ಪುಸ್ತಕದ ಶೀರ್ಷಿಕೆ: ಅಬಚೂರಿನ ಪೋಸ್ಟಪೀಸು
ಪುಸ್ತಕದ ಲೇಖಕರು: ಪೂರ್ಣಚಂದ್ರ ತೇಜಸ್ವಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಆಶು ಮಲ್ನಾಡ್.
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ನಾನು ಮೊದಲಿಂದ ತೇಜಸ್ವಿ ಅಪ್ಪಟ ಅಭಿಮಾನಿ. ಅವರ ಎಲ್ಲಾ ಕೃತಿಗಳು ಒಂದೊಂದು ಅದ್ಭುತ. ಅದರಲ್ಲಿ ಒಂದು "ಅಬಚೂರಿನ ಪೋಸ್ಟ್ ಆಫೀಸು " ಈ ಕಥಾ ಸಂಕಲನದಲ್ಲಿ ಒಂದು ಗ್ರಾಮೀಣ ಬದುಕಿನ ಜನರ ಜೀವನದಲ್ಲಿ ನಡೆಯುವ ಬದುಕಿನ ಪಾಡನ್ನು ಚಿತ್ರಿಸಲಾಗಿದೆ. ಅನಕ್ಷರತೆ, ಸಮಾಜದ ಅವ್ಯವಸ್ಥೆ, ಒಳಗೊಳಗಿನ ಸಂಘರ್ಷ, ತಳಮಳ ತುಂಬಾ ಚನ್ನಾಗಿ ಹೇಳಲಾಗಿದೆ. ಅದರಲ್ಲೂ 'ತಬರನ ಕಥೆ ' ಇಂದಿಗೂ ಸಹ ಕಾಡುತ್ತದೆ. ತನಗೆ ನ್ಯಾಯವಾಗಿ ಬರಬೇಕಾಗಿದ್ದ ಪಿಂಚಣಿ ಹಣವನ್ನು ಪಡೆಯಲು ಹೋದಾಗ ಅಂದಿನ ಭ್ರಷ್ಟಾಚಾರ, ಅವ್ಯವಸ್ಥೆ, ಅಲೆದಾಟ.ಅನ್ಯಾಯದ ಮದ್ಯೆ ಹಣದ ಅಧಿಕಾರದಲ್ಲಿ ತಬರನ ನ್ಯಾಯ, ಬಡತನ, ಹಸಿವು, ಅಲೆದಾಟ ಎಲ್ಲವೂ ಮುಚ್ಚಿ ಹೋಗುತ್ತದೆ. ಅದರಲ್ಲೂ ಆತನ ಮನೆಯ ಚಿತ್ರಣ, ಹೆಂಡತಿ ಅನಾರೋಗ್ಯ, ಹೆಂಡತಿ ಕಾಲಿನ ಚಿಕಿತ್ಸೆ ಗೆ ಹಣವಿಲ್ಲದೆ 'ಹೆಂಡತಿ ಕಾಲು ಕಡಿದು ಕೊಡುತ್ತೀಯಾ'? ಎಂದು ಮಾಂಸ ಕೊಚ್ಚುವ ಸಾಬಿಯನ್ನು ಕೇಳುವಾಗ ಎಂತವರ ಹೃದಯದಲ್ಲೂ ಸಹ ಅತೀವ ಸಂಕಟ ವಾಗುತ್ತದೆ, ಸಮಾಜದ ಬಗ್ಗೆ ಹೇಸಿಗೆ ಹುಟ್ಟಿಸುತ್ತದೆ. ಅವನು "ಏನೋ ಹೆಂಡತಿ ಕಾಲು ಕಡಿದು ಸಾರು ಮಾಡುತ್ತೀಯಾ?" ಎಂದು ನಗುವಾಗ ಅಂದಿನ ಭ್ರಷ್ಟ ಸಮಾಜವೇ ನಗುವಂತೆ ಭಾಸವಾಗುತ್ತದೆ. ಕೊನೆ ಪಕ್ಷ ಅವಳು ನಾಕಾಣೆ ವಿಷ ಕೇಳುವಾಗ ನಾಕಾಣೆ ಪೈಸೆ ಕೂಡ ಅವನ ಬಳಿ ಇರದೇ ಇದ್ದದ್ದು ಅಂದಿನ ಅವನ ಅಸಹಾಯಕ ಸ್ಥಿತಿ, ಬಡತನ ಕನಿಕರ ತರುತ್ತದೆ. ಅದೇನೇ ಆದರೂ ತಬರನಿಗೆ ನ್ಯಾಯಯುತವಾಗಿ ಬದುಕಲು ಜೊತೆಗೆ ತನ್ನ ಪಾಲಿನ ಹಕ್ಕನ್ನು ಸಹ ಕೇಳಲು ಬಿಡದ ಸಮಾಜದ ಚಿತ್ರಣ ಎದ್ದು ಕಾಣುತ್ತದೆ. ಕೊನೆಗೆ ತಬರನಿಗೆ ಹುಚ್ಚು ಹಿಡಿದಿದೆ ಎಂದು ಹುಚ್ಚನನ್ನಾಗಿ ಮಾಡಲಾಗುತ್ತದೆ. ಇದೆಲ್ಲ ನೋಡುವಾಗ ಸಮಾಜವೇ ಹುಚ್ಚು ಹಿಡಿದಿದೆ ಎನಿಸಿ. ತಬರನ ಹುಚ್ಚು ನ್ಯಾಯವಾಗಿದೆ ಎನಿಸುತ್ತದೆ. ಅದರಲ್ಲೂ ಕೊನೆಯಲ್ಲಿ ಹಣದ ವ್ಯಾಮೋಹವೇ ಎದ್ದು ಕುಣಿಯುತ್ತದೆ. ಅದೇನೇ ಇದ್ದರೂ ಈ ಕತೆಯಲ್ಲಿ " ತಬರನ ಕಥೆ " ಇಂದಿಗೂ ಸಹ, ಸಮಾಜದ ಅವ್ಯವಸ್ಥೆ ಬಗ್ಗೆ ಚಿಂತಿಸುವಂತೆ ಮಾಡಿ ಬೆಳಕು ಚೆಲ್ಲುತ್ತದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ತಬರನ ಕತೆಯಲ್ಲಿ ತಬರನ ಹೆಂಡತಿ ಸಾಯುವಾಗ ಆತನ ಮುಖದಲ್ಲಿ ಏನು ಮಾಡಲಾಗದ ಅಸಹಾಯಕ ಸ್ಥಿತಿ, ಬಡತನ. ಒಳಗೊಳಗೇ ಆತನ ಮನಸಲ್ಲಿ ಸತ್ತ ಪ್ರೇತ ದಂತಹ ಸ್ಥಿತಿ ಮರುಕ ಹುಟ್ಟಿಸುತ್ತದೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಸಮಾಜದ ಅವ್ಯವಸ್ಥೆಯನ್ನು ಪ್ರಶ್ನಿಸುವವರಿಗೆ ಇದೊಂದು ಬೆಳಕು ಚೆಲ್ಲುವ ಪುಸ್ತಕ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.