ಪುಸ್ತಕದ ಶೀರ್ಷಿಕೆ: ಕರ್ವಾಲೊ
ಪುಸ್ತಕದ ಲೇಖಕರು: ಕೆ.ಪಿ.ಪೂರ್ಣಚಂದ್ರ ತೇಜಸ್ವಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಅಕ್ಷತಾ ಸೊನ್ನಾದ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಮಲೆನಾಡಿನ ಪರಿಸರದಲ್ಲಿ ನಡೆಯುವ ಗಹನ ಚಟುವಟಿಕೆಗಳಿಗೆ ಸಿನಿಮಯ ರೀತಿಯಲ್ಲಿ ತಿರುವುಗಳನ್ನು ಕೊಡುತ್ತಾ ಓದುಗರ ಮೆದುಳಿಗೂ ತನಿಖೆಯ ಕೆಲಸವನ್ನು ವಹಿಸುವ ಪೂಚಂತೆ ಕಥೆಗಳು ಕನ್ನಡ ಸಾಹಿತ್ಯಾಸಕ್ತರಿಗೆ ಅತೀಪ್ರಿಯ.ಇಂತಹ ಕಥೆಗಳಲ್ಲಿ ಕರ್ವಾಲೊ ಒಂದು. ಸಂಶೋಧಕ,ವಿಜ್ಞಾನಿ ಕರ್ವಾಲೊ ಸ್ನೇಹದಿಂದ ಕೋಟಿಗಟ್ಟಲೆ ವರ್ಷಗಳ ಇತಿಹಾಸ ಹೊಂದಿರುವ ಹಾರುವ ಓತಿಯ ನಿಗೂಢ ಜೀವವಿಕಾಸವನ್ನು ತಿಳಿಯಲು ಮಾಡಿದ ಹರಸಾಹಸಗಳು ಓದುಗರನ್ನು ಪ್ರತಿ ಕ್ಷಣಕ್ಕೂ ವಿಸ್ಮಯಗೊಳಿಸುತ್ತವೆ. ಸಮಾಜದ ದೃಷ್ಟಿಯಿಂದ ನಿರುದ್ಯೋಗಿ,ನಿರುಪಯುಕ್ತ ಎನಿಸಿಕೊಂಡಿದ್ದ ಮಂದಣ್ಣನೆ ಈ ಸಂಶೋಧನೆಗೆ ಮೂಲ ಆಧಾರ.ಕಾಡಿನಲ್ಲಿ ನಡೆಯುವ ಎಲ್ಲ ಘಟನೆಗಳನ್ನು ಸಾಮನ್ಯವಾಗಿ ನೋಡುತ್ತಿದ್ದ ಮಂದಣ್ಣ,ಸಂಶೋಧಕ ಕರ್ವಾಲೊರ ಆಸಕ್ತಿಗೆ ಏಣಿ ಹಚ್ಚಿದವ. ಈ ಕಾದಂಬರಿಯಲ್ಲಿ ಲೇಖಕರು ಸಂಶೋಧನೆಗೆ ಹೋಗುವ ಹಾದಿಯಲ್ಲೆ ನಮಗೆ,ಮಲೆನಾಡಿನ ಕಾಡಿನ ವೈಭವ,ಪ್ರಾಣಿ ಪಕ್ಷಿಗಳ ಪರಿಚಯ,ಜನರ ಭಕ್ಷ್ಯಭೋಜನ, ಕರ್ವಾಲೊರ ಮೇಲಿದ್ದ ಸಮಾಜದ ಮನಸ್ಥಿತಿ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಹಾರುವ ಓತಿಯ ದೇಹರಚನೆ,ಆಹಾರಪ್ರವೃತ್ತಿ,ಆವಾಸಸ್ಥಳ,ರೆಕ್ಕೆಗಳ ಬಗ್ಗೆ ಕರ್ವಾಲೊ ಪಡೆದ ಮಾಹಿತಿಗಳು ಜಗತ್ತಿನ ಎಷ್ಟೊ ಸಂಶೋಧಕರಿಗೆ ಅಚ್ಚರಿಯೂಂಟು ಮಾಡಲುಬಹುದು ಮತ್ತು ಮುಂದಿನ ಸಂಶೋಧನೆಗೆ ಬುನಾದಿ ಹಾಕಿಕೊಡಬಹುದು. ಇಲ್ಲಿ ಲೇಖಕರಿಗೆ ಕೋಟಿಗಟ್ಟಲೆ ವರುಷಗಳ ಹಿಂದಿನ ಗುಟ್ಟನ್ನೆಲ್ಲಾ ಹೊಟ್ಟೆಯೊಳಗೆ ಇಟ್ಟಕೊಂಡ ಅಪೂರ್ವ ಜೀವಿಗಳಲ್ಲಿ ಒಂದಾದ ಹಾರುವ ಓತಿಯನ್ನು ನೋಡಿ ಅದನ್ನು ವರ್ಣಿಸಿ ಹೇಳಬೇಕಾದರೆ ಅವರಲ್ಲಿ ಮೂಡುವ ಆಶ್ಚರ್ಯ,ಖುಷಿ ಭಾವನೆಗಳು ಅವ್ಯಕ್ತ ರೂಪದಲ್ಲಿ ವ್ಯಕ್ತಗೊಂಡಿವೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಮಂದಣ್ಣನ ಢ್ರಂ ಸದ್ದಿನ ದೆಸೆಯಿಂದ ಮಂತ್ರಿ,ನೆರೆದ ಜನರ ಮೇಲೆ ಹೆಜ್ಜೇನು ದಾಳಿ ಮಾಡಿ ಮಂತ್ರಿಗಳಿಗೆ ವಾಂತಿ ಬೇದಿ ಶುರುವಾಗಿದ್ದು. ಮಂದಣ್ಣನ ಮದುವೆಯಲ್ಲಿ ಜಗಳದ ಲೋಕದಲ್ಲಿ ಮಿಂದಿದ್ದವರೆಲ್ಲಾ ,ಓಮ್ಮೆಲೆ ಪ್ರಭಾಕರನ ಕ್ಯಾಮೆರಾ ಲೈಟ್ ಮಿಂಚಿದ್ದೆ ತಡ ಎಲ್ಲರೂ ಜಗಳ ಬಿಟ್ಟು ಫೋಟೊಗೆ ಫೋಸು ಕೊಟ್ಟಿದ್ದು ಹಾಸ್ಯಮಯವಾಗಿತ್ತು. ಮಂದಣ್ಣನ ಹೆಸರು ಪೋಲಿಸನವನ ಬಾಯಲ್ಲಿ ಮುಂಡಾನ ಆಗಿದ್ದು ಕನ್ನಡ ಮತ್ತು ಆಂಗ್ಲ ಭಾಷೆಗಿರುವ ವ್ಯತ್ಯಾಸ ತಿಳಿಸಿಕೊಡುತ್ತದೆ. ಪುಸ್ತಕ ಓದುತ್ತಿರುವ ಪ್ರತಿಯೊಬ್ಬರ ಮನಸನ್ನು ಸ್ಥಿರವಾಗಿ ನಿಲ್ಲಲು ಬಿಡದೆ ಗಿಡದಿಂದ ಗಿಡಕ್ಕೆ ಜಿಗಿಯುತ್ತಿರುವ ಹಾರುವ ಓತಿಯ ಚಲನೆಗಳು ಕತೆಗೆ ಮೆರಗು ನೀಡಿದೆ. ಮಂದಣ್ಣ,ಕರಿಯಪ್ಪ,ಎಂಗ್ಟನ ಪಕ್ಕಾ ಜವಾರಿ ಭಾಷೆಗಳು. ಕರಿಯಪ್ಪನ ಶಿಕಾರಿಯ ಹುಚ್ಚುತನದಿಂದ ಕಿವಿ ಕಾಣದಾಗಿ ತೇಜಸ್ವಿಯವರ ಕೈಲಿ ಬೈಸಿಕೊಂಡಿದ್ದು.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಕನ್ನಡ ಪುಸ್ತಕಗಳನ್ನು ಓದಲು ಪ್ರಾರಂಬಿಸಬೇಕು ಅನ್ನುತ್ತಿರುವ ಎಲ್ಲ ವಯೋಮಾನದವರಿಗೂ ಈ ಪುಸ್ತಕ ಸೂಕ್ತ. ಸಿನಿಕೌತುಕಗಳನ್ನು ಪುಸ್ತಕಗಳಲ್ಲಿ ಕಾಣಬಯಸುವವರಿಗೆ ಈ ಪುಸ್ತಕ ಸೂಕ್ತ. ಮಲೆನಾಡು ಕಾಡಿನ ದಟ್ಟತೆ,ಅಲ್ಲಿ ಕಾಣುವ ಪ್ರಾಣಿ ಪಕ್ಷಿಗಳ ಕುರಿತು ತಿಳಿದುಕೊಳ್ಳುವವರಿಗೆ ಸೂಕ್ತ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.