ಪುಸ್ತಕದ ಶೀರ್ಷಿಕೆ: ಮಲೆಗಳಲ್ಲಿ ಮದುಮಗಳು
ಪುಸ್ತಕದ ಲೇಖಕರು: ಕುವೆಂಪು
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಚಂದ್ರಕಲಾ ಎಂ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಇಲ್ಲಿ ಯಾರೂ ಮುಖ್ಯ ರಲ್ಲ, ಯಾರೂ ಅಮುಖ್ಯರಲ್ಲ, ಯಾವುದಕ್ಕೂ ಮೊದಲಿಲ್ಲ ಯಾವುದಕ್ಕೂ ತುದಿಯಿಲ್ಲ, ಎಲ್ಲಕ್ಕೂ ಇದೆ ಅರ್ಥ, ಯಾವುದೂ ಅಲ್ಲ ವ್ಯರ್ಥ, ನೀರೆಲ್ಲ ಊ ತೀರ್ಥ ಎಂಬುದಕ್ಕೆ ನಿಜವಾದ ಅರ್ಥ ಈ ಕಾದಂಬರಿಯಲ್ಲಿ ಪ್ರಸ್ತಾಪಿಸಿದ್ದಾರೆ. ಮಲೆಗಳಲ್ಲಿ ಮದುಮಗಳು ಇದೊಂದು ನಿಜವಾದ ಹಳ್ಳಿಯ 19ನೇ ಶತಮಾನದಲ್ಲಿ ನಡೆಯುತಿದ್ದ ಮಲೆನಾಡಿನ ಜೀವನ ಶೈಲಿ, ಜಾತಿ, ಧರ್ಮ ರಾಜಕೀಯ ಜೀತ ಪದ್ದತಿಯಂತಹ ವಿಷಯಗಳನ್ನು ಒಳಗೊಂಡಿದೆ. ಇದನ್ನು ಓದಿದವರಿಗೆ ಒಂದು ಅದ್ಭುತವಾದ ಹಳ್ಳಿಯ ಸೊಬಗನ್ನು ಸವಿಯುವ ಮಲೆನಾಡಿನ ಮಳೆಗಾಲದ ಜೀವನದ ಬಗ್ಗೆ ತಿಳಿದುಕೊಳ್ಳುವ ಒಂದು ಅದ್ಭುತ ಪುಸ್ತಕದ ಪರಿಚಯವಾಗುತ್ತದೆ. ಪಾತ್ರಗಳ ಮೂಲಕ ಕುವೆಂಪು ಅವರು ಮಲೆನಾಡಿನ ಪ್ರಕೃತಿ ಮತ್ತು ಮಾನವ ಜೀವನದ ನಿಕಟ ಸಂಬಂಧವನ್ನು ತೋರಿಸಿದ್ದಾರೆ. ಈ ಕಾದಂಬರಿಯಲ್ಲಿ ತುಂಬಾ ಅದ್ಬುತವಾದ ಸರಳ ಪದಬಳಕೆ ಇರುವುದರಿಂದ ಓದುಗರಿಗೆ ಇನ್ನಷ್ಟು ಉತ್ಸಾಹ ಮೂಡಿ ಬರುತ್ತದೆ.ಕುವೆಂಪು ಅವರು ಈ ಕಾದಂಬರಿಯಲ್ಲಿ ಯಾವುದೇ ಒಂದು ಕೇಂದ್ರ ಪಾತ್ರವಿಲ್ಲ ಎಂದು ಹೇಳುತ್ತಾರೆ ಎಲ್ಲ ಪಾತ್ರಗಳು ಸಮಾನವಾಗಿ ಮುಖ್ಯ. ಪಾತ್ರಗಳ ವೈವಿಧ್ಯತೆಯು ಕಾದಂಬರಿಯ ದೊಡ್ಡ ಶಕ್ತಿ, ಇದು ಜೀವನದ ವಿಭಿನ್ನ ಆಯಾಮಗಳನ್ನು ಪರಿಚಯಿಸುತ್ತದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಗುತ್ತಿ: ಕಾದಂಬರಿಯಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ಒಬ್ಬರು, ಇವರ ಪಾತ್ರವು ಕಾಡು ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ತೋರಿಸುತ್ತದೆ. ಹುಲಿಯಾ:ಕಾಡಿನ ಮತ್ತು ಅಲ್ಲಿನ ಜನರ ಸಂಸ್ಕೃತಿಯ ಪ್ರತೀಕ, ಹಾಸ್ಯ ಮತ್ತು ಗಂಭೀರತೆ ಎರಡನ್ನೂ ಹೊಂದಿರುವ ಪಾತ್ರ. ಐತಾ: ಕಾಡಿನ ನಂಬಿಕೆಗಳು ಮತ್ತು ಪದ್ಧತಿಗಳನ್ನು ಪ್ರತಿನಿಧಿಸುವ ಪಾತ್ರ. ಪಿಂಚಲು: ಕಥೆಗೆ ಹಾಸ್ಯ ಮತ್ತು ವಿಶಿಷ್ಟತೆಯ ಸ್ಪರ್ಶ ನೀಡುವ ಪಾತ್ರ. ತಿಮ್ಮಿ: ಕಥೆಯ ಭಾವನಾತ್ಮಕ ಭಾಗವನ್ನು ಹಿಡಿದಿಟ್ಟುಕೊಳ್ಳುವ ಪಾತ್ರ. ಹೆಗ್ಡೆ: ಸಾಂಪ್ರದಾಯಿಕ ಮಲೆನಾಡಿನ ಜೀವನ ಶೈಲಿಯನ್ನು ಪ್ರತಿನಿಧಿಸುವ ಪಾತ್ರ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಒಂದು ಅದ್ಬುತ ಪುಸ್ತಕದ ಪರಿಚಯವಾಗುತ್ತದೆ. ಮಲೆನಾಡಿನ 19ನೇ ಶತಮಾನದ ಪರಿಚಯವಾಗುತ್ತದೆ. ಮಳೆಗಾಲದ ಇಂಬಳ, ಜೀರುಂಡೆ, ಯಂತಹ ಪರಿಚಯವಾಗುತ್ತದೆ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.