Submission 1897

ಪುಸ್ತಕದ ಶೀರ್ಷಿಕೆ: ಮರುಭೂಮಿಯ ಹೊ

ಪುಸ್ತಕದ ಲೇಖಕರು: ವಾರೀಶ್ ಡಿರಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ವೆಂಕಟೇಶ್ ತೂಬಿನಕೆರೆ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ನನಗೆ ಆತ್ಮಕಥನ ಓದುಹುದು ಅಂದರೆ ತುಂಬಾ ಇಷ್ಟ ಹಲವಾರು ಗಣ್ಯವೆಕ್ತಿಗಳ ಬದುಕಿನಲ್ಲಿ ನೆಡೆದ ಘಟನೆಗಳನ್ನು ಓದಿ ಓದಿ ನಾನು ಕೂಡ ಬದಲಾವಣೆ ಕಂಡಿದ್ದೇನೆ.ಇದರಲ್ಲಿ ನನಗೆ ಬಹಳ ಅಚ್ಚು ಮೆಚ್ಚು ಕುವೆಂಪು ಭಾಷಬಾರತಿ ಬಹುಮಾನ ಪಡೆದ ಕೃತಿ ಮರುಭೂಮಿ ಯ ಹೂ ಇಂಗ್ಲಿಷ್ ನಲ್ಲಿ ವಾರಿಸ್ ಡಿರಿ ಬರೆದ (ಡೆಸರ್ಟ್ ಫ್ಲವರ್) ಮೂಲಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ. ಲೇಖಕರು ಜಗದೀಶ್ ಕೊಪ್ಪ ಇದು ಕಥೆಯಲ್ಲ ದಕ್ಷಿಣ ಆಫ್ರಿಕಾದ ಹೆಣ್ಣು ಮಗಳೊಬ್ಬಳ ಆತ್ಮಕಥೆ ಬಾಲ್ಯದಲ್ಲಿ ತನಗೆ ಎದುರಾದ ಕಷ್ಟಗಳನ್ನು ಸವಾಲುಗಳನ್ನು ಎದುರಿಸುತ್ತಾ ಹೋರಾಟ ಮತ್ತು ಹಸಿವು ಮತ್ತು ಅಪಮಾನ ಅವಮಾನ ಗಳನ್ನು ಮೆಟ್ಟಿ ನಿಂತು ಬದುಕು ಕಟ್ಟಿಕೊಂಡ ವಾರೀಸ್ ಜಗತ್ತಿನ ಜಾಹೀರಾತು ಲೋಕದಲ್ಲಿ ರೂಪದರ್ಶಿಯಾಗಿ ಅಜರಾಮರವಾಗಿ ನಿಲ್ಲುತ್ತಾರೆ ದಕ್ಷಿಣ ಆಪ್ರಿಕದ ಸೋಮಲಿಯ ಎಂಬ ಕುಗ್ರಾಮದಲ್ಲಿ ಹುಟ್ಟಿದ ವಾರಿಸ್ ವಿದ್ಯೆಯಿಂದ ವಂಚಿತಳಾಗಿ ಬಡತನವೆಂಬ ಕರಾಳ ಕೂಪಕ್ಕೆ ಬೆಂದು ನೊಂದು ಕಡೆಗೊಂದು ದಿನ ದಕ್ಷಿಣ ಆಫ್ರಿಕಾದ ಅಲೆಮಾರಿ ಸಂಪ್ರದಾಯದಲ್ಲಿದ್ದ ವಿಚಿತ್ರ ಆಚರಣೆ ಯೋನಿ ಚೇದನ ಎಂಬ ಸಂಪ್ರದಾಯಕ್ಕೆ ಸೆಡ್ಡು ಹೊಡೆದು ರಾತ್ರೋರಾತ್ರಿ ಮನೆಯಿಂದ ಹೊರ ಬಿದ್ದ ವಾರಿಸ್ ಕಾಡುಮೇಡುಗಳನ್ನು ಸುತ್ತಿ. ಲಾರಿ ಏರಿ ದೂರದ ಸೋಮಾಲಿಯಾದ ರಾಜಧಾನಿಯಾದ ಮೊಗದಿಸು ತಲುಪುತ್ತಾಳೆ ಪರಿಚಯವೆ ಇಲ್ಲದ ಈ ದೊಡ್ಡ ನಗರದಲ್ಲಿ ಸಾಹಸ ಮೆರೆದು ತನ್ನ ಚಿಕಪ್ಪನ ಮನೆ ಹುಡುಕಿ ಮನೆಕೆಲಸ ಗಿಟ್ಟಸಿ ಕೊಳುತ್ತಾಳೆ.ಮನೆ ಕೆಲಸದ ಜೊತೆಗೆ ಚಿಕ್ಕಪ್ಪನ ಮಕ್ಕಳನ್ನು. ಶಾಲೆಗೆ ಬಿಡುವ ಜವಾಬ್ದಾರಿಯು ಇವಳ ಹೆಗಲೇರುತದೆ ಇತ್ತ ಮಗಳು ಮನೆ ಬಿಟ್ಟ ಹೋಗಿರುವ ವಿಷಯ ತಿಳಿದ ವಾರಿಸಳ ಪೋಸಕರು ಗಾಬರಿಯಿಂದ ಚಡಪಡಿಸುತಿರುವಾಗ ಹೇಗೋ ವಾರಿಸ್ ಮೊಗದುಸು ವಿನಲ್ಲಿರುವ ವಿಷಯ ತಿಳಿದು ನಿಟ್ಟುಸಿರು ಬಿಡುತ್ತಾರೆ ಹೀಗೆ ಸಾಗುವ ಕಪ್ಪು ಸುಂದರಿಯ ಜೀವನ ಅಕಸ್ಮಾತ್ ಯಾರು ಊಹಿಸಿರದ ತಿರುಹು ಪಡೆದು ಕೊಳ್ಳುತ್ತದೆ. ಒಮ್ಮೆ ಲಂಡನ್ ಲಿರುವ ಚಿಕ್ಕಪ್ಪನ. ಸ್ನೇಹಿತ ರೊಬ್ಬರಿಗೆ ಮನೆಕೆಲಸಕ್ಕೆ ನಂಬಿಕಸ್ತ ಮಹಿಳೆಯೊಬ್ಬರು ಬೇಕೆಂದು ಕೇಳುತ್ತಾರೆ ಪಕ್ಕದಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದ ವಾರಿಸ್ ನಾನೇಕೆ ಲಂಡನ್ ಗೆ ಹೋಗಬಾರದು ಎಂದು ಚಿಕ್ಕಮ್ಮಳನ್ನು ಮನವಲಿಸಿ ಲಂಡನ್ ಗೆ ಹೊರಡುತ್ತಾಳೆ ಲಂಡನ್ ಎಂದರೆ ಏನು ಎಂದು ಗೊತ್ತಿರದ ವಾರಿಸ್ ಇಲ್ಲಿ ಮನೆಕೆಲಸಕ್ಕೆ ಸೇರುತ್ತಾಳೆ ಜೊತೆಗೆ ಮಕ್ಕಳನ್ನು ಶಾಲೆಗೆಬಿಡುವ ಜವಾಬ್ದಾರಿಯೂ ಇವಳ ಎಗಲು ಎರುತ್ತದೆ ಹೀಗಿರಲು ಒಂದುದಿನ ಮಕ್ಕಳನ್ನು ಬಿಡಲು ಒಂದು. ಸಿಗ್ನಲ್ ನಲ್ಲಿ ನಿಂತಿರುವಾಗ ಮಹಡಿಯ ಮೇಲಿಂದ ಜಾಹೀರಾತು ಛಾಯಾಗ್ರಾಹಕನೊಬ್ಬನ ಕಣ್ಣಿಗೆಬೀಳುತ್ತಾಳೆ ಬರಿ ಬಿಳಿ ಬಣ್ಣದ ರೊಪದರ್ಶಿನಿರ ಫೋಟೋ ಕ್ಲಿಕಿಸಿ ರೋಸಿಹೋಗಿದ್ದ ಅವನು ಈ ಕಪ್ಪುಸುಂದರಿಯ ನೋಡಿ ಒಂದು ಕ್ಷಣ ಮಾತೇ ಹೊರಡದೆ ತಕ್ಷಣಾ ಫೋಟೋ ಕ್ಲಿಕಿಸಿ ಪರಿಚಯಮಾಡಿಕೊಂಡು ತನ್ನ ವಿಸಿಟಿಂಗ್ ಕಾರ್ಡ್ ಕೈಗಿತ್ತು ಹೋಗುತ್ತಾನೆ ನಂತರ ನಡೆದಿದ್ದು ಇತಿಹಾಸ ಈ ಪ್ರಸಿದ್ಧ ಛಾಯಾಗ್ರಹಕ ವಾರಿಸಳ ಫೋಟೋವನ್ನು ಪ್ರಸಿದ್ದ ಮ್ಯಾಕ್ಸಿನ್ (ನಿಯತ ಕಾಲಿಕೆ) ಒಂದರಲ್ಲಿ ಪ್ರಕಟಿಸುತ್ತಾನೆ. ಪತ್ರಿಕೆ ಪ್ರಕಟಣೆಗೊಂಡ ಮರುದಿನವೇ ಬಿಸಿ ದೋಸೆಯಂತೆ ಮಾರಾಟವಾಗುತ್ತದೆ ಫೋಟೋ ನೋಡಿದ ಎಷ್ಟು ಬಿಳಿಯರಿಗೆ ಈ ಕಪ್ಪು ಸುಂದರಿ ಯಾರು ಎಂದು ಎಂಬ ಪ್ರಶ್ನೆಕಾಡಲರಂಭಿಸುತ್ತದೆ.ಇತ್ತ. ಆಫ್ರಿಕಾದ ಕಪ್ಪು ಸುಂದರಿ ವಾರಿಸ್. ವಿಳಾಸ. ಹುಡುಕಿ. ಛಾಯಾಗ್ರಹಕನ ಕಚೇರಿ ತಲುಪುತ್ತಾಳೆ ಅಲ್ಲೋ ಎಲ್ಲಿನೋಡಿದರು. ಇಂಗ್ಲೀಷಿನಲ್ಲೇ ಮಾತನಾಡುವರು ಛಲ ಬಿಡದ ವಾರಿಸ್ ಇಂಗ್ಲೀಷ್ ಭಾಷೆಯನ್ನು ಕಲಿತು ಪ್ರಸಿದ್ಧ ರೂಪದರ್ಶಿಯಾಗಿ ಬಡ್ತಿಪಡೆಯುತ್ತಾಳೆ ನಾಲ್ಕು ಕೋಣೆಯಲ್ಲಿ ಚಿತ್ರಿಸಿದ ವಾರಿಸಳ ಫೋಟೋಗಳು ಇಡೀ ಲಂಡನ್ ನಗರದ ಸುತ್ತಲೂ ರಾರಾಜಿಸುತ್ತದೆ ಕೋಟಿ ಕೋಟಿ ಹಣ ವಾರಿಸಳಿಗೆ ಹರಿದು ಬರುತ್ತದೆ ಮನೆ ಕಾರು ಬಂಗಲೆ ಎಲ್ಲವನ್ನು ಪಡೆದು ಸುಖದ ಸುಪತ್ತಿಗೆ ಅವಳ ಪಾಲಾಗುತ್ತದೆ ಕೊನೆಗೆ ವಿಶ್ವ ಸಂಸ್ಥೆಯ ರಾಯಭಾರಿಯಾಗುವ ಅವಕಾಶ. ವಾರಿಸಳ. ಪಾಲಿಗೆ ತಾನಾಗೇ ಒಲಿದು ಬರುತ್ತದೆ ಇಸ್ಟ್ಟದರೂ ತಾನು ಬೆಳೆದ ಮರಳುಗಾಡಿನಲ್ಲಿ ಅಸ್ತಿತ್ವದಲ್ಲಿದ್ದ ಕೆಲವು ಅನಿಷ್ಟ ಪದ್ದತಿಗಳು ಅವಳನ್ನು ನಿದ್ದೆಗೇಡಿಸಿದ್ದಹು ಒಮ್ಮೆ ವಿಶ್ವಸಂಸ್ಥೆಯಲ್ಲಿ ವಿಶ್ವದ ಗಣ್ಯರೆಲ್ಲರೂ ಕೂಟದಲ್ಲಿ ಸೇರಿರುವಾಗ ಅವರನ್ನು ಉದ್ದೇಶಿಸಿ ಭಾಷಣ ಮಾಡುವ ಸದಾಅವಕಾಶ ಒದಗಿ ಬರುತ್ತದೆ ಆಗವಾರಿಸ್ ಆಫ್ರಿಕಾದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅಮಾನುಷ ಕ್ರೂರ ಪದ್ದತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾಳೆ ಸೋಮಾಲಿಯದಲ್ಲಿ ಹೆಣ್ಣು ಮಕ್ಕಳಿಗೆ ಯೋನಿ ಛೇದದ ಶಿಕ್ಷೆಯನ್ನು ನಿರ್ಬಂಧಿಸಲಾಗಿದೆ ಎಂಬ ಸುದ್ದಿಯನ್ನು ನಾನು ಕೇಳಬೇಕು ಆ ಸುದ್ದಿ ನನ್ನ ಕಿವಿಗೆ ಬಿದ್ದ ಕ್ಷಣವೇ ನನ್ನ ಜನ್ಮಸಾರ್ಥಕ ಎನ್ನುತ್ತಾಳೆ ಇಡೀ ಸಭಾಂಗಣ ಮೌನವಾಗುತ್ತದೆ ಎಲ್ಲರಲ್ಲೂ ಕಣ್ಣಂಚಿನಲ್ಲಿ ನೀರು ಜಿನುಗುತ್ತಿರುತ್ತದೆ ಓದುಗ ಬಂಧುಗಳೇ ಇವತ್ತಿನ ನಮ್ಮ ಜಿಜನ್ ಯುವಕ ಯುವತಿಯರು ಸಣ್ಣ ಸಣ್ಣ ಸಮಸ್ಯೆಗಳನ್ನು ಎದುರಿಸಲಾಗದೆ ಆತ್ಮಹತ್ಯೆ ಅಂತಹ ಕರಾಳ ಕೂಪಕ್ಕೆ ಬೀಳುತ್ತಿದ್ದಾರೆ ಹೋರಾಟದ ಬದುಕು ಶಾಶ್ವತ ಹೋರಾಟವಿಲ್ಲದ ಬದುಕು ಕ್ಷಣಿಕ ಎಂಬುದನ್ನು ಇಂದಿನ ಯುವಜನತೆ. ಅರ್ಥಮಾಡಿಕೊಳ್ಳಬೇಕಾಗಿದೆ ಪ್ರಯತ್ನವಿದ್ದರೆ ಗೆಲುವು ಪ್ರಯತ್ನ ಪಡುತ್ತಿರಲೇಬೇಕು ಅದು ಉದ್ಯೋಗ. ಅಥವಾ ಬೇರೆ ಏನಾದ್ರು ಆಗಿರಬಹುದು ಎಂಬುದಕ್ಕ್ ಈ. ಆತ್ಮಕಥೆ ಒಂದು ತಮ್ಮ ಉದಾರಣೆ ಇಂತಹ ಆತ್ಮಕಥೆಗಳನ್ನು ಯುವಕ ಯುತಿಯರು ಹೆಚ್ಚು ಹೆಚ್ಚು ಓದಿ ಆತ್ಮವಿಶ್ವಾಸ ಗಳಿಸಿಕೊಳ್ಳುತ್ತ ಗಮನ ಹರಿಸಬೇಕು ಇಂತಹ ಪ್ರೇರಣಾತ್ಮಕ ಪುಸ್ತಕಗಳನ್ನು ಶಾಲಾ ಪಠ್ಯ ಪುಸ್ತಕಕ್ಕೆ ಸೇರಿಸುವ ಜೊತೆಗೆ ಸರ್ಕಾರ ಉಚಿತವಾಗಿ ಶಾಲಾ ಕಾಲೇಜು ಗ್ರಂಥಾಲಯಗಳಿಗೆ ಪೂರೈಸಬೇಕು ಬದುಕು ಬದಲಾಹಿಸಲು ಇದೊಂದು ಉತ್ತಮ ಪುಸ್ತಕ ಓದಿ ನಿಮ್ಮ ಬದುಕು ಬದಲಾದರೆ ಲೇಖಕರ ಶ್ರಮ ಸಾರ್ಥಕ ಓದಿ ಬದಲಾಗಿ ಮುನ್ನಡೆಸಿ? ಧನ್ಯವಾದಗಳು ವೆಂಕಟೇಶ್ ತೂಬಿನಕೆರೆ. ಕೋಡಿಹಳ್ಳಿ. ಬೆಂಗಳೂರು

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

118
Votes
406
Views
4 Months
Since posted

Voting Closed!

Scroll to Top