ಪುಸ್ತಕದ ಶೀರ್ಷಿಕೆ: ಹೇಳಿ ಹೋಗು ಕಾರಣ
ಪುಸ್ತಕದ ಲೇಖಕರು: ರವಿ ಬೆಳಗೆರೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸೃಷ್ಟಿ ಮಹೇಶ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಹೇಳಿ ಹೋಗು ಕಾರಣ, ಹಿಮಾವಂತ ಮತ್ತು ಪ್ರಾರ್ಥನಾಳ ಪ್ರೇಮವೇ ಇಲ್ಲಿ ಪ್ರತಿ ಪುಟದಲ್ಲೂ ಮಾರ್ದನಿಸುತ್ತದೆ. ಪ್ರಾರ್ಥನಾಳನ್ನು ಅಗಾಧವಾಗಿ ಪ್ರೀತಿಸುವ ಹಿಮವಂತ ತನ್ನ ಕಿರುಬೇರಳಿನಿಂದಲೂ ಮುಟ್ಟದೆ ಪ್ರೀತಿಸುವ ಮಹಾನ್ ಪ್ರೇಮಿ. ಕಷ್ಟಪಟ್ಟು ಅವಳನ್ನು ಮೆಡಿಕಲ್ ಓದಿಸುತ್ತಾನೆ. ಪ್ರಾರ್ಥನಾ ಕೂಡ ಅವನನ್ನು ಪ್ರೀತಿಸುತ್ತಿದ್ದರೂ ನಿಧಾನವಾಗಿ ಅವಳ ಮನಸ್ಸು ಹಿಮವಂತನ ಪವಿತ್ರ ಪ್ರೇಮದಿಂದ ಅವಳ ಸಹಪಾಠಿ ದೇಭುವಿನ ಕಡೆಗೆ ವಾಲುತ್ತದೆ. ಕೊನೆಗೆ ಅವನ್ನೊಬ್ಬ ಫ್ಲರ್ಟ್ ಎಂದು ತಿಳಿದು ಕೂಡ ಅವನನ್ನೇ ವಿವಾಹವಾಗುತ್ತಾಳೆ. ಅಲ್ಲಿಗೆ ಅವಳಿಗೋಸ್ಕರ ತನ್ನ ಬದುಕನ್ನೇ ಸವೇಸಿದ ಹಿಮವಂತನ ಕನಸಿನ ಸೌಧ, ಪ್ರಾರ್ಥನಾ ಲೇಔಟ್ ಕುಸಿಯುತ್ತದೆ. ಹಿಮವಂತ ಮೌನವಾಗಿ ನೋವನುಭವಿಸುತ್ತಾನೆ. ಇದರ ನಡುವೆ ಎಲ್ಲರಿಗೂ ಕಾಡುವ ಪಾತ್ರ ಉರ್ಮಿಳಾ, ಸೂಳೆಯಾಗಬೇಕು ಎಂಬ ಕನಸ ಹೊತ್ತವಳು ಹಿಮವಂತನಂಥ ದೇವರ ಭಕ್ತಳಾಗುತ್ತಾಳೆ. ದೇವರಿಗೆ ಮೋಸ ಮಾಡುವುದುಟೆ ಎಂದು ಕೇಳಿದ ಪ್ರಾರ್ಥನಾ ದೇವರನ್ನೇ ಬಿಟ್ಟುಹೋಗುತ್ತಾಳೆ. ಪ್ರಾರ್ಥನಾ ಏಕೆ ಹಿಮವಂಥನನ್ನು ಬಿಟ್ಟಳು? ನನಗು ಅವಳ ಕೈ ಹಿಡಿದು ಕೇಳಬೇಕೇನುಸುತ್ತದೆ..... ಹೇಳಿ ಹೋಗು ಕಾರಣ ಅಂತ..... ಪ್ರೇಮವೇ ಹಾಗೆ, ಅದು ಬಿಟ್ಟು ಹೋದವರಿಗಿಂತ ಉಳಿದು ಬಿಟ್ಟವರಿಗೆ ಹೆಚ್ಚು ಯಾತನೆ ಕೊಡುತ್ತೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಹಿಮವಂತ, ಉರ್ಮಿಳಾ ನನಗೆ ಹೆಚ್ಚು ಕಾಡುವ ಪಾತ್ರಗಳು. ಈ ಕಾದಂಬರಿಯನ್ನು ಓದುತ್ತಾ ನಮ್ಮೊಳಗೊಬ್ಬ ಹಿಮವಂತ ಹುಟ್ಟಿಬಿಡುತ್ತಾನೆ. ಪ್ರೇಮ ವೈಫಲ್ಯವೆಂಬುದು ಅಂಗಾಲಿಗೆ ಚುಚ್ಚಿ ಒಳಗೆ ಮುರಿದುಕೊಂಡ ಮುಳ್ಳಿನ ಹಾಗೆ ಯಾವಾಗಲೂ ನೋವನ್ನು ಕೊಡುತ್ತಲೇ ಇರುತ್ತದೆ. ಪ್ರೀತಿಸಿ ಸುಮ್ಮನೆ ದೂರಸರಿದು ಬಿಡುವ, ಸಣ್ಣ ಕಾರಣವನ್ನೇ ನೆಪವಾಗಿಟ್ಟುಕೊಂಡು ಪ್ರೀತಿಸಿದವರನ್ನೇ ಕೈ ಬಿಟ್ಟು ಹೋಗಿಬಿಡುವ ಮನಸ್ಸುಗಳು ಇದನ್ನು ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲವೋ....? ಹಿಮವಂತನ ಪಾತ್ರ ಸೃಷ್ಟಿಸಿದ ನನ್ನ ರವಿ ನಿಜಕ್ಕೂ ದಿ ಗ್ರೇಟ್.... ಇಂಥದೊಂದು ಕೃತಿ ಓದುತ್ತಿರುವುದಕ್ಕೆ ವೀ ಆರ್ ಗ್ರೇಟ್....
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಪ್ರೀತಿಸುವ ಮನಗಳಿಗೆ, ವಂಚಿಸಿ ದೂರವುಳಿದ ಮನಸ್ಸಿಗೆ ಈ ಪುಸ್ತಕ ಅರ್ಪಣೆ....
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.