ಪುಸ್ತಕದ ಶೀರ್ಷಿಕೆ: ಜೀಕೆ ಮಾಸ್ತರರ ಪ್ರಣಯ ಪ್ರಸಂಗ
ಪುಸ್ತಕದ ಲೇಖಕರು: ಚಂದ್ರಶೇಖರ ಕಂಬಾರ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಅಣಬೇರು ತಾರೇಶ್ ಕೆ. ಪಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 3.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
"ಜೀಕೆ ಮಾಸ್ತರರ ಪ್ರಣಯ ಪ್ರಸಂಗ" ಕಿರು ಕಾದಂಬರಿಯ ರಚನೆಗಾರರಾದ ಚಂದ್ರಶೇಖರ ಕಂಬಾರರು ಅತ್ಯಂತ ರಸಮಯ ಭರಿತವಾಗಿ ಕಾದಂಬರಿಯನ್ನ ರಚನೆ ಮಾಡಿದ್ದಾರೆ. ಪ್ರತಿ ಪದಗಳೂ ಸಾಮಾನ್ಯ ಓದುಗನ ಮನ ಮುಟ್ಟುವಂತೆ ಇವೆ. ಎಂತಹ ವ್ಯಕ್ತಿಗೂ ಅರ್ಥವಾಗುವ ಪದಗಳ ಜೋಡಣೆ ನಿಜಕ್ಕೂ ಸರಳವಾಗೆ ಇದೆ. ಸಲುಗೆ ಸ್ನೇಹವಾಗಿ, ಸ್ನೇಹ ಪ್ರೇಮವಾಗಿ ಪ್ರೇಮ ಕಾಮಕ್ಕೆ ಹೇಗೆ ಬದಲಾಗುತ್ತದೆ ಎನ್ನುವುದನ್ನ ಎಳೆ ಎಳೆಯಾಗಿ ಬಿಚ್ಚಿಕೊಟ್ಟಿದ್ದಾರೆ. ಪ್ರೀತಿಗೆ ಕಣ್ಣಿಲ್ಲ ಅನ್ನುವ ಸತ್ಯದಂತೆ ಕಾಮಕ್ಕೆ ವಯಸ್ಸಿನ ಮಿತಿಯೇ ಇಲ್ಲ, ಕಾಮ ಕಾವಿಯನ್ನೂ ಬದಲಾಯಿಸಿ, ಸಂಸಾರಿಯನ್ನಾಗಿಸುವ ಶಕ್ತಿ ಹೊಂದಿದೆ. ಪ್ರೇಮ ಮತ್ತು ಕಾಮ ಪೈಪೋಟಿಯಲ್ಲೇ ಇರುತ್ತವೆ. ನಿವೃತ್ತಿಯ ವಯಸ್ಸಿನ ಅಂಚಿನಲ್ಲಿರುವ ಹಣ್ಣು ಹಣ್ಣು ಮುದುಕರಾಗಿದ್ದ ಜೀಕೆ ಮಾಸ್ತರರು ಅದೆಷ್ಟು ಕಠಿಣ ಹಾಗೂ ಸರಳತೆಯ ವ್ಯಕ್ತಿ ಆಗಿದ್ದರೂ ವಿದ್ಯಾರ್ಥಿನಿಯ ಚಲುವಿನ ಮಾಧಕ ಸೌಂಧರ್ಯಕ್ಕೆ ಮನಸೋತು ಕೊನೆಗೆ ತಪ್ಪಿನ ಅರಿವಾಗಿ ಸನ್ಯಾಸಿ ಆಗುವ ಕ್ಷಣಗಳು ನಿಜಕ್ಕೂ ರೋಚಕವಾಗಿವೆ. ಹೆಣ್ಣಿನ ಸೌಂಧರ್ಯದ ಮುಂದೆ ವಿಶ್ವಾಮಿತ್ರ ಋಷಿಮುನಿಯೇ ತನ್ನ ತಪಸ್ಸನ್ನ ನಿಲ್ಲಿಸಿಬಿಡುತ್ತಾನೆ ಅಂತಾದ್ದರಲ್ಲಿ ಹುಲು ಮಾನವನಾದ ಜೀಕೆ ಮಾಸ್ತರರು ವ್ಯಾಮೋಹಕ್ಕೆ ಒಳಗಾದದ್ದು ಆಶ್ಚರ್ಯವೇನಲ್ಲ. ವಿಧ್ಯಾರ್ಥಿ ಆದವರು ಅವರ ಸ್ವಾರ್ಥಕ್ಕಾಗಿ ನಿಷ್ಠಾವಂತ ಶಿಕ್ಷಕನನ್ನ ಮೋಹದ ಬಲೆಗೆ ಕೆಡವಿ ಗುರುವಿಗೇ ಅಪಾರ್ಥದ ಉಪದೇಶ ಮಾಡಿ ಶಿಕ್ಷಕನನ್ನೇ ಮೂರ್ಖನನ್ನಾಗಿ ಮಾಡುವುದು ಹಾಗೂ ಮೋಸವನ್ನ ಸತ್ಯವೆಂದು ನಂಬಿ ಮೂರ್ಖರಾಗುವ ಶಿಕ್ಷಕ ಮಾಡಿದ್ದು ಸರಿಯೋ ಎಂಬುದೇ ಈ ಕಾದಂಬರಿಯ ನಿಗೂಢಾರ್ಥವಾಗಿದೆ. ಒಟ್ಟಿನಲ್ಲಿ ಕಾದಂಬರಿ ನಂಬಿಕೆಯನ್ನ ಪರಾಮರ್ಷಿಸಿ ನಂಬಬೇಕು ಎನ್ನುವ ನೀತಿಪಾಠವನ್ನ ಹೇಳುತ್ತದೆ. ಕಾದಂಬರಿಯು ಮೊದಲಿನಿಂದಲೂ ಆಶ್ಚರ್ಯದಿಂದಲೂ ಓದಿಸಿಕೊಂಡು ಹೋಗುತ್ತದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ವಿದ್ಯಾರ್ಥಿಗಳು ಜೀಕೆ ಮಾಸ್ತರರಿಗೆ ಮಾಡುತ್ತಿರುವುದು ಮೋಸ ಅಂತ ಕಾದಂಬರಿಯ ಮಧ್ಯದಲ್ಲಿ ತಿಳಿಯುವುದೇ ಇಲ್ಲ. ಅಚ್ಚುಕಟ್ಟಾಗಿ ಕಂಬಾರರು ಕಾದಂಬರಿ ಎಣೆದಿದ್ದಾರೆ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಗಂಡಸರಿಗಾಗಿ ಹೆಚ್ಚು ಸೂಕ್ತವಾಗಿದೆ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.