Submission 1887

ಪುಸ್ತಕದ ಶೀರ್ಷಿಕೆ: ಮಂಕುತಿವiನ ಕಗ್ಗ

ಪುಸ್ತಕದ ಲೇಖಕರು: ಶ್ರೀ ಕವಿತಾಕೃಷ್ಣ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಡಾ.ಪ್ರಸನ್ನಕುಮಾರ್ ಕೆ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಡಿ.ವಿ.ಜಿ ಅವರ ಮಂಕುತಿವiನ ಕಗ್ಗÀ (ತಾತ್ಪರ್ಯ ಸಹಿತ) ಪುಸ್ತಕ ವಿಮರ್ಶೆ ಈ ಪುಸ್ತಕವು ಡಿ.ವಿ.ಜಿ ಎಂದೇ ಖ್ಯಾತರಾದ ದೇವನಹಳ್ಳಿ ವೆಂಕಟರವಣಪ್ಪ ಗುಂಡಪ್ಪನವರು ಬರೆದಿರುವ ಶ್ರೇ಼ಷ್ಟ ಮಂಕುತಿಮ್ಮನ ಕಗ್ಗ ಕೃತಿಯ ಗದ್ಯಾನುವಾದವನ್ನು ಒಳಗೊಂಡಿದೆ. ‘ಕನ್ನಡ ಭಗವದ್ಗೀತೆ’ ಎಂದು ಹೆಸರಾಗಿರುವ ಕಗ್ಗವನ್ನು ಇಲ್ಲಿ ಬಹಳ ಸೊಗಸಾಗಿ, ರಸವತ್ತಾಗಿ ಅರ್ಥೈಸಲಾಗಿದೆ. ಇದು ಮೈಸೂರಿನ ರಾಮಕೃಷ್ಣನಗರದ ತನುಮನ ಪ್ರಕಾಶನದಿಂದ ೨೦೦೩ ರಲ್ಲಿ ಪ್ರಕಟವಾಗಿದೆ. ಈ ಪುಸ್ತಕವು ಚಿಕ್ಕದಾಗಿದ್ದರೂ ಚೊಕ್ಕದಾಗಿದೆ. ಗಾತ್ರದಲ್ಲಿ ಚಿಕ್ಕದಿದ್ದು, ನಮಗೆ ಇಷ್ಟೋಂದು ಚಿಕ್ಕ ಪುಸ್ತಕವೇ! ಅನಿಸಿದರೂ, ವಿಷಯದಲ್ಲಿ ಅಗಾಧವಾದ ವ್ಯಾಪ್ತಿಯನ್ನು ಹೊಂದಿದೆ. ಈ ಪುಸ್ತಕವನ್ನು ಹೂರತರಲು ಎಲೆ ಮರೆಯ ಕಾಯಿಯಂತೆ ಇದ್ದಂತವರು ಹಾಗೂ ಶ್ರಮಿಸಿದಂತಹವರು ಶ್ರೀ ಕವಿತಾಕೃಷ್ಣರವರು. ಈ ಪುಸ್ತಕ ಪ್ರಕಟಿಸಿದ ಪ್ರಕಾಶಕರು ಮಾನಸ ಎಂಬುವವರು. ಮಾನಸ ಅವರು ಹೇಳುವ ಹಾಗೆ “ಸಮಾಜಕ್ಕೆ ಅಪಾರವಾದ ಸತ್ಪರಿಣಾಮವನ್ನುಂಟು ಮಾಡಿರುವ ಈ ಕೃತಿಯನ್ನು ಸರಳೀಕರಿಸಿ ಕನ್ನಡಿಗರ ಕೈಗಿಡಬೇಕೆಂದು ನನ್ನ ಬಹು ದಿನಗಳ ಕನಸಾಗಿತ್ತು. ಆ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಟೊಂಕಕಟ್ಟಿ ನಿಂತವರು ಹೆಸರಾಂತ ಕವಿಗಳಾದ ಶ್ರೀ ಕವಿತಾಕೃಷ್ಣ ಅವರು. ಕಬ್ಬಿಣದ ಕಡಲೆಯಂತಹ ‘ಮಂಕುತಿಮ್ಮನ ಕಗ್ಗ’ವನ್ನು ಸುಲಿದ ಬಾಳೆ ಹಣ್ಣಿನ ತೆರದಿ ಸುಲಲಿತವಾಗಿ ತಾತ್ಪರ್ಯ ಸಹಿತ ಸಿದ್ದಗೊಳಿಸಿಕೊಟ್ಟ ಅವರ ವಿದ್ವತ್ ಪ್ರಭೆಗೆ ನಾನು ಸದಾ ಚಿರಋಣಿ” ಎಂದಿದ್ದಾರೆ. ನಿಜಕ್ಕೂ ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಯಾಕೆಂದರೆ ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗ ಮೂಲ ಕೃತಿಯ ಒಟ್ಟಾರೆ ತಿರುಳನ್ನು ತಿಳಿಯಲು, ಓದಿ ಅರ್ಥೈಸಿಕೊಳ್ಳಲು ಬಹಳಷ್ಟು ದಿನಗಳ ಅವಶ್ಯಕತೆ ಇದೆ. ಆದರೆ ಶ್ರೀ ಕವಿತಾಕೃಷ್ಣ ರವರ ತಾತ್ಪರ್ಯ ಸಹಿತವಾದ ಈ ‘ಮಂಕುತಿಮ್ಮನ ಕಗ್ಗ’ ಪುಸ್ತಕವು ತುಂಬಾ ಸರಳವಾದ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದಾದ ಕ್ರಮ, ವಿಧಾನವನ್ನು ಹೊಂದಿದೆ. ಈ ನಿಟ್ಟಿನಲ್ಲಿ ವಿದ್ಯಾವಾಚಸ್ಪತಿಯಾದ ಶ್ರೀ ಕವಿತಾಕೃಷ್ಣ ಅವರಿಗೆ ಅನಂತವಾದ ಕೃತಜ್ಞತೆಗಳನ್ನು ಸಲ್ಲಿಸಬಹುದು. ಈ ಪುಸ್ತಕದಲ್ಲಿನ ರಚನಾ ಕ್ರಮವು ಎಂತಹ ಓದುಗರನ್ನಾದರೂ ಸಹ ಆಕರ್ಷಿಸಿ, ಓದಿಸುತ್ತದೆ. ಸುಲಭವಾಗಿ ಅರ್ಥವಾಗುವ ಒಂದು ಸರಳ ಪದ್ಯ ಮತ್ತು ಆ ಪದ್ಯದ ಕೆಳಗಡೆ ಅರ್ಥ ವಿವರಣೆ ಇರುವುದರಿಂದ ಓದಲು ಪ್ರಿಯವಾಗುತ್ತದೆ. ಈ ಪುಸ್ತಕವು ಒಟ್ಟು ೩೩೬ ಪುಟಗಳನ್ನು ಹೊಂದಿದ್ದು, ಇದರಲ್ಲಿ ೩೧೯ ಪುಟಗಳಷ್ಟು ಪ್ರಧಾನವಾದ ವಸ್ತುವನ್ನು ಒಳಗೊಂಡಿದೆ. ಇನ್ನುಳಿದ ೧೭ ಪುಟಗಳಲ್ಲಿ ಆರಂಭದ ಪದಗಳನ್ನು ಹೊಂದಿದೆ. ಅಂದರೆ ಪದ್ಯಗಳ ಆರಂಭದ ಪದಗಳನ್ನು ಅಕರಾದಿಯ ಪಟ್ಟಿ ರೂಪದಲ್ಲಿ ಕೊಡಲಾಗಿದೆ. ಹಾಗೆಯೇ ೫ನೇ ಪುಟದಿಂದ ಹಿಡಿದು ೩೧೯ನೇ ಪುಟಗಳವರೆಗೆ ಪದ್ಯ ಮತ್ತು ಬಾವಾರ್ಥಗಳನ್ನು ಒಳಗೊಂಡಿದೆ. ಆದರೆ ಪುಸ್ತಕದಲ್ಲಿ ತುಂಬಾ ಮುಖ್ಯವಾದ ಒಂದು ವಿಶೇಷತೆಯನ್ನು ಕಾಣಬಹುದು; ಕಡ್ಡಾಯವಾಗಿ ಪ್ರತಿಯೊಂದು ಪುಟಕ್ಕೂ ಮೂರು ಮೂರು ಪದ್ಯಗಳು ಬರುವಂತೆ ಅಚ್ಚಾಕಿಸಿರುವುದೊಂದು ವಿಶೇಷ. ಒಂದು ಪುಟಕ್ಕೆ ಮೂರು ಪದ್ಯಗಳು ಮೂಡುವ ಹಾಗೆ ಒಟ್ಟು ೯೪೫ ಪದ್ಯಗಳನ್ನು ಈ ಪುಸ್ತಕದಲ್ಲಿ ನೋಡಬಹುದು. ಈ ಮೇಲೆ ತಿಳಿಸಿದ ಹಾಗೆ ಪುಸ್ತಕದ ಗಾತ್ರ ಚಿಕ್ಕದಿದ್ದರೂ, ಇದರಲ್ಲಿನ ವಿಷಯ ಮಾತ್ರ ಅರ್ಥಗರ್ಭಿತವಾದುದಾಗಿದೆ. ನಿಜಕ್ಕೂ ಪ್ರಕಾಶಕರು ಈ ಪುಸ್ತಕದ ಹೊರಗಿನ ಭಾಗವನ್ನು ಡಿ.ವಿ.ಜಿ ಅವರ ಭಾವಚಿತ್ರದೊಂದಿಗೆ ಮುಖಪುಟವನ್ನು ಅಂದ ಚೆಂದವಾಗಿ ಮುದ್ರಿಸಿದ್ದಾರೆ. ಅಲ್ಲದೆ ಅರ್ಥಪೂರ್ಣವಾದ ರೀತಿಯಲ್ಲಿ ಮುನ್ನುಡಿಯನ್ನು ಬರೆದಿದ್ದಾರೆ. ‘ಗಣ್ಯರ ಕಣ್ಣಲ್ಲಿ ಶ್ರೀ ಕವಿತಾಕೃಷ್ಣ’ ಎನ್ನುವ ಶೀರ್ಷಿಕೆಯೊಂದಿಗೆ ಹಿಂಪುಟ ಮುದ್ರಿತವಾಗಿದೆ. ಹಿಂಬದಿ ಪುಟವು ಶ್ರೀ ಕವಿತಾಕೃಷ್ಣ ಅವರ ಬಗೆಗಿನ ಮಹತ್ವನ್ನು ಕನ್ನಡದ ಪ್ರಸಿದ್ದ ಲೇಖಕರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿ, ವಿಮರ್ಶೆಗಳ ಮೂಲಕ ಕೊಂಡಾಡಿದ್ದಾರೆ. ಹಾಗೆಯೇ ಕಿರಿದರಲ್ಲಿ ಹಿರಿದನ್ನು ಹೇಳುವ ಹಾಗೆ ವಸ್ತುಸ್ಥಿತಿ ಎಂಬುದು ವಿಸ್ತಾರವಾದ ರೀತಿಯಲ್ಲಿ ಹೆಣೆದುಕೊಂಡಿದೆ. ಮೂಲ ಮಂಕುತಿಮ್ಮನ ಕಗ್ಗ ಕೃತಿಗೂ ಹಾಗೂ ತಾತ್ಪರ್ಯ ಸಹಿತ ಈ ಮಂಕುತಿಮ್ಮನ ಕಗ್ಗ ಕೃತಿಗೂ ವಸ್ತುಸ್ಥಿತಿಯಲ್ಲಿ ಅಷ್ಟೇನೂ ವ್ಯತ್ಯಾಸವಿಲ್ಲ. ಎರಡು ಕೃತಿಗಳಲ್ಲೂ ಒಂದೇ ತರಹದ ವಿಷಯವನ್ನು ಕಾಣಬಹುದಾಗಿದೆ. ಈ ಪುಸ್ತಕದಲ್ಲಿ ಜೀವನದ ಮಹತ್ವ, ದೈವದ ಮಹತ್ವ, ಪರಿಸರದ ಮಹತ್ವ, ವೈಚಾರಿಕತೆ, ವೈಜ್ಞಾನಿಕತೆ, ಭ್ರಮಾತ್ಮಕ ಕಲ್ಪನೆ, ಬದುಕಿನಲ್ಲಿ ಚೇತರಿಸಿಕೊಳ್ಳುವ ಗುಣ, ನೋವು-ನಲಿವಿನ ಚಿತ್ರಣ, ಮಾನವೀಯ ಅಂಶಗಳು, ಪ್ರೀತಿ-ಪ್ರೇಮದ ವಿಚಾರಗಳು, ಜಾತಿ ವೈಷಮ್ಯ, ಸಂಸಾರ, ಬಂಧು-ಬಳಗದ ಮಹತ್ವ, ಭಾಷೆ, ನಡೆ ನುಡಿ, ಬದುಕಿನ ಬವಣೆ, ತಾರ್ಕಿಕವಾದ ಆಲೋಚನೆ, ಕೃಷಿ, ಜನಪದ, ಸಾವು-ನೋವು, ಮಾನವ ಜನ್ಮದ ಮಹತ್ವ, ಮನುಷ್ಯನ ವಿವಿಧ ಸ್ವಭಾವಗಳ ಬಗ್ಗೆ, ಆಲೋಚನಾ ಕ್ರಮ, ಮನುಷ್ಯನ ಸ್ವಾರ್ಥ, ಅಹಂಕಾರ, ಮೋಸ, ವಂಚನೆ, ಕುಟಿಲತೆ, ಅಸೂಯೆ ಹಾಗೂ ಪ್ರಾಣಿಗಳ ಬಗೆಗಿನ ಪ್ರೀತಿ ಮುಂತಾದ ಅಂಶಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಮನುಷ್ಯನ ಮನಸ್ಸು ಸೋತಾಗ ಎಚ್ಚರಿಸುವ ಭಾವನೆ, ದೇಶ ಪ್ರೇಮ, ನಾಡಿನ ಪ್ರೇಮ, ಬದುಕಿನ ಜಂಜಾಟ, ಬಡತನ, ದಾರಿದ್ರö್ಯ ಹೀಗೆ ಎಲ್ಲವೂ ಅಡಕವಾಗಿವೆ. ಪುಸ್ತಕದ ಶೀರ್ಷಿಕೆಯಂತೆ ತಾತ್ಪರ್ಯವೂ, ಪರಮಾರ್ಥವೂ ಇದರಲ್ಲಡಗಿದೆ. ಒಟ್ಟಿನಲ್ಲಿ ಮಾನವ ತನ್ನ ದೈನಂದಿನ ಬದುಕಿನಲ್ಲಿ ಅಗತ್ಯವಾಗಿ ಏನೇನು ಕಷ್ಟ ಸುಖ, ದುಃಖ-ದುಗುಡಗಳನ್ನು ಅನುಭವಿಸುತ್ತಾನೋ? ಬದುಕಿಗೆ ಏನೇನು ಬೇಕಾಗುತ್ತದೆಯೋ, ಅದಕ್ಕೆಲ್ಲಾ ಪರಿಹಾರಗಳನ್ನು ನೀಡುವ ಪದಗಳ ಸ್ವಾರಸ್ಯವನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಅಂದರೆ ಮನುಷ್ಯನು ತನ್ನ ಬಾಯಿ ಮೂಲಕ ಯಾವ್ಯಾವ ಪದಗಳನ್ನು ಉಸುರುತ್ತಾನೋ! ಆ ಎಲ್ಲಾ ಪದಗಳಿಗೂ ಒಂದೊAದು ಪದ್ಯವನ್ನು ರಚಿಸಿ ಅದರ ಪರಮಾರ್ಥವನ್ನು ಲೋಕಕ್ಕೆ ಸಾರುವ ಹಾಗೆ ಚಿತ್ರಿಸಲಾಗಿದೆ. ಡಿ.ವಿ.ಜಿ ಅವರ ‘ಮಂಕುತಿಮ್ಮನ ಕಗ್ಗ’ ಕೃತಿಯ ಮೂಲಕ ಮಾನವ ಜೀವನದ ಹಲವು ಮಗ್ಗಲುಗಳನ್ನು ಬಹಳ ಅರ್ಥವತ್ತಾಗಿ ಪ್ರಸ್ತಾಪ ಮಾಡಲಾಗಿದೆ. ಇದನ್ನು ಅಚ್ಚುಕಟ್ಟಾಗಿ ರೂಪಿಸಿ, ವಿವರಣೆ ನೀಡಿ, ಬಾವಾರ್ಥ ಬರೆದು ಕನ್ನಡ ಸಾರಸ್ವತ ಲೋಕಕ್ಕೆ ನೀಡಿ, ಸಾಹಿತ್ಯಾಸಕ್ತರ ಮನಗೆಲ್ಲುವಲ್ಲಿ ಶ್ರೀ ಕವಿತಾಕೃಷ್ಣರವರು ಯಶಸ್ವಿಯಾಗಿದ್ದಾರೆಂದರೆ ತಪ್ಪಾಗಲಾರದು.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಮನುಷ್ಯನ ಮನಸ್ಸು ಸೋತಾಗ ಎಚ್ಚರಿಸುವ ಭಾವನೆ, ದೇಶ ಪ್ರೇಮ, ನಾಡಿನ ಪ್ರೇಮ, ಬದುಕಿನ ಜಂಜಾಟ, ಬಡತನ, ದಾರಿದ್ರö್ಯ ಹೀಗೆ ಎಲ್ಲವೂ ಅಡಕವಾಗಿವೆ. ಪುಸ್ತಕದ ಶೀರ್ಷಿಕೆಯಂತೆ ತಾತ್ಪರ್ಯವೂ, ಪರಮಾರ್ಥವೂ ಇದರಲ್ಲಡಗಿದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಕನ್ನಡ ಸಾರಸ್ವತ ಲೋಕಕ್ಕೆ, ಸಾಹಿತ್ಯಾಸಕ್ತರ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

1
Votes
103
Views
4 Months
Since posted

Voting Closed!

Scroll to Top