ಪುಸ್ತಕದ ಶೀರ್ಷಿಕೆ: ಸೋತವನ ಸಾವಿರ ಕಥೆಗಳು
ಪುಸ್ತಕದ ಲೇಖಕರು: ಶ್ರೀ ರನ್ನ ರಾಜ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಪರಸಪ್ಪ ಮಾದರ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
"ಸೋತವನ ಸಾವಿರ ಕಥೆಗಳು" ರನ್ನರಾಜ ನೆಂಬ ಅನಾಮಿಕ ಲೇಖಕ ಬರೆದಿರುವ ಅದ್ಬುತ ಕೃತಿ ಇದೊಂದು ವಿಭಿನ್ನ ಶೈಲಿಯ ಹಾಗೂ ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೊಳಿಸಲು ಪೂರಕವಾಗಿರುವ ಅಂಶಗಳನ್ನು ಒಳಗೊಂಡಿರುವ ಅದ್ಬುತ ಕೃತಿ.ಇದನ್ನು ಗೆಲ್ಲಲು ಹೊರಟಿರುವ ಸಾಧಕನ ಭಗವದ್ಗೀತೆ ಎಂದರೆ ತಪ್ಪಾಗಲಾರದು.ಮನುಷ್ಯನ ಜನನದಿಂದ ಮರಣದ ವರೆಗೆ ಬದುಕಿನಲ್ಲಿ ನಡೆಯುವ ಸೋಲು ಗೆಲುವಿನ ಪ್ರಸಂಗಗಳನ್ನು ವಿಭಿನ್ನವಾಗಿ ಚಿತ್ರಿಸಿದ್ದಾರೆ.ಗೆಲ್ಲಲು ಹೊರಟಿರುವ ಮನಸಿನ ಅದಮ್ಯ ಚೈತನ್ಯಕ್ಕೆ ಅರ್ಪಿಸಿದ್ದಾರೆ. ಈ ಕೃತಿಯ ವಿಶೇಷತೆ ಏನೆಂದರೆ ಇದು ಎಲ್ಲರ ಜೀವನಕ್ಕೆ ಹೊಂದಿಕೆಯಾಗುವುದರಿಂದ ಓದುಗನೆ ಕಥಾನಾಯಕನೆಂದು ತಿಳಿದು ಅರ್ಥೈಸಿಕೊಂಡು ಓದಿದರೆ ವಿಷಯವನ್ನು ಗ್ರಹಿಸಲು ಸರಳವಾಗುತ್ತವೆ. ಈ ಕೃತಿಯ ಕಥಾನಾಯಕ "ಪುಣ್ಯವಂತ".ಇವನ ಹುಟ್ಟಿನಿಂದ ಸಾಧನೆಯ ವರೆಗೆ ನಡೆಯುವ ವಿಭಿನ್ನ ರೀತಿಯ ಅನುಭವಗಳು ಹಾಗೂ ಸ್ವಾರಸ್ಯಕರ ಪ್ರಸಂಗಳೇ ಈ ಕೃತಿಯ ಸಾರಾಂಶ.ಮನುಷ್ಯ ಜನ್ಮತಃ ಹೋರಾಟದ ನಂತರದ ಪ್ರತಿಫಲದ ಸಂಕೇತ.ಇದರಿಂದ ಹುಟ್ಟಿನಿಂದ ಸ್ಪರ್ಧಾ ಮನೋಭಾವ ಬಂದಿರುತ್ತದೆ.ಪುಣ್ಯವಂತನು ಅದೇ ಸ್ವಭಾವದವನು.ಬಡತನದಲ್ಲಿ ಹುಟ್ಟಿದ ಪುಣ್ಯವಂತ ಹಲವಾರು ಕಷ್ಟ ಕಾರ್ಪಣ್ಯಗಳ ನಡುವೆ ಬೆಳೆದು ಎಲ್ಲರ ಕೊಂಕು ಮಾತುಗಳ ನಡುವೆ ತಾನು ಒಂದು ಗುಮ್ಮಟ ಕಟ್ಟುವ ಕನಸನ್ನು ಕಾಣುತ್ತಾನೆ.ಅದನ್ನು ಈಡೇರಿಸಲು ವಿಭಿನ್ನ ರೀತಿಯ ಕೆಲಸಗಳನ್ನು ಮಾಡುತ್ತಾನೆ.ಇದರಿಂದ ಅವನಿಗೆ ಶಾಶ್ವತ ಪರಿಹಾರ ಸಿಗುವುದಿಲ್ಲ.ಮುಂದೆ ಪ್ರೀತಿಯಲ್ಲಿಯೂ ಸಹ ಸೋಲುತ್ತಾನೆ.ಹುಡುಗಿಯ ಮನಸ್ಸನ್ನು ಅರ್ಥಮಾಡಿಕೊಳ್ಳದ ಇವನು ವಿಫಲ ಪ್ರೇಮಿಯಾಗುತ್ತಾನೆ.ಪುಣ್ಯವಂತ ಮೊದಲೆ ಹೊಗಳಿಕೆಗೆ ಹಿಗ್ಗಿ! ತೆಗಳಿಕೆಗೆ ಕುಗ್ಗುವ ಮನುಷ್ಯ!ಇದರಿಂದ ಸಮಾಜ ಮತ್ತು ಜನರು ಅವನಿಗೆ ಎಲ್ಲಾ ರೀತಿಯ ಅನುಭವಗಳಿಗೆ ಗುರಿಮಾಡುತ್ತಾರೆ.ಅವನ ಆಲೋಚನೆಗಳು,ಗುರಿಗಳು ಕುಟುಂಬದ ತದ್ವಿರುದ್ಧವಾಗಿದ್ದವು.ನಂತರದಲ್ಲಿ ತಂದೆ ತಾಯಿಯರ ಇಚ್ಛೆಯ ವಿರುದ್ಧ ಮದುವೆ ಸಹ ಮಾಡಿಕೊಂಡು ಜೀವನ ಸಾಗಿಸುತ್ತಾನೆ.ಮುದ್ದಾದ ಮಗುವಿನೊಂದಿಗೆ ಮನೆಯಲ್ಲಿ ಜಗಳ ವಿರಸಗಳು ಪ್ರಾರಂಭವಾಗಿ ಹಲವಾರು ದುಶ್ಚಟಗಳಿಗೆ ದಾರಿಮಾಡಿಕೊಡುತ್ತವೆ.ಆರ್ಥಿಕವಾಗಿ ಜರ್ಜರಿತನಾಗಿ ಆತ್ಮಹತ್ಯಾ ಅಂತಹ ದುಷ್ಕುತ್ಯಕ್ಕೆ ಕೈ ಹಾಕುತ್ತಾನೆ. ನಂತರದಲ್ಲಿ ಕುಟುಂಬದಿಂದ ಸಂಪೂರ್ಣ ದೂರವಾಗಿ ತನ್ನ ಗುರಿಯನ್ನು ಮುಟ್ಟಲು ತಯಾರಿನಡೆಸುತ್ತಾನೆ. ಯೋಗ್ಯ ಗುರುಗಳ ಸಹಾಯದಿಂದ ತನ್ನ ದುಶ್ಚಟಗಳಿಂದ ದೂರವಾಗಿ ,ಹಿಂದೆ ನಡೆದ ಎಲ್ಲಾ ಸೋಲುಗಳಿಗೆ ,ತಪ್ಪು ನಿರ್ಧಾರಗಳಿಗೆ ತಾನೆ ಕಾರಣವೆಂದು ಅರಿವಾಗುತ್ತದೆ. ಧ್ಯಾನ,ಉಪವಾಸ,ಸತತ ಪ್ರಯತ್ನ ದಿಂದ ತನ್ನ ಗುರಿಯೆಡೆಗೆ ಸಾಗುತ್ತಾನೆ.ಸಮಾಜದ ಪ್ರತಿಷ್ಠೆಯೊಂದಿಗೆ ತನ್ನ ಆಸೆಯಂತೆ ಗುರಿಯನ್ನು ಮುಟ್ಟುತ್ತಾನೆ.ಕಂಡ ಗುರಿಗಿಂತ ನೂರು ಪಟ್ಟು ಯಶಸ್ಸನ್ನು ಗಳಿಸುತ್ತಾನೆ.ತಾನು ಮಾತನಾಡುವುದಕ್ಕಿಂತ ತನ್ನ ಕೆಲಸ ಮಾತಾಡುವಂತೆ ಮಾಡಿ ಸಮಾಜಕ್ಕೆ ತೋರಿಸುತ್ತಾನೆ. ಸಾಧನೆ ಯಾರ ಮನೆಯ ಸ್ವತ್ತಲ್ಲ ಎಂಬುದನ್ನು ನಿರೂಪಿಸುತ್ತಾನೆ.ಇಲ್ಲಿ ಲೇಖಕರು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆಗಳನ್ನು ಎತ್ತಿ ತೋರಿಸಿದ್ದಾರೆ.ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಂತಹ ಅಂಶಗಳನ್ನು ಓದುಗರಿಗೆ ನೀಡಿದ್ದಾರೆ.ತಮ್ಮ ಸೋಲಿಗೆ ಮತ್ತೊಬ್ಬರನ್ನು ಗುರಿ ಮಾಡುವ ವ್ಯಕ್ತಿ ವಾಸ್ತವವಾಗಿ ಆ ಸೋಲಿಗೆ ಅವನೇ ಕಾರಣೀಭೂತನಾಗಿರುತ್ತಾನೆ.ತಪ್ಪನ್ನು ತಿದ್ದಿಕೊಂಡು ನಡೆಯುವ ಮಾರ್ಗಗಳನ್ನು ಲೇಖಕರು ಇಲ್ಲಿ ತಿಳಿಸಿದ್ದಾರೆ. ಗೆಲುವು ನಿನ್ನ ಜನ್ಮಸಿದ್ಧ ಹಕ್ಕು ಹೋರಾಟ ನಿನ್ನ ಬದುಕು ಎಂಬುದನ್ನು ಮನವರಿಕೆ ಮಾಡಿ ಕೊಡುತ್ತವೆ
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಸ್ಮರಣೀಯ ಕ್ಷಣಗಳು ಮೊದಲೇ ಜೀವನದಲ್ಲಿ ಸೋಲುಗಳಿಂದ ಕಂಗೆಟ್ಟಿದ್ದ ಪುಣ್ಯವಂತ ಹಲವಾರು ದುಶ್ಚಟಗಳಿಗೆ ದಾಸನಾಗಿದ್ದ.ತನ್ನ ಸೋಲಿಗೆ ಬೇರೆಯವರನ್ನು ಗುರಿಯಾಗಿಸಿಕೊಂಡಿದ್ದ ಅವನು ತನ್ನ ಗುರಿಯನ್ನು ಪೂರ್ಣಗೊಳಿಸಲು ಕುಟುಂಬವನ್ನು ತ್ಯಜಿಸಿ ಯೋಗ್ಯ ಗುರುಗಳ ಸಹಾಯದಿಂದ ತನ್ನ ಮನಸನ್ನು ಬದಲಾಯಿಸಿ ಧ್ಯಾನ,ಉಪವಾಸ,ಸತತ ಪ್ರಯತ್ನ,ತನ್ನ ಸಂಘಟಿತ ಪ್ರಯತ್ನದಿಂದ ಸಾಧನೆಯ ಶಿಖರವನ್ನು ಮುಟ್ಟುತ್ತಾನೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ನಿರಂತರ ಸೋಲು ಕಂಡು ಹತಾಶರಾದವರಿಗೆ ಗೆಲುವಿನ ನಿರೀಕ್ಷೆ ಇರುವವರಿಗೆ ಬದುಕನ್ನು ಪ್ರೀತಿಸುವವರಿಗೆ ಸೂಕ್ತ ಸಮಯದಲ್ಲಿ ಮಾರ್ಗ ದರ್ಶನ ಇಲ್ಲದವರಿಗೆ ಕೆಳ ಮಧ್ಯಮವರ್ಗದ ಯುವ ಪೀಳಿಗೆಯವರಿಗೆ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.