Submission 2047

ಪುಸ್ತಕದ ಶೀರ್ಷಿಕೆ: "ನಮ್ಮ ಊರಿನ ರಸಿಕರು"

ಪುಸ್ತಕದ ಲೇಖಕರು: ಗೋರೂರು ರಾಮಸ್ವಾಮಿ ಅಯ್ಯಂಗಾರ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಷಣ್ಮುಖಾರಾಧ್ಯ ಕೆ ಪಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಶ್ರೀ ಗೋರೂರು ರಾಮಸ್ವಾಮಿ ಅಯ್ಯಂಗಾರರ ವಿಶಿಷ್ಟ ಕಥಾವಸ್ತು ಮತ್ತು ಸಮಾಜಮುಖಿ ನಿರೂಪಣೆ ಒಳಗೊಂಡ ಸಾಹಿತ್ಯ ಶೈಲಿಯ ಕೃತಿಗಳಲ್ಲಿ "ನಮ್ಮ ಊರಿನ ರಸಿಕರು " ಸಹ ಒಂದಾಗಿದೆ. ಗ್ರಾಮೀಣ ಪರಿಸರದ ಹಿನ್ನಲೆಯಲ್ಲಿ ಹಾಸ್ಯ ಮಿಶ್ರಿತ ವಾತಾವರಣದ ಮಧ್ಯೆ ಈ ಕೃತಿ ಮೂಡಿ ಬಂದಿದೆ. ಮಲೆನಾಡಿನ ಹಳ್ಳಿಯೊಂದರ ಸೌಂದರ್ಯವನ್ನು ವಿವರಿಸುತ್ತಾ, ಕೆಲವು ವ್ಯಕ್ತಿತ್ವಗಳ ಪರಿಚಯ ಮಾಡುತ್ತ, ಹಳ್ಳಿಯ ಬದುಕಿನ ದಿನ ನಿತ್ಯದ ಚಟುವಟಿಕೆಗಳು ಮತ್ತು ಅದಕ್ಕೆ ಹೊಂದಾಣಿಕೆಯಾದ ಜನರ ಹವ್ಯಾಸಗಳನ್ನು ವಿವರಿಸುತ್ತಾ ಕತೆಯ ಚಿತ್ರಣ ತೆರೆದುಕೊಳ್ಳುತ್ತದೆ. ವಿವಿಧ ಋತುಮಾನಗಳಲ್ಲಿನ ರೈತರ ಚಟುವಟಿಕೆಗಳು,ಅನುಕೂಲವಲ್ಲದ ಪರಿಸ್ಥಿತಿಗಳಲ್ಲಿ ರೈತರ ಮನೋಧೈರ್ಯ ಮತ್ತು ಕೆಲಸಗಳನ್ನು ಪೂರ್ಣ ಗೊಳಿಸುವ ಮನೋಸ್ಥಿತಿಯ ಬಗ್ಗೆ ವಿವಿಧ ವ್ಯಕ್ತಿತ್ವಗಳ ಉದಾಹರಣೆಗಳ ಮೂಲಕ ನೈಜತೆಯನ್ನು ಹೊರಚೆಲ್ಲಿದ್ದಾರೆ. ಮಹಿಳೆಯರ ಪಾತ್ರ, ಹಳ್ಳಿಯ ದೈನಂದಿನ ಜೀವನದಲ್ಲಿ ಹೊಂದಿರುವ ಪ್ರಾಮುಖ್ಯತೆ,ಅವರ ಹೃದಯ ವೈಷ್ಯಾಲ್ಯತೆ,ಚಾಕಚಕ್ಯತೆ,ಕಾಳಜಿ,ಕೃಷಿ ಕುಟುಂಬಕ್ಕೆ ಅನುಗುಣವಾಗಿ ಹೊಂದಿಕೆಯಾದ ಅವರ ದಿನನಿತ್ಯದ ಚಟುವಟಿಕೆಗಳನ್ನು ಸಮಗ್ರವಾಗಿ ಚಿತ್ರಿಸಲಾಗಿದೆ, ಪಟ್ಟಣ ಮತ್ತು ಹಳ್ಳಿಯ ಜೀವನ ಶೈಲಿಯ,ಸಂಸ್ಕೃತಿಯ ನಡುವಿನ ವ್ಯತ್ಯಾಸದ ಪರದೆ,ಆದರೆ ಕೊನೆಗೆ 'ಕಾಯಕವೇ ಕೈಲಾಸ' ವೆಂದು ತಮ್ಮನ್ನೇ ಅರ್ಪಿಸಿಕೊಂಡು,ಅದರಲ್ಲೇ ಧನ್ಯತೆ ಮತ್ತು ನೆಮ್ಮದಿಯನ್ನು ಕಾಣುವ ಹಳ್ಳಿಯ ಜೀವಗಳಿಗೆ ಮನಸೋಲುವ ಪಟ್ಟಣದ ಪ್ರಸಂಗಗಳನ್ನು ಬಣ್ಣಿಸಿದ್ದಾರೆ. ಊರಿನ ವಾರ್ಷಿಕ ಉತ್ಸವ, ಹಬ್ಬ ಹರಿದಿನಗಳಲ್ಲಿ ವೈಭವಯುತ ವಾದ ಆಚರಣೆಗಳ ವಾಸ್ತವ ಇಲ್ಲದಿದ್ದರೂ,ಭಕ್ತಿ ಭಾವಗಳ ಮನಸ್ಥಿತಿಯಲ್ಲಿನ ಸರಳ ಸಂಭ್ರಮಗಳು,ಹಾಸ್ಯ ಮಿಶ್ರಿತ ಸನ್ನಿವೇಶಗಳು ಕಳೆಕಟ್ಟಿವೆ. ಪರಸ್ಪರ ಅವಲಂಬಿತವಾದ ಸಹಕಾರ ತತ್ವದಡಿ ಸ್ನೇಹ ಮೂಡಿದ ವಾತಾವರಣದಲ್ಲಿ ಅಪಾರ ಆನಂದವನ್ನು ಹೊಂದುವ ಮನಸ್ಸುಗಳನ್ನು ಯಾರಾದರೂ ಮೆಚ್ಚಲೇಬೇಕು. ಮದುವೆ ಮುಂತಾದ ಕಾರ್ಯಗಳಲ್ಲಿ ಇಡೀ ಹಳ್ಳಿಯೇ ಕೈ ಜೋಡಿಸುವ ಪರಿ, ಅಲ್ಲಿ ತೆರೆಯುವ ವಿಶಿಷ್ಟ ಸಂಪ್ರದಾಯದ ಆಚರಣೆಯ ಕವಲುಗಳು ,ಹೊಲದ ಒಡೆಯನಾದವನು ತನ್ನ ರೈತರಿಗೆ ತೋರಿಸುವ ಪ್ರೀತಿ, ಕಾಳಜಿ, ಕೆಲವೊಂದು ಪೇಚಿಗೆ ಸಿಲುಕುವ ಹಾಸ್ಯ ಬರಿತ ಸನ್ನಿವೇಶಗಳು ಮತ್ತಷ್ಟು ಕುತೂಹಲ ಕೆರಳಿಸುತ್ತವೆ. ಮೂಢ ನಂಬಿಕೆಗಳು ಮತ್ತು ಅವುಗಳ ತೆರೆಯ ಹಿಂದಿನ ನೈಜ ಹಿನ್ನಲೆಗಳ ವಿವರಣೆಯನ್ನು ಕಾಣಬಹುದು. ಹಳ್ಳಿಯ ಜನ ಸಮೂಹ ಕಲೆಗೆ ನೀಡುವ ಬೆಲೆ, ಕೃಷಿ ಹಿನ್ನೆಲೆಯಲ್ಲಿ ಜಾನಪದ ಸೊಗಡಿನ ಮೂಲ ಕಲೆ,ಆಟಗಳು,ನಾಟಕ ಮತ್ತು ಹಾಡುಗಳ ಸಂಪತದ್ಭರಿತವಾದ ರಮಣೀತೆಯ ದೃಶ್ಯಗಳನ್ನು ಸುಂದರವಾಗಿ ಚಿತ್ರಿಸಲಾಗಿದೆ. ಒಟ್ಟಾರೆಯಾಗಿ ಕೃಷಿ, ಕಲೆ, ಸಂಪ್ರದಾಯ ಮತ್ತು ಆಚರಣೆಗಳು, ಸಹಕಾರ ಮನೋಭಾವನೆಯ ಹಿನ್ನಲೆಯೊಂದಿಗೆ ಹಳ್ಳಿಯ ಸಮಗ್ರ ಚಿತ್ರಣವನ್ನು ಈ ಕೃತಿಯಲ್ಲಿ ತೆರೆದಿಡಲಾಗಿದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

113
Votes
272
Views
6 Months
Since posted

Voting Closed!

Scroll to Top