ಪುಸ್ತಕದ ಶೀರ್ಷಿಕೆ: ಪರ್ವ
ಪುಸ್ತಕದ ಲೇಖಕರು: ಎಸ್. ಎಲ್. ಬೈರಪ್ಪ.
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸುಧಾ ಮಳಲಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಮಹಾಭಾರತದ ಕಥೆಯನ್ನು ಪೌರಾಣಿಕ ಹಿನ್ನೆಲೆಯಲ್ಲಿ ಕಂಡ,ದೈವದ ಸ್ಥಾನದಲ್ಲಿ ಪೂಜಿಸಿದ ನನಗೆ ಪರ್ವದಲ್ಲಿ ಸಹಜ ಮಾನವ ಬದುಕಿನೊಂದಿಗೆ ಹೋಲಿಸಿಕೊಂಡು ಬರುವ ವಿವರಣೆ ನನ್ನನ್ನು ಮೂಕ ವಿಸ್ಮಿತಳನ್ನಾಗಿ ಮಾಡಿದೆ. ಕುಂತಿ ಮಕ್ಕಳ ಹುಟ್ಟು,(ಪಾಂಡವರ) ಕಲ್ಪನೆಗೂ ನಿಲುಕದ ನಿಗೂಢ ರಹಸ್ಯ, ಮಾನವನ ಸಹಜ ಸೃಷ್ಟಿ ಕ್ರಿಯೆಯನ್ನು ನನ್ನ ಕಲ್ಪನೆಗೆ ನಿಲುಕುವಂತೆ ಮಾಡಿತು. ಕೌರವರು ಮಾಡುತ್ತಿದ್ದ ಅಸಹನಿಯ ಕಾರ್ಯಗಳೆಲ್ಲವನ್ನು ಸಹಿಸಿಕೊಳ್ಳುವ ತಾಳ್ಮೆ, ಸಹನೆ ಜೊತೆಗೆ ಹೊಂದಾಣಿಕೆ ಇವೆಲ್ಲ ಮಾನವನ ಸಹಜ ಸ್ವಭಾವಕ್ಕೆ ತದ್ವಿರುದ್ಧ ಎನಿಸುವ ಭೀಷ್ಮರ ಮಹಾನ್ ವ್ಯಕ್ತಿತ್ವ ಎಲ್ಲಕ್ಕಿಂತ ಹಿರಿದೆನಿಸುತ್ತದೆ. ಕುರುಕ್ಷೇತ್ರ ಯುದ್ಧ ನಡೆಯುವ ಸಂದರ್ಭದಲ್ಲಿ ಸೈನಿಕರ ಊಟ-ವಸತಿ ಸಾಮಾನ್ಯ ಬದುಕಿನಲ್ಲಿ ನಡೆಯುವ ಸಭೆ ಸಮಾರಂಭ ಮುಗಿದ ಮೇಲೆ ಆಗುವ ಅವ್ಯವಸ್ಥೆಯಂತೆ ಅಲ್ಲಿಯೂ ವ್ಯವಸ್ಥಿತವಾಗಿರಲಿಲ್ಲ ಎನ್ನುವುದು ಗಮನಿಸುವಂತಹದ್ದು. ಒಟ್ಟಾರೆ ಮಹಾಭಾರತದ ಪಾತ್ರಗಳು ಮನುಷ್ಯ ಗುಣ,ಸ್ವಭಾವ, ನಡವಳಿಕೆ,ಆಸೆ, ಆಕಾಂಕ್ಷೆಗಳಂತೆ ಬಿಂಬಿತವಾಗಿರುವುದು ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗುತ್ತದೆ. ಮತ್ತೆ ಮತ್ತೆ ಓದುವಂತೆ ಮಾಡುತ್ತದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಕುಂತಿ /ಭೀಷ್ಮ /ಸಂಜಯ /ಧರ್ಮರಾಜ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಯುವಕರು, ಎಲ್ಲಾ ವರ್ಗದ ಓದುಗರು
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.