. 15 ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದು, ಅಲ್ಲಿ ಕಂಡಂತಹ ವಿದೇಶದ ಸಾಮಾಜಿಕ ಕೌಟುಂಬಿಕ ರೀತಿ ನೀತಿಗಳ ಆಚಾರ ವಿಚಾರಗಳ ನೇರ ಹಾಗೂ ದಟ್ಟ ಪರಿಚಯ ಮಾಡಿಕೊಡುತ್ತದೆ. ಈ ಕಥೆಗಳನ್ನು ಓದಿದ ಪ್ರತಿಯೊಬ್ಬರ ಮನಸ್ಸಿನಲ್ಲೂ ವೈಚಾರಿಕ ಪ್ರಜ್ಞೆಯನ್ನು ಮೂಡಿಸುತ್ತದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಕಡಲಾಚೆಯ ಕಥೆಗಳು ಈ ಕಥಾ ಸಂಕಲನದಲ್ಲಿ ಪ್ರತಿಯೊಂದು ಕಥೆಯಲ್ಲಿ ಜೀವನ ಹೋರಾಟ ಎದ್ದು ಕಾಣುತ್ತದೆ. ಜೀವನ ಹೋರಾಟ ಮಹಿಳೆಯರಿಗೂ ಪುರುಷರಿಗೂ ವಯೋವೃದ್ಧರಿಗೂ ಎಲ್ಲರಿಗೂ ಅನ್ವಯವಾಗುತ್ತದೆ. ಬಹುತೇಕ ಕಥೆಗಳಲ್ಲಿ ಮಹಿಳೆಯ ಜೀವನ ಹೋರಾಟವೇ ಇದೆ. ಅನಾದಿಕಾಲದಿಂದಲೂ ಶೋಷಣೆಗೊಳಗಾದ ಹೆಣ್ಣು, ಸಿಡಿದೆದ್ದು ಸಮಾನತೆಗಾಗಿ ಹೋರಾಟ ಮಾಡುತ್ತಾಳೆ. ಕೆಲ ಕಥೆಗಳಲ್ಲಿ ಸಂಸಾರದ ಜವಾಬ್ದಾರಿಗಾಗಿ ಜೀವನ ಹೋರಾಟ ನಡೆಸುತ್ತಾಳೆ. ಆರ್ಥಿಕ ಸದೃಢತೆಗಾಗಿ, ಅಗತ್ಯತೆಗಳನ್ನು ಪೂರೈಸಿಕೊಳ್ಳಲು, ಮಾತೃದೇಶವನ್ನು ತೊರೆದು, ಗೊತ್ತು ಪರಿಚಯವಿಲ್ಲದ ವಿದೇಶದಲ್ಲಿ ಒಂದು ನೆಲೆಸುತ್ತಾಳೆ. ಉದ್ಯೋಗ ಅರಸಿ ಅಲೆದಾಡುತ್ತಾಳೆ. ಸಿಕ್ಕ ಯಾವುದೋ ಒಂದು ಕೆಲಸವನ್ನು ಮಾಡುತ್ತಾ, ಜೀವನ ಇಂದಲ್ಲ ನಾಳೆ ಸರಿ ಹೋಗಬಹುದೆಂಬ ಆಶಾಭಾವನೆಯನ್ನು ಹೊಂದುತ್ತಾಳೆ. ಕೆಲವೊಮ್ಮೆ ಅತೀವ ದುಃಖಕ್ಕೆ ಒಳಗಾಗಿ, ಶೋಷಣೆಗೊಳಗಾಗುತ್ತಾಳೆ. ಕೆಲವೊಮ್ಮೆ ದೈಹಿಕ ಶೋಷಣೆಗೂ ಒಳಗಾಗುತ್ತಾಳೆ. ಆದರು ಜೀವನ ಹೋರಾಟವನ್ನು ನಿಲ್ಲಿಸುವುದಿಲ್ಲ. ಹೀಗೆ ಪ್ರತೀಕತೆಯಲ್ಲೂ ಒಂದೊಂದು ಜೀವನ ಹೋರಾಟದ ಚಿತ್ರಣ ಕಡಲಾಚೆಯ ಕಥೆ ತಿಳಿಸುತ್ತದೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಭೂಮಿಯ ಮೇಲೆ ಬದುಕುವ ಪ್ರತಿಯೊಬ್ಬರೂ ಓದಬೇಕಾದ ಪುಸ್ತಕ. ಯಾಕೆಂದರೆ ಜೀವನ ಹೋರಾಟ ಎಲ್ಲರದ್ದು ಇರುತ್ತದೆ. ಬಡವ ಶ್ರೀಮಂತ ಮಹಿಳೆ ಪುರುಷ ಯಾರನ್ನು ಈ ಜೀವನ ಹೋರಾಟ ಬಿಟ್ಟಿಲ್ಲ. ಬಡವ ತನ್ನ ಎರಡು ಹೊತ್ತಿನ ಊಟಕ್ಕಾಗಿ ಸಂಘರ್ಷ ನಡೆಸುತ್ತಾನೆ. ಶ್ರೀಮಂತ ತನ್ನ ಉದ್ಯೋಗ ನಿರ್ವಹಣೆಗಾಗಿ ಹಣ ಗಳಿಸುವುದಕ್ಕಾಗಿ ಉಳಿಸುವುದಕ್ಕಾಗಿ ಭವಿಷ್ಯದ ಅವಶ್ಯಕತೆಗಳನ್ನು ಪೂರೈಸಲು ಜೀವನ ಸಂಘರ್ಷ ನಡೆಸುತ್ತಾನೆ. ಜೀವನ ಸಂಘರ್ಷ ಎಲ್ಲರಿಗೂ ಇದ್ದೇ ಎಲ್ಲರೂ ಇಂತಹ ಕಥೆಗಳನ್ನು ಓದಿ ಜೀವ ನಾನು ಭಾವವನ್ನು ಪಡೆದುಕೊಳ್ಳಬೇಕು.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.