ಪುಸ್ತಕದ ಶೀರ್ಷಿಕೆ: ಮಾರಿಕೊಂಡವರು
ಪುಸ್ತಕದ ಲೇಖಕರು: ದೇವನೂರು ಮಹಾದೇವ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಚಿಂತ್ರಪಳ್ಳಿ ಕೊಟ್ರೇಶ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಬಂಡಾಯ ಸಾಹಿತ್ಯ ಪ್ರಪಂಚದಲ್ಲಿ ಪ್ರಮುಖ ಬರಹಗಾರರಾಗಿ ಗುರುತಿಸ್ಪಡುವ ದೇವನೂರು ಮಹಾದೇವ ಅವರ ಕಥೆಯೇ ಮಾರಿಕೊಂಡವರು. ಕನ್ನಡ ಸಾಹಿತ್ಯದಲ್ಲಿ ಯಾವತ್ತೂ ಜೀವಂತವಿರುವ ಈ ಕಥೆ ಹಣವಂತರ ಆಶ್ರಯದಲ್ಲಿರುವ ಒಂದು ಕುಟುಂಬ ಹೇಗೆ ತನ್ನ ಅಸ್ಥಿತ್ವವನ್ನು ಕಳೆದುಕೊಂಡು ಅಸಾಯಕ ಪರಿಸ್ಥಿತಿಯಲ್ಲಿ ಎಲ್ಲಾ ನೋವುಗಳನ್ನು ಮೌನವಾಗಿಯೇ ಸಹಿಸುತ್ತದೆ ಎಂಬ ದುರಂತ ಚಿತ್ರಣವನ್ನು ಈ ಕಥೆಯು ವ್ಯಕ್ತಪಡಿಸುತ್ತದೆ. ದಿಕ್ಕು-ದೆಶೆ ಕಾಣದೆ ಮುಂದಿನ ದಾರಿ ಯಾವುದೆಂದು ಗೊತ್ತಾಗದೆ ಹೆಂಡತಿ ಲಕ್ಷ್ಮೀಯೊಡನೆ ನೆಲೆಯೊಂದನ್ನ ಹುಡುಕಿ, ಕೈಯಲ್ಲಿ ಬಿಡಿಗಾಸೂ ಇಲ್ಲದೆ ಮೈಸೂರು ತಲಿಪಿ ಅಲ್ಲಿಂದ ನಂಜನಗೂಡಿಗೆ ಹೋಗುವ ರೈಲನ್ನು ಹತ್ತಿದಾಗ, ಟಿಕೇಟು ಕೇಳಲು ಬಂದವರ ಕೈಯಲ್ಲಿ ಸಿಕ್ಕು ,ಸಮಸ್ಯೆಯಲ್ಲಿರುವಾಗ ಅವರ ಸಹಾಯಕ್ಕೆ ಬಂದವನೆ ದ್ಯಾವನೂರಿನ ಗೌಡರು. ಬೀರ-ಲಕ್ಷ್ಮೀಯ ಪೂರ್ವಪರವನ್ನೆಲ್ಲ ವಿಚಾರಿಸಿ , ಹೇಗೋ ತಮ್ಮ ತೋಟದಲ್ಲಿ ಕೆಲಸ ಮಾಡಲು ಆಳು ಸಿಕ್ಕರಲ್ಲ ಎಂದು ಅವರ ತೋಟದ ಮನೆಗೆ ಕರೆದೊಯ್ದದನು. ಜಮೀನ್ದರಿ ವ್ಯವಸ್ಥೆ ನಿರ್ಗತಿಕರಿಗೆ ನೆಲೆಯನ್ನು ಕೊಟ್ಟಂತೆ ಕಂಡರೂ ಅದರ ಆಳದಲ್ಲಿ ಮಾಡುವ ಶೋಷಣೆ ಬಹಳ. ಗೌಡರು ಅವರಿಗೇನೋ ಇರಲಿಕ್ಕೆ ಆಶ್ರಯ ನೀಡಿ ಕೆಲಸ ಕೊಟ್ಟರು ಆದರೆ, ಅಸಾಯಕತೆ, ದರಿದ್ರ ಅವಸ್ಥೆಯಲ್ಲಿ ಬಿದ್ದ್ರುವಂತಹ ಈ ಜನ , ತಾವು ಮಾಡುವಂತಹ ಪರಿಶ್ರಮ್ಮಕ್ಕೆ ತಕ್ಕಂತಹ ಕೂಲಿಯನ್ನು ಪಡೆಯುತ್ತಾರೆಯೇ? ಎಂಬುದ ಇಲ್ಲಿ ಪ್ರಶ್ನೆ. ಅಲ್ಲದೆ ಗೌಡರ ಮಗನಾದ ಕಿಟ್ಟಪ್ಪ ಇಲ್ಲಿ ಅವರ ಬಡತನದ ಅಸಾಯಕತೆಯನ್ನು ಹೇಗೆ ದುರ್ಬಲಮಾಡಿಕೊಳ್ಳುತ್ತಾನೆ ಎಂಬುದನ್ನು ಗಮನಿಸಿದಾಗ, ಉಳ್ಳವರ ಕೈಯಲ್ಲಿ ಇಲ್ಲದವರ ಶೋಷಣೆ ಹೇಗೆಲ್ಲಾ ನೆಡೆಯುತ್ತದೆ ಎಂಬುದನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಧಮನಿತ ಲೋಕದಲ್ಲಿ ಪ್ರತಿಭಟಿಸುವ ಶಕ್ತಿಯಿಲ್ಲದೆ ಅಸಾಯಕರಾಗಿ,ತುಳಿತಕ್ಕೆ ಒಳಗಾಗಿದ್ದೇವೆ ಎಂಬುದ್ನೂ ಅರಿಯದೆ ಶೋಷಣೆಗೆ ಒಳಗಾಗಿರುವರೂ ಇದ್ದಾರೆ.ಇದಕ್ಕೆಲ್ಲ ಕಾರಣಗಳು ಅಸಾಯಕತೆಯಾದರೆ ಇನ್ನೋಂದು ಅಜ್ಙಾನ, ಮೌಢ್ಯಗಳು ಕೂಡ.ಮಾರಿಕೊಂಡವರು ಪ್ರಧಾನ ಪಾತ್ರವಾದ ಭೀರ ಮತ್ತೆ ಲಕ್ಷ್ಮೀಯೇ ಇಲ್ಲಿ ಮಾರಿಕೊಂಡವರು. ತಮ್ಮ ಅಸ್ತಿತ್ವಕ್ಕೆ ದಕ್ಕೆ ಬಂದಿದ್ರೂ ದರಿದ್ರ, ಅಸಾಯಕತೆ ಅವರ ಸ್ವಾಭಿಮಾನವನ್ನು ಕಟ್ಟಿಹಾಕಿದೆ. ಕಾಲೇಜ್ ಗೆ ಸೇರಿ ಗೆಳೆತಿಯ ಹಿಂದೆ ಬಿದ್ದಿದ ಕಿಟ್ಟಪ್ಪ ಆಕೆಯ ಹುಚ್ಚನ್ನು ಬಿಡದೆ, ಮದುವೆಯನ್ನೂ ಆಗದೆ ಬಡ ಹೆಣ್ಣುಮಕ್ಕಳನ್ನು ತನ್ನ ತೆವಲಿಗೆ ಬಳಸಿಕೊಳ್ಲೂತ್ತಿದ್ದ. ಕೂತು ಉಂಡರೂ ಕಾಲಿ ಆಗದೆ ಇರುವಂತಹ ಆಸ್ತ ಇದ್ದರೂ ಅದರಂತೆ ಬದಿಕಿದವನಲ್ಲ. ಯಾವಾಗಳು ಬೀರನ ಗುಡಿಸಲಿನ ಹತ್ತರವೇ ಬಿದ್ದಿರತದತಾನೆ. ಬರಬೇಡ ಎಂದು ಹೇಳಲೂ ಬೀರನಿಗೂ ಆಗದು. ಈ ಮೂಲಕ ಕಿಟ್ಟಪ್ಪ ಭೀರನ ಮನೆಗೆ ಹೊತ್ತಿಲ್ಲದ ಹೊತ್ತಿನಲ್ಲಿ ಬಂದು ಹೋಗುವವ ಎಂದು ಗೊತ್ತಿದ್ದರೂ ಏನೂ ಮಾಡದ ಪರಿಸ್ಥಿತಿ. ಎಂದಿನಂತೆ ಒಂದು ದಿನ ರಾತ್ರಿಯಾಗುತ್ತಿದ್ದಂತೆ ಕಿಟ್ಟಪ್ಪ ಬರಬೇಕ್ಕಿತ್ತಲ್ಲ, ಇಷ್ಟೋತ್ತು ಅದ್ರೂ ಬಂದಿಲ್ಲ ಎಂದು ಯೋಚಿಸುತ್ತಿರುವಾಗ ಮಿಲ್ಲಿನ ಹುಡುಗ ಬಂದು ಇವತ್ತು ಬರೋದಿಲ್ಲವಂತೆ ಎಂದು ಹೇಳಿ ಹೋಗುತ್ತನೆ. ಇದರಿಂದ ತಿಳಿಯುತ್ತೆ ಹೊತ್ತಾಗುತ್ತಿದ್ದಂತೆ ಕಿಟ್ಟಪ್ಪ ಹಾಜರು ಹಾಕ್ತ ಇದ್ದ ಅಂತ. ಇದನ್ನು ಲಚ್ಚಿಗೆ ಹೇಳಿ ಬಾಟಲಿ ಹಿಡಿದು ಕಂಠಪೂರ್ತಿ ಕುಡಿಯಿತ್ತಿದ್ದ ಭೀರನಿಗೆ ಲಚ್ಚಿ ವಸಿ ಕುಡಿ ಎಂದಾಗ ಆತನ ಆಕ್ರೋಶ ಹೊರಗಡೆ ಬರುತ್ತದೆ. "ಇವತ್ತು ಇರುವಷ್ಟಿ ಕುಡಿದು ತಿಂದುನಿನ್ನ ಸುಲಿದು ಹಾಕುತ್ತೀನಿ" ಎಂದು ಹೇಳುವುದ ಗಮನಿಸಿದಾಗ ಭೀರನಿಗೆ ಲಚಗಚಿಯ ಮೇಲೆ ಕೋಪವಿದ್ದದ್ದು ಯಾಕೆ ಅನ್ನುವ ಪ್ರಶ್ನೆ ನಮಗೆ ಮೂಡುವಂತದ್ದು. ಜೀವದ ಮೇಲಿನ ಆಸೆಯನ್ನೇ ತೊರೆದು ಭಿರ ಕುಡಿಯಿತಲೇ ಇದ್ದು, ನಂತರ ಮಾತು ಶುರುವಾಯ್ತು.ತಾನು ಕರೆದಾಗ ಪಕ್ಕಕ್ಕೆ ಬರದ ಲಚ್ಚಿಯ ಕುರಿತು, "ನಾ ಕರದ್ರೂ ಬರಾಕಿಲ್ವಮ್ಮಿ? ನನ್ನೋಂದಿಗೆ ಯಾಕ್ ಮಾತಾಡ್ತಿ ಹೇಳು? ಕಿಟ್ಟಪ್ಪನೊಂದಿಗೆ ಮಾತಾಡೋದು ಬಿಟ್ಟು, ಎಷ್ಟಾದೃ ಅವ ನಿನ್ ಮಿಂಡ ಅಲ್ವಾ?" ಎಂದಾಗ ಲಚ್ಚಿಯ ಮೈಕೈ ನಡುಗಿದವು."ನಿಮಗೆ ಒಂದು ಗತಿ ಕಾಣಿಸ್ತೀನಿ ಕಂದಾ, ಈಗ ಏನಾಯ್ತು ತಕ್ಕೋ.... ಬೆಳಗಾಗೋದಿಲ್ವಾ? ನಾಳೆ ಅವ್ನು ಬರೋದೆ ಇಲ್ವಾ? ಬಂದೇ ಬತ್ತಾನೆ ಮಿಂಡಾಗಾತಿ ಮುಖ ನೋಡೋಕೆ.ಮಚ್ಚು ಮಡಿಗಿವಿನಿ ತೊಲೆಮಾಲೆ ,ರಡಿ ರಡಿಯಾಗೈತೆ" ಎಂದಾಗ ಬೀರನಿಗೆ ಎಲ್ಲವೂ ಗೊತ್ತಿತ್ತು ಆದರೂ ಸುಮ್ಮನಿದ್ದ. ಅಂದರೆ ಲಚ್ಚಿ ಮತ್ತೆ ಕಿಟ್ಟಪ್ಪ ಇವರ ನಡುವಿನ ಸಂಬಂಧ ಗೊತ್ತಾದರೂ ಕೂಡ ಏನೂ ಮಾಡದ ಅಸಾಯಕತನದ ಪರಿಸ್ಥಿತಿ. ಕಿಟ್ಟಪ್ಪನ್ನು ಚಳಿ ಇದೆ ಎಂದೂ ಅವರಿಗೆ ನೀಡಿದ ರಗ್ಗನ್ನು ಲಚ್ಚಿಯು ತನಗೇ ಬೇಕೆಂದು ಎಳೆದುಕೊಂಡಿದ್ದಳು.ಇದರಿಂದ ಗೊತ್ತಾಗುತ್ತದೆ ಲಚ್ಚಿಯು ಕಿಟ್ಟಪ್ಪಮ ತೋಳ ಸೆರೆಯಾಗಿದ್ದಳು ಎನ್ನುವುದು. ಲೇಖಕರು ಹೇಳೂವಂತಹ ಮಾತು ಇಡೀ ಕಥೆಯ ಸಾರವನ್ನು ಪ್ರತಿಧ್ವನಿಸುತ್ತದೆ. "ಕಿಟ್ಟಪ್ಪ ಕೊಟ್ಟ ರಗ್ಗು ಲಚಿಮಿಯ ಕವಿಚಿಕೊಂಡಿದೆ, ಕಿಟ್ಟಪ್ಪ ಕಟ್ಟಿಸಿರುವ ಮನೆ ಇಬ್ಬರನ್ನೂ ಕವಿಚಿಕೊಂಡಿದೆ" ಎನ್ನುವ ಮಾತಿನಲ್ಲಿ ಕಿಟ್ಟಪ್ಪನ ಶ್ರೀಮಂತಿಕೆಯಲ್ಲಿ ಭೀರನ ಕುಟುಂಬದ ಅಸಾಯಕತೆಯನ್ನು ಕೊಂಡುಕೊಂಡಿದೆ ಎಂಬುದು ಗೊತ್ತಾಗುತ್ತದೆ. ಕಿಟ್ಟಪ್ಪನಿರದ ಹೊತ್ತಲ್ಲಿ ಕುಡಿದ ನಶೆಯಲ್ಲಿ ಲಚ್ಚಿಗೂ ಕಿಟ್ಟಪ್ಪನಿಗೂ ನಡುವೆ ಇದ್ದ ಸಂಬಂಧವನ್ನು ಕುರಿತು ತಕರಾರು ಮಾಡುವ ಬೀರ, ಸರಾಯಿಯ ಅಮಲು ಇಳಿದ ಮೇಲೆ ಏಕೆ ಮೌನಿಯಾಗುತ್ತಾನೆ? ಎಲ್ಲಾ ವಿಷಯವೂ ಗೊತ್ತಿದ್ದರೂ ಗೊತ್ತಿಲ್ಲದಂತೆ ಏಕೆ ನಟಿಸಿದ? ಈ ಎಲ್ಲಾ ಪ್ರಶ್ನೆಗಳಿಗೆ ನಮಗೆ ಉತ್ತರವೆಂದಾಗ ಕಥೆಯ ಶೀರ್ಷೀಕೆಯೇ ಹೇಳೂವಂತೆ ಇವರು ಮಾರಿಕೊಂಡವರು. ಲಚ್ಚಿಮಿಯು ತನ್ನನ್ನು ಕಿಟ್ಟಪ್ಪನಿಗೆ ಮಾರಿಕೊಂಡಿದ್ದಾಳೆ.ಬೀರ ಎಲ್ಲವನ್ನೂ ತಿಳಿದಿದ್ದರೂ ಅಸಾಯಕನಾಗಿದ್ದಾನೆ
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
೧) ಗೌಡರು : ಕಿಟ್ಟಪ್ಪನಿಗೆ ಆಶ್ರಯ ಕೊಡುವುದಾದರೂ ಅವರ ಮನದಿಂಗಿತ ಬೇರೆಐೇ ಆಗಿರುತ್ತದೆ. ಅವರಿಗೆ ಇರುವುದಕ್ಕೆ ಗುಡಿಸಲನ್ನು ಕೊಟ್ಟು ದುಡಿಸುವ ಪ್ರಯತ್ನ. ೨) ಕಿಟ್ಟಪ್ಪ : ಓದು ಬರಹ ಕಲಿತವನಾದರೂ ಕೂಡ ಕಾಲೇಜ್ ನಲ್ಲಿ ಹುಡುಗಿಯರ ಸಹವಾಸ ಮಾಡಿ, ದುಶ್ಚಗಳನ್ನು ಕಲಿತು, ಯಾವಾಗಲೂ ಅಮಲಿನಲ್ಲೇ ತೇಲಾಡುವ ವ್ಯಕ್ತಿ. ೩) ಭೀರ : ದರಿದ್ರ ಬದುಕು, ಅಸಾಯಕತೆ ಜೀವನ, ಬಡತನವನ್ನು ಎದುರಿಸುವ ಮೂಕ ಪ್ರಾಣಿ. ಎಲ್ಲಾ ವಿಷಯಗಳು ತಿಳಿದಿದ್ದರೂ ಕೂಡ ಗೊತ್ತಿಲ್ಲದಂತೆ ನಟಿಸುವವ. ಲಕ್ಷ್ಮೀ : ಗೌಡರ ಮಗನಾದ ಕಿಟ್ಟಪ್ಪನ ತೆಕ್ಕೆಗೆ ಬಿದ್ದ ಹೆಂಗಸು. ಭೀರನ ಹೆಂಡತಿ. ತನಗರಿವಿಲ್ಲದೆ ಬೇರೊಬ್ಬ ಗಂಡಸಿನ ಸಂಪರ್ಕಕ್ಕೆ ಮನಬಯಸುವವಳು.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.