ಪುಸ್ತಕದ ಶೀರ್ಷಿಕೆ: ಗೃಹಭಂಗ
ಪುಸ್ತಕದ ಲೇಖಕರು: ಎಸ್. ಎಲ್. ಭೈರಪ್ಪ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಮಂಜುಳಾ ಅಜಯ್ ಭಾರಧ್ವಾಜ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಈಗಿನ 21ನೇ ಶತಮಾನದಲ್ಲಿಯೂ ನಾವು ಹೇಳೋದು ನಮ್ಮದು ಪುರುಷ ಪ್ರಧಾನ ಸಮಾಜ, ಇನ್ನು 80ರ ದಶಕದಲ್ಲಿ ಮಹಿಳೆಯ ಸ್ಥಿತಿಗತಿಗಳ ಬಗ್ಗೆ ಕೇಳಬೇಕೇ? ಈ ಕಾದಂಬರಿಯ ಕಾಲಘಟ್ಟವನ್ನು ನಾನು ನೋಡದೆ ಇದ್ರೂ ನನ್ನ ಅಜ್ಜಿ ಅಮ್ಮನ ಬಾಯಿಂದ ಅ ದಿನಗಳ ಬದುಕು ಬವಣೆಗಳ ಬಗ್ಗೆ ಕೇಳಿ ಬೆಳೆದವಳು. ನಾನೀಗ ಹೇಳಲು ಹೊರಟಿರುವ ನನ್ನ ನೆಚ್ಚಿನ ಪುಸ್ತಕ "ಸರಸ್ವತಿ ಸಮ್ಮಾನ್" ಶ್ರೀ 'ಎಸ್. ಎಲ್. ಭೈರಪ್ಪನವರು' ನವರು ಬರೆದ "ಗೃಹಭಂಗ". ಹಾಗೂ ಈ ಕಾದಂಬರಿ ನನಗೆ ಎಲ್ಲ ಕಾಲಕ್ಕೂ ಇಷ್ಟವಾಗುವಂತದ್ದು. 'ಗೃಹಭಂಗ' ಗೃಹ ಅಂದ್ರೆ ಮನೆ, ಅದ್ರೆ ಭಂಗ ಅಂದ್ರೆ? ಒಡೆಯುವುದು ಅಂತಲಾ? ಇಲ್ಲ ಬೆರನಾದ್ರು ಅರ್ಥ ಇದ್ಯಾ? ಗೃಹದ ಮುಖ್ಯಸ್ಥರು ಯಾರು? ಗಂಡನೋ? ಇಲ್ಲ ಹೆಂಡ್ತೀಯೋ? ಪುರುಷ ಸಮಾಜದಲ್ಲಿ ಹೆಣ್ಣು ಹೇಗಿರಬೇಕು? ಹೇಗಿದ್ದರೂ? ಯಾಕೆ ಹಾಗೇ ಇರ್ಬೇಕು? ಮತ್ತು ಯಾಕೆ ಹಾಗೆ ಇರ್ಬೇಕಾಯ್ತು? ಇಷ್ಟೆಲ್ಲ ಪ್ರಶ್ನೆಗಳು ಪುಸ್ತಕ ಶೀರ್ಷಿಕೆ ಮುನ್ನುಡಿಯಲ್ಲಿ ಹೇಳಿದ ಕಾಲಘಟ್ಟದ ಬಗ್ಗೆ ಓದಿದಾಗ ಮೂಡುತ್ತದೆ. ಹೆಣ್ಣು ಮನೆಯ ಕಣ್ಣು ಅನ್ನೋದು ಎಷ್ಟು ಸತ್ಯವೋ ಈ ಕಾದಂಬರಿಯ ಜೀವಾಳವೂ ಹೆಣ್ಣುಮಕ್ಕಳು ಅನ್ನೋದು ಅಷ್ಟೇ ಸತ್ಯ, ಗೃಹಭಂಗ ಒಂದು ಸಾಮಾನ್ಯ ಅತ್ತೆ ಸೊಸೆಯ ಕಥೆ ಅಷ್ಟೇ ಆದ್ರೆ ಆ ಅತ್ತೆ ಮತ್ತು ಸೊಸೆಯ ಪಾತ್ರ ಎಷ್ಟು ಪ್ರಬಲವಾಗಿತ್ತು ಅನ್ನೋದು ಇಲ್ಲಿಯ ಮುಖ್ಯಾಂಶ... ನಂಜಮ್ಮನ ತಾಳ್ಮೆ, ಗಂಗಮ್ಮನ ಅವಿವೇಕಿತನ, ಕಮಲಿಯ ಹಠ, ಮತ್ತು ಅಕ್ಕಮನ ಅಸಹಾಯಕತೆ.ಅ ಕಾಲದಲ್ಲಿ ಬದುಕುತ್ತಿದ್ದ ಸ್ತ್ರೀಯರ ಪ್ರತಿರೂಪದಂತೆ ಕಾಣುತ್ತಾರೆ. ಹೆಣ್ಣೋಬಳ ಬಾಯಿ ಶುದ್ಧವಿದ್ದಷ್ಟು ಮನೆ ಮನಸು ಸಂಭ್ರಮ,ಸಂವೃದ್ಧಿಯಾಗಿ ಇರುತ್ತದೆ ಅದ್ರೆ ಹೆಣ್ಣಿನ ಬಾಯಿಗೆ ಕಡಿವಾಣವಿಲ್ಲದೆ ಹೋದ್ರೆ? ಗಂಗಮ್ಮನ ಬದುಕಿನಂತೆ ಗಂಡನ ಮನೆಯನ್ನು ಉದ್ದಾರ ಮಾಡುವುದಿರಲಿ,ಇರುವುದನ್ನು ಉಳಿಸಿಕೊಳ್ಳುವುದಕ್ಕೂ ಸಾಧ್ಯವಾಗೋಲ್ಲ.. ಮಾತು ಮಾತಿಗೂ " ಸೂಳೆಮಗನೇ ನೀನ್ ನಿಮ್ಮ ಅಪ್ಪನಿಗೆ ಹುಟ್ಟಿಲ್ಲವೇನೋ? ಅಂತ ಮಗನ ಹುಟ್ಟಿನ ಬಗ್ಗೆಯೇ ತಾನೇ ಸಂಶಯ ಪಡುವ ಗಂಗಮ್ಮನ ಸೊಸೆಯಾಗಿ ಬರುವ ನಂಜಮ್ಮ.ತಾಳ್ಮೆಯ ಪ್ರತಿರೂಪದಂತವಳು ಅಷ್ಟೆಲ್ಲದೆ ಬುದ್ದಿವಂತಳು ಕೂಡ ಆದರೆ ಹುಟ್ಟಿದ ಕ್ಷಣಕ್ಕೆ ತಾಯಿಯನ್ನು ಕಳೆದುಕೊಂಡ ಮಗುವಾದವಳಿಗೆ ಒಳ್ಳೇ ನಡೆ ನುಡಿಯ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ಕೊಟ್ಟು ಬೆಳೆಸಿದ್ದು ಅಜ್ಜಿ ಅಕ್ಕಮ್ಮ ಆದರೇ ಸೇರಿದ್ದು ಮಾತ್ರ ಗಯ್ಯಾಳಿ ಅತ್ತೆ ಮತ್ತು ಬೇಜವಾಬ್ದಾರಿ ಗಂಡನ ಗೃಹಕ್ಕೆ.. ಗಂಡಿಗೆ ಚಟ ಇರ್ಬಾರ್ದು, ಹೆಣ್ಣಿಗೆ ಹಠ ಇರ್ಬಾದ್ರು ಅಂತಾರೆ ದೊಡ್ಡವರು. ಅದ್ರೆ ಇಲ್ಲಿ ಕಲ್ಲೇಶನಿಗೆ ಹೆಣ್ಣಿನ ಚಟ, ಅವನ ಹೆಂಡತಿಗೆ ಅವನನ್ನು ಸರಿದಾರಿಗೆ ತರುವ ಹಠ, ಒಂದು ರೀತಿಯಲ್ಲಿ ನೋಡುವುದಾದ್ರೆ ಅವಳ ಹಠವು ನ್ಯಾಯವಾದುದ್ದೇ ಆದರೇ ಅದನ್ನು ಅವ್ಳು ಕಾರ್ಯರೂಪಕ್ಕೆ ತರಲು ನಡೆಸಿದ ಪ್ರಯತ್ನ ಗಳು ಮಾತ್ರ ಸರಿಯಾದದಲ್ಲ. ಹೆಣ್ಣಿನ ಹಠದಿಂದ ಮನೆಯಲ್ಲಿ ಇರುವ ಹಿರಿ ಜೀವಗಳಿಗಷ್ಟೇಯಲ್ಲ ಮನೆಯ ಮರ್ಯಾದೆಗೂ ಕುತ್ತು ಬರುತ್ತದೆಎನ್ನುವುದು ಅವಳಿಗೆ ಅರ್ಥವಾಗುವ ವೇಳೆಗೆಗಾಗಲೇ ಮನೆ ಮರ್ಯಾದೆ ಅನ್ನೋದು ಊರಮುಂದೆ ಹರಿದು ಹಂಚಿಹೋಗಿತ್ತು. ಅಪ್ಪ ಕಂಠಿ ಜೋಯಿಸನ ಆತುರತನ. ಗಂಡ ಚೆನ್ನಿಗರಾಯ ಹುಟ್ಟು ಸೋಂಬೇರಿ, ಜೊತೆಗೆ ಅಮ್ಮ ಗಂಗಮ್ಮನ ಅತಿಯಾದ ಮುದ್ದು, ಮೊದಲಿನಿಂದಲು ರೂಢಿಸಿಕೊಂಡು ಬಂದ ಮೈಗಳ್ಳತನ. ಇನ್ನು ಬೆನ್ನಿಗೆ ಬಿದ್ದ ಅಣ್ಣನ ಕಚ್ಚೆ ಹರಕು ಬುದ್ದಿ, ಅತ್ತಿಗೆ ಕಮಲಿಯ ಸಿಟ್ಟು ಸೆಡವು, ಹಠಗಳ ನಡುವೆ ಬದುಕುವುದು ಅಷ್ಟು ಸುಲಭವೇ ನಂಜಮ್ಮನಿಗೆ? ಸ್ವಂತ ಬುದ್ದಿಯಿಲ್ಲದ ಅತ್ತೆ ಮತ್ತು ಗಂಡನ ದೆಸೆಯಿಂದ ಇರುವ ಅಷ್ಟು ಆಸ್ತಿಯನ್ನು ಕಳೆದುಕೊಂಡರು, ದೃತ್ತಿಗೆಡದೆ, ಗಂಡಸರು ಮಾತ್ರ ಸರ್ಕಾರಿ ಕೆಲ್ಸಗಳನ್ನು ಮಾಡ್ಬೇಕು ಅನ್ನೋ ನಿಯಮಮುರಿದು ತಾನೇ ಗಂಡ ಮಾಡಬೇಕಾದ ಶ್ಯಾನಭೋಗಿಕೆ ಲೆಕ್ಕ ಬರೆದು, ಎಷ್ಟೇ ಕಷ್ಟವಿದ್ದರೂ ಎಂದೂ ಧೈರ್ಯಗುಂದದೆ, ಕಟ್ಟಿಕೊಂಡ ಗಂಡ ಮೈಗಳ್ಳನಾದ್ರು ತಾನೇ ಮನೆಯ ಯಜಮಾನನಂತೆ ದುಡಿದು ಇಡೀ ಊರಿಗೆ ಮಾದರಿಯಾದರೂ ನಂಜಮ್ಮನ ಬದುಕು ಮನೆಯಲ್ಲಿ ಮೂರ ಬಟ್ಟೆಯೇ.. ಬಡತನಕ್ಕೆ ಮಕ್ಕಳು ಜಾಸ್ತಿಯಂತೆ ಹಾಗೆ ದೇವರು ಕೊಡುವಾಗ ಯಾಕೆ ಬೇಡ ಎನ್ನಬೇಕು ಅನ್ನೋ ಮಾತಿನಂತೆ, ಕಷ್ಟವಾದ್ರೂ ಮೂರು ಮಕ್ಕಳನ್ನು ಸಾಕುವ ಜವಾಬ್ದಾರಿ ಹೊತ್ತು, ಅಪ್ಪನಂತೆ ಆಗಲು ಬಿಡದೆ, ಮಗನಿಗೆ ಒಳ್ಳೇ ವಿದ್ಯಾಭ್ಯಾಸ ಕೊಡಿಸಬೇಕು ಮಗಳಿಗೆ ತನ್ನ ಅಪ್ಪನಂತೆ ದುಡುಕಡೆ ಒಳ್ಳೇ ಮನೆಗೆ ಧಾರೆ ಎರೆದು ಕೊಡಬೇಕು ಅನ್ನೋ ಆಸೆ ಹೊತ್ತ ನಂಜಮ್ಮ ತಾನು ಎಂದಿಗೂ ಅರೆ ಹೊಟ್ಟೆ ತಿಂದು ಗಂಡ ಮಕ್ಕಳಿಗೆ ಕಷ್ಟದಲ್ಲೂ ಹೊಟ್ಟೆಗೆ ಪೂರ್ತಿ ಮಾಡುತ್ತಿದ್ದವಳ ಬದುಕು ಅವಳ ಆಸೆಗಳನ್ನು ಪೋರೈಸಿಕೊಳ್ಳಲು ಕಡೇಗಾದ್ರೂ ಒಂದೇ ಒಂದು ಅವಕಾಶಕೊಟ್ಟಿತೆ? ಹೆಣ್ಣಿಗೆ ತಾಳ್ಮೆ ಮುಖ್ಯ ಅದ್ರೆ ನಂಜಮ್ಮನಷ್ಟು ತಾಳ್ಮೆಯಿಂದ ಇರ್ಬಾರ್ದು ಅನ್ನೋ ತಿಳುವಳಿಕೆಯು ಬೇಕು, ಹೆಣ್ಣಿಗೆ ಹಠವು ಮುಖ್ಯ ಅದ್ರೆ ಕಮಲಿ ಹಠವಲ್ಲ, ಹೆಣ್ಣಿಗೆ ಬಾಯಿ ಜೋರಿರಬೇಕು ಅದ್ರೆ ಯಾವಾಗ ತನ್ನವರ ರಕ್ಷಣೆಗೆ ಹೊರತು ಇನ್ನೊಬ್ಬರನ್ನು ಜರಿಯುವುದಕ್ಕಲ್ಲ. ಈ ಪುಸ್ತಕ ಓದಿದ ನಂತರ ಮೊದ್ಲಿಗೆ ಬರುವುದು ಕಣ್ಣೀರು, ನಂತರ ಕೋಪ ಅಮೇಲೆ ಹೆಣ್ಣಿನ ಅಸಹಾಯಕಯನ್ನು ನೆನೆದಾಗ ಸಿಗುವುದು ಜೀವನ ಪಾಠ... ಮನೆಯೊಂದು ಒಡೆದರೆ, ಉದ್ದಾರವಾಗದೆ ಇದ್ದರೆ ಹೆಣ್ಣೇ ಕಾರಣ ಅನ್ನೋ ಸಮಾಜದಲ್ಲಿ ಮನೆಯೆಂದರೆ ಹೆಣ್ಣು ಮಾತ್ರವಲ್ಲ, ಜವಾಬ್ದಾರಿಯುತ ಗಂಡಸು ಮುಖ್ಯ. ಅನ್ನೋದು ಎಲ್ಲಿವರೆಗೂ ನೆನಪಿಗೋ ಬರೋಲ್ವೋ ಅಲ್ಲಿವರೆಗೂ ಇಂತಹ ಹತ್ತಾರು ನಂಜಮ್ಮ ಬಂದ್ರು ಅವಳ ಗೃಹ'ಭಂಗ'ವಾಗಿಯೇ ಇರುತ್ತದೆ.... ✍🏻ಮಂಜುಳಾ ಅಜಯ್ ಭಾರಧ್ವಜ್
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ನನ್ನ ಮನಸಿನಲ್ಲಿ ಉಳಿದವರು ನಂಜಮ್ಮ...ಅವಳ ತಾಳ್ಮೆ ನನ್ಗೆ ಇಷ್ಟವು ಆಗುತ್ತದೆ ಹಾಗೆ ಅಷ್ಟೇ ಸಿಟ್ಟು ಬರಿಸುತ್ತದೆ. ಮತ್ತೊಂದು ಸನ್ನಿವೇಶ ನನ್ಗೆ ಈಗಲೂ ಕಾಡುತ್ತದೆ. ನಂಜಮ್ಮ, ವಿಶ್ವ ಮತ್ತು ಚೆನ್ನೀಗ ಶೃಂಗೇರಿ ಶಾರದಮ್ಮನ ದರ್ಶನಕ್ಕ ಹೋಗುವಾಗ ಚೆನ್ನಿರಾಯ ಮಾತ್ರ ಮೋಟರು ವಾಹನದಲ್ಲಿ ಹೋಗ್ತಾನೆ, ಸಣ್ಣ ಮಗ ವಿಶ್ವ ಎಷ್ಟೇ ಕೇಳಿದ್ರು ಕರೆದುಕೊಂಡು ಹೋಗುವುದಿಲ್ಲ ಆದ್ರೆ ಅವನಿಗೆ ಆ ಹಣ ಸಿಕ್ಕಿದ್ದು ಕೂಡ ಸತ್ತ ಮಗಳ ಒಡವೆ ಮಾರಿದ್ದು.. ಅದನ್ನು ಓದಿದಾಗ "ಥೋ " ಇವನ್ನೆಷ್ಟು ನೀಚಾ! ಇಂತಹ ಗಂಡನನ್ನು ಸಾಯಿಸದೇ ಹಾಗೆ ಸಂಸಾರ ಮಾಡ್ತಾ ಇದ್ದಾಳಲ್ಲ ನಂಜಮ್ಮ ಅಂತ ಅವಳ ಮೇಲು ಕೋಪ ಬರುತ್ತದೆ... ನಂತರ ಅರಿವಾಗುತ್ತದೆ ಅವಳು ತಾಳ್ಮೆಯ ಪ್ರತಿರೂಪವೆಂದು..
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಈ ಕಾದಂಬರಿ ಎಲ್ಲರಿಗೂ ಸೂಕ್ತ. ಯಾಕಂದ್ರೆ ಅಂದಿನ ಜೀವನ ಶೈಲಿ,ಹಳ್ಳಿಯ ಬ್ರಾಹ್ಮಣ ಕುಟುಂಬಗಳು, ಸೋಮಾರಿ ಗಂಡಸು , ಕಾಲರ, ಎಲ್ಲದರ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ... ಒಂದೇ ವರ್ಗಕ್ಕೆ ಸೀಮಿತ ಮಾಡುವಂತಹ ಕಾದಂಬರಿಯಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.