Submission 1907

ಪುಸ್ತಕದ ಶೀರ್ಷಿಕೆ: ಶ್ರೀಮತ್ತ ದಾಸ ಬೋಧ

ಪುಸ್ತಕದ ಲೇಖಕರು: ಶ್ರೀ ಸಮರ್ಥ ರಾಮದಾಸ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸಂತೋಷ್ ಕಲ್ಲಪ್ಪ ಬೊಂಗಾಳೆ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಶ್ರೀಮದ್ ದಾಸಬೋಧ – ವರ್ತಮಾನ ಜೀವನಕ್ಕೆ ಶಾಶ್ವತ ಮಾರ್ಗದರ್ಶನ . ಶ್ರೀಮದ್ ದಾಸಬೋಧವು ಕೇವಲ ಒಂದು ಧಾರ್ಮಿಕ ಗ್ರಂಥವಲ್ಲ; ಅದು ಮಾನವ ಜೀವನಕ್ಕೆ ದಿಕ್ಕು ತೋರಿಸುವ ಶಾಶ್ವತ ತತ್ತ್ವಗ್ರಂಥವಾಗಿದೆ. ಸುಮಾರು ನಾಲ್ಕು ಶತಮಾನಗಳ ಹಿಂದೆ ರಚನೆಯಾದ ಈ ಮಹಾಗ್ರಂಥ ಇಂದಿನ ಅಶಾಂತ, ಗೊಂದಲಭರಿತ ಮತ್ತು ಮೌಲ್ಯಸಂಕಷ್ಟದಲ್ಲಿರುವ ಸಮಾಜಕ್ಕೂ ಸಮಾನವಾಗಿ ಮಾರ್ಗದರ್ಶಕವಾಗಿದೆ. ಕಾಲ, ತಂತ್ರಜ್ಞಾನ ಮತ್ತು ಜೀವನಶೈಲಿ ಬದಲಾಗಿದರೂ ಮಾನವನ ಮನಸ್ಸು, ದುಃಖ, ಭಯ ಮತ್ತು ಆಸೆಗಳು ಮಾತ್ರ ಅಷ್ಟೇ ಉಳಿದಿವೆ. ಇಂತಹ ಮನಸ್ಸನ್ನು ಅರಿತು ಮಾರ್ಗದರ್ಶನ ನೀಡುವ ಗ್ರಂಥವೇ ದಾಸಬೋಧ. ಈ ಗ್ರಂಥದ ಕರ್ತೃ ಶ್ರೀಸಮರ್ಥ ರಾಮದಾಸ ಸ್ವಾಮಿಗಳು. ಅವರು ಹನ್ನೆರಡು ವರ್ಷಗಳ ಕಠೋರ ಸಾಧನೆ, ನಾಮಸ್ಮರಣೆ ಹಾಗೂ ಹನ್ನೆರಡು ವರ್ಷಗಳ ಭಾರತ ಪರ್ಯಟನೆ ಮೂಲಕ ವೇದ–ವೇದಾಂತ, ಉಪನಿಷತ್ತು ಮತ್ತು ಶಾಸ್ತ್ರಜ್ಞಾನವನ್ನು ಆತ್ಮಸಾತ್ ಮಾಡಿಕೊಂಡರು. ಸ್ವಾನುಭವ ಮತ್ತು ಶ್ರೀರಾಮನ ಕೃಪೆಯಿಂದ ರಚಿಸಲಾದ ದಾಸಬೋಧ ಉಪದೇಶಮಾತ್ರವಲ್ಲ, ಅನುಭವಸಾರವೂ ಹೌದು. ದಾಸಬೋಧದಲ್ಲಿ 20 ದಶಕಗಳು ಮತ್ತು 200 ಸಮಾಸಗಳಿದ್ದು, ಇದು ಗುರು–ಶಿಷ್ಯ ಸಂವಾದ ರೂಪದಲ್ಲಿ ರಚಿತವಾಗಿದೆ. ಶಿಷ್ಯನ ಪ್ರಶ್ನೆಗಳು ಮತ್ತು ಗುರುನ ಸರಳ, ಸ್ಪಷ್ಟ ಉತ್ತರಗಳು ಸಾಮಾನ್ಯ ಜನರಿಗೂ ಅರ್ಥವಾಗುವಂತಿವೆ. ಗ್ರಂಥದ ಆರಂಭದಲ್ಲೇ ಸಮರ್ಥರು ಒಂದು ಮೂಲಭೂತ ತತ್ತ್ವವನ್ನು ಸ್ಥಾಪಿಸುತ್ತಾರೆ—ಕರ್ತೃತ್ವವನ್ನು ದೇವರಿಗೆ ಅರ್ಪಿಸಿದರೆ ಸಮಾಜ ಮತ್ತು ರಾಷ್ಟ್ರ ಸುಖಶಾಂತಿಯನ್ನು ಪಡೆಯುತ್ತದೆ; ಅಹಂಕಾರದಿಂದ ಮಾಡಿದ ಕರ್ಮ ದುಃಖಕ್ಕೆ ಕಾರಣವಾಗುತ್ತದೆ. ಈ ವಿಚಾರ ಇಂದಿನ ಸ್ವಾರ್ಥಮಯ ಜೀವನಕ್ಕೆ ಅತ್ಯಂತ ಸೂಕ್ತವಾಗಿದೆ. ಭಾಷೆ ಬದಲಾಗಿದರೂ ತತ್ತ್ವ ಬದಲಾಗುವುದಿಲ್ಲ ಎಂಬುದನ್ನು ಸಮರ್ಥರು ಸ್ಪಷ್ಟಪಡಿಸುತ್ತಾರೆ. ಒಂದೇ ಆಹಾರವನ್ನು ಬೇರೆ ಪಾತ್ರೆಗಳಲ್ಲಿ ಇಟ್ಟರೂ ರುಚಿ ಬದಲಾಗದಂತೆ, ದಾಸಬೋಧದ ಸಂದೇಶ ಭಾಷಾಂತರಗಳಲ್ಲಿಯೂ ಶಾಶ್ವತವಾಗಿರುತ್ತದೆ. ಗ್ರಂಥದಲ್ಲಿನ ಮಂಗಳಾಚರಣೆ, ಶ್ರವಣಭಕ್ತಿಯ ಮಹತ್ವ ಮತ್ತು ವಾಚನದಿಂದ ದೊರೆಯುವ ಮಾನಸಿಕ ಶಾಂತಿ ಆತ್ಮೋನ್ನತಿಗೆ ದಾರಿ ಮಾಡಿಕೊಡುತ್ತದೆ. ದಾಸಬೋಧದ ಕೇಂದ್ರಬಿಂದು ಸ್ವವಿಚಾರ. “ನಾನು ಯಾರು?”, “ನನ್ನ ಕರ್ತವ್ಯವೇನು?”, “ವೈರಾಗ್ಯ ಎಂದರೇನು?” ಎಂಬ ಪ್ರಶ್ನೆಗಳ ಮೂಲಕ ಸಮರ್ಥರು ಅಂಧಶ್ರದ್ಧೆಯಿಂದ ಹೊರತೆಗೆದು ಆತ್ಮಜ್ಞಾನಕ್ಕೆ ಕರೆದುಕೊಳ್ಳುತ್ತಾರೆ. ಇಲ್ಲಿ ಭಕ್ತಿ, ಜ್ಞಾನ ಮತ್ತು ಕರ್ಮಗಳ ಸಮನ್ವಯವನ್ನು ಕಾಣಬಹುದು. ತ್ರಿಗುಣ ಸಿದ್ಧಾಂತ, ಕರ್ಮಸಿದ್ಧಾಂತ, ಜಪದ ಮಹತ್ವ, 84 ಲಕ್ಷ ಜೀವಯೋನಿಗಳ ವಿಚಾರ ಮತ್ತು “ಯಾವ ಭಾವವೋ ತದ್ಫಲ” ಎಂಬ ತತ್ತ್ವಗಳನ್ನು ಸರಳ ಉದಾಹರಣೆಗಳ ಮೂಲಕ ವಿವರಿಸಲಾಗಿದೆ. ದೇವರು ಹೊರಗಿಲ್ಲ; ಭಕ್ತನ ಹೃದಯದಲ್ಲಿದ್ದಾನೆ ಎಂಬ ಸಂದೇಶ ಮಾನವನನ್ನು ಅಂತರ್ಮುಖಿಯಾಗಿಸುತ್ತದೆ. ನಿರ್ಣಯವಾಗಿ, ಶ್ರೀಮದ್ ದಾಸಬೋಧವು ಕೇವಲ ಧಾರ್ಮಿಕ ಗ್ರಂಥವಲ್ಲ; ಅದು ಮಾನವ ಜೀವನದ ಸಂವಿಧಾನವಾಗಿದೆ. ನಾಲ್ಕು ಶತಮಾನಗಳ ಹಿಂದೆ ರಚಿತವಾದ ಈ ಗ್ರಂಥ ಇಂದಿಗೂ ಮತ್ತು ಮುಂದೆಯೂ ವ್ಯಕ್ತಿ, ಸಮಾಜ ಹಾಗೂ ರಾಷ್ಟ್ರಕ್ಕೆ ನೈತಿಕ, ಆಧ್ಯಾತ್ಮಿಕ ಮತ್ತು ವೈವಹಾರಿಕ ದಿಕ್ಕು ತೋರಿಸುವ ಶಾಶ್ವತ ದೀಪವಾಗಿದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

7
Votes
198
Views
7 Months
Since posted

Voting Closed!

Scroll to Top