Submission 1949

ಪುಸ್ತಕದ ಶೀರ್ಷಿಕೆ: ಅಘೋರಿಗಳ ನಡುವೆ

ಪುಸ್ತಕದ ಲೇಖಕರು: ಸುರೇಶ್ ಸೋಮಪುರ ಕನ್ನಡಕ್ಕೆ ಅನುವಾದ ಎಂ.ವಿ.ನಾಗರಾಜರಾವ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಲಕ್ಷ್ಮಿ ದೇವಿ.ವೈ.ಹೆಚ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಗುಜರಾತಿ ಮೂಲದ ಸುರೇಶ್ ಸೋಮಪುರ ಅವರು ರಚಿಸಿರುವ ಅಘೋರಿಗಳ ನಡುವೆ ಕಾದಂಬರಿಯನ್ನು ಎಂ. ವಿ. ನಾಗರಾಜರಾವ್ ಅವರು ಕನ್ನಡಕ್ಕೆ ಅನುವಾದಿಸಿರುತ್ತಾರೆ. 1986 ರಿಂದ 2023 ರವರೆಗೆ ಸುಮಾರು ಏಳು ಮುದ್ರಣಗಳನ್ನು ಕಂಡಿದೆ. ಇದೊಂದು ಅಪರೂಪದ ಕಾದಂಬರಿಯಾಗಿದ್ದು ಅಘೋರಿಗಳ ಜೀವನ ದರ್ಶನದ ಚಿತ್ರಣವನ್ನು ನೀಡುತ್ತದೆ. ಈ ಅಘೋರಿಗಳು ಭಾರತದಲ್ಲೆಡೆ ವಾಸವಿದ್ದು ಸಾರ್ವಜನಿಕ ಸಮುದಾಯಗಳಲ್ಲಿ ಕಾಣಸಿಗುವುದಿಲ್ಲ ಮತ್ತು ಸಾಮಾಜಿಕ ಜೀವನವನ್ನು ನಡೆಸುವುದಿಲ್ಲ. ಕೆಲ ವಿದ್ಯಾವಂತರು ನಾಗರಿಕರು ಸಾಮಾಜಿಕ ಜೀವನವನ್ನು ತೊರೆದು ಅತಿ ಕಷ್ಟಕರವಾದ ಜೀವನವನ್ನು ಆಯ್ಕೆ ಮಾಡಿಕೊಂಡು ಸಾಧನೆಯಲ್ಲಿ ತೊಡಗಿರುವ ಅಘೋರಿಗಳ ಬಗ್ಗೆ ತಿಳಿಯಲು ಲೇಖಕರಾದ ಶ್ರೀ ಸುರೇಶ್ ಸೋಮಪುರ ಅವರು ಕೆಲವು ಅಘೋರಿಗಳನ್ನು ನೇರವಾಗಿ ಭೇಟಿ ಮಾಡಿ ಅವರ ದಿನನಿತ್ಯದ ನಡವಳಿಕೆಯನ್ನು ಕಣ್ಣಾರೆ ಕಂಡು ತಮ್ಮದೇ ಆದ ಆಕರ್ಷಕ ಶೈಲಿಯಲ್ಲಿ ನಿರೂಪಿಸಿ ಓದುಗರನ್ನು ಆಕರ್ಷಿಸಿದ್ದಾರೆ. ಗುರು ಚೈತನ್ಯಾನಂದರಿಂದ ಕಲ್ಪನಾ ಯೋಗದ ದೀಕ್ಷೆಯನ್ನು ಪಡೆದ ಲೇಖಕರು ತಮ್ಮ ಸ್ನೇಹಿತ ಜಗಜೀತ್ ಗೆ ಒಬ್ಬ ಅಘೋರಿಯಿಂದ ಆದ ನರಕ ಯಾತನೆ ಮತ್ತು ಅನ್ಯಾಯಕ್ಕೆ ಪ್ರತೀಕಾರವನ್ನು ತೀರಿಸಿಕೊಳ್ಳಲು ಸ್ವಾಮಿ ಶಿವಾನಂದರ ಸಹಾಯದೊಂದಿಗೆ ಬಾಬಾ ಭೈರವನಾಥ ಅನುಮತಿಯೊಂದಿಗೆ ಮಧ್ಯಪ್ರದೇಶದ ದಟ್ಟ ಕಾಡಿನ ಮಧ್ಯೆ ನಡೆಯುವ ಅಘೋರಿಗಳ ಸಾಧನಾ ಶಿಬಿರಕ್ಕೆ ಭೇಟಿ ನೀಡುತ್ತಾರೆ. ಅಲಖ್ ಆನಂದರ ತ್ರಾಟಕ ಶಕ್ತಿ ಪ್ರಯೋಗವನ್ನು ತಮ್ಮ ತರ್ಕದೊಂದಿಗೆ ಅವರಲ್ಲಿ ಪರಿವರ್ತನೆಯನ್ನು ತಂದ ರೀತಿ,ವಾಮದೇವರ ಪೂತಲಿಕಾ ಪ್ರಯೋಗ ಮತ್ತು ಪರಕಾಯ ಪ್ರವೇಶದಂತ ಅಲೌಕಿಕ ಶಕ್ತಿಯನ್ನು ವಿಮರ್ಶಿಸಿ ವೆನ್ ತ್ರಿರಿಲೋಕ್ವಿಸಂ , ಹೈಬರ್ನೇಷನ್, ಪ್ಲಾನ್ಷಟ್ ಪ್ರಯೋಗಗಳ ಬಗ್ಗೆ ವಿವರಿಸಿ ಅವರ ಅಹಂಕಾರವನ್ನು ವಧಿಸಿದ್ದು ಲೇಖಕರ ಕಲ್ಪನಾ ಯೋಗ ಮತ್ತು ಸತ್ಯಾನ್ವೇಷಣೆಗೆ ಉದಾಹರಣೆಯಾಗಿದೆ. ಖೇಚರಿ ವಿದ್ಯೆಯ ಮೂಲಕ 200 ವರ್ಷಗಳ ಕಾಲ ಬದುಕಿದ್ದ ಸ್ವಾಮಿ ವಿತಥನಾಥರ 30 ವರ್ಷಗಳ ಭಯಂಕರ ಸಾಧನೆ ಸಮಾಜ ಮತ್ತು ಜನಸಾಮಾನ್ಯರಿಗೆ ಉಪಯೋಗವಾಗದೆ ವ್ಯರ್ಥ ಸಾಧನೆ ಎಂದು ತಿಳಿದು ಸಮಾಧಿಯಲ್ಲಿ ಚಿರನಿದ್ದೆಗೆ ಜಾರಿದ್ದು, ಅಲಖ್ ಆನಂದರ ಆತ್ಮ ಬಲಿದಾನ ಮಾಡಿಕೊಂಡಿದ್ದು ವಿಸ್ಮಯಕಾರಿ ಘಟನೆಗಳಾಗಿದ್ದವು. ಬಾಬಾ ಭೈರವನಾಥ, ವಾಮದೇವರು ವಿತಥನಾಥರು ಅಲಕ್ ಆನಂದರು ಅದಿತಿಮಾತಾ,ನಿಕುಂಬ್ ಆನಂದ್, ನಿರ್ಮಲ ಆನಂದ, ಲವಲೇಶ್ ಪರಾತ್ಪರರು ಇನ್ನೂ ಮುಂತಾದ ಭಯಂಕರ ಅಘೋರಿಗಳೊಂದಿಗೆ ಐದು ದಿನಗಳು ಕಳೆದು ಅವರ ಭಯಂಕರ ಸಾಧನೆ,ಯಜ್ಞ ,ಮಾಂಸ ,ಮದ್ಯ ,ತಾಂತ್ರಿಕ ಮೈಥುನ, ಸತ್ತ ಗುರುವಿನ ದೇಹವನ್ನು ದೀಕ್ಷೆ ಪಡೆದ ಅವರ ಶಿಷ್ಯರೇ ಭಕ್ಷಿಸುವುದು, ಕಠಿಣ ಶಿಕ್ಷೆ ಘೋರ ಬಲಿದಾನಗಳ ನಡುವೆ ತಮ್ಮ ವಿಚಾರಧಾರೆ ಆತ್ಮಬಲದಿಂದ ಗೆದ್ದು ತಮ್ಮ ಆತ್ಮ ಪ್ರತಿಷ್ಠೆ ವೃದ್ಧಿಸಿಕೊಂಡು ಜೀವಂತವಾಗಿ ಹೊರಬಂದದ್ದು ಅಮೋಘವಾಗಿ ಮೂಡಿಬಂದಿದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲೇಖಕರ ಸ್ನೇಹಿತ ಜಗಜೀತ್ ನ ಭ್ರಮೆ ಭಯ ಆತಂಕದಿಂದ ತನ್ನ ಸಾವನ್ನು ತಾನೇ ತಂದುಕೊಂಡದ್ದು. ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಸಹ ಅನೇಕ ಜನ ತಮ್ಮ ಮೂಢನಂಬಿಕೆಗಳಿಂದ ಭಯ ಆತಂಕ ಭ್ರಮೆಗಳಿಂದ ನರಳುತ್ತಿರುವುದಕ್ಕೆ ಈ ಒಂದು ಸತ್ಯ ಘಟನೆ ಅತ್ಯುತ್ತಮ ಉದಾಹರಣೆಯಾಗಿದೆ. ಥಾಟೋಗ್ರಫಿಯ ಮೂಲಕ ಫೋಟೋಗ್ರಫಿಯ ರೀಲಿನಲ್ಲಿ ಮೂಡುವ ಚಿತ್ರಗಳ ಬಗ್ಗೆ, ವಿವರಿಸಿರುವುದು ಅದ್ಭುತವಾಗಿದೆ. ಅಮೋಘ ಸಾಧಕರಾದ ಅಲಖ್ ಆನಂದರು ಮನ ಪರಿವರ್ತನೆಯೊಂದಿಗೆ ಆತ್ಮ ಬಲಿದಾನವನ್ನು ಮಾಡಿಕೊಂಡದ್ದು ಆಘಾತಕಾರಿ. ಸ್ವಾಮಿ ವಿತಥನಾಥರು 30 ವರ್ಷಗಳ ಕಾಲ ತಾಲೂವನ್ನು ತಮ್ಮ ಕೈ ಬೆರಳಿನಿಂದ ಬಗೆ ಬಗೆದು ಆದ್ನ ಚಕ್ರ ಮತ್ತು ಸಹಸ್ರಾರವನ್ನು ಭೇದಿಸಿ ಬ್ರಹ್ಮರಂದ್ರವನ್ನು ತೆರೆದದ್ದು ರೋಮಾಂಚನಕಾರಿ. 200 ವರ್ಷಗಳ ನಂತರ ಇಂತಹ ಒಂದು ಮಹತ್ಸಾಧನೆ ವ್ಯರ್ಥವೆಂದು ತಿಳಿದು ಚಿರ ನಿದ್ದೆಗೆ ಜಾರುವ ನಿರ್ಧಾರ ಮಾಡಿದ್ದು ವಿಸ್ಮಯಕಾರಿ. ಅಘೋರಿಗಳ ತಾಂತ್ರಿಕ ಶಕ್ತಿಯನ್ನು ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ವಿಮರ್ಶಿಸಿರುವುದು ಮತ್ತು ಅವರ ಸಾಧನೆಯಿಂದ ಕೇವಲ ಸಾಧಕರನ್ನು ತುಷ್ಟಿಗೊಳಿಸುವುದಷ್ಟೇ ಆಗಿದೆ. ಇದರಿಂದ ಕೇವಲ ಅವರ ಅಹಂಕಾರ ಮಾತ್ರ ಹೆಚ್ಚುವುದು ಸಾಮಾಜಿಕ ಜನತೆಗೆ ಅಥವಾ ಜನಸಾಮಾನ್ಯರಿಗೆ ಇದರಿಂದ ಯಾವುದೇ ಉಪಯೋಗವಿಲ್ಲ ಎಂದು ಅವರ ವಿಚಾರಧಾರೆಯನ್ನು ಲೇಖಕರು ಅಘೋರಿಗಳೊಂದಿಗೆ ಹಂಚಿಕೊಂಡದ್ದು ವಿಶೇಷ ಪರಿವರ್ತನೆಗೆ ದಾರಿಯಾಗುವುದು. ಕಾದಂಬರಿಯನ್ನು ಓದಿ ಮುಗಿಸಿದ ಸುಮಾರು ದಿನಗಳವರೆಗೆ ಅಘೋರಿಗಳ ಜೀವನ ದರ್ಶನ ಕೆಲ ಪಾತ್ರಗಳು ಹಗಲು ರಾತ್ರಿಗಳನ್ನದೇ ಕಾಡುವವು.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಮೂಢನಂಬಿಕೆಯಿಂದ ನರಳುವವರು ಅಘೋರಿಗಳ ಬಗ್ಗೆ ಕುತೂಹಲ ಉಳ್ಳವರು ತಾಂತ್ರಿಕ ವಿದ್ಯೆಗಳ ಬಗ್ಗೆ ವೈಜ್ಞಾನಿಕವಾಗಿ ತಿಳಿಯ ಬಯಸುವವರು.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

15
Votes
270
Views
7 Months
Since posted

Voting Closed!

Scroll to Top