ಪುಸ್ತಕದ ಶೀರ್ಷಿಕೆ: ಹೇಳಿ ಹೋಗು ಕಾರಣ
ಪುಸ್ತಕದ ಲೇಖಕರು: ರವಿ ಬೆಳಗೆರೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಕಾವ್ಯ ಡಿ.ವಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಹೇಳಿ ಹೋಗು ಕಾರಣ ಕಾದಂಬರಿಯೂ ರವಿ ಬೆಳಗೆರೆಯವರ ಒಂದು ಜನಪ್ರಿಯ ಕಾದಂಬರಿಯಾಗಿದೆ. ಈ ಕಾದಂಬರಿಯೂ ಉತ್ಕಟ ಪ್ರೇಮ ಕಥೆಯನ್ನು ಹೊಂದಿದೆ. ಹಿಮವಂತ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಳು ಪಡುವ ಪಾಡು, ಮುಗ್ಧತೆ ಮತ್ತು ಮೋಸದ ನಡುವಿನ ಹೋರಾಟವನ್ನು ವಿವರಿಸುತ್ತದೆ. ಈ ಕಾದಂಬರಿಯಲ್ಲಿ ಪ್ರಮುಖ ಪಾತ್ರ ಹಿಮವಂತ. ಹಿಮವಂತ ಯಾವ ರೀತಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಾನೆ. ತೋರಿಕೆಯ ಪ್ರೀತಿಯ ಇಲ್ಲದೇ ನಿಜವಾದ ಮನಸ್ಸಿನಿಂದ ಪ್ರೀತಿಸಿದ ಹುಡುಗನ ಮನಸ್ಸಿನ ಮುಗ್ಧತೆ ಯಾವ ರೀತಿ ಇರುತ್ತದೆ ಎಂಬುದನ್ನು ತಿಳಿಯಲಾಗುತ್ತದೆ. ಪ್ರೀತಿ ಅಸಹನೆಯಾಗಿ ಬದಲಾಗುವ ಮುಗ್ಧತೆ ಮೋಸವಾಗಿ ಬದಲಾಗುವ , ಗೊಂದಲ ನಿರ್ಧಾರವಾಗಿ ಬದಲಾಗುವ, ಕನಸುಗಳು ನನಸಾಗಿ ಬದಲಾಗುವ ಸತ್ಯ ಸುಳ್ಳಾಗಿ ಬದಲಾಗುವ ಸಂದರ್ಭಗಳ ಹದವಾದ ಮಿಶ್ರಣವಾಗಿದೆ . ಹಿಮವಂತ ತಾನು ಮಾಡುವ ಕೆಲಸಗಳಿಗೆ ಕಾರಣವಿಲ್ಲದೇ ದ್ವಂದ್ವದ ಬದುಕನ್ನು ಕಟ್ಟಿಕೊಳ್ಳಲು ಹೊರಟವಳು ಆ ನಿರ್ಧಯಿ ಹುಡುಗಿ ಪ್ರಾರ್ಥನಾ . ಇವರಿಬ್ಬರ ನಡುವೆ ನಿಷ್ಠೆಯಂತೆ ಕಂಡದ್ದು ಊರ್ಮಿಳಾವಾದರೆ, ಶ್ರೀಮಂತ ಬದುಕಿನ ಮಧ್ಯದಲ್ಲಿ ಪ್ರೀತಿಯ ಬಲೆಯನ್ನು ಕಟ್ಟಿದವನು ದೇಬಶಿಶು. ಗೆಳೆಯನಾಗಿ ಹಿಮವಂತನ ಶ್ರಮಕ್ಕೆ ರಸೂಲ್ ನಿಂತರೆ , ಹಿಮವಂತನನ್ನು ದೈವತ್ವದಂತೆ ಕಾಣುವವಳು ಕಸೂತಿ ಕಾವೇರಮ್ಮ. ಒಟ್ಟಾರೆಯಾಗಿ ಈ ಕಾದಂಬರಿಯೂ ಪ್ರೀತಿ , ತ್ಯಾಗ , ನೋವು , ದ್ವೇಷ , ಜೀವನದ ಜವಾಬ್ದಾರಿ ಮತ್ತು ಸಂಬಂಧಗಳ ಮಧ್ಯೆ ಚಲಿಸುತ್ತದೆ. ರೋಚಕ ತಿರುವುಗಳ ಜೊತೆ ಭಯಾನಕ ಘಟ್ಟಗಳಾಗಿವೆ. ಪ್ರೇಯಸಿಯಲ್ಲಿ ತಾಯಿಯ ಮಮತೆ ಕಾಣುವ ಸನ್ನಿವೇಶ ಎರಡು ನಿಮಿಷ ಮೌನಿಯನ್ನಾಗಿ ಮಾಡುತ್ತದೆ . ಇಲ್ಲಿ ತಮ್ಮ ಪ್ರೀತಿಗೆ ಮೌನವೇ ಕಾರಣವಾಗಿ ಬಿಡುತ್ತದೆ. ಇಬ್ಬರೂ ಒಬ್ಬರಿಗೊಬ್ಬರು ಮನಸ್ಸು ಬಿಚ್ಚಿ ಮಾತನಾಡುವ ಪ್ರಯತ್ನ ಮಾಡಬೇಕಿತ್ತು . ಮೌನದಿಂದಲೇ ಒಂದು ತಪ್ಪು ಅರ್ಥೈಸುವಿಕೆ ಉಂಟಾಯಿತು. ಇಬ್ಬರಿಗೂ ಒಬ್ಬರ ಬಗ್ಗೆ ತಪ್ಪು ಕಲ್ಪನೆಗಳು ಉಂಟಾದವು. ಅವರಿಬ್ಬರೂ ಒಂದೇ ಜಾಗದಲ್ಲಿದ್ದರೂ ಮನಸ್ಸಿನಿಂದ ದೂರವಿರುತ್ತಾರೆ. ಒಂದು ಸಣ್ಣ ತಪ್ಪಿನಿಂದ ಜೀವನ ಪೂರ್ತಿ ಪಶ್ಚಾತ್ತಾಪ ಪಡುವ ಸಂದರ್ಭ ಬರುತ್ತದೆ. ಒಬ್ಬರು ಪ್ರೀತಿಯನ್ನು ನಿರಾಕರಿಸಲು ಹೇಳದ ಕಾರಣ , ಮತ್ತೊಬ್ಬರು ಅತಿಯಾಗಿ ನೋವನ್ನು ಅನುಭವಿಸುವಂತಾಗಿದೆ. ಪ್ರೀತಿ ಹುಟ್ಟೋಕೆ ಕಾರಣ ಬೇಕಾಗಿಲ್ಲ , ಪ್ರೀತಿಸಿದವರನ್ನು ನಿರಾಕರಿಸಲು ಸಾವಿರ ಕಾರಣಗಳು ಹುಟ್ಟಿಕೊಂಡಿರುತ್ತವೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
"ಈ ಕಾದಂಬರಿಯಲ್ಲಿ ಸ್ಮರಣಿಯ ಪಾತ್ರಗಳು: ಹಿಮವಂತ ಮತ್ತು ಪಾರ್ಥನ ಪ್ರೀತಿಯ - ಪ್ರಣಯದ ಸಂಭಾಷಣೆ."
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ನಿಷ್ಠಾವಂತ ಪ್ರೀತಿ - ಪ್ರೇಮ ಮಾಡಿದವರಿಗೆ ಮತ್ತು ಕಾದಂಬರಿಗಳನ್ನು ಮನಸ್ಸಿನಿಂದ ಇಷ್ಟಪಟ್ಟು ಓದುವವರಿಗೆ ಸೂಕ್ತ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.