ಪುಸ್ತಕದ ಶೀರ್ಷಿಕೆ: ಮಾಧವಿ
ಪುಸ್ತಕದ ಲೇಖಕರು: ಡಾ. ಅನುಪಮಾ ನಿರಂಜನ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ರಚಿತಾ ರಮೇಶ್‌ರಾವ್ ಕುಲಕರ್ಣಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಇದೊಂದು ಪೌರಾಣಿಕ ಕಾದಂಬರಿಯಾಗಿದ್ದು ಡಾ. ಅನುಪಮಾ ನಿರಂಜನ ಅವರು ಇದರ ಲೇಖಕಿಯಾಗಿದ್ದಾರೆ. ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಮೂಲ ಮಹಾಭಾರತದ ಸನ್ನಿವೇಶಗಳನ್ನು ಒಳಗೊಂಡಿದ್ದು, ಪುರುಷ ಪ್ರಧಾನ ಸಮಾಜವು ಹೆಣ್ಣನ್ನು ಕಾಣುವ ಬಗೆ ಎಂತಹದ್ದು ಎಂದು ಲೇಖಕಿಯು ಕೆಲ ಪಾತ್ರಗಳ ಮೂಲಕವಾಗಿ ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಾಧವಿ ಪಾತ್ರಧಾರಿಯು ಯಯಾತಿ ಎಂಬ ರಾಜನ ಮಗಳಾಗಿದ್ದು, ತಂದೆಯಿಂದಲೇ ತಿರಸ್ಕರಿಸಲ್ಪಟ್ಟವಳು ಕೊನೆಗೆ ದಾನವಾಗಿ ಇನ್ನೊಬ್ಬರ ಪಾಲಾಗುತ್ತಾಳೆ. ಇಲ್ಲಿ ಹೆಣ್ಣನ್ನು ಒಂದು ಮಾರಾಟದ ವಸ್ತುನ್ನಾಗಿ ಬಳಸಿರುವುದನ್ನು ಕಾಣಬಹುದು. ಅಲ್ಲದೇ ತಾನೇ ಜೀವವಿತ್ತ ಮಗುವಿನ ಮೇಲೆ ಹಕ್ಕು ಇಲ್ಲದೆಯೇ ತಾಯ್ತನವನ್ನೇ ಮರೆಯುವ ಪ್ರಸಂಗ ಬರುತ್ತದೆ. ಬೇರೆಯವರ ಕಾರ್ಯ ಸಿದ್ದಿಸಲು ತಾನು ದಾಳವಾಗಿ ತನ್ನ ವ್ಯಕ್ತಿತ್ವವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. 'ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎಂಬ ಮಾತಿದೆ ಹಾಗೆಯೇ 'ಹೆಣ್ಣು ಮೈಮರೆತರೆ ಇಡೀ ವ್ಯಕ್ತಿತ್ವವೇ ನಾಶ' ಎಂಬುದು ಸತ್ಯ. ಆದರೆ ಇಲ್ಲಿ ನಮ್ಮ ಪಾತ್ರಧಾರಿಯು ಮೈಮರೆತಿಲ್ಲ ಬದಲಾಗಿ ಇನ್ನೊಬ್ಬರು ತಮಗೆ ಬೇಕಾದ ಹಾಗೆ ಆಡಿಸುವ ಕೈಗೊಂಬೆಯಾಗಿದ್ದಾಳೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಸ್ಮರಣೀಯ ಕ್ಷಣಗಳು : * ಮಲತಾಯಿಯ ನಿಂದನೆ, ತಂದೆಯ ತಿರಸ್ಕಾರದಿಂದ ನೊಂದಿದ್ದರೂ, ಅವ್ವೆಯು ನೀಡಿದ ಪ್ರೀತಿ ಅವಳಿಗೆ ನವ ಚೈತನ್ಯ ನೀಡಿತ್ತು. * ಮಾಧವಿಯು ದಣಿದು ಬಂದಾಗ ಯಾವುದೇ ರಕ್ತ ಸಂಬಂಧವಿಲ್ಲವಾದರೂ ಆಕೆಯನ್ನು ಆರೈಕೆ ಮಾಡಿದ ಆಶ್ರಮದ ಮುನಿ ಪತ್ನಿಯರೂ ಆಕೆಗೆ ಕೆಲ ಸಾಂತ್ವನದ ಮಾತನಾಡಿ ಧೈರ್ಯ ತುಂಬಿದರು. * ರಾಜರ ಆಸ್ಥಾನದ ಸೇವಕಿಯರು ಮಾಧವಿಗೆ ಸ್ನೇಹಿತೆಯರಂತೆ ಅವಳ ಸುಖ-ದುಃಖದಲ್ಲಿ ಭಾಗಿಯಾಗಿ ಅವಳಿಗೆ ಜೊತೆಯಾಗಿದ್ದರು. ಪಾತ್ರಗಳು : ಯಯಾತಿ, ದೇವಯಾನಿ, ಚಾರುನೇತ್ರೆ, ಅವ್ವೆ ಗಾಲವ, ಹರ್ಯಶ್ವ, ದಿವೋದಾಸ, ಉಶೀನರ, ವಿಶ್ವಾಮಿತ್ರ ಕಲ್ಪನೆಗಳು : ಒಂದು ವೇಳೆ ಅವಳು ದೇವತೆಯಂತೆ ಶಕ್ತಿ ಯುಳ್ಳವಳಾಗಿದ್ದರೆ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದಾಗಿತ್ತು ಆದರೆ ಅವಳು ಕೇವಲ ಮಾನವ ಕನ್ಯೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಶೋಷಿತ ಹೆಣ್ಣುಮಕ್ಕಳಿಗಾಗಿ ಈ ಪುಸ್ತಕ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.