Submission 1836

ಪುಸ್ತಕದ ಶೀರ್ಷಿಕೆ: ಹೋಟೆಲ್ ಗೋದಾವರಿ

ಪುಸ್ತಕದ ಲೇಖಕರು: ಬಾಳ ಸಾಹೇಬ್ ಲೋಕಾಪುರ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಜಯಂತ್ ದೇಸಾಯಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಬಡತನದ ಕ್ರೂರತೆ ಜಾತಿ ವ್ಯವಸ್ಥೆಯಲ್ಲಿ ನ ಲೋಪಗಳು, ಜಾತಿ ಕಟ್ಟಳೆ ಅಲ್ಲಿನ ಅವಮಾನ, ಅಪಮಾನ, ಕಾಮಂಧರ ದರಿದ್ರ ಕಣ್ಣುಗಳು, ಹಳ್ಳಿಯ ಬದುಕಿನ ಬವಣೆ, ಮೀರಿ ಒಬ್ಬ ಕೆಳ ವರ್ಗದ ಮಹಿಳೆ ಯ ಏಳಿಗೆಯ ಕಥೆ ಹೋಟೆಲ್ ಗೋದಾವರಿ ತಿಳಿಸುತ್ತದೆ. ಸಾಮಾನ್ಯ ಅಪೃಶ್ಯ ಕೇಳಜಾತಿಯ ಗೋದವ್ವ ಮೈಗಳ್ಳ ಗಂಡ ಹಾಗೆ ಹಳ್ಳಿಯ ಕಾಮದ ಕಣ್ಣಿನ ಜನರ ನಡುವೆ ಬದುಕು ಸಾಧಿಸಿ ತೋರಿಸುವ ಕಥೆ, ಕಥೆ ಒಂದು ಮೋಗ್ಗಲಿಗೆ ಸರಿದು ಹಿಡಿದು ಓದಿಸಿಕೊಂಡು ಹೋಗುವುದು ದ್ವಿತೀಯಾರ್ಧದಲ್ಲಿ. ಕಾದಂಬರಿ ಸೋಲಾಪುರ ಆದಿ ಬಿಜಾಪುರ ಬೆಳಗಾವಿ ಆದಿಯ ಹಳ್ಳಿಯ ಸೊಗಡಿನ ಭಾಷೆಯಲ್ಲಿ ಮೂಡಿಬಂದಿದ್ದು ಉತ್ತರ ಕರ್ನಾಟಕದ ಭಾಷೆ ವೈವಿಧ್ಯ ದ ಇನ್ನೊಂದು ಪ್ರಕಾರ ನಾವಿಲ್ಲಿ ಕಾಣುತ್ತೇವೆ, ಲೇಖಕರು ಪಾತ್ರಗಳ ಶೃಷ್ಟಿಸಿ ಅದಕ್ಕೆ ನ್ಯಾಯ ಸಲ್ಲಿಸುವ ಧಾವಂತದಲ್ಲಿ ಚೂರು ಏಳಸುತನ ತೋರಿಸಿರುವುದು ಮೊದಲ ಭಾಗದಲ್ಲಿ ಕಂಡು ಬರುತ್ತದೆ, ಒಂದು ನಿರ್ದಿಷ್ಟ ಪಾತ್ರಕ್ಕೆ ಕೆಲವು ಕಡೆ ಅರ್ಥವೂ ಕಾಣುವುದಿಲ್ಲ ಜ್ವಲಂತ ಉದಾಹರಣೆ ಗೋದವ್ವ ಮಗ ಬೂಬಣ್ಣ. ಆದ್ರೆ ಕಾದಂಬರಿಯ ಧನಾತ್ಮಕ ಹಾಗೂ ಗಟ್ಟಿಯ ಅಂಶ ಅಂದರೆ ಗೋದವ್ವ ಳ ದಿಟ್ಟತನ ಹಾಗೂ ಅವಳ ಮೌಲ್ಯ, ಅಂತಹ ಕಡು ಬಡತನದಲ್ಲೂ ಅವಳು ತನ್ನ ಮೌಲ್ಯವನ್ನು ತನ್ನ ಘನತೆಯನ್ನು ಎಲ್ಲಿಯೂ ಕಳೆದುಕೊಳ್ಳುವುದು ಇಲ್ಲ, ಕಾಮಂದರ ಕಣ್ಣುಗಳು ತಪ್ಪಿಸಿ, ಬಡತನ ಹಿಂಗಿಸಿ, ಜಾತಿ ವ್ಯವಸ್ಥೆ ಮೀರಿ ಹೋಟೆಲ್ ಶುರು ಮಾಡುವ ಅವಳ ಧೈರ್ಯ,ಪ್ರಧಾನ ಅಂಶವಾಗಿ ಹೆಣ್ಣು ಎಂದಿಗೂ ಸಹನಳು ಅನ್ನೋದು ಗೋದವ್ವ ನ ಮಮತೆಯ ಕಣ್ಣುಗಳು ನಾವಿಲ್ಲಿ ಕಾಣುತ್ತೇವೆ. ತನ್ನ ದೇಹ ಬಯಿಸಿ ಬಾಯಿ ಚಪ್ಪರಿಸಿದ ಜನಕ್ಕೆ ಅವರ ಕಷ್ಟ ಅಂದು ಕೆಳ ಜಾತಿ ಅನ್ನೋದು ನೋಡದೆ ಮನೆಗೆ ಬಂದ ಜನಕ್ಕೆ ಅವಳ ಕರುಣೆ ನಮಗೆಲ್ಲ ಮಾದರಿ ಆಗುತ್ತದೆ, ಹಸಿವಿನ ತೀವ್ರತೆ ಮನುಷ್ಯ ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯುತ್ತಾನೆ ಆದ್ರ ಕ್ರೂರತೆ ಏನು ಅನ್ನೋದು ನಾವಿಲ್ಲ ಕಾಣುತ್ತೇವೆ, ಜಾತಿ ಕಂದಕ ಅದೆಷ್ಟು ಬೇರು ಬಿಟ್ಟಿದ್ದೆ ಅನ್ನೋದು ನಾವಿಲ್ಲಿ ನೋಡಿದರೆ, ಅಷ್ಟು ದೇವರುಗಳ ನಡುವೆ ಬಸವ ತತ್ವ ಮೀರಿ ಕೇವಲ ಬುದ್ಧ ಅಂಬೇಡ್ಕರ್ ಅವರ ಶಾಂತಿಯತೆ ಮೀಸಲು ಇಟ್ಟಿದ್ದು ಗೋಧವ್ವ ಬುದ್ಧ ಅಂತ ನೆನಪಿಸಿಕೊಳ್ಳುವ ಹಿನ್ನಲೆ ಲೇಖಕರ ಚೂರು ಹಿನ್ನಡೆ ತೋರಿಸುತ್ತದೆ, ಇಲ್ಲಿ ಏನೇನೋ ಹೇಳಲು ಹೋದ ಲೇಖಕರು ಚೂರು ಎಡವಿದರೂ ಅನ್ನಿಸುತ್ತದೆ. ಕೆಲವು ಆಸಡ್ಡೆಗಳ ಹೊರತಾಗಿ ತುಂಬಾ ಹಿಡಿಸಿದ ಅಂಶ ಅಂದರೆ ಹಳ್ಳಿಯ ಹಾಡುಗಳು ಮತ್ತು ತತ್ವ ಪದಗಳು, ಕೆಲವು ಪಾತ್ರಗಳು, ಹಾಡು ಕಟ್ಟಿ ಹಾಡುವ ಟುಕರಿ ಬಸ್ಸು, ತಿಕಾಣಿ ಭೀಮ,ಅನ್ನುವ ವಿಶಿಷ್ಟ ಪಾತ್ರಗಳು, ದಾದು ಪಾಟೀಲ ಅವನ ಮಗ ಶಿವಾನಂದ, ಶುಕ್ಲ ಬಾಯಿ ಶಾನು ಮಾಸ್ತರ್ ಅನ್ನುವ ಪಾತ್ರಗಳು ಇದ್ದರೂ ಮನಸಿಗೆ ಹಿಡಿಸಿದ್ದು ಮರೆಪ್ಪ ಅನ್ನುವ ಪಾತ್ರ, ಹಳ್ಳಿಯ ಜನ ಅವರ ಮಧ್ಯೆ ಸಂಬಂಧ ಕಟ್ಟಿದರು ಮನಸಿನ ಸಂಬಂಧ ದೊಡ್ಡದು ಅದು ಅಣ್ಣ ತಂಗಿ ಅಂತ ತೋರಿಸಿಕೊಟ್ಟ ಪಾತ್ರ, ಅವಳ ಸಹಾಯಕ್ಕೆ ನಿಂತು ಗೋದವ್ವ ಮುಂದೆ ಹೋಟೆಲ್ ತೆಗೆದು ಗೋದಾವರಿ ಅನ್ನುವ ಹೆಸರು ಪಡೆದು ಮುಂದೆ ಸರಕಾರದ ಪಂಚಾಯತ್ ಅಡಿಯಲ್ಲಿ ಹಳ್ಳಿಯ ಗ್ರಾಮ ಪಂಚಾಯತ ಅಧ್ಯಕ್ಷತೆ ವರೆಗೂ ತಲುಪಿ ಮಾದರಿ ಆಗುವ ಕಾದಂಬರಿ ಆದ್ರೆ ಕೊನೆಗೆ ಗೆಲ್ಲುವುದು ಜಾತಿ ವ್ಯವಸ್ಥೆ ಯ ಅನ್ನೋದು ಕೊನೆಯಲ್ಲಿ ಕಾಣುತ್ತೇವೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡೆ ಅನ್ನುವರಿಗೆ ಪ್ರೇರಣೆ ನೀಡುವ ಅದ್ಬುತ ಕೃತಿ ಹೋಟೆಲ್ ಗೋದಾವರಿ, ಗೋದಾವರಿಯ ಛಲ ನಮ್ಮಲ್ಲಿನ ಬದುಕಿನ ಪ್ರೀತಿಯನ್ನು ಸಾಧನೆಯ ಪಥವನ್ನು ತಿಳಿಸುತ್ತದೆ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

2
Votes
62
Views
5 Months
Since posted

Voting Closed!

Scroll to Top