ಪುಸ್ತಕದ ಶೀರ್ಷಿಕೆ: ವಿವಾಹ ಬಂಧನ
ಪುಸ್ತಕದ ಲೇಖಕರು: ಸಾಯಿಸುತೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಪ್ರಿಯಾಂಕಾ ತಿಲಕ್ ಕುಮಾರ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 3/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ನಾನು ಇತ್ತೀಚೆಗೆ ಓದಿದ ಕಾದಂಬರಿ ಪುಸ್ತಕ ವಿವಾಹ ಬಂಧನ. ಇದು ಸಾಂಸಾರಿಕ ಜೀವನಕ್ಕೆ ಸಂಬಂಧಿಸಿದಂತ ಕಥೆಯಾಗಿದೆ. ಇಲ್ಲಿ ಮುಖ್ಯವಾಗಿ ಪೋಷಕರು ಮತ್ತು ಈಗಿನ ಮಕ್ಕಳ ವಿವಾಹಕ್ಕೆ ಸಂಬಂಧಪಟ್ಟ ಆಯ್ಕೆಗಳು ಹೇಗಿರಬೇಕು ಮತ್ತು ಅದು ಮನೆತನದ ಗೌರವ ಮತ್ತು ಪ್ರೀತಿ ಕಾಳಜಿಗಳಿಗೆ ಒತ್ತು ಕೊಡುವ ಅಪ್ಪಟ ಭಾರತೀಯ ಸೊಸೆಯ ಲಕ್ಷಣಗಳು ಹೀಗೆ ಇರಬೇಕೆಂಬ ಲಕ್ಷಣಗಳನ್ನು ಎತ್ತಿ ಹಿಡಿದಂತಿದೆ. ಇದರಲ್ಲಿ ಮುಖ್ಯವಾಗಿ ಪೋಷಕರಿಗೆ ತಮ್ಮ ಮಕ್ಕಳು ವೈವಾಹಿಕ ಜೀವನದಲ್ಲಿ ಸುಖ ಸಂತೋಷದಿಂದಿರಲು ಸಂಪ್ರದಾಯಸ್ತ ಸಂಸ್ಕಾರವಂತ ಸುಶಿಕ್ಷಿತ, ಸನ್ನಡತೆಯ ಹೆಣ್ಣು ಮನೆಗೆ ಹೇಗೆ ಬೆಳಕಾಗಬಲ್ಲಳು ಎಂಬುದನ್ನು ಅದ್ಭುತವಾಗಿ ತೋರಿಸಿಕೊಟ್ಟಿದ್ದಾರೆ ಜೊತೆಗೆ ಆಧುನಿಕತೆಗೆ ಒಳಪಟ್ಟು ಅತಿಯಾದ ಸ್ವೇಚ್ಚೆಯಿಂದ ತುಂಬಿದ ಕಥಾನಾಯಕನ ಪ್ರೇಯಸಿಯ ಅಸಹ್ಯ ನಡವಳಿಕೆಗಳು ಹಾಗೂ ಆಕೆ ಆತನ ಹೆಂಡತಿಯಾಗಿದ್ದರೆ ಆತನ ಸಂಸಾರ ಮತ್ತು ಮನೆತನದ ಹೆಸರು ಕೀರ್ತಿಗೆ ಹೇಗೆ ಭಂಗ ತರಬಹುದೆಂದು ಮೊದಲೇ ಊಹಿಸಿದ್ದ ನಾಯಕನ ತಂದೆ ತಾಯಿ ಆತನಿಗೆ ಸುಲಕ್ಷಣ, ಸರ್ವ ಗುಣ ಸಂಪನ್ನೆಯಾದ ಹುಡುಗಿಯನ್ನು ಆರಿಸಿ ತಂದು ನಾಯಕನೊಂದಿಗೆ ಮದುವೆ ಮಾಡಿಸಿ ಮನೆ ತುಂಬಿಸಿಕೊಳ್ಳುತ್ತಾರೆ. ಆದರೆ ನಾಯಕನಿಗೆ ಇದು ಸ್ವಲ್ಪವೂ ಇಷ್ಟವಿಲ್ಲದ ಕಷ್ಟದ ಪೋಷಕರ ಒತ್ತಾಯದ ಮದುವೆ! ಅವಳೋ ಕಥಾ ನಾಯಕಿ ತಂದೆ, ತಾಯಿ, ಅಣ್ಣನ ಮುದ್ದಿನ ರಾಜಕುಮಾರಿ, ತಂದೆಯ ಮಾತಿಗೆ ಬೆಲೆಕೊಟ್ಟು ಮದುವೆಯಾದಳೆನೋ ಸರಿ ಆದರೆ ತನನ್ನನ್ನು ತಿರುಗಿಯೂ ನೋಡದ ಅಪಾರ ಸೌಂದರ್ಯದ ಗಣಿಯಗಿದ್ದ ಆಕೆಗೆ ಮದುವೆ ಎಂಬುದು ಮಡಿಲಲ್ಲಿ ಕಟ್ಟಿ ಕೊಂಡ ಕೆಂಡದ ಹಾಗೇ ಪ್ರತಿ ಕ್ಷಣ ಕೊಲ್ಲುತಿತ್ತು. ಹೀಗೆ ದಿನಗಳು ಉರುಳುತ್ತ ಆಕೆಯ ತಾಳ್ಮೆ, ಸಹನೆ, ರೂಪ, ಲಾವಣ್ಯ, ಸಂಸ್ಕಾರಗಳಿಗೆ ಬೆರಗಾದ ಕಥಾನಾಯಕ ಹಂತ ಹಂತವಾಗಿ ತನ್ನ ದುರ್ನಡತೆಯ ಪ್ರೇಯಸಿಯ ಸಹವಾಸ ತೊರೆದು ಪೋಷಕರ ಆಯ್ಕೆಯನ್ನು ಒಪ್ಪಿ ತನ್ನೊಳಗೆ ಅವರ ಬಗ್ಗೆ ಹೆಮ್ಮೆಪಡುತ್ತ ತನ್ನ ಮುದ್ದಿನ ಹೆಂಡತಿಯೊಂದಿಗೆ ವಿವಾಹ ಬಂಧನಕ್ಕೆ ಸಾಕ್ಷಿಯಾಗುವ ಕ್ಷಣಗಳು ಮಧುರ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಈ ಕಾದಂಬರಿಯಲ್ಲಿ ಅತಿಯಾಗಿ ನನಗೆ ಹಿಡಿಸಿದ ಪಾತ್ರ ಅನುರಾಧಳದ್ದು ಜೊತೆಗೆ ಆಕೆಯ ತಾಳ್ಮೆ, ಸಹನೆ, ಸಂಪನ್ನೆಯ ಗುಣಗಳ ಜೊತೆಗೆ ಆಕೆ ತನ್ನ ಬುದ್ದಿವಂತಿಕೆ ಮತ್ತು ಪ್ರೀತಿಯಿಂದ ತನ್ನ ಗಂಡನನ್ನು ತನ್ನತ್ತ ಒಲಿಸಿಕೊಂಡ ರೀತಿ ಮತ್ತು ಅವಳಿಗಿದ್ದ ವಯಸ್ಸಿಗೆ ಮೀರಿದ ಪ್ರಬುದ್ಧತೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಈ ಪುಸ್ತಕವನ್ನು ಭಾಗಶ: ಮನೋ ಕಥೆ ಕಾದಂಬರಿಗಳನ್ನು ಇಷ್ಟ ಪಡುವವರಿಗೆ ಶಿಫಾರಸ್ಸು ಮಾಡಬಹುದಾಗಿದೆ. ಏಕೆಂದರೆ ಇಲ್ಲಿ ಮನಸ್ಸಿನ ಏರಿಳಿತ, ಚಡಪಡಿಕೆ, ತುಡಿತ,ಮಿಡಿತಗಳ ಸಮತೋಲನದಲ್ಲಿ ಬದುಕಿನ ತಕ್ಕಡಿ ಹೇಗೆ ತೂಗಬಹುದು ಎಂಬ ಕಿರು ಸಂದೇಶ ಇಲ್ಲಿ ಭಾವಪೂರ್ಣ ಮತ್ತು ಅರ್ಥಪೂರ್ಣವಾಗಿ ಸರಳತೆಯಲ್ಲಿ ಮೂಡಿಬಂದಿದೆ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.