ಪುಸ್ತಕದ ಶೀರ್ಷಿಕೆ: ಭಗತ್ ಸಿಂಗ್ -ಹುತಾತ್ಮ ರಾಜಕುಮಾರ
ಪುಸ್ತಕದ ಲೇಖಕರು: ಡಾ. ಸಿ. ಚಂದ್ರಪ್ಪ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಪರಶುರಾಮ ಎಸ್ ಕೆ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಭಗತ್ ಸಿಂಗ್ ಅವರು ಇಂದಿಗೆ ಕೇವಲ ನೆನಪಾಗಿ ಉಳಿದಿದ್ದಾರೆ ಆದರೆ ಭಗತ್ ಸಿಂಗ್ ರ ಕಾರ್ಯಗಳು,ಅತೀವ ಸಾಧನೆಗಳು, ಪಾಲಿಸಿದಂತ ತತ್ವಗಳು ಹಾಗೂ ಅವರ ವಿಚಾರಧಾರೆ ಗಳು ಇಂದಿಗೂ ಕೂಡ ಕಣ್ಣ ಮುಂದೆ ತೋರಣೆಯಾಗುತ್ತವೆ. ಭಗತ್ ಸಿಂಗ್ ರ ಬಗ್ಗೆ ಅನೇಕ ಕನ್ನಡ ಪುಸ್ತಕಗಳು ಬಂದಿವೆ ಆದರೆ 'ಡಾ. ಸಿ. ಚಂದ್ರಪ್ಪ ' ಅವರ ಈ ಪುಸ್ತಕವು ನನಗೆ ತುಂಬಾ ಇಷ್ಟವಾದುದು ಯಾಕೆಂದರೆ ಈ ಪುಸ್ತಕದಲ್ಲಿ ಭಗತ್ ಸಿಂಗ್ ಅವರ ಪೂರ್ಣತೆ, ಅವರು ಸ್ವತಂತ್ರದ ಬಗ್ಗೆ ಇತ್ತು ಕೊಂಡಂತ ಅಭಿಪ್ರಾಯಗಳ ಬಗೆಗೆ ತುಂಬಾ ಅದ್ದೂರಿಯಾಗಿ ವಿವರಿಸಿದ್ದಾರೆ. ಭಗತ್ ಸಿಂಗ್ ಅವರು ಬದುಕು ಸ್ಫೂರ್ತಿ ನೀಡುವಂತಹದು. ಅವರು ಕೇವಲ ಸ್ವಾತಂತ್ರಪ್ರೇಮಿ ಅಷ್ಟೇ ಅಲ್ಲದೆ ಚತುರಯೋಚನಕಾರ, ಸಮಾಜವಾದದ ಆದರ್ಶಗಳ ಬಗೆಗೆ ಅತೀವತೆಯನ್ನು ಪ್ರತೀಕಿಸುವ ಓರ್ವ ವೀರ ಸ್ವತಂತ್ರ ಪ್ರೇಮಿ ಅಂದರೆ ತಪ್ಪಿಲ್ಲ. ಭಗತ್ ಸಿಂಗ್ ಅವರು ಮೂಢನಂಬಿಕೆ ಮತ್ತು ಕಂದಾಚಾರದ ವಿರೋಧಿಯಾಗಿದ್ದವರು, ದೇಶಕೆ ಬರಿ ಸ್ವತಂತ್ರ ಬಂದರೆ ಸಾಲದು ಸಮಾನತೆ ಕೂಡ ಬರಬೇಕು ಅನ್ನುವ ಅತೀವ ಕನಸುಗಾರ. ಮತ್ತು, ಚಿಕ್ಕ ವಯಸ್ಸಿಗೆ ಎಲ್ಲವನ್ನು ಮುಡಿಪಾಗಿಟ್ಟು ಅಂದರೆ ಇಂದಿನ ಯುವಪೀಳಿಗೆಯಂತೆ ಪ್ರೀತಿ-ಪ್ರೇಮ ಎಂಬ ಹಾಳುತನಕೇ ಬೀಳದೆ ತನ್ನ ಯೌವ್ವನದ ಬಗೆಗೆ ತಲೆ ಕೆಡಿಸಿಕೊಳ್ಳದೆ ತನ್ನ ಪೂರ್ಣ ಸರ್ವಸ್ವವನ್ನು ಕೂಡ ಧಾರೆ ಎರೆದ ಮಹಾನುಭಾವ. ಭಗತ್ ಸಿಂಗ್ ಅವರ ಕುಟುಂಬದ ಬಗ್ಗೆ ಹೇಳುವುದಾದರೆ ಅವರ ಹಿನ್ನೆಲೆ ತುಂಬಾ ವಿರೋಚಕವಾದುದು, ಭಗತ್ ಸಿಂಗ್ ರ ಮನೆತನ ಮೂಲವಾಗಿ ಖಾತ್ಕರ್ ಕಲಾನ್ ಎಂಬ ಹಳ್ಳಿಗೆ ಸೇರಿದ್ದು. ಅಲ್ಲಿಂದ ಈಗ ಈ ಮನೆತನ ಪಾಕಿಸ್ತಾನಕ್ಕೆ ಸೇರಿರುವ ಲ್ಯಾಲ್ಪುರ ಜಿಲ್ಲೆಯ ಜರಾನ್ ವಾಲಾ ತಾಲ್ಲೂಕಿನ ಬಂಗಾ ಎಂಬ ಹಳ್ಳಿಗೆ ಹೋಗಿ ನೆಲೆಸಿತ್ತು. ಎಂಬ ಉಲ್ಲೇಖವಿದೆ. ಭಗತ್ ಸಿಂಗ್ ರ ಮುತ್ತಾತ ಸರ್ದಾರ್ ಫತೆಸಿಂಗ್ ಉನ್ನತವಾದ ಮೌಲ್ಯಪರಂಪರೆಗೆ ಪ್ರಾಮುಖ್ಯತೆಗೆ ಒತ್ತು ನೀಡಿದವರು,ಅವರ ತತ್ವವೆಂದರೆ ಅಸ್ತಿ-ಪಾಸ್ತಿಗಿಂತ ನೀತಿ, ಮೌಲ್ಯಗಲೇ ಪ್ರಮುಖ ಎಂಬ ಎಂಬ ಭಾವನೆಯಲ್ಲಿದ್ದವು, ಭಗತ್ ಸಿಂಗ್ ಅವರ ತಂದೆ ಕಿಶನ್ ಸಿಂಗ್ಹಾಗೂ ತಾಯಿ ವಿದ್ಯಾವತಿ ದೇವಿ. ಭಗತ್ ಸಿಂಗ್ ಅವರ ಅಣ್ಣ ಜಗತ್ ಸಿಂಗ್ ಹನ್ನೊಂದನೇ ವಯೋಮಾನದಲ್ಲಿ ತೀರಿಕೊಂಡಿದ್ದ, ಇನ್ನುಳಿದ ಏಳು ಮಕ್ಕಳಲ್ಲಿ ಭಗತ್ ಸಿಂಗ್ ಹಿರಿಯ, ಉಳಿದವರು ಅಂದರೆ ಮೂವರು ತಮ್ಮಂದಿರು, ಮೂವರು ತಂಗಿಯರು ಇದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಭಗತ್ ಸಿಂಗ್ ಅವರು 'ಕ್ರಾಂತಿಕಾರಿಗಳು ಕೊಲೆಗಡುಕರು' ಎಂಬ ಮೂಢ ಭಾವನೆ ಹೋಗಲಾಡಿಸಿದರು,ಪತ್ರಿಕೆಗಳು, ಸಣ್ಣಪುಟ್ಟ ಲೇಖನಿ ಬರಹಗಳ ಪ್ರಚಾರತೆ ಮಾಡಿ ಕ್ರಾಂತಿಕಾರಿಗಳೆಂದರೆ ಬರಿ ಬಾಂಬುಗಳು, ಫಿಸ್ತೋಲುಗಳು, ಬಂದೂಕುಗಳು ಅಷ್ಟೇ ಅಲ್ಲ ಅವರಿಗೂ ಕೂಡ ಶಾಂತಿಯತೆ ಮತ್ತು ಅದರ ಬಗ್ಗೆ ಅರಿವಿದೆ ಎಂಬ ನೈಜತೆಯ ತೋರಿದವರು. “ಒಂದು ಪಂಥ, ಓರ್ವ ನಾಯಕ, ಓರ್ವ ಶ್ರೇಷ್ಠವ್ಯಕ್ತಿಯನ್ನು ನೀವು ಟೀಕಿಸಿದ್ದೇ ಆದರೆ ನಿಮ್ಮ ವಾದವನ್ನು ಅರ್ಥಹೀನವೆಂದು ಪ್ರತಿಬಿಂಬಿಸಲಾಗುತ್ತದೆ. ವಿಮರ್ಶೆ ಮತ್ತು ಸ್ವತಂತ್ರ ಆಲೋಚನೆಗಳು ಕ್ರಾಂತಿಯ ಎರಡು ಅನಿವಾರ್ಯವಾದ ಗುಣಗಳೆಂದು ಹೇಳಬಹುದು. ಮಹಾತ್ಮಗಾಂಧಿಯವರು ದೊಡ್ಡ ವ್ಯಕ್ತಿಯಾದ್ದರಿಂದ ಅವರನ್ನು ಟೀಕಿಸುವಂತಿಲ್ಲ. ಅವರು ಧರ್ಮ, ರಾಜಕೀಯ, ಅರ್ಥಶಾಸ್ತ್ರ ಅಥವಾ ನೀತಿಶಾಸ್ತ್ರದ ಬಗ್ಗೆ ಹೇಳುವುದೆಲ್ಲವನ್ನೂ ಸರಿ ಎಂದು ಪ್ರತಿಪಾದಿಸಲಾಗುತ್ತದೆ. ನೀವು ಅವರ ವಿಚಾರಧಾರೆಯನ್ನು ಒಪ್ಪುವಿರೋ ಅಥವಾ ಇಲ್ಲವೊ "ಅದು ಸರಿ " ಎಂದು ಒಪ್ಪಿಕೊಳ್ಳಬೇಕು ಇಲ್ಲವಾದರೆ ಅವು ದೇಶದ ಪ್ರಗತಿಗೆ ಮಾರಕವಾಗಿ ಉಳಿಯುತ್ತವೆ.” ಎಂಬ ಮಾತುಗಳಿಗೆ ಭಗತ್ ಸಿಂಗ್ ಅವರು ತುಂಬಾ ಸನಿಹವಿದ್ದವರು. ಭಗತ್ ಅವರಿಗೆ ದೇಶಪ್ರೇಮ ಮತ್ತು ತ್ಯಾಗವನ್ನು ಬೆಳೆಸಿಕೊಳ್ಳಲು ಸಾಹಿತ್ಯವೂ ಕೂಡ ತುಂಬಾ ಸಹಾಯಕರಿಯಾಗಿದೆ, ಭಗತ್ ಸಿಂಗ್ ಅವರಿಗೆ ಗಾರ್ಕಿಯವರ 'ಮದರ್ ', ವಿಕ್ಟರ್ ಅವರ '93', ಮತ್ತೆ ಮುಂತಾದವು ಹಾಗೆ 'ಡಾನ್ ಬ್ರೀನ್' ಅವರ ' ಮೈ ಫೈಟ್ ಫಾರ್ ಐರಿಷ್ ಫ್ರೀಡಂ ' ಎಂಬ ಗ್ರಂಥವು ಭಗತ್ ಸಿಂಗ್ ರಿಗೆ ಒಂದು ಪವಿತ್ರ ಗ್ರಂಥವಾಯಿತು. ಒಂದು ಕಾರ್ಯದಿಂದ ಪ್ರಾರಂಭವಾಗುವ ಪ್ರಚಾರವು ಸಾವಿರ ಹೊತ್ತಿಗೆಗಳಿಗಿಂತ ಪರಿಣಾಮಕಾರಿಯಾಗಿರುತ್ತದೆ. ಕೈಯಲ್ಲಿ ಬಾಂಬ್ ಅಥವಾ ಡೈನಮೈಟ್ ಹಿಡಿದಿರುವ ವ್ಯಕ್ತಿಯು ಇಡೀ ಜಗತ್ತಿಗೆ ಮಾರ್ಗದರ್ಶಕನಾಗಿರುತ್ತಾನೆ." ಬಕುನಿನ್ ಅವರ ಗ್ರಂಥ 'God and the State ಭಗತ್‌ಸಿಂಗ್ ಅವರ ಮೇಲೆ ತೀವ್ರವಾದ ಪರಿಣಾಮವನ್ನು ಬೀರಿ ಅವರಲ್ಲಿ ಮಾನವತಾವಾದವನ್ನು ಬೆಳೆಸಿತು. ಈ ಗ್ರಂಥವನ್ನು ಅವರು ಅನೇಕ ಬಾರಿ ಓದಿ ತಮ್ಮ ಸ್ನೇಹಿತರಿಗೂ ಓದುವಂತೆ ಹೇಳಿದರು.ನಿಜವಾಗಿ ಭಗತ್ ಸಿಂಗ್ ಅವಾ ಬಗೆಗೆ ಹೇಳಲು ಪದಗಳು ಸಾಲದಷ್ಟು ಇವೆ. ಒಂದೇ ಮಾತಲ್ಲಿ ಹೇಳುವುದಾದರೆ ಭಗತ್ ಸಿಂಗ್ ಅವರು ಕೇವಲ ಸ್ವಾತಂತ್ರ ಆಶೀರ್ವಾದ ಅಲ್ಲದೆ ಮುಂದಿನ ಪೀಳಿಗೆ ಬಗ್ಗೆ ಕೂಡ ಅತೀವ ಯೋಚನೆ ಮಾಡಿ ಯೋಜನೆಗಳು ಹೂಡಿದ ಮಹಾನ್ ವ್ಯಕ್ತಿ. ಹಾಗೆ ಭಗತ್ ಸಿಂಗ್, ರಾಜಗುರು, ಸುಖದೇವರ ಅವರ ಸಾವು ಕೂಡ ತುಂಬಾ ಕಷ್ಟಕರ, ನಮ್ಮ ಶತ್ರುವಿಗೂ ಕೂಡ ಅಂತ ಸಾವು ಬರಬಾರದು ಎಂಬುದು ನನ್ನ ಅನಿಸಿಕೆ ಮತ್ತು ಈ ಪುಸ್ತಕದಲ್ಲಿ ಉಲ್ಲೇಖವಾಗಿದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಓದುಗರಿಗೆ ಆಳವಾಗಿ ಬೀರುವ ಕ್ಷಣಗಳಿಗಿಂತ ಭಗತ್ ಸಿಂಗ್ ಎಂಬ ಹೆಸರೇ ರೋಮಾಂಚನಕಾರಿ. ಭಗತ್ ಸಿಂಗ್ ಅವರು ಅವರ ಜೀವನದ ಉದ್ದಕ್ಕೂ ದೇಶಕ್ಕಾಗಿ, ದೇಶದ ಪ್ರಗತಿಗಾಗಿ ತನ್ನ ಯೌವ್ವನವನ್ನು ಮೂಡಿಪಾಗಿಟ್ಟ ವೀರ ಯೋಧ. ಭಗತ್ ಸಿಂಗ್ ಅವರ ಸಂಘವೆಂದರೆ ಪ್ರಮುಖವಾಗಿ ಭಗತ್ ಸಿಂಗ್, ರಾಜಗುರು, ಸುಖದೇವರು ತ್ರಿಮೂರ್ತಿ ಗಳಂತೆ, ಕ್ರಾಂತಿಕಾರಿಗಳು ಕೊಲೆಗಡುಕರು ಎಂಬ ಕಪ್ಪು ಭಾವನೆಗೆ ಸುಳ್ಳು ಮಾಡಿದರು. ಪ್ರಮುಖ ಕ್ಷಣಗಳೆಂದರೆ ಭಗತ್ ಸಿಂಗ್ ಅವರಿಗೆ ಮನೆಯಲ್ಲಿ ಮದುವೆಗೆ ತಯಾರಿ ಮಾಡಿರುವಾಗ ಭಗತ್ ಸಿಂಗ್ ಅವರು ಪತ್ರದಲ್ಲಿ “ಮದುಮಗಳು ನನ್ನ ಮಧುಮಗಳಲ್ಲ, ಸ್ವಾತಂತ್ರವೆ ನನ್ನ ಮಧುಮಗಳು ” ಎಂಬ ಹೇಳಿಕೆ ಕ್ಷಣ, ಚಿಕ್ಕ ವಯೋಮಾನದಲ್ಲಿ ಹೊಲದಲ್ಲಿ ಧಾನ್ಯಗಳ ಬದಲಿಗೆ ಬಂದೂಕುಗಳನ್ನು ಬೆಳೆಯುತ್ತೇನೆ ಎಂಬ ಕಿಚ್ಚಿನ ಕ್ಷಣ. ಕಾಕೋರಿ ಕಾಂಡ ಕ್ಷಣಗಳು ಹಾಗೂ ಇನ್ನು ತರವು. ಒಂದು ವಿಚಾರವೇನೆಂದರೆ ನನ್ನ ಬರಹಕ್ಕಿಂತ ನಿಜವಾಗಿ ಪುಸ್ತಕದ ಉಲ್ಲೇಖತೆ ಚೆನ್ನಾಗಿದೆ, ಆದರೆ ದಯವಿಟ್ಟು ಒಂದು ಸಲ ಪುಸ್ತಕವನ್ನು ಓದಿ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಡಾ. ಸಿ. ಚಂದ್ರಪ್ಪ ' ವಿರಚಿತ “ ಭಗತ್ ಸಿಂಗ್ - ಹುತಾತ್ಮ ರಾಜಕುಮಾರ ” ಎಂಬ ಪುಸ್ತಕವು ಪ್ರಮುಖವಾಗಿ ನಮ್ಮ ಯುವಪೀಳಿಗೆ ಸ್ಫೂರ್ತಿನೀಡುವಂತಹ ಪುಸ್ತಕ. ಭಗತ್ ಸಿಂಗ್ ಅವರ ಆಲೋಚನೆಗಳು, ವಿಚಾರತೆಗಳು,ಮುನ್ನಲೋಚನೆಗಳು, ನಮಗೆ ದಾರಿದೀಪ ನೀಡುವಂತಹ ನುಡಿಮುತ್ತುಗಳು. ಈ ಪುಸ್ತಕವು ಯಾರು ಬೇಕಾದ್ರು ಕೂಡ ಓದಬಹುದು ಮತ್ತು ಭಗತ್ ಸಿಂಗ್ ಅವರ ವಿಚಾರತೇಗಳನ್ನನು ಅಳವಡಿಸಿಕೊಳ್ಳುವವರಿಗೆ ಹಾಗೂ ಮುಂದಿನ ಓದಿಗೆ ಸ್ಫೂರ್ತಿ ನೀಡುವಂತಹ ಪುಸ್ತಕ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.