Submission 1862

ಪುಸ್ತಕದ ಶೀರ್ಷಿಕೆ: ಸಂಧ್ಯಾರಾಗ

ಪುಸ್ತಕದ ಲೇಖಕರು: ಅ ನ ಕೃಷ್ಣರಾಯರು

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಜ್ಯೋತಿ ಮಹದೇವಪ್ಪ ಭೈರಪ್ಪನವರ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 3.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಈ ಕಾದಂಬರಿಯೂ ಹೆಣ್ಣು-ಗಂಡು ಎಂಬ ತಾರತಮ್ಯದಲ್ಲಿಯೂ ಸಮಾನತೆಯ ಕಾಣುವ ಒಂದು ಅದ್ಭುತ ಕಾದಂಬರಿಯಾಗಿದೆ. ಈ ಕಾದಂಬರಿಯಲ್ಲಿ ನಾವು ಸಮಾನತೆಯ ನೆಲೆ, ತಾರತಮ್ಯದ ನೆಲೆ, ಪುರುಷ ಪ್ರಾಧಾನ್ಯತೆಯ ನೆಲೆಗಳನ್ನು ಕಾಣಬಹುದು. ರಾಯರು ಹಾಗೂ ಮೀನಾಕ್ಷಮ್ಮನವರಿಗೆ ಮದುವೆಯಾದರೂ ಮಕ್ಕಳಾಗದ ಕಾರಣ ಮೀನಾಕ್ಷಿ ಅಮ್ಮ ತನ್ನ ಗಂಡನಿಗೆ ಇನ್ನೊಂದು ಮದುವೆ ಮಾಡಲು ಒತ್ತಾಯಿಸುತ್ತಾಳೆ ಆಗ ತನ್ನ ಸಹೋದರನ ಮಗಳಾದ ಸಾವಿತ್ರಮ್ಮನನ್ನು ಮದುವೆ ಮಾಡಿಸುತ್ತಾರೆ ನಂತರ ಇಬ್ಬರಿಗೂ ಮಕ್ಕಳ ಗಂಡು ಮಕ್ಕಳಾಗುತ್ತವೆ ಅದರಲ್ಲಿ ಒಬ್ಬ ಅಧಿಕಾರಶಾಹಿಯ ದರ್ಪದಿಂದ ರಾಮಚಂದ್ರನು ಅಹಂಕಾರಿಯಾದರೆ ತನ್ನ ಸನ್ನಡತೆ ಹಾಗೂ ತಂದೆ-ತಾಯಿಯ ಸ್ವಭಾವಕ್ಕೆ ಹೊಂದಿಕೊಂಡು ಲಕ್ಷ್ಮಣ ಸಂಗೀತಗಾರನಾಗುತ್ತಾನೆ. ಮೀನಾಕ್ಷಮ್ಮ ತನ್ನ ಮನೆಯ ವಂಶದ ಉದ್ಧಾರಕ್ಕಾಗಿ ಹೆಣ್ಣು ತನ್ನ ಗಂಡನನ್ನು ಹಂಚಿಕೊಳ್ಳುವ ತ್ಯಾಗಮಯಿಯಾಗಿ ಕಂಡರೆ ಪದ್ಮ ತನ್ನ ಗಂಡನಿಗಾಗಿ ಅಹಂಕಾರ ಪಡುವ ಸನ್ನಿವೇಶವನ್ನು ಕಾಣಬಹುದು. ಅಲ್ಲದೆ ಜಯ ತನ್ನ ಮನೆತನ ಹಾಗೂ ಗಂಡನ ಗೌರವಕ್ಕಾಗಿ ರಾಮಚಂದ್ರ ಕೊಡುವ ಕಿರುಕುಳವನ್ನು ಸಹಿಸಿಕೊಂಡು ತಾನು ಗರ್ಭವಸ್ಥೆಯಲ್ಲಿದ್ದರೂ ರಾಮಚಂದ್ರನ್ ಬಿರುಸಾದ ಮಾತುಗಳನ್ನು ನುಂಗಿಕೊಂಡು ಸಾವಿಗೆ ಈಡಾಗುವ ಸನ್ನಿವೇಶವನ್ನು ಈ ಕಾದಂಬರಿಯಲ್ಲಿ ಕಾಣಬಹುದು. ರಾಮಚಂದ್ರನಿಂದ ಕಷ್ಟ ಅನುಭವಿಸಿದ ಕೊನೆಗೂ ತನ್ನ ಗಂಡ ಲಕ್ಷ್ಮಣ ಅವಳ ಕೊನೆಯ ಆಸೆಯಂತೆ ದೊಡ್ಡ ವಿದ್ವಾಂಸನಾಗಿ ಅವಳ ಆಸೆ ಕನಸುಗಳನ್ನು ಈಡೇರಿಸುತ್ತಾನೆ. ಈ ಕಾದಂಬರಿಯೂ ಹಣ ಅಧಿಕಾರದಾಹದಲ್ಲಿರುವ ಗಂಡಿಗಿಂತ ಹೆಂಡತಿಯ ಆಸೆ ಕನಸುಗಳಿಗೆ ಬೆಂಗಾಲಾಗುವ ಗಂಡು ತನ್ನ ಸಾಧನೆಯ ಶಿಖರಕ್ಕೆರುತ್ತಾನೆ. ಅಲ್ಲದೆ ಈ ಕಾದಂಬರಿ ಹೆಣ್ಣಿನ ತ್ಯಾಗ ಹಾಗೂ ಅವಳ ಪ್ರೀತಿಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಈ ಕಾದಂಬರಿಯಲ್ಲಿ ಮೀನಾಕ್ಷ ಮಾಡ ತ್ಯಾಗ ರಾಯರು ಮೀನಾಕ್ಷಿ ಅಮ್ಮನಿಗೆ ತೋರುವ ಗೌರವ ಪ್ರೀತಿ ಹಾಗೂ ರಾಮಚಂದ್ರನಲ್ಲಿರುವ ಅಹಂಕಾರದಿಂದ ಅವನು ತಾನು ವ್ಯವಹಾರದಲ್ಲಿ ಮೋಸಗೊಂಡ ರೀತಿ ಲಕ್ಷ್ಮಣನ ಜಯಲ ಮೇಲಿದ್ದ ಪ್ರೀತಿ ಅವನನ್ನು ವಿದ್ವಾಂಸನನ್ನಾಗಿ ಅವನು ಸಾಧನೆಗೈದ ರೀತಿಯನ್ನು ಹೇಳುತ್ತದೆ. ರಾಮಚಂದ್ರನು ತನ್ನ ತಂಗಿಯ ಗಂಡನೊಡನೆ ಕೀಳಾಗಿ ನಡೆದುಕೊಂಡು ಕೊನೆಗೆ ಅವನ ಹತ್ತಿರವೇ ತನ್ನ ಅಧಿಕಾರದ ಉಳಿವಿಗಾಗಿ ಕೈಚಾಚುವ ಸನ್ನಿವೇಶವನ್ನು ಈ ಕಾದಂಬರಿಯಲ್ಲಿ ಕಂಡು ಯಾರನ್ನು ಕೀಳಾಗಿ ಕಾಣಬಾರದು ಎಂಬ ತತ್ವವು ಅಡಗಿದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

45
Votes
409
Views
7 Months
Since posted

Voting Closed!

Scroll to Top