ಪುಸ್ತಕದ ಶೀರ್ಷಿಕೆ: ಹೇಳಿ ಹೋಗು ಕಾರಣ
ಪುಸ್ತಕದ ಲೇಖಕರು: ರವಿ ಬೆಳಗೆರೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸುಶ್ಮಿತಾ ಚಿಕ್ಕನರಗುಂದ.
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಅಕ್ಷರ ಮಾಂತ್ರಿಕನ ಅಧ್ಬುತ ಕಾದಂಬರಿ ಹೇಳಿ ಹೋಗು ಕಾರಣ ..... ಇಲ್ಲಿ ದೇವರಿಗೆ ಮೋಸವಾಯಿತು .... ಇಲ್ಲಾ ಇಲ್ಲಿ ಹಿಮದಂತ ಹಿಮವಂತನ ಪ್ರೀತಿಗೆ ಮೋಸವಾಯಿತು .... ಎಲ್ಲರನ್ನೂ ಬಿಟ್ಟು ಬಂದ ಪ್ರಾರ್ಥನಾ ಹಿಮೂವಿನ ಕಾಲಿಗೆ ಹಣೆಹಚ್ಚಿ ನಮಸ್ಕರಿಸಿ ಹೆಬ್ಬೆರಳಿಗೆ ಚುಂಬಿಸುತ್ತಿದ್ದ ಪ್ರಾರ್ಥನಾ ಶ್ರೀಮಂತನ ಆಕರ್ಷಣೆಗೆ ಆಕರ್ಷಿತಳಾದಳು....... ಹಿಮವಂತನನ್ನೂ ದೇವರಂತೆ ಕಂಡ ಕಸೂತಿ ಕಾವೇರಮ್ಮ.... ವೇಶ್ಯೆಯಾಗಿ ನಾಲ್ಕೂ ದಿನವಾದರೂ ಬದುಕಬೇಕೆಂದವಳು ಊರ್ಮಿಳೆ..... ಬುದ್ದಿವಂತ ಶ್ರೀಮಂತ ರಸಿಕ ದೇಬೂ.... ಸದಾ ಜೊತೆಗಿದ್ದ ಗೆಳೆಯ ರಸೂಲ ಜಮಾದಾರ.... ಪ್ರಾರ್ಥನೆಯ ಪ್ರೀತಿ ದೇಬೂವಿನ ತೋಳಲ್ಲಿ.....ಬದಲಾದ ಉರ್ಮಿಳೆಯ ಪ್ರೀತಿ ಹಿಮವಂತನಲ್ಲಿ... ಅಲ್ಲಿ ಹಿಮವಂತನ ಪ್ರಾರ್ಥನೆಯ ಕನಸು ದೇಬುವಿನ ಪಾಲಾಯಿತು...ಇಲ್ಲಿ ಮತ್ತೊಂದು ಹೊಸ ಕನಸು ಚಿಗೂರೋಡೆಯಿತು ..... ದುರಂತ ನಾಯಕನ ನಿಜವಾದ ಪ್ರೀತಿ ಅಂತ್ಯವಾಯಿತು.....
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಪ್ರಾಮಾಣಿಕ, ನಿಷ್ಠಾವಂತ ,ಗಟ್ಟಿಗುಂಡಿಗೆಯ ಹಿಮವಂತನು ಪುಟ್ಟ ಮಗುವಂತೆ ಪ್ರಾರ್ಥನಾಳ ಪ್ರೀತಿಗಾಗಿ ಬಿಕ್ಕಿ ಬಿಕ್ಕಿ ಅಳುವುದನ್ನು ಕಂಡರೆ ಎಂತವರ ಕಣ್ಣಲ್ಲೂ ಕಣ್ಣೀರು ಹರಿಯುವುದು .
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಯಾರು ನಿಜವಾಗಿ ತಾವೂ ಅತಿಯಾಗಿ ಪ್ರೀತಿಸಿದ ತಮ್ಮ ಪ್ರೇಮಿ ಅಥವಾ ಪ್ರೇಯಸಿ ತಮಗೆ ಸಿಗದಿದ್ದರೂ... ಅವರೂ ಎಲ್ಲೆ ಇದ್ದರು ಖುಷಿಯಾಗಿರಲಿ ಅನ್ನುವವರೂ ಈ ಪುಸ್ತಕವನ್ನು ಖಂಡಿತವಾಗಿಯೂ ಓದಬಹುದು...
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.