Submission 1852

ಪುಸ್ತಕದ ಶೀರ್ಷಿಕೆ: ಅತೀತ

ಪುಸ್ತಕದ ಲೇಖಕರು: ಅರ್ಜುನ್ ದೇವಾಲದಕೆರೆ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಬೃಂದಾ ಹೆಚ್. ಜಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಮಲೆನಾಡಿನ ತಪ್ಪಲಿನಲ್ಲಿರುವ ಸಕಲೇಶಪುರದ ಹತ್ತಿರ ಇರುವ ಊರು ದೇವಪುರ. ಈ ಊರಿನ ಇತಿಹಾಸವೇ ಭಯಾನಕ ಹಾಗೂ ಅಚ್ಚರಿ ಮೂಡಿಸುವಂಥದು. ತನ್ನ ಜೀವ ಹೋದರೂ ಸರಿ ಜೀವಕ್ಕೆ ಜೀವಕೊಡುವ ಪವಿತ್ರ ಆತ್ಮವನ್ನ ಉಳಿಸಿಕೊಳ್ಳಬೇಕೆಂದು ಹೋರಾಡುವ ಕಥಾನಾಯಕ ಮಹಂತ್. ವಯಸ್ಸಿಗೆ ಮೀರಿದ ಪ್ರಬುದ್ಧತೆ ಹಾಗೂ ದೈವದ ಕುಡಿಯಾಗಿದ್ದ ಹುಡುಗಿ ಹೃನ್ಮಯಿ. ಎಳೆಯ ವಯಸ್ಸಿನಲ್ಲಿ ಮೂಡಿದ ಆಕರ್ಷಣೆ ಪ್ರಾಢವಾಸ್ಥೆಗೆ ಬರುವ ಮುನ್ನವೇ ಅವನೇ ನನ್ನ ಬಾಳ ಕಥೆಗಾರನೆಂದು ತನ್ನ ಮನಸ್ಸಿನಲ್ಲಿ ಅವನ ಸ್ಥಾನ ಭದ್ರಪಡಿಸಿಕೊಂಡು ಪ್ರೇಮ ನಿವೇದನೆಯನ್ನು ಮಾಡಿಕೊಂಡಾಗ ಹೃನ್ಮಯಿಯ ವಯಸ್ಸು ಹದಿಮೂರು. ನಂತರ ನಾಯಕ ಮತ್ತು ನಾಯಕಿ ಒಮ್ಮತದಿಂದ ತಮ್ಮ ಕನಸುಗಳನ್ನು ಸಕಾರಗೊಳಿಸಿಕೊಂಡು ಮದುವೆಯೆಂಬ ಮೂರಕ್ಷರದ ನಂಟನ್ನು ಬೆಸೆಯೋಣ ಎಂಬ ನಿರ್ಧಾರದಿಂದ ಮುಂದೆ ಸಾಗುತ್ತಿರುವಾಗ ಇದ್ದಕ್ಕಿದ್ದ ಹಾಗೆ ಕೆಲಸದ ವೇಳೆ ಬಂದ ಅಪ್ಪನ ಕರೆ ತುರ್ತಾಗಿ ಊರಿಗೆ ಬಂದ ಮಹಂತ್ಗೆ ಬರಸಿಡಲಿನಂತೆ ಕಿವಿಗೆ ಅಪ್ಪಳಿಸಿದ ಸುದ್ದಿ ಹೃನ್ಮಯಿಯ ಆತ್ಮಹತ್ಯೆ!!! ಇಲ್ಲಿಂದ ಕಥೆಯ ಇನ್ನೊಂದು ಅಯಾಮ ಪ್ರಾರಂಭ. ಸಾಮಾನ್ಯನೊಬ್ಬನು ಅಸಾಮಾನ್ಯ ಅಘೋರಿಯಾದ ಕಥೆ. ವಿಜ್ಞಾನದಿಂದ ಎಲ್ಲವೂ ಸಾಧ್ಯವೆಂದುಕೊಂಡವನಿಗೆ ವಿಜ್ಞಾನಕ್ಕೆ ಸವಾಲೆನ್ನುವ ಅಚ್ಚರಿಯ ಲೋಕ ಕೈಬೀಸಿ ಕರೆಯುತ್ತಿತ್ತು ಅದುವೇ ಅತೀತ ಲೋಕ. ಅಚ್ಚರಿಯ ಲೋಕವನ್ನು ಅಲೆಗಳೆಯುತ್ತಿದ್ದವನನ್ನು ಆ ಹಾದಿಯಲ್ಲಿ ಹೋಗುವ ಹಾಗೆ ಮಾಡಿದು ಹೃನ್ಮಯಿಯ ಪ್ರೀತಿ. ಅತೀತ ಲೋಕದ ವಿದ್ಯೆ ಕಲಿತ ನಂತರ ಆಕರ್ಷಣೆಗಳಿಗೆ ಕೊರತೆಯೇ ಇಲ್ಲ, ಆದರೆ ವಿದ್ಯೆಯನ್ನು ಒಳಿತಿಗೆ ಉಪಯೋಗಿಸಿದ್ದರೆ ಜೀವನದಲ್ಲಿ ವಿಜಯೀಭವ, ಇಲ್ಲವಾದಲ್ಲಿ ವಿನಾಶ ಕಟ್ಟಿಟ್ಟ ಬುತ್ತಿ. ಪರಿಚಯವಿಲ್ಲದ ಲೋಕದ ಬಗ್ಗೆ ಪ್ರೇಮಕಥೆಯ ಮೂಲಕ ಸರಳವಾಗಿ ವಿವರಿಸಿದ್ದಾರೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಈ ಕಾದಂಬರಿಯಲ್ಲಿ ಓದಿದ ಮೇಲೂ ಕಾಡುವಂತಹ ಸಾಲುಗಳು - ಗೆದ್ದರೆ ಜೀವನ, ಸೋತರೆ ಸಾವು - ಹೊರಟು ಹೋದವರನ್ನು ನೆನೆದು ಅಳುವುದಕಿಂತ, ನಿಮ್ಮ ಪ್ರೀತಿಯ ಭಿಕ್ಷೆ ಬೇಡುತ್ತಿರುವವರಿಗೆ ದಾನಿಯಾಗಬಾರದೆ? ಜೀವನ ಪಣಕ್ಕಿಟು ತನ್ನ ಜೀವಕ್ಕೆ ಜೀವಕೊಡೊ ಆತ್ಮವನ್ನ ಉಳಿಸಿಕೊಳ್ಳುವ ರೀತಿ ಅದ್ಭುತ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಪ್ರೇಮಕಥೆಯ ಜೊತೆ ಅಚ್ಚರಿಯ ಲೋಕ ಬಗ್ಗೆ ತಿಳಿದುಕೊಳ್ಳುವ ಹಾಗೂ ಪ್ರೇಮಕಥೆ ಓದಲು ಇಷ್ಟ ಪಡುವವರಿಗೊಂದು ಒಳ್ಳೆಯ ಪುಸ್ತಕ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

162
Votes
919
Views
7 Months
Since posted

Voting Closed!

Scroll to Top