ಪುಸ್ತಕದ ಶೀರ್ಷಿಕೆ: ಹೇಳಿ ಹೋಗು ಕಾರಣ
ಪುಸ್ತಕದ ಲೇಖಕರು: ರವಿ ಬೆಳಗೆರೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಪ್ರಕಾಶ್ ಎಸ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ವಿಚಿತ್ರ ಸನ್ನಿವೇಶದೊಂದಿಗೆ ಶುರುವಾಗೋ ಕಥೆ ಎಲ್ಲೂ ಬೋರ್ ಹೊಡಿಸದೆ ಓದಿಸಿಕೊಂಡು ಹೋಗುತ್ತದೆ. ಹಿಮವಂತನ ಪ್ರೀತಿ ಸಾಗರದಷ್ಟು ಆಳ ಅವನ ದ್ವೇಷ ಮುಗಿಲೆತ್ತರದ ಗಿರಿ ಶಿಖರ ಅಲ್ಲಿರುವ ಜ್ವಾಲಾಮುಖಿಯ ಹಾಗೆ. ಪ್ರೇರಣಾಳ ಚಂಚಲ ಮನಸ್ಸು ಹದಿ ಹರೆಯದಲ್ಲಿ ಸಹಜ ಎನಿಸಿದರೂ ಅವಳ ಜಗತ್ತಿನ ತುಂಬಾ ಹಿಮವಂತನ ತುಂಬಿಕೊಂಡಿದ್ದರೂ ಕೆಲವೇ ದಿನಗಳಲ್ಲಿ ದೇಬ್ ನ ಕಡೆಗೆ ದಿಢೀರ್ ಅಂತ ಆಕರ್ಷಿತ ಳಾಗಿದ್ದು ಸ್ವಲ್ಪ ಅಸಹಜ ಅನಿಸಿತು.. ಜಮಾಲ್ ಎಂಬ ಪೇದೆಯ ಪಾತ್ರ ಮೊದಲ್ಲಲ್ಲಿ ಗಂಭೀರವಾಗಿ ಚಿತ್ರಿಸಿದ ರೀತಿಗೂ ಕಡೆ ಕಡೆಗೆ ತೀರ ಕೈ ಆಳಾಂತೆ ಚಿತ್ರಿಸಿದ ರೀತಿಗೂ ಅಜ ಗಜಂತರ ವ್ಯತ್ಯಾಸವಿತ್ತು.. ದೇಬ್ ಪಾತ್ರ ರಕ್ತ ಕಣ್ಣಿರು ಚಿತ್ರದ ಮೋಹನನ ಪಾತ್ರ ನೆನಪಿಸುತ್ತಿತ್ತು. ಹಿಮವಂತನಂತಹ ಪರಿಶುದ್ಧ ಪ್ರೇಮಿ ಇಡೀ ಭೂಲೋಕದಲ್ಲಿ ಭೂತ ಕನ್ನಡಿ ಹಾಕಿ ಹುಡುಕಿದರೂ ಸಿಕ್ಕಾರೆಯೇ ಎಂಬ ಪ್ರಶ್ನೆ ಕೆಲವು ಸನ್ನಿವೇಶಗಳಲ್ಲಿ ಮೂಡುತ್ತದೆ. ಆದರೂ ಹಿಮವಂತನ ಪಾತ್ರ ತುಂಬಾ ದಿನಗಳ ಕಾಲ ಮನಸ್ಸಿನಲ್ಲಿ ಉಳಿಯುವ ಪಾತ್ರ. ತೀರ ಪರಿಶುದ್ಧವಾಗಿ ಪ್ರೀತಿಸಿದರೆ ಅದರಿಂದ ಹುಟ್ಟುವ ದ್ವೇಷವೂ ಅಷ್ಟೇ ತೀವ್ರವಾಗಿ ಇರಬಹುದು ಎಂದು ತೋರಿಸಿ ಕೊಟ್ಟ ಪಾತ್ರ. ಹಿಮವಂತನಲ್ಲಿ ನನಗೆ ತೀರ ಇಷ್ಟವಾದ ಅಂಶಗಳೆಂದರೆ ಅವನ ಜೀವನ ಹೋರಾಟ, ಹೇಗೆ ಕನಸು ಕಾಣಬೇಕು, ಅದಕ್ಕಾಗಿ ಹೇಗೆ ದುಡಿಯಬೇಕು. ಕೊನೆಯಲ್ಲಿ ಥ್ರಿಲ್ಲರ್ ಸಿನಿಮಾ ಕೊಡುವ ರೋಚಕ ಅನುಭವ ನೀಡುತ್ತದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಹಿಮವಂತ ಕ್ರೌರ್ಯಕ್ಕೆ ಬದಲಾದರೂ ಸಹಿತ ಪ್ರಾರ್ಥನಳ ಒಂದು ಧ್ವನಿಗೆ ಸೋತು ಮತ್ತೆ ಮನುಷ್ಯನಾಗುವಂತದ್ದು. ಕೊನೆಗೆ ಅವಳು ಯಾರನ್ನ ದೇವರು ಎಂದು ಪರಿಭಾವಿಸಿ ಕೊಂಡಿದ್ದಳೋ ಅವನೇ ಅವಳನ್ನು ಮತ್ತೆ ದೇಬ್ ನ ಒಂದು ಮಾಡಿ ಅವರ ಪಾಲಿಗೆ ದೇವರಾಗೆ ಉಳಿದುಕೊಳ್ಳುವಂತಹದ್ದು.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.