ಪುಸ್ತಕದ ಶೀರ್ಷಿಕೆ: ಮಾಂಡೋವಿ
ಪುಸ್ತಕದ ಲೇಖಕರು: ರವಿ ಬೆಳಗೆರೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಲಿಖಿತ ಜಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಮಾಂಡೋವಿ, ಒಂದು ಪ್ರೇಮಗುಚ್ಚ! ಮೊದಲ ಪುಟದಲ್ಲಿ ಬರೆದಿದ್ದ "ಪುಸ್ತಕದ ಮೇಲೆ ಕೈ ಇರಿಸಿದೆಯ ಜೀವವೇ? ನಿನ್ನ ಕೈಗಳಿಗೆ ಪ್ರೇಮದ ಹುಡಿ ಅಂಟಿಕೊಳ್ಳಲಿ" ಅನ್ನೋ ಸಾಲು ಇದ್ದದ್ದು, ಅರೇ! Interesting! ಅನ್ಸ್ತು . ಒಬ್ಬ ಓದುಗನ ಆಸಕ್ತಿ, ಕಲ್ಪನೆ, ಗ್ರಹಿಕೆಯನ್ನ ಲೇಖನಿಯ ಮೂಲಕ ಹಿಡಿದಿಡೋ ಶಕ್ತಿ ಲೇಖಕರ ಬರವಣಿಗೆಯಲ್ಲಿನ ನೇರವಂತಿಕೆ, ಭಾವನೆಗಳ ಸಿರಿವಂತಿಕೆ, ದೃಶೀಕರಣದ ನಿಖರತೆ ಅವ್ರ ಬರವಣಿಗೆಲಿ ಕಾಣತ್ತೆ. ಬರೆವಣಿಗೆ ಶೈಲಿ ಆಯಾ ಸಂದರ್ಭಕ್ಕೆ ಆಯಾ ಪಾತ್ರದ ಭಾವನೆಗಳು ಮನಸ್ಸಿಗೆ ನಾಟೊ ಹಾಗಿತ್ತು! ಕಥೆ ಹೋದಂತೆಲ್ಲ ಭಾವನೆಗಳನ್ನ ಇವರು ಹೆಣೆದಿರೋ ರೀತಿ, ಮೃದುವಾಗಿ ಓರ್ವ ಹೆಣ್ಣು ಮಗಳ ಜಡೆ ಹೆಣೆದು ಮಲ್ಲಿಗೆ ಮೂಡಿಸೋ ಅಷ್ಟೇ ಸೊಗಸು! ಮನುಷ್ಯನನ್ನು ದುಃಖ, ಅಸಹನೆ, ನಿರಾಸೆ, ವಿಕಾರ, ಆತ್ಮನಿಂದೆ, ಲೌಕಿಕ ಸಂಕಟ ಇವೆಲ್ಲವುಗಳಿಂದಲೂ ಬಿಡುಗಡೆ ಮಾಡಬಲ್ಲಂತಹ ಅದ್ಭುತ ಚೈತನ್ಯವೇ ಪ್ರೇಮ! ಪ್ರೀತಿ ಸಿಗದ ಮನುಷ್ಯನ ಹೃದಯ ಮಳೆ ಕಾಣದೆ ಬಾಯಾರಿ ಬಳಲಿದ ಭೂಮಿ, ಇಲ್ಲಿ ಮಾಂಡೋವಿಯ ಪ್ರೇಮದ ಮಳೆ ಸೋಕಲು ಚಲಂನ ಹೃದಯದ ಇಳೆ ದಶಕಗಳೇ ಕಾದದ್ದು ಪ್ರೇಮದ ಪರೀಕ್ಷೆ ಎಂದರೆ ತಪ್ಪಾಗಲಾರದು. ಅಂಗೈ ಹಿಡಿಯಷ್ಟು ಹೃದಯದ ಭಾವನೆಗಳ ವಿನಿಮಯ ಬದುಕಿನ ಯಾವ ಹೋರಾಟವನ್ನು ಎದುರಿಸಿ ಗೆದ್ದು ಬರಬಲ್ಲ ಛಲ ಹುಟ್ಟಿಸುವ ಪರಿಯೇ ವಿಸ್ಮಯ ಅನ್ನೋದು ಕಾಣಲ್ಪಡುತ್ತೆ. ಕಾದಂಬರಿ ಓದಿದಂತೆಲ್ಲ ಪ್ರೇಮದ ಬಗ್ಗೆ maturity ಹುಟ್ಟುತ್ತಾ ಹೋಗತ್ತೆ! ಇನ್ನು ಪಾತ್ರಗಳ ಬಗ್ಗೇ ತಿಳಿಸೋದೆ ಆದ್ರೆ, ಮಾಂಡೋವಿ! ಎಳೆ ವಯಸ್ಸಿನ ಚಂಚಲ ರೂಪವತಿ... ಕಥೆಯ ಜೊತೆ ಜೊತೆಗೆ ಆಕೆ ವೃದ್ಧಾಪ್ಯ ಮುಟ್ಟೋ ಅಷ್ಟರಲ್ಲಿ ಆ ಪಾತ್ರದಲ್ಲಿನ ತೂಕ maturity ಅಚ್ಚುಕಟ್ಟಾಗಿ ಕಟ್ಟಿದಾರೆ. ಇನ್ನೂ ಡಾ. ಚನ್ನಬಸವನ ಗೌಡ, ಈ ಪಾತ್ರದ ಗತ್ತು ಗಾಂಭೀರ್ಯ ಮೊದಮೊದಲಿಗೆ ಬಹಳ ಅಚ್ಚುಕಟ್ಟಾಗಿ ತೋರ್ಪಡಿಕೆ ಆದ್ರೂ ಕಥೆಯ timeline ಬದಲಾದಂತೆಲ್ಲ ತುಂಬ unique ಅನ್ಸಿದ್ದಂತೂ ನಿಜ. ವಿಶೇಷ ಏನಂದ್ರೆ ಈ ಪಾತ್ರವನ್ನ ಮಾಂಡೋವಿಯ perspective ಇಂದ ಸಹ ಓದುಗರಿಗೆ ಪರಿಚಯಿಸಿರೋದು, ಒಂದು ಪಾತ್ರವನ್ನ ಹಲವು ದಿಕ್ಕುಗಳಿಂದ ಕಂಡು ರೂಪ ಕೊಟ್ಟಿರೋದು ವಿಶೇಷ ಅನ್ಸ್ತು. ಚಲಂ! ಪ್ರೇಮವನ್ನ ಆಗ ತಾನೆ ಹುಟ್ಟಿದ ಸೂರ್ಯನ ಎಳೆ ಕಿರಣಗಳಿಗೆ(ಯೌವ್ವನ) ಹೋಲಿಸಿ ಮಾತಾಡಿದ್ರೆ....ಮಾಂಡೋವಿ ಅನ್ನೋ ಪುಸ್ತಕ...ಅದೇ ಸೂರ್ಯನ ಕಿರಣಗಳು ಮುಳುಗು ಹೊತ್ತಿಗೆ(ಮುಪ್ಪು)ಅಷ್ಟೇ ಪ್ರಕಾಶವನ್ನ ಚಲ್ಲೊ ರೀತಿ ಬಿಂಬಿತವಾಗಿದೆ, ಎಳೆ ವಯಸ್ಸಿನಲ್ಲಿ ಹುಟ್ಟಿದ ಪ್ರೇಮ ಒಬ್ಬ ಮನುಷ್ಯನ ವೃದ್ಧಾಪ್ಯದವರೆಗೂ ಆತನ ಪುಟ್ಟದೊಂದು ವಿಶಾಲ ಹೃದಯದಲ್ಲಿ ಪುಟಿಯೋದಿದೆ ಅಲ್ವೇ?! ಅದು ನೈಜ್ಯ ಪ್ರೇಮ ಅನ್ನೋದನ್ನ ವೆಂಕಟಚಲಪತಿ ಅನ್ನೋ ಪಾತ್ರದಿಂದ ತುಂಬ ಸೊಗಸಾಗಿ ವ್ಯಕ್ತ ಪಡಿಸಿದ್ದಾರೆ. ಇತ್ತ ಪ್ರೀತಿಯ ಶುರುವಿನಲ್ಲಿ ಬರಿಯ ಭಾವುಕ ಮನಸ್ಸನ್ನ ಹೊಂದಿದ ಆ ಮುಗ್ಧ ಹುಡುಗ... ಮಾಂಡೋವಿ ಪ್ರೇಮಕ್ಕೆ ತಾಳ್ಮೆ ಇಂದ ಕಾಯುತ್ತಾ, ಹಲವಾರು ಭಾವನೆಗಳ ತೋಳಲಾಟಕ್ಕೆ ಸಿಲುಕಿ,ತನ್ನ ಜೀವನವನ್ನೂ ರೂಪಿಸಿಕೊಂಡು ಇಡೀ ಜನುಮ ಕಾದು ಪ್ರೀತಿಯನ್ನ ಒಲಿಸಿಕೊಳ್ತಾನಲ್ಲ... ಅದು ರೋಮಾಂಚನ ಹುಟ್ಟಿಸತ್ತೆ! ಒಂದಂತೂ ಹೌದು ಈ ಕಾದಂಬರಿಲಿ ಹಾದು ಹೋಗೋ ಪ್ರತಿ ಒಂದು ಪಾತ್ರವು ಮನಸ್ಸಿನಲ್ಲಿ ಛಾಪು ಮೂಡಿಸಿ ಹೋಗುವಂತದ್ದೆ! ನೇಮಿರಾಲ ಸುಬ್ಬಾರಾವ್ ಇಂದ ಹಿಡ್ದು ಸೀತಮ್ಮ, ಮುಕ್ತಾಯಿ ಮಂಗಳಗೌರಿ, ಸಣ್ಣ ಸೆತ್ತೆಪ್ಪ, ಕಲ್ಪನ, ಕಲ್ಯಾಣಿಯ ವರೆಗೂ ಮನಸಲ್ಲೇ ಉಳಿಯೋ ಅಂತ ಪಾತ್ರಗಳು! ಪ್ರೀತಿ ಹಸಿವು, ಬದುಕು, ತ್ಯಾಗ, ಹಂಬಲ, ತಾಳ್ಮೆ, ಕಾಯುವಿಕೆ, ಭರವಸೆ, ಸಂಯಮ, ವಾಂಛೆ, ಉನ್ಮಾದ, ಮಿಲನ, ಪ್ರೀತಿ ನಿರಾಳ...ಪ್ರೀತಿ ನಿರಂತರ!! ಪ್ರೇಮವೆಂಬುದು ನಿರಂತರ ಹರಿಯುವ ನದಿಯ ಸೆಳೆತ ಎಂಬಂತೆ, ಈ ಕಾದಂಬರಿಗೆ ಮಾಂಡೋವಿ ಎಂಬ ನದಿಯ ಹೆಸರಿರುವುದು ಕಾಕತಾಳೀಯವೇನೋ. ಇದು Love in the time of cholera ಅನ್ನೋ ಕಾದಂಬರಿಯ ಪ್ರೇರಣೆ ಆದರೂ...ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬರ್ದಿರೋದು ನಿಜಕ್ಕೂ ಚಂದ ಅನ್ಸತ್ತೆ...The breadth and depth of every emotions ಈ ಕಾದಂಬರಿಲಿ ಕಾಣಸಿಗತ್ತೆ...ತೀರ ಭಾವುಕ ಮನಸ್ಸುಗಳಿಗೆ ತುಂಬ ಹತ್ತಿರವಾಗೋ ಪ್ರೇಮದ ಸಂಕೇತ ಮಾಂಡೋವಿ! ಪುಸ್ತಕದ ಕಡೆ ಪುಟ ಓದಿ ಮುಗಿಸಿದಾಗ ಸಿಕ್ಕ ತೃಪ್ತಿ... ನೀಗಿದ ತೃಷೆ ಪ್ರಾಯಶಃ ಹಿಂದೆಂದೂ ಆಗಿರಲಿಕ್ಕಿಲ್ಲ! ಓದುಗರನ್ನು ತೃಪ್ತಗೊಳಿಸಿ ಅಷ್ಟೂ ತಾಕತ್ತು ಈ ೨೦೧ ಪುಟದ ನನ್ನ ಅಚ್ಚುಮೆಚ್ಚಿನ ಪ್ರೇಮಗುಚ್ಚದ ಮಂಡೋವಿಗಿದೆ!! ಒಟ್ಟಾರೆ, ಹಂಬಲದ ಕನವರಿಕೆ ಒಲವು! ಕಾಯುವಿಕೆಗೆ ಸ್ಪಂದನೆ ಒಲವು! ಕಾದು ಪಡೆಯೋ ಜೇನ ಸವಿ ಒಲವು! ಜೀವನಾಡಿ ಒಲವು! ಮನಸ್ಸು ತುಂಬಿ ಬಂತು, ತೃಪ್ತಗೊಳ್ತು. ಒಂದಂತೂ ನಿಜ ಪ್ರೇಮದ ಹುಡಿ ಕೈಗಷ್ಟೇ ಅಲ್ಲ... ಮೈ ಮನಸ್ಸಿಗೂ ಅಂತಿಕೊಳ್ತು! ಪ್ರೀತಿಯಿಂದ, ಧನ್ಯವಾದಗಳು! ~ಕನಕಾಂಬರಿ
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.