ಪುಸ್ತಕದ ಶೀರ್ಷಿಕೆ: ಹಾಡು ಹುಟ್ಟಿದ ಸಮಯ
ಪುಸ್ತಕದ ಲೇಖಕರು: ಎ ಆರ್ ಮಣಿಕಾಂತ್
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಹಣಮಂತಪ್ಪ ಪೋರ್ಟಗೇರಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ನಾನು ಓದಿದ ಕೆಲವೇ ಕೆಲವು ಪುಸ್ತಗಳಲ್ಲಿ ಮನಮುಟ್ಟುವಂತೆ ಹಾಗೂ ಮನದ ಕದ ತೆರೆಸಿದ ಪುಸ್ತಕ ಎ ಆರ್ ಮಣಿಕಾಂತ್ತ್ ಅವರ ಹಾಡು ಹುಟ್ಟಿದ ಸಮಯ ಒಂದಾಗಿದೆ. ಕವಿ ಪತ್ರಕರ್ತರು ಮತ್ತುವಿಮರ್ಶಕರು ಇವರು ಕವಿತೆ ಬರೆದ ಕವಿಗಳ ಮನಸಿನ ಮಾತು ನಮಗೆ ಕೇಳಿಸುವಂತೆ ಮಾಡಿದ್ದೂ ಓದುಗರನ್ನು ಸೆಳೆಯುವಂತಿದೆ... ಶ್ರೀ ಎ ಆರ್ ಮನೀಕಾಂತ ಅವರು ಕನ್ನಡಿಗರ ಮನಸುರೆಮಾಡಿದ ಎಪತ್ತು ಎಂಬತ್ತರ( 70-80) ದಶಕದ ಸಿನಿ ರಸಿಕರ ಮನ ಗೆದ್ದ ಚಿತ್ರ ಸಾಹಿತಿಗಳು ಕವಿತೆ ಬರೆದ ಸಮಯ ಹುಡುಕಿದ್ದು ಬಹಳ ಅದ್ಬುತ..!! ಈ ಪುಸ್ತಕ ದಲ್ಲಿ ಸುಮಾರು 36-37 ಗೀತೆ ಗಳ್ಳನ್ನು ಕೊಟ್ಟಿದ್ದಾರೆ... ಮತ್ತು ಆ ಕವಿತೆ ಹೇಗೆ ಹುಟ್ಟಿತು ಎನ್ನುವದನ್ನು ಸ್ವತ:ಕವಿಗಳಿಂದ ಮಾತನಾಡಿಸಿದ್ದಾರೆ.. ಒಬ್ಬ ಕವಿ ಮತ್ತೊಬ್ಬ ಕವಿಯನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿ... ಕವಿತೆ ಹುಟ್ಟಿದ ರೀತಿ ಕಾರಣ ಕೇಳಿ ಉತ್ತರಿಸಿದ್ದಾರೆ... 20 ರ ದಶಕದಲ್ಲಿ ಪ್ರಶಿದ್ದೀಯಾದ ಮುಂಗಾರು ಮಳೆ ಮೂಲಕ ಹೆಸರಾದ ಕವಿ ಜಯಂತ್ ಕಾಯ್ಕಿಣಿ ಸರ್ ಅವರ... ಮಳೆ ನಿಂತು ಹೋದ ಮೇಲೆ.. ಹಾಡಿನ ಸಾಲು ಪುಸ್ತದ ಮುಖ್ಯಪುಟದಲ್ಲಿದ್ದು ಮನಸೆಳುತ್ತಿದೆ.. ಒಮ್ಮೆ ಓದಿದರೆ ಮತ್ತೊಮ್ಮೆ ಓದಬೇಕು ಎನ್ನುವಷ್ಟು ರುಚಿಸುತ್ತದೆ ಈ ಪುಸ್ತಕ.. ಉದಾಹರಣೆ ಗೆ ಹೇಳೋದಾದ್ರೆ... ರವಿ ವರ್ಮ ನ ಕುಂಜದ ಕಲೆ ಬಲೇ ಸಾಕಾರವೋ... ಮತ್ತು ಹಂಸಲೇಖ ಅವರ ಕನ್ನಡ ನಾಡಿನ ಶ್ರೇಷ್ಠ ಗೀತೆ ಗಳಲ್ಲಿ ಒಂದಾದ.. ಹುಟ್ಟಿದರೆ ಕನ್ನಡ ನಡಲ್ಲಿ ಹುಟ್ಟಬೇಕು.. ಎನ್ನುವ ಗೀತೆ ಯಾರಿಗೆ ತಾನೇ ಗೊತ್ತಿಲ್ಲಾ.. ಹೇಳಿ? ಇಂತಹ ಗೀತೆ ಗಳನ್ನ ಕವಿಗಳು ಹೇಗೆ ರಚಿಸಿದರು.. ಎಂದು ತಿಳಿದರೆ.. ರೋಮಾಂಚನ ಮತ್ತು ಅಚ್ಚರಿ ಆಗುತ್ತೆ.. ಸರ್.. ಕೆಲವು ಹಾಡು ಟ್ರೈನ್ ನಲ್ಲಿ ಹುಟ್ಟದಾವಂತೆ ಇನ್ನು ಕೆಲವವು ನಿದ್ದೆ ಬರದಿದ್ದಾಗ ಬರೆದರಂತೆ.. ಮತ್ತೆ ಕೆಲವು ಟಾಯ್ಲೆಟ್ ನಲ್ಲಿ ನೆನಪಾದಾವಂತೆ. ಏನ್ರಿ!! ಏನಂತ ಹೇಳಲಿ ಆಹಾ!ಹಾ!!ಈ ಪುಸ್ತಕ ದ ಬಗ್ಗೆ ಹೀಗೆ ಬರೀತಾಹೋದಂತೆ ಪುಟಗಳೇ ಸಾಲಲ್ಲ.ರೀ.!! ಧನ್ಯವಾದಗಳು 🙏🙏🙏🙏💐💐
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಈ.. ಪುಸ್ತಕ ನನಗೆ ಸ್ಫೂರ್ತಿ.... ಲೇಖಕರು... ಚಿತ್ರ ಚಿತ್ರ ಸಾಹಿತಿಗಳನ್ನು ಸಂದರ್ಶಸಿದ ಹಾಗೆ.... ನಮ್ಮ ನಾಡಿನ ಖ್ಯಾತ ಕವಿ/ಲೇಖಕರನ್ನ /ಕಥೆಗರಾರಣ್ಣ ಸಂದರ್ಶಹಿಸಿದ್ದರೆ ಚನ್ನಗಿತ್ತು... ಉದಾ :ಕುವೆಂಪು ಬೇಂದ್ರೆ ಕಾರಂತ ಕಾರ್ನಾಡ್ ಚನ್ನಾವೀರ ಕಣವಿ ಸಿದ್ದಲಿಂಗಯ್ಯ ಮುಂತಾದ ಇತ್ತೀಚಿನ ಕವಿಗಳನ್ನು... ಸಂದರ್ಶಸಿ.... ಕವಿತೆ ಕಾದಂಬರಿ ಹುಟ್ಟಿಗೆ ಕಾರಣ ತಿಳಿಸಿದ್ದರೆ... ಇನ್ನು ಅದ್ಭುತ..!!!
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಕವಿತೆ ಬರೆಯುವ ಕವಿಗಳಿಗೆ... ಸ್ಫೂರ್ತಿ ಈ ಪುಸ್ತಕ ಓದಿದರೆ.... ಒಳ್ಳೆ ಸಾಹಿತಿ ಯಾಗಬಹುದು
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.