Submission 1734

ಪುಸ್ತಕದ ಶೀರ್ಷಿಕೆ: ಜುಗಾರಿ ಕ್ರಾಸ್

ಪುಸ್ತಕದ ಲೇಖಕರು: ಕೆ. ಪಿ. ಪೂರ್ಣಚಂದ್ರ ತೇಜಸ್ವಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಅಕ್ಷತಾ ಮಡಿವಾಳ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬರೆದಿರುವ "ಜುಗಾರಿ ಕ್ರಾಸ್ " ಪ್ರತಿಯೊಬ್ಬರೂ ಓದಲೇಬೇಕಾದ ವಿಶಿಷ್ಟ ಅನುಭವ ನೀಡುವ ಕಾದಂಬರಿ. ಪಶ್ಚಿಮ ಘಟ್ಟಗಳ ಹಸಿರು ಪರ್ವತ ಶ್ರೇಣಿಗಳೊಂದಿಗೆ ಆರಂಭವಾಗುವ ಕಾದಂಬರಿ ಬಹಳ ಕುತೂಹಲ ಮೂಡಿಸುತ್ತದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ನಡೆಯುವ ಪತ್ತೆದಾರಿ ಕಾದಂಬರಿಯಾಗಿದೆ. ಈ ಕಾದಂಬರಿ ಕೆಟ್ಟ ಕೆಡಕುಗಳನ್ನು, ಕಾಡು ಕಳ್ಳತನ ಭೋಗತ ಕೆಲಸದ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ತೇಜಸ್ವಿ ಅವರ ಈ ಕತೆ ಓದುಗರನ್ನು ಮೊದಲ ಪುಟದಿಂದ ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ಪ್ರತಿಯೊಂದು ತಿರುವಿನಲ್ಲೂ ಏನಾಗುತ್ತದೆ ಎಂಬ ಕೂತುಹಲ ಕೆರಳಿಸುತ್ತದೆ. ಜುಗಾರಿ ಕ್ರಾಸಿನಲ್ಲಿ ನಡೆಯುವ ಅಪರಾಧ ಭ್ರಷ್ಟಾಚಾರಗಳಿಂದ ಹಿಡಿದು ದೇವಪುರದ ಕಾಳಸಂತೆ,ಬಿದಿರು ಬುಟ್ಟಿಗಳು,ಮಾತಾಡಲು ಬಾರದ ಹುಡುಗಿಯ ಹೂವಿನ ವ್ಯಪಾರದ ಕತೆ,ಕ್ಯಾಪ್ಟನ್ ಖುದ್ಧೂಸನ ಘಾಟಿ ಎಸ್ಪ್ರೆಸ್ ಬಸ್ಸು ಇವೆಲ್ಲ ಸನ್ನಿವೇಶಗಳು ಕಣ್ಣೆದುರೇ ನಡೆಯುತ್ತಿರುವಂತೆ ಅನುಭವ ಉಂಟಾಗುತ್ತದೆ. ರೈತ ದಂಪತಿಗಳಾದ ಸುರೇಶ ಮತ್ತು ಗೌರಿ ತಮ್ಮ ಏಲಕ್ಕಿ ಬೆಳೆಯನ್ನು ಮಾರಾಟ ಮಾಡಲು ಪಟ್ಟಣಕ್ಕೆ ಹೊರಟ ದಾರಿಯಲ್ಲಿ ಜುಗಾರಿ ಕ್ರಾಸ್ ನಲ್ಲಿ ಅನಿರೀಕ್ಷಿತ ವ್ಯಕ್ತಿಗಳ ಬೇಟಿಯಾಗುತ್ತದೆ. ಗೌರಿ ಮತ್ತು ಸುರೇಶ ತಮಗೆ ಗೊತ್ತಿಲ್ಲದಂತೆ ಭೂಗತ ಜಗತ್ತಿನೊಳಗೆ ಸಿಲುಕಿ ಪರದಾಡುತ್ತಾರೆ. ಈ ಪರದಾಟದಲ್ಲಿ ಮನ್ಮಥ ಬೀಡಸ್ಟಾಲ್ ಶೇಷಪ್ಪ,ಸುರೇಶನ ಗೆಳೆಯ ರಾಜಪ್ಪ ಸೇರಿಕೊಳ್ಳುತ್ತಾರೆ. ಅದರಿಂದ ತಪ್ಪಿಸಿಕೊಳ್ಳಲು ಅವರು ತೆಗೆದುಕೊಂಡ ನಿರ್ಧಾರಗಳು,ರಾಜಪ್ಪ ಕೊಟ್ಟ ಗುರುರಾಜ ಪಂಡಿತನ ಕಡತದ ರಹಸ್ಯ, ಸುರೇಶ ಕಡತದ ಒಳಾರ್ಥ ಕಂಡುಹಿಡಿಯುವುದು, ಕುಂಟರಾಮನ ಬೇಟಿ ಈ ಎಲ್ಲಾ ಕುತೂಹಲಕಾರಿ ಸಂಗತಿಗಳು ಕಾದಂಬರಿಯನ್ನು ಓದುತ್ತಾ ಹೋದಂತೆ ಕಲ್ಪನಾ ಜಗತ್ತಿನಲ್ಲಿ ನಿಂತು ನೋಡುತ್ತಿದ್ದಂತೆ ತಾನು ಅದರಲ್ಲಿ ಪಾತ್ರವೆಂಬಂತೆ ಓದುಗರಿಗೆ ಬಾಸವಾಗುವುದಂತೂ ಸತ್ಯ. "ತಲೆ ತಪ್ಪಿಸಿಕೊಂಡು ಎಲ್ಲೋ ಬದುಕಿ ಮುದಿಯಾಗಿ ಕಾರಣವಿಲ್ಲದೆ ಸಾಯುವುದಕ್ಕಿಂತ ಸಕಾರಣವಾದ ಸಾವನ್ನು ಎದುರಿಸುವುದು ಎಷ್ಟೋ ವಾಸಿ "

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

2
Votes
98
Views
7 Months
Since posted

Voting Closed!

Scroll to Top