Submission 1758

ಪುಸ್ತಕದ ಶೀರ್ಷಿಕೆ: ಅಪ್ಪ ಅಂದರೆ ಆಕಾಶ

ಪುಸ್ತಕದ ಲೇಖಕರು: ಎ.ಆರ್. ಮಣಿಕಾಂತ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸಹನಿ ಹೆಬ್ಬಾರ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ನನ್ನ ನೆಚ್ಚಿನ ಪುಸ್ತಕ ಅಪ್ಪ ಅಂದ್ರೆ ಆಕಾಶ ಈ ಪುಸ್ತಕನ ಓದುತ್ತಾ ಕುಳಿತರೆ ಏನೋ ಒಂಥರಾ ಸಂತೋಷ ಹಾಗೆ ಕಣ್ಣಿನ ಅಂಚಲ್ಲಿ ನೀರು ಬರುತ್ತದೆ.. ಎ.ಆರ್. ಮಣಿಕಾಂತ್ ಅವರ “ಅಪ್ಪ ಎಂದರೆ ಆಕಾಶ” ಕೃತಿಯನ್ನೂ ಓದುವಾಗ ತುಂಬಾ ಮನಕ್ಕೆ ತಾಕುವಂತೆ ಅನ್ನಿಸುತ್ತದೆ. ಎ.ಆರ್. ಮಣಿಕಾಂತ್ ಅವರ “ಅಪ್ಪ ಎಂದರೆ ಆಕಾಶ” ಪುಸ್ತಕ ತಂದೆ ಮತ್ತು ಮಗನ ಸಂಬಂಧದ ಮಧುರ, ಮೌನ ಮತ್ತು ಆಳವಾದ ಭಾವನೆಯನ್ನು ಮನಕಲಕುವಂತೆ ಬಿಂಬಿಸುವ ಒಂದು ಹೃದಯಸ್ಪರ್ಶಿ ಪುಸ್ತಕವಾಗಿದೆ. ನಮ್ಮ ಜೀವನದಲ್ಲಿ ಮಾತನಾಡದೆ, ತೋರಿಸದೆ, ಆದರೆ ಪ್ರತಿಕ್ಷಣದಲ್ಲೂ ನಮ್ಮನ್ನು ಕಾಪಾಡಿ, ಬೆಳೆಸಿ, ದಾರಿದೀಪದಂತೆ ನಿಲ್ಲುವ ತಂದೆಯ ಪಾತ್ರವನ್ನು ಈ ಕೃತಿ ಕಲಾತ್ಮಕವಾಗಿ ಚಿತ್ರಿಸುತ್ತದೆ. “ಅಪ್ಪ ಅಂದ್ರೆ ಆಕಾಶ” ಎಂದು ಕೃತಿ ಹೇಳುವಂತೆ, ತಂದೆ ಮಗುವಿನ ಬೆಳವಣಿಗೆಯನ್ನು ಹೊತ್ತೊಯ್ಯುವ, ಅದರ ಕನಸುಗಳಿಗೆ ವ್ಯಾಪಕ ಸವಲತ್ತಿನ ಜಾಗವನ್ನು ಕೊಡುವ ವಿಶಾಲ ನಿಭಂಡನೆಯಂತಿರುವುದು ಕಥೆಯ ಮೂಲಭೂತ ವಿಚಾರವಾಗಿ ಕಾಣುತ್ತದೆ. ಈ ಪುಸ್ತಕದಲ್ಲಿ ಪ್ರತಿಯೊಂದು ಅಧ್ಯಾಯವೂ ತಂದೆಯನ್ನು ನಮ್ಮ ಜೀವನದ ಮೌನ ಶಕ್ತಿಯ ರೂಪದಲ್ಲಿ ಚಿತ್ರಿಸುತ್ತದೆ. ಸಮಾಜದಲ್ಲಿ ತಾಯಿ ಪ್ರೀತಿಯ ಬಗ್ಗೆ ಹೆಚ್ಚು ಮಾತನಾಡಲಾಗುತ್ತದೆ; ಆದರೆ ತಂದೆಯ ಪ್ರೀತಿ ಮೌನದೊಳಗೇ ವ್ಯಕ್ತವಾಗುತ್ತದೆ. ಮಣಿಕಾಂತ್ ಅವರ ಬರಹದಲ್ಲಿ ಈ ಮೌನದ ಪ್ರೀತಿ ಜೀವಂತವಾಗಿ ಮೂಡಿ ಬರುತ್ತದೆ. ಬಡತನ, ಜೀವನದಪಾಠಗಳು, ಮೌಲ್ಯಗಳು, ಶ್ರಮ, ಅವರ ತ್ಯಾಗ ಇವುಗಳನ್ನೆಲ್ಲ ತಂದೆ ಹೇಗೆ ತನ್ನ ನಡವಳಿಕೆಯಿಂದಲೇ ಮಕ್ಕಳಿಗೆ ಕಲಿಸುತ್ತಾನೆ ಎಂಬುದನ್ನು ಪುಸ್ತಕದಲ್ಲಿ ಹಲವು ಉದಾಹರಣೆಗಳ ಮೂಲಕ ತಿಳಿಸುತ್ತದೆ. ಮಣಿಕಾಂತ್ ಅವರ ಬರವಣಿಗೆಯ ಶೈಲಿ ಸರಳವಾಗಿದ್ದರೂ ಅಗಾಧ ಭಾವನಾತ್ಮಕತೆಯನ್ನು ಹೊತ್ತಿದೆ. ಪ್ರತಿಯೊಂದು ವಾಕ್ಯವೂ ಓದುಗರ ಹೃದಯಕ್ಕೆ ತಲುಪುವ ರೀತಿಯಲ್ಲಿ ರೂಪುಗೊಂಡಿದ್ದು, ನೈಜ ಜೀವನದ ಕಥೆಗಳನ್ನು ಜಾಗೃತಗೊಳಿಸುತ್ತದೆ. ಪುಸ್ತಕವನ್ನು ಓದಿದಾಗ ಓದುಗರಲ್ಲಿ ತಮ್ಮದೇ ತಂದೆಯ ನೆನಪುಗಳು ಚಿಗುರುತ್ತವೆ ಅವರ ನಗು, ಹೋರಾಟ, ಮೌನದಲ್ಲಿ ಅಡಗಿದ ಕಾಳಜಿ, ತಂದೆಯೊಂದಿಗೆ ಕಳೆದ ಸಣ್ಣ ಘಟನೆಗಳೇ ಇಲ್ಲಿ ದೊಡ್ಡ ಜೀವನಪಾಠಗಳಾಗಿ ತೆರೆದುಕೊಳ್ಳುತ್ತವೆ. ಈ ಭಾವನಾತ್ಮಕ ಸಂಪರ್ಕವೇ ಕಣ್ಣಿನಲ್ಲಿ ನೀರೂರಿಸುತ್ತಿದೆ.. ಅಪ್ಪನ ಉಪಸ್ಥಿತಿ ನಮ್ಮ ಜೀವನದಲ್ಲಿ ಅಷ್ಟೇ ದೊಡ್ಡದು ಇಂತಹ ಮೌನದ ಪ್ರೀತಿಯನ್ನು ಗುರುತಿಸಿ ಎಲ್ಲರೂ ಕೂಡ ತಂದೆಗೆ ಗೌರವಿಸಿ ಎಂಬುದು ನನ್ನ ಸಣ್ಣ ಕೋರಿಕೆ ಎಂದುಕೊಳ್ಳಿ..

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಅಪ್ಪ ಯಾರಿಗೂ ಕಮ್ಮಿ ಇಲ್ಲ ಎಂದು ಈ ಕಥೆಯಲ್ಲಿ ಈಗ ತೋರಿಸಿದ್ದು ಬಹಳ ಖುಷಿಯಾಗುತ್ತದೆ ಅದರಲ್ಲೂ ಅಪ್ಪ ಇಲ್ಲದಿದ್ದವರು ಈ ಕಥೆ ಓದಿದರೆ ಕಣ್ಣಲ್ಲೇ ನೀರು ಬಂದ ಹಾಗೆ ಈ ಕಥೆ ವರ್ಣಿಸಿದ್ದಾರೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಅಪ್ಪ ಮತ್ತು ಮಗನ ಬಾಂಧವ್ಯ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

116
Votes
209
Views
5 Months
Since posted

Voting Closed!

Scroll to Top