Submission 1850

ಪುಸ್ತಕದ ಶೀರ್ಷಿಕೆ: Swipe wright

ಪುಸ್ತಕದ ಲೇಖಕರು: ರಂಜಿನಿ ರಾಘವನ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಅಕ್ಷತಾ ಬಿ.ಎನ್.

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಪುಸ್ತಕ ಪ್ರೇಮಿಯ ನಮನಗಳು, ನಾನು ವಿಮರ್ಶೆಗೆ ಆಯ್ಕೆ ಮಾಡಿರುವ ಪುಸ್ತಕ -ಸ್ವವೈಪ್ ರೈಟ್ -ನಿನ್ನ ಬೆರಳಂಚಲಿ ನಾನು.. ಈ ಪುಸ್ತಕದಲ್ಲಿ ಒಂದು ನಿರ್ದಿಷ್ಟ ವಿಷಯದ ಬಗ್ಗೆ ವಿಮರ್ಶೆ ಮಾಡೋದು ಕಷ್ಟ. ಪ್ರೀತಿ ಎಂಬುದು ಕೇವಲ ಗಂಡು ಹೆಣ್ಣಿಗೆ ನಿಮಿತವಲ್ಲ. ತಾಯಿತಂದೆಗಳ ಬಂಧ ಕಲಚೋದು ಕಷ್ಟ. ಹಧಿಹರಿಯಾದ ಪ್ರೀತಿಗೆ ಅದೆಷ್ಟೋ ತಿರುವುಗಳನ್ನು ಕಂಡರೂ, ಅಮ್ಮನ ಬೆಚ್ಚನೆಯ ಸ್ಪರ್ಶ ಎಲ್ಲಾವನ್ನು ಮರೆಸುತ್ತೆ. ಬದುಕು ಕೇಲವೋಮ್ಮೆ ಅತಿ ವೇಗವಾಗಿ ಕಂಡರೂ ಅಲ್ಲಲಿ ತೊಡಕುಗಳು ಸಹಜ. ಈ ಕಥೆಯ ಪ್ರೀತಿ ಹಕ್ಕಿಗಳು ಮಿಂಚು -ಅನು ಒಂದುಕಡೆ, ಒಲವಿನ ಹಕ್ಕಿಗಳು ಅರವಿಂದಾ - ಚಕ್ರವರ್ತಿ ಈ ಎರಡು ಪ್ರೀತಿಯ ನಿರ್ಧಾರಗಳು ತಮ್ಮಲೇ ಸಿಲಿಕಿದ ಬಾಲೆಯೆಂತೆ. ಮಿಂಚಿವಿನ ಹಠ ತಾಯಿಯ ಎರಡನೇ ಮದುವೆಯಾದರೆ, ಅರವಿಂದಳ ಕನಸು ಮಿಂಚು ಮಾತ್ರ. ಅನೂಪ್ ಮಿಂಚು ಪ್ರೀತಿಯ ಸೇತುವೆ ವಿಶಾಖಾಳ ಆಕರ್ಷಣೆ ಅದರೆ ಅನಿರೀಕ್ಷಿತಾ ಬಂಧ ಅನೂಪ್ ಮಿಂಚುದು. ವಿಚಿತ್ರ ಯಾವ ಹೂವು ಯಾರ ಮೂಡಿವು ಅನ್ನೋ ಹಂಗೆ. ಪ್ರೀತಿಯ ಸವರಿ ಮುಂದುವರೆದರು, ಅನೂಪ್ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿದ್ದು ತುಂಬಾ ನರಳಾಟದ ನಂತರ ತೀರಿಕೊಂಡರು. ಅನೂಪ್ ತಾಯಿಯ ಮಗ ಊಟ, ಉಪಚಾರ ಎಲ್ಲಾದಕ್ಕು ಅಮ್ಮ ಆಗಿದ್ದಳು. ಅಮ್ಮನ ನೆನಪು ಮಸೋದರಲ್ಲಿ ತನ್ನ ಜನ್ಮ ರಹಸ್ಯ ಅವನನ್ನು ಮೇಣದಂತೆ ಸುಡುತಿತ್ತು. ಅನೂಪ್ ಕೂಡ ಸಾಕು ಮಗ ಎಂಬ ಸತ್ಯದ ಹೋರಾಟದಲ್ಲಿದ್ದ. ತನ್ನ ವ್ಯೆಜ್ಞಾನಿಕ ಪೋಷಕರ ಹುಡುಕಾಟದಲ್ಲಿದ್ದ. ಅನೂಪ್ ಕೆಲಸದಲ್ಲೂ ಸಮಾಧಾನ ಇರಲಿಲ್ಲ ಇನ್ನಷ್ಟು ಒತ್ತಡ ಹೇರಿ ಕೆಲಸದಲ್ಲಿ ಮುಳುಗಿದ್ದ. ಇನ್ನು ಮಿಂಚುವಿನ ತಾಯಿ ಒಬ್ಬಳೇ ಉಡುಪಿಯಲ್ಲಿ ಸಣ್ಣ ಕ್ಲಿನಿಕ್ ಇಟ್ಟುಕೊಂಡು ಜೀವನ ನಡೆಸುತಿದ್ದಳು. ಅರವಿಂದಳ ಹತಿರದೋರು ಅಂದರೆ ರಾಧಮ್ಮ-ವೆಂಕೋಬಾ ರಾವ್ ಎಂಬ ವೃದ್ಧ ದಂಪತಿಗಳು ಮಗಳಂತೆ ಮಮತೆ ಎರೆದವರು. ಉಡುಪಿಯ ಶ್ರೀ ಕೃಷ್ಣಾನಾ ತುಣುಕು ಮಿಂಚುವಿನ ಮನಸಿನಲ್ಲಿ ಸದಾ ಹಸಿರಾಗಿತು. ಮಿಂಚುವಿನ ಅಮ್ಮನ ಒಂಟಿತನ ದೂರ ಮಾಡೋ ಆಸೆ ಇದ್ದರೆ ಸಮಾಜದ ಸಿಲ್ಲುಕಿನಲ್ಲಿ ಅರವಿಂದಾ ಮನಸ್ಸು ಒದ್ದಾಡ್ತಾತಿತ್ತು. ಈ ಕಥೆಯ ಇನ್ನೊಂದು ತಿರವು ಚಕ್ರವರ್ತಿ ಅರವಿಂದಳ ಭೇಟಿ ಸ್ನೇಹ ಬಾಂಧವ್ಯ ಮುಂದುವರೆದು ಮದುವೆ ತೀರ ತಲುಪಿದ್ದಾಗ. ಸರಾಗವಾಗಿ ಸಾಗುವ ಎಲ್ಲಾ ಕೆಲಸಗಳಿಗೂ ಸವಾಲು ಅನಿವಾರ್ಯ. ಹೆಣ್ಣಿಗೆ ಆಸ್ತಿ, ದುಡ್ಡು, ಸೌಂದರ್ಯ ಮೆಚ್ಚುವವರಿಗಿಂತ ತನ್ನ ಸರಳತೆ, ಕನಸುಗಳನ್ನು ಬೆಳೆಸೋರು ಉಳಿಸೋರು ಮೆಚ್ಚಿಗೆ ಆಗುತ್ತಾರೆ. ಅನೂಪ್ ವಾರಅಂತ್ಯದಲ್ಲಿ ಫೋಟೋಗ್ರಫಿ ಕೆಲಸ ಮಾಡುತ್ತಿರುತಾನೆ, ಕ್ಷಣದಲೇ ಅಹಿತಾಕರ ಘಟನೆಯಿಂದ ಅವನನ್ನ ಪೊಲೀಸ್ ಕಸ್ಟಡಿಗೆ ತೆಗದುಕೊಳ್ಳುತ್ತಾರೆ. ಕೆಲವು ಗಂಟೆಗಳಲಿ ಅನೂಪ್ ತಂದೆ ಕೈಕಾಲು ಆಡಲಿಲ್ಲ ತಟ್ಟನೆ ನೆನಪಾದವ್ರು ಚಕ್ರವರ್ತಿ. ಶೇಖರ್ ಮಾಡಿದ ಒಂದು ಕಾಲ್ ಎಲ್ಲಾವನ್ನು ಬದಲಾವಣೆ ಮಾಡಿತು. ಚಕ್ರವರ್ತಿಯ ಬುದ್ಧಿವಂತಿಕೆಯಿಂದ ಅನೂಪ್ ಹೊರಗಡೆ ಬಂದಿದ್ದು ಅವನಿಗೆ ಅಸಮಾಧಾನವಿತ್ತು. ಸಮಾಜದ ಹಣೆಪಟ್ಟಿಯಿಂದ ಅನೂಪ್ ಕೆಲಸ ಹೋಯಿತು ಅದ್ದರು ಮಿಂಚು ಎಲ್ಲವನ್ನು ಅನೂಪ್ ಜೊತೆ ಸರಿದೂಗಿಸೋ ಹುಡ್ಗಿಯಾಗಿದ್ದಳು. ಚಕ್ರವರ್ತಿ ಅರವಿಂದಳ ಪ್ರೀತಿ ಒಂದೆಡೆ ಕುಟುಂಬಗಳ ಒಪ್ಪಿಗೆಗಾಗಿ ಕಾಯುತ್ತ ಎದ್ದರುನೋಡುತ್ತಿರಲು. ಅನೂಪ್ಗೆ ಮಿಂಚು ತನ್ನ ಅಮ್ಮನ ಮದ್ವೆ ಖುಷಿಯ ಹಂಚಿಕೊಳ್ಳಲು ಕಾಯುತ್ತಿದಳು ಹೆಸರು ಅನೂಪ್ ಕಿವಿ ಸೇರಿದಾಗ ಎಲ್ಲವೂ ಬದಲಾಗಿತ್ತು. ಸತ್ಯ ಎಲ್ಲವನ್ನು ತಳ ಬುಡವಾಗಿಸಿತ್ತು, ಅನೂಪ್ ತಂದೆ ಬೇರೆಯರಲ್ಲ ಅರವಿಂದಳ ಚಕ್ರವರ್ತಿ ಅವ್ರು ಅನೂಪ್ ತಂದೆ ತುಂಬಾ ಗಸಿಮಾಡಿಕೊಂಡು ಅನೂಪ್ ನೋವು ನುಗುತ್ತಿದ್ದ. ಅನೂಪ್ ಒಂದು ಕರೆ ಮಾಡಿ ಚಕ್ರವರ್ತಿಗೆ ಅರವಿಂದಲಿಂದ ದೂರವಾಗಲು ಒತ್ತಡ ಹೇರಿದ. ಒಂದು ನಿರೀಕ್ಷೆ ಮೀರಿದ ದಿನ ಅರವಿಂದಾಳಿಗೆ ಸೋರಿಯಸಿಸ್ ರೋಗಿಗಳಿಗೆ ಮಾತ್ರೆ, ತೈಲ ಕಂಡುಹಿಡಿದ ಕಾರಣ ವೈದ್ಯ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತನ್ನ ಸಾಧನೆಯ ಬಗ್ಗೆ ಮಾತಾಡುವಾಗ ಇದಕೆಲ್ಲ ಕಾರಣರಾದವರು ಎಂದು ಸುರೇಶ ಚಕ್ರವರ್ತಿ ಎಂದು ಜಗತ್ತಿಗೆ ಪರಿಚಯಿಸಿದರು. ಅನೂಪ್ ಅಸಹಾಯಕನಾಗಿ ಪೊಲೀಸ್ ಕಂಪ್ಲೇಂಟ್ ಕೊಟ್ಟು ವಿಷಯವನ್ನ ಇನ್ನಷ್ಟು ಹನಿ ಮಾಡಿ ಮಿಂಚು, ಅರವಿಂದಾ, ಚಕ್ರವರ್ತಿ ಮನಸ್ಸುಗಳು ಒಡೆದು ಚುರಾಗುತಾವೇ. ಚಕ್ರವರ್ತಿ -ಅರವಿಂದಳ ಪ್ರೀತಿ ಅರಳುವಲ್ಲಿ ಮುದುಡಿ ಮರೆಯಾಯಿತು. “ಪ್ರೀತಿ ನಿಷ್ಕಲ್ಮಶವಾದ್ರೂ, ಕೆಲವು ಬಾರಿ ನಮ್ಗೆ ತಿಳಿಯದೆ ಕೈ ಜಾರುತ್ತೆ “.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಪ್ರೀತಿಯ ತೀರಿವುಗಳು ಒಂತರ ಉಡುಪಿಯ ಸಮುದ್ರದ ಅಲೆಗಳಂತೆ, ನಿರ್ಧಾರಗಳು ಸಾವಿರ ಅದು ಒಬ್ಬ ವ್ಯಕ್ತಿಯ ಅಭಿಪ್ರಾಯವಾಗಿರುತ್ತೆ. ಅರವಿಂದಾ ಚಕ್ರವರ್ತಿಯಾ ಅಸಹಾಯಕತೆ, ಅನೂಪ್ ಪ್ರೀತಿ ಉಳಿಸುವ ಅವಸರ ಎಲ್ಲಾವು ಬೇರೆ ದಾರಿಗಳನ್ನು ತೋರಿಸಿದವು. ಕುಸಿದರು ಮತ್ತೆ ಶುರು ಮಾಡಲೇಬೇಕಲ್ವಾ. ಪ್ರೀತಿ ಕವಲಿನಂತೆ ಕೊನೆಗೊಳೋದು ವಿರಳ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

23
Votes
143
Views
7 Months
Since posted

Voting Closed!

Scroll to Top