Submission 1838

ಪುಸ್ತಕದ ಶೀರ್ಷಿಕೆ: ಪ್ರಶ್ನೆ

ಪುಸ್ತಕದ ಲೇಖಕರು: ಯು.ಆರ್.‌ ಅನಂತಮೂರ್ತಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ರವಿಕಾಂತ್ ಎಸ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 3.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಬೇಸರ, ಸಂಕಟ, ನೋವು ಮೃತ್ಯು, (ಸಾವು ಕೂಡ) ಎಲ್ಲವೂ ಕವಿಯ ಕುಲುಮೆಯಲ್ಲಿಯೇ ಚೆಲುವಾಗುತ್ತವೆ ! ಓದುಗನ ತರ್ಕವೆಂದು ಅಂತ್ಯಕ್ಕೆ ಭಾವಿಸಬಹುದು. ತನ್ನೊಳಗೆ ಹೋರಾಟ ನಡೆಸುತ್ತಾ ಕಾಮದ ಭಿಕ್ಷುಕನಾಗಿ, ಎರಡು ಮುಖವನ್ನೊತ್ತು ಹೇಳಿಕೊಳ್ಳಲಾಗದೆ ತೊಳಲಾಡುವ ಖೋಜಣ್ಣ ಅರೆಹುಚ್ಚನೇ ಸರಿ ! ಅಪ್ಪನೆದುರು ಪ್ರಶ್ನೆ ಮಾಡುವುದು ಸೊಕ್ಕೇ ? ಮಾಡಿಯೇ ತೀರುವ ನಾರಾಯಣ, ಕೇಳದೊದಗಿಬಂದ ಪದಕದ ದೆಸೆಯಿಂದಲೋ ಅಥವಾ ಜಿದ್ದಿನಿಂದಲೋ ಕೃಷಿ ಮಾಡಿಯೇ ಸಾಯಬೇಕೆಂಬ ಸಂಕಪ್ಪಯ್ಯ. ಪರವಂಚನೆಗಿಂತ ಆತ್ಮವಂಚನೆ ಹೇಸಿಗೆ ಎಂದು ತಿಳಿಹೇಳುವ ರಂಗನೂ ನಿಸ್ಸೀಮನೆ, ಸಾಕಿ ಸಾಲುಹಿದ ಋಣ ಮರೆ ಎಂದು ಕದ್ದು ಹಾಲುಕುಡಿವ ಬೆಕ್ಕಿನ ತದ್ರೂಪಿ ಇವ. ಕುರುಡು ಮುದಕನ ಚಿಂತನೆಗಳೇ ವಿಚಿತ್ರ, ಕಣ್ಣಿರದಿದ್ದರೂ ಬಿಲದಲ್ಲಿ ಹೆಗ್ಗಣವನ್ನಿಡಿದಿದ್ದ, ಇವರೀರ್ವರ ಮಧ್ಯ ನಲುಗುವ ಶಾರದೆಯೆ ಪಾಪ ಎನಿಸುವಂತವಳು, ಸರ್ವಸ್ವಗಳನ್ನೂ ತ್ಯಾಗಿಸಿ ಹೇಲು-ಉಚ್ಚೆಯ ದರುಶನ ಪಡೆಯಲು ಹವಣಿಸುತ್ತಿದ್ದಳ್ಳೇನೋ ಎಂದು ನಾವೇ ಉದ್ರಿಕ್ತರಾಗುತ್ತೇವೆ‌. ಅಮ್ಮ-ಅಜ್ಜಿ/ತಾತನ ನಡುವೆ ಸಿಕ್ಕಿ ಸವೆಯುವ ಜೀವನ ಪ್ರಪಂಚದಲ್ಲಿ ನಡೆಯುವುದಕ್ಕೆಲ್ಲ ಸಾಕ್ಷಿಯಿಲ್ಲದ ಪಾಲುದಾರನಂತೆಯೇ ಸರಿ. ತಂದೆಯ ಪ್ರಾಯಶ್ಚಿತ್ತಕ್ಕಾಗಿ ತಾನು ದೂರಾಗುವ ಅಪ್ಪ, ನೆಪಕ್ಕೆಂದು ಮಗನ ಪ್ರೇಮ ವಿವಾಹ. ಪ್ರಾಯದಲ್ಲಿ ಹೆಂಡತಿ ಬಿಟ್ಟು ಸೂಳೆಯನ್ನಾರಿಸಿಕೊಂಡು, ಹಲ್ಲು ಬಿದ್ದಮೇಲೆ ಮುಟ್ಟು ನಿಂತ ಹೆಂಡತಿಯಿಂದ ಸುಖವನ್ನೇಪಿಕ್ಷಿಸುವ ಹೆಡ್ಡನೊಂದೆಡೆಯಾದರೆ, ಸೊಸೆಯೆ ರಾಕ್ಷಸಿ ತಾನಾಜಾಗದಲ್ಲಿದ್ದಾಗ ತಾನೇ ಸರಿ ಎಂದು ಮೂಗಿಗೆ ಮರವನ್ನೇ ಅಂಟಿಸಿಕೊಂಡು ನೇರವೆನ್ನುವ ವಿವೇಚನೆಯಿಲ್ಲದ ವೆಂಕಮ್ಮ. ಅಳಬೇಕೆಂದರು ಅಳಲಾರದೆ ಒಳಗೊಳಗೆ ಅಳುತ್ತ, ಹೆಣ್ಣಿಗನೆಂಬ ಬಿರುದನ್ನು ಪಡೆದು ಏನು ತಿಳಿಯದೇ ಮುಗ್ಧ ಜೀವನ‌ ನಡೆಸುತ್ತಾ, ಬೇಕು-ಬೇಡ, ಬರುತ್ತೇನೆ -ಬರುವುದಿಲ್ಲ ಎಂಬ ದ್ವಂದ್ವದೊಳೆಗೆಯೇ ಎಲ್ಲವನ್ನೂ ನೋಡಿ ಮಜ್ಜಿಗೆ ಅರಳು ತಿನ್ನುವ ಶುಕಮುನಿ. ಎಲ್ಲರೂ ಒಮ್ಮಿಂದೊಮ್ಮೆಲೆ ಹಾದು ಹೋದರೆನಿಸುತ್ತದೆ, ಕೊನೆಗೆಲ್ಲದಕ್ಕುಳಿವುದು ಹೀಗೆಕಾಯ್ತು,‌ ಇದು ಹೀಗೋ ? ಹೀಗೆಯೇ ಉತ್ತರವಿಲ್ಲದ ಪ್ರಶ್ನೆಗಳು.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

1
Votes
65
Views
5 Months
Since posted

Voting Closed!

Scroll to Top