Submission 1935

ಪುಸ್ತಕದ ಶೀರ್ಷಿಕೆ: ಮಾಧವಿ

ಪುಸ್ತಕದ ಲೇಖಕರು: ಅನುಪಮಾ ನಿರಂಜನ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: Poorvi R deshpande

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಮಾಧವಿ ಈ ಕತೆಯು ಒಂದು ಪೌರಾಣಿಕ ಭಾಗವಾದರೂ ಈಗಿನ ಪೀಳಿಗೆಗಳ ಮನಸ್ಸಿನ ಕದವನ್ನು ತಟ್ಟುವಂತಹ ಒಂದು ಸಂವೇದನೆಯಾಗಿದೆ. ಹೆಣ್ಣಿನ ಕರಾಳ ಜೀವನವನ್ನು ತೆರೆದಿಡುವ ಹಾಗೂ ಅವಳನ್ನು ಕೇವಲ ಒಂದು ಭೋಗದ ವಸ್ತುವಿನ ದೃಷ್ಟಿಯಿಂದ ನೋಡುವ, ಕೇವಲ ಮಕ್ಕಳನ್ನು ಹೆರುವ ಯಂತ್ರದಂತೆ ನಡೆಸಿಕೊಳ್ಳುವ ಪುರುಷ ಕೇಂದ್ರಿತ ಸಮಾಜವನ್ನು ಇಲ್ಲಿ ಕಾಣಬಹುದು. ಮಾಧವಿ - ಒಂದು ದೇಶದ ರಾಜಕುಮಾರಿ ಯಾಗಿದ್ದರೂ ಸಹ ತಂದೆ ಆಜ್ಞೆ ಪಾಲಿಸಿ ಗಾಲವನ ಹಿಂದೆ ಹೋದವಳು ಒಲ್ಲದ ಮನಸ್ಸಿನಿಂದ ಬಿಳಿ ಕುದುರೆಗಳ ಪ್ರತಿಯಾಗಿ ನಾಲ್ಕು ರಾಜರನ್ನು ಕೂಡುತ್ತಾಳೆ. ಗಂಡು ಮಗುವೇ ಬೇಕು ಎಂಬ ಒತ್ತಾಯಕ್ಕೊಳಗಾಗಿ ಗಂಡು ಮಗುವಿಗೆ ಜನ್ಮ ಕೊಟ್ಟು ಎದೆ ಹಾಲು ಚಿಮ್ಮಿ ತಾಯ್ತನ ಅವಳನ್ನಪ್ಪುವುದರೊಳಗೆ ಕುಡಿಗಳಿಂದ ದೂರಾಗುತ್ತಾಳೆ. ಗಂಡಿನ ಹಠ , ಪುರುಷ ಕೇಂದ್ರಿತ ಸಮಾಜ ಹೆಣ್ಣಿನ ಬಗೆಗಿನ ತುಚ್ಛ ಭಾವನೆಗಳಿಂದ ಹೆಣ್ತನವೇ ಅವಳಿಗೆ ಶಾಪವಾಯಿತೆ ?.... ಕಡೆಗೆ ಸ್ವಯಂವರ ಏರ್ಪಟ್ಟಾಗ ಅವಳು ಎಲ್ಲವನ್ನು ಕಡೆಗಣಿಸಿ ಸನ್ಯಾಸತ್ವ ತೆಗೆದುಕೊಳ್ಳುವ ಅಂಶವು ಅವಳ ಪುರುಷ ಕೇಂದ್ರಿತ ಸಮಾಜದ ಮೇಲಿದ್ದ ಹತಾಶೆ, ನಿರಾಶೆ, ಜಿಗುಪ್ಸೆಯನ್ನು ಪ್ರತಿಬಿಂಬಿಸುತ್ತದೆ. ಇದು ಆಗಿನ ಮಾಧವಿಯ ಕಥೆಯಾದರೆ. ಈಗಲೂ ಕೂಡ ಇಂತಹ ಹಲವಾರು ಮಾಧವಿಯರು ಅವರ ಆಸೆಗಳನ್ನು ಭಾವನೆಗಳನ್ನು ಹತ್ತಿಕ್ಕಿ ಬಾಳುತ್ತ ನಮ್ಮ ಸಮಾಜದಲ್ಲಿರುವುದು ಮಾತ್ರ ದುರಂತ. ರಾಜ್ಯದ ರಾಜಕುಮಾರಿಯಾಗಿ ಅವಳಿಗೆ ಯಾವುದನ್ನು ಧಿಕ್ಕರಿಸುವ ಹಾಗೂ ಧ್ವನಿ ಎತ್ತುವ ಹಕ್ಕಿಲ್ಲವೆಂದರೆ ಇನ್ನು ಸಾಮಾನ್ಯ ಮಹಿಳೆಯರ ಸ್ಥಾನಮಾನ ಹೇಗಿದ್ದಿರಬಹುದೆಂಬ ಪರಿಕಲ್ಪನೆ ಸಿಗುವುದು ಸಹಜ. ಎಲ್ಲಿ ಹೆಣ್ಣಿನ ವಾಸಸ್ಥಳವಿರುತ್ತದೆಯೋ ಅಲ್ಲಿ ದೇವಾನುದೇವತೆಗಳ ಅನುಗ್ರಹವಿರುತ್ತದೆ ಎಂಬ ಪದ್ಧತಿಯು ಚಾಲ್ತಿಯಲ್ಲಿರುವ ಈ ಸಮಾಜವು ಅನಾದಿಕಾಲದಿಂದಲೂ ಹೆಣ್ಣಿನ ಮೇಲೆ ನಡೆಸುತ್ತಿರುವ ದೌರ್ಜನ್ಯ ದಬ್ಬಾಳಿಕೆಗೆ ಈ ಪುಸ್ತಕವು ಕೈಗನ್ನಡಿಯಂತಿದೆ. ಮಹಿಳೆಯನ್ನು ಕೇವಲ ಒಂದು ಭೋಗದ ವಸ್ತುವನ್ನಾಗಿ ನೋಡುವ, ಅವಳನ್ನು ತನ್ನ ಆಸೆಗಳನ್ನು ಪೂರೈಸುವ ಒಂದು ಸರಕಿನಂತೆ ನೋಡುವ, ಅವಳ ಪಾತ್ರವನ್ನು ಮಕ್ಕಳು ಹೆರುವುದಕ್ಕೆ ಮಾತ್ರ ಸೀಮಿತ ವಾಗಿಸಿರುವ ಸಮಾಜವು "ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ " ಎಂಬ ಮಾತನ್ನು ಎಷ್ಟು ಅರ್ಥೈಸಿಕೊಂಡಿದೆ ಎಂಬ ಚಿಂತನೆಗೆ ಈ ಪುಸ್ತಕವು ನನ್ನನ್ನು ಒಳಪಡಿಸಿತು. ಪುಸ್ತಕದ ನಡುನಡುವೆ ಮಾಧವಿ, ಹೇಳಲಾಗದ ತನ್ನ ಪ್ರತಿರೋಧವನ್ನು ಪ್ರಶ್ನೆಗಳನ್ನು ಮನಸ್ಸಿನೊಳಗೆ ಕೇಳುವ ಅಂಶವು ಅವಳ ಅಸಾಹಕತೆಯನ್ನು ಎತ್ತಿ ಹಿಡಿಯುತ್ತದೆ. ಓದುಗರನ್ನು ಸಹ ಒಮ್ಮೊಮ್ಮೆ ಚಿಂತಿಸುವಂತೆ ಮಾಡುವ ಪುಸ್ತಕ ಇದಾಗಿದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

13
Votes
177
Views
4 Months
Since posted

Voting Closed!

Scroll to Top