Submission 1646

ಪುಸ್ತಕದ ಶೀರ್ಷಿಕೆ: ಅಮ್ಮ ಸಿಕ್ಕಿದ್ಲು

ಪುಸ್ತಕದ ಲೇಖಕರು: ರವಿ ಬೆಳಗೆರೆ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ವಿನಯ್ ಹೊನ್ನಾವರ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಪ್ರತಿಯೊಬ್ಬ ಮನುಷ್ಯ ತನಗೆ ಪ್ರೀತಿ ಸಿಕ್ಕಿಲ್ಲ ಮೋಸ ಮಾಡಿದ್ಳು?ಮೋಸ ಮಾಡಿದ ಆತ?ಎಂದು ಆತ್ಮಹತ್ಯೆ ಮಾಡಿಕೊಳ್ಳೋಕೆ ಮುಂದಾಗ್ತಾರೆ.? ಇದು ಪ್ರತಿ ಮನುಷ್ಯನ ಕೆಟ್ಟ ಆಲೋಚನೆ ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಸಮಯ.ಹೊತ್ತು ಸಾಕಿದ ತಾಯಿ ಬಗ್ಗೆ ಅರಿವೇ ಇರದು.ತಾನು ಪ್ರೀತಿಸಿದ ಹುಡುಗಿ/ಹುಡುಗ ಕಣ್ಣಿಗೆ ಕಾಣೋದು? ಮೋಸವೆಂದು ತಿಳಿದ ಮೇಲೆ ಆತ್ಮಹತ್ಯೆ ಅನ್ನೋ ವಿಷ ಜಂತುವಿಗೆ ತಮ್ಮನ್ನೇ ತಾವೇ ಬಲಿ ತೆಗೆದುಕೊಂಡು ಬಿಡುತ್ತಾರೆ? ಇಷ್ಟು ವರ್ಷ ಸಾಕಿ ಸಲಹಿದ ತಾಯಿಗೆ ಮಾಡಿದ ದ್ರೋಹ ಅಲ್ವಾ ಮಾಡಿದ ಹಾಗೆ ಅಲ್ವಾ ಇಂತಹ ನಿರ್ಧಾರ.ಹೆತ್ತವಳಿಗೆ ಅದೆಷ್ಟು ಸಂಕಟವಾಗಿರಬಹುದು. ಸಾಯುವಾಗ ಕೊನೆಪಕ್ಷ ಅವಳನ್ನ ನೆನೆಸಿಕೊಳ್ತೀವ?ಎಲ್ಲದಕ್ಕೂ ಪರಿಹಾರ ಆತ್ಮಹತ್ಯೆ ಅನ್ನೋದ? ಹೆತ್ತ ತಾಯಿಗೆ ಕೊಡುವ ಕಾಣಿಕೆ ಇದೇನಾ? ಎದೆ ಹಾಲು ಉಣ್ಣಿಸಿದ್ದು ಎಲ್ಲಿಗೆ ಹೋಯ್ತು.ಸಾಯುವಾಗ ಅಮ್ಮನನ್ನ ನೆನೆಸಿಕೊಂಡು ಕೊನೆಗೆ ಬರುವ ಸಾವನ್ನ ತಪ್ಪಿಸಿಕೊಳ್ಳಬಹುದಿತ್ತು. ಆದ್ರೆ ನಾವು ಮಾಡೋದು ಏನೂ ಪ್ಯಾನಿಗೋ /ಮರಕ್ಕೂ ಜೋತಾಡಿ ನೇತಾಡುತ್ತೇವೆ! ನಮ್ಮ ಪ್ರೀತಿಯೇ ಹೆಚ್ಚು ಅಂತ ಸಾಬೀತುಪಡಿಸೋದು. ಕರುಳಿಗೆ ಎಷ್ಟು ನೋವಾಗಿ ಇರಬಹುದು ಎಂಬುದು ಆಲೋಚಿಸಿದ್ದೀರಾ? ತನ್ನದೇ ದೊಡ್ಡ ಕಷ್ಟ ಅಂತ ತಿಳಿದಿದ್ದೀರ ನೀವು ಅಲ್ವಾ? ಅಂತಹುದೇ ಒಂದು ಘಟನೆ ಲೇಖಕರ ಜೀವನದಲ್ಲಿ ಪರಿಣಾಮ ಬೀರಿದ್ದು. ತಾವೂ ಕೂಡ ಆತ್ಮಹತ್ಯೆ ಮಾಡಿಕೊಳ್ಳೋಕೆ ಮುಂದಾಗ್ತಾರೆ?ಸಾಕು ಈ ಜೀವಾ,ಆತ್ಮಹತ್ಯೆ ಅನ್ನೋದೇ ನನ್ನ ಕೊನೆ ನಿರ್ಧಾರ ಅನ್ನುವ ಮಟ್ಟಿಗೆ ಬಂದುಬಿಡುತ್ತಾರೆ. ಇವರನ್ನ ಕಾಪಾಡಿದ್ದು ಇವರ ತಾಯಿ?ತಾಯಿ ಕಷ್ಟಗಳ ಮುಂದೆ ಇವರ ಕಷ್ಟ ಎಂತದೂ ಇಲ್ಲಾ..ತಾಯಿ ಸಾಂತ್ವನ ನುಡಿಗಳು ಹೇಗಿದ್ದವು.ಹೇಗೆ ಸಾವಿನ ದವಡೆಯಿಂದ ಪಾರಾದರು ಎಂಬುದು ಈ ಲೇಖನದಲ್ಲಿ ಅಡಕವಾಗಿದೆ. ತಾಯಿ ಕಷ್ಟ ಎಂತದ್ದು ಅನ್ನುವ ಜೀವನದಲ್ಲಿ ನಡೆದ ಕಹಿ- ಸಿಹಿ ಘಟನೆ ವಿವರಿಸಿದ್ದಾರೆ. ಕೊನೆತನ ಜೊತೆಗೆ ಯಾರು ಬರ್ತಾರೆ? ಇರ್ತಾರೆ? ಎಂಬುದು ಗೊತ್ತಿಲ್ಲ..ಆದರೆ ಕೊನೆಗೆ ಇರೋದು ತಾಯಿ ಒಬ್ಬಳೇ ಅನ್ನೋದು ಖಂಡಿತ ಸತ್ಯ.ಜೀವನದಲ್ಲಿ ನೂರಾರು ಜನರು ಬಂದು ಹಾದು ಹೋಗುವರು.ಅದೇ ತಾಯಿಯಂತ ಪ್ರೀತಿ ಯಾರು ಕೊಡಲು ಸಾಧ್ಯವಿಲ್ಲ ಅನ್ನೋದು ಪ್ರತಿ ಮನುಷ್ಯನಿಗೂ ಅರಿವು ಇರಲಿ.. ತಾಯಿ ತರ ಪ್ರೀತಿ ಕೊಡಲು ಯಾರಿಂದ ಸಾಧ್ಯ? ಓದಿ ಆದ್ಮೇಲೆ ತಾಯಿ ಅನ್ನೋ ಪಾತ್ರ ಏನು?ಅವಳ ಸಂಕಷ್ಟ ಮುಂದೆ ನಮ್ಮದೇನು ಅಲ್ಲಾ?ತಾಯಿ ಒಬ್ಬಳೇ ಸಾಕು ಜೀವನ ಸುಂದರವಾಗಿಸೋಕೆ!

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಕಾದಂಬರಿಯಲ್ಲಿ ಒಂದೊಂದು ಸ್ಮರಣೆಯ ಕ್ಷಣ ಒಂದು ಚಿತ್ತಾರ: ಅಮ್ಮನ ಬೆರಳನ್ನು ಹಿಡಿದು ನಡೆಯುವ ಬಾಲ್ಯ, ಅಮ್ಮ ಮಲಗಿದ ಜೋಳದ ಬಣವೆ ಬಳಿಯ ಸಂಜೆ ಕಥೆಗಳು, ಮಳೆಯ ಶಬ್ದಕ್ಕೆ ಮಗನನ್ನು ಹೊದಿಸಿ ಹಿಡಿದ ರಾತ್ರಿಗಳು, ಕೊನೆಗೆ ಅಮ್ಮ ಸಿಕ್ಕಿದ ದಿನ, ನಿಟ್ಟುಸಿರು ತುಂಟ ಹಕ್ಕಿಯಂತೆ ಹೊರಟ ಕ್ಷಣ. ಕಥೆಯಲ್ಲಿ ಅಮ್ಮ ಸಿಕ್ಕಿದದ್ದು ದುಃಖದ ಸಂಗತಿ ಅಲ್ಲ; ಅವಳು ಬಿಟ್ಟ ನೆನಪು ಪಾಠ, ಅವಳ ಪ್ರೀತಿ ಶಕ್ತಿ. ಬೆಳಗೆರೆ ತನ್ನ ಬದುಕಿನಲ್ಲಿ ಕುಸಿದಾಗ, ಅವಳ ಧ್ವನಿ ಝೇಂಕಾರವಾಗಿ ಕೇಳುತ್ತದೆ: “ನೀ ನಿಂತೇ ಇರಬೇಕು. ಸ್ಪಷ್ಟ ಧ್ವನಿ ಕೇಳುತ್ತದೆ, ತಾಯಿಯ ಮಹತ್ವ ಅದ್ಭುತವಾಗಿ ವರ್ಣಿಸಿದ್ದಾರೆ. ಇದರಲ್ಲಿ ನನಗೆ ಹೆಚ್ಚು ಕಾಡಿದ್ದು ಪಾತ್ರಗಳು, ರಾಘು, ಸುಮ್ಮಿ, ರವಿ, ಚಳ್ಳಕೆರೆಯ ರಸ್ತೆಗಳು.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಇಂದಿನ ದಿನಗಳಲ್ಲಿ ಪ್ರೀತಿ, ಮೋಸ, ಸ್ನೇಹ, ಒಂಟಿತನ ಇವು ಎಲ್ಲವೂ ಯುವಕರ ಬದುಕಿನ ಭಾಗ. ಆದರೆ ಆ ಗೊಂದಲಗಳ ಮಧ್ಯೆ ತಾಯಿಯ ಪ್ರೀತಿ, ತಾಯಿಯ ಕಾಳಜಿ, ತಾಯಿಯ ತ್ಯಾಗ ಇವುಗಳನ್ನು ನಾವು ಎಷ್ಟು ಬಾರಿ ನೆನಪಿಸಿಕೊಳ್ಳುತ್ತೇವೆ? ಈ ಪುಸ್ತಕ ಒಬ್ಬ ಯುವಕನ ಬದುಕಿನ ನೋವಿನ ಹಾದಿಯಲ್ಲಿ ತಾಯಿಯ ಮಮತೆಯೇ ಎಷ್ಟು ದೊಡ್ಡ ಶಕ್ತಿ ಎಂಬುದನ್ನು ಹೇಳುತ್ತದೆ. ಮೋಸದ ನೋವಿನಿಂದ ಕುಸಿದಾಗ, ಕುಡಿತದ ಚಟಕ್ಕೆ ಒಳಗಾದಾಗ, ಜೀವನದ ದಿಕ್ಕು ತಪ್ಪಿದಾಗ ತಾಯಿ ನೀಡಿದ ಸ್ಪರ್ಶ, ಮಾತು, ನೆನಪು ಬದುಕನ್ನು ಮತ್ತೆ ಬೆಳಕಿನ ಕಡೆ ತಿರುಗಿಸಬಹುದು ಎಂಬ ಸಂದೇಶ ಇದೆ. ಇಂದೊಂದು ಭಾವನಾತ್ಮಕ ಕಾದಂಬರಿಯಾಗಿದೆ, ಪ್ರತಿ ಪುಟದಲ್ಲೂ ಕಣ್ಣೀರು ತರಿಸುವ ಸೂಕ್ಷ್ಮತೆ ಒಳಗೊಂಡಿದೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

23
Votes
245
Views
7 Months
Since posted

Voting Closed!

Scroll to Top