ಪುಸ್ತಕದ ಶೀರ್ಷಿಕೆ: ಕಾಡು ಕುಸುಮ
ಪುಸ್ತಕದ ಲೇಖಕರು: ವಾಗ್ದೇವಿ ಬಿ ಪಾಟೀಲ್
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸುಷ್ಮಾ ಹೆಳವಗೋಳ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 2.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಪುಸ್ತಕದ ಸಾರಾಂಶಃ ಪುಸ್ತಕದ ಶಿರ್ಷಿಕೆ ನೋಡಿ ಓದಬೇಕೆಂಬ ಕುತೂಹಲ ಮೂಡಿ ಪುಸ್ತಕ ಓದಲು ಆರಂಭಿಸಿದೆ ಓದುತ್ತಾ ಹೋದಂತೆ ದೃಶ್ಯ ಕಣ್ಣುಮುಂದೆ ಓಡುತ್ತಾ ಹೋಗುತಿತ್ತು. ಸುಂದರವಾದ ವರ್ಣನೆ ಪ್ರೀತಿ ಎಂಬುವುದು ಏನು? ಪ್ರೀತಿಗೆ ಮುಖ್ಯವಾಗಿ ಬೇಕಾಗಿರುವುದು ಏನು? ಎಂಬ ಅಂಶ .. ಪ್ರೀತಿ ಎಂಬುದಕ್ಕೆ ಯಾವುದೇ ಸೀಮೆಯಿಲ್ಲ ಅದು ಯಾರ ಮನದಲ್ಲಿ ಬೇಕಾದರೂ ಯಾವ ಸಮಯ ಸಂದರ್ಭದಲ್ಲಿಯಾದರೂ ಅರಳುವ ಸುಂದರ ಹೂವು... ಇದಕ್ಕೆ ಜಾತಿ ಭೇದಬೇಕಾಗಿಲ್ಲ ವರ್ಣದ ವಿಚಾರವಿಲ್ಲ ವಯಸ್ಸಿನ ಪರಿವಿಲ್ಲ ಎರಡು ಹೃದಯಗಳು ಒಂದನ್ನೊಂದು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಈ ಜಾತಿ ಭೇದ -ಭಾವ ಹೊಂದಿರುವ ಸಮಾಜದಲ್ಲಿ ತಮ್ಮ ಪ್ರೀತಿ ಉಳಿಸಿಕೊಳ್ಳಲು ಹೋರಾಡುವುದು ಒಂದು ಬ್ರಾಹ್ಮಣ ಹುಡುಗ ಕ್ರಿಶ್ಚಿಯನ್ ಹುಡುಗಿಯನ್ನು ಪ್ರೀತಿಸಿದ ಧರ್ಮಕ್ಕಾಗಿ ಅವಳು ಅವನನ್ನು ಬಿಟ್ಟು ಹೋದಳು. ಮತ್ತೇ ಆತ ಇನ್ನೊಬ್ಬ ಕಾಡಿನಲ್ಲಿ ವಾಸಿಸುವ ಲಂಬಾಣಿ ಹುಡುಗಿಯನ್ನು ಪ್ರೀತಿಸಿದ ಈತ ದೊಡ್ಡ ಎಸ್ಟೇಟ ಮಾಲಿಕ.. ಹುಡುಗನ ಕುಟುಂಬ ಆಕೆ ಒಬ್ಬ ಲಂಬಾಣಿ ಹುಡುಗಿ ನಿನ್ನ ಘನತೆಗೆ ಹೊಂದುವುದಿಲ್ಲ ಅಷ್ಟೇ ಅಲ್ಲದೇ ಮೈಲಿಗೆಯಾಗುತ್ತವೆ ನಿನ್ನ ಖುಷಿಗಾಗಿ ಅವಳನ್ನು ಇಟ್ಟುಕೊ (ಸೂಳೆ ) ಆದರೆ ನಿನ್ನ ಘನತೆಗೆ ಒಪ್ಪುವ ಹೆಣ್ಣನ್ನು ಮದುವೆ ಮಾಡಿಕೋ ಎನ್ನುತ್ತಾರೆ ಒಂದು ಹೆಣ್ಣಿನ ಭಾವನೆ ಈ ಜಾತಿ ಭೇದವಿರುವ ಸಮಾಜದಲ್ಲಿ ಯಾರಿಗೂ ಕಾಣುವುದೇ ಇಲ್ಲ ಅದೇ ರೀತಿ ಹುಡುಗನ ಪ್ರೀತಿಗೆ ಬೆಲೆಯೇ ಸಿಗುವುದಿಲ್ಲ ಮೂಲತಃ ವೀರಶೈವ ಧರ್ಮದಲ್ಲಿ ಹುಟ್ಟಿ ತಂದೆ ತಾಯಿಗಳು ಮರಣ ಹೊಂದಿರುವ ಕಾರಣ ಅವರ ಎಸ್ಟೇಟನಲ್ಲಿ ಕೆಲಸ ಮಾಡುವ ಬ್ರಾಹ್ಮಣ ಕುಲವೊಂದರಲ್ಲಿ, ಬೆಳೆದು ಲಂಬಾಣಿ ಹುಡುಗಿಯನ್ನ ಮದುವೆಯಾಗುವುದರಲ್ಲಿ ತಪ್ಪೇನು? ಈ ಭೇದವಿರುವ ಸಮಾಜದಲ್ಲಿ ಪರಿಶುದ್ದ ಪ್ರೀತಿ ಎಂದೂ ಕೂಡುವುದಿಲ್ಲ ಒಂದು ವೇಳೆ ಕೂಡುವ ಸಮಯ ಬಂದರೆ ದೇವರೇ ಅವರನ್ನು ಅಗಲಿಸಿಬಿಡುತ್ತಾನೆ ಪ್ರೀತಿಗೆ ಬೇಕಾಗಿರುವುದು ಪರಿಶುದ್ಧ ಮನಸ್ಸುಗಳು ಮಾತ್ರ ಯಾವುದೇ ಜಾತಿ ಧರ್ಮವಲ್ಲ ಒಂದು ಕೆಳವರ್ಗದ ಹೆಣ್ಣು ತನಗೆ ತಾನು ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದಾಳೆ ಆಕೆ ಒಬ್ಬ ಮಾಲಿಕನಿಗೆ ಇಟ್ಟುಕೊಂಡವಳು (ಸೂಳೆ) ಆದರೂ ಇರುತ್ತಾಳೆ ಆದರೆ ಅವನ ಮಡದಿಯಾಗಲು ಹಿಂಜರಿಯುತ್ತಾಳೆ ಕಾರಣ ಈ ಮತ ಭೇದದ ಜಿಡ್ಡು ಹಿಡಿದಿರುವ ಸಮಾಜ ಕೊನೆಗೆ ಈ ನಿಷ ಕಲ್ಮಶ ಪ್ರೀತಿ ದಡ ಸೇರದೇ ಅಮರವಾಗಿ ಉಳಿದು ಒಬ್ಬಕ್ಕೊಬ್ಬರು ಕುಡದೇ ಪ್ರಾಣ ಕಳೆದುಕೊಳ್ಳುತ್ತಾರೆ ಈ ಕಥೆ ಓದುತ್ತಾ ಹೋದಂತೆ ಇದೊಂದು ಕಥೆಯಲ್ಲ ನಿಜ ಜೀವನದ ಘಟನೆ ಎಂಬ ಭಾಸವಾಗುತ್ತದೆ ಈ ಸಮಾಜದಲ್ಲಿ ಈ ಜಾತಿ ಭೇದ ಭಾವ ಯಾವಾಗ ತೊಲಗುತ್ತದೆಯೋ ಎಂಬ ವಿಚಾರ ಸುತ್ತಲೂ ಸುಳಿದಾಡುತ್ತಿದೇ... ಪುಸ್ತಕದಲ್ಲಿ ಇಷ್ಟವಾದ ಒಂದು ಸಾಲು: " ನಾಡಿನಲ್ಲಿ ಬೆಳೆಯುವ ಗುಲಾಬಿ ಹೂ ಸಂಜೆಗೆ ಬಾಡಿ ಹೋಗುತ್ತದೆ ಆದರೆ ಕಾಡಿನಲ್ಲಿರುವ ಕುಸುಮ, ಕಾಡು ಕುಸುಮ ಸಂಜೆಯಾದ ಮೇಲು ಘಮ ಘಮಿಸುತ್ತಲೇ ಇರುತ್ತದೆ "
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಪಾತ್ರಗಳು ಕಥಾನಾಯಕ ಚಂದ್ರು ಕಥಾನಾಯಕಿ ಶಾಮಿ ಕ್ರಿಶ್ಚಿಯನ್ ಹುಡುಗಿ ಮೇರಿ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.