Submission 1903

ಪುಸ್ತಕದ ಶೀರ್ಷಿಕೆ: ಕನಸಸಿನೊಳಗೊಂದು ಮನಸು

ಪುಸ್ತಕದ ಲೇಖಕರು: ಸಂಧ್ಯಾ ಹೊನಗುಂಟಿಕರ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಲಕ್ಷಿ ಬಡಿಗೇರ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಈ ಕಥೆಯು ಸಮಾಜದಲ್ಲಿ ಅನುಭವಿಸುತ್ತಿರುವ ಮಹಿಳೆಯರ ನೋವು-ನಲಿವು ಕಷ್ಟ-ದುಃಖಗಳ ಬಗ್ಗೆ ತಿಳಿಸುವ ಕಥೆಯಾಗಿದೆ. ಒಬ್ಬ ಹೆಣ್ಣು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾಳ ಅದು ಕುಟುಂಬದಲ್ಲಾಗಲೀ ಅಥವಾ ಸಮಾಜದಲ್ಲಾಗಲೀ ಅವಳಿಗೆ ಎಲ್ಲಾ ಕಡೆಯಿಂದಲೂ ಬರಿ ಕಷ್ಟಗಳೇ ತುಂಬಿವೆ. ಆದರೂ ಅವಳು ದೈರ್ಯ ಗೆಡದೆ ಎಲ್ಲವನ್ನೂ ನಿಬಾಯಿಸುತ್ತಲೇ ಬಂದಿದ್ದಾಳೆ. ಈ ಕಥೆಯು ಒಬ್ಬ ಮಹಿಳೆಯು ತನ್ನ ಗಂಡ ಅವಳನ್ನು ಬಿಟ್ಟು ಹೋದಾಗ ಅವಳು ಅನುಭವಿಸಿದ ನೋವು, ಕಷ್ಟಗಳನ್ನು ಈ ಕಥೆಯಲ್ಲಿ ಸವಿಸ್ತಾರವಾಗಿ ಲೇಖಕರು ತಿಳಿಸಿದ್ದಾರೆ. ಶಾಂತ ಎಂಬ ಮಹಿಳೆಗೆ ಮೂರು ಜನ ಮಕ್ಕಳು ಶೋಭಾ, ಸುಜಾತ ಮತ್ತು ಪ್ರಕಾಶ. ಶಾಂತಳ ಗಂಡನ ಹೆಸರು ನಾರಾಯಣ. ಶಾಂತಳ ಗಂಡನಿಗೆ ಏನೋ ಸಮಸ್ಯೆ ಬಂತು ಎಂದು ಅವನು ಅದರಿಂದ ಹೆದರಿ ಮನೆಯನ್ನು ಬಿಟ್ಟು ಹೊರಟು ಹೋಗುತ್ತಾನೆ ಎಲ್ಲರೂ ಎಷ್ಟೆ ಹುಡುಕಿದರು ಅವನು ಸಿಗುವುದಿಲ್ಲ. ಹೀಗೆ ಹನ್ನೆರಡು ವರ್ಷಗಳು ಕಳೆಯುತ್ತವೆ ಒಂದು ದಿನ ಶಾಂತಳ ಗಂಡ ಅವಳಿಗೆ ಒಂದು ಪತ್ರವನ್ನು ಬರೆದು ಕಳಿಸಿರುತ್ತಾನೆ ಅದರಲ್ಲಿ ನಾನು ನಿಮ್ಮನ್ನು ನೋಡಲು ಬರುತ್ತೇನೆ ಎಂದು ಬರೆದಿರುತ್ತದೆ. ಆಗ ಶಾಂತಳ ಮನಸ್ಸು ಸಮಾದಾನವಾಗುತ್ತದೆ ಎಲ್ಲಾ ಮಕ್ಕಳು ಕೂಡಾ ಖುಷಿಯಿಂದ ನಲಿಯುತ್ತಾರೆ. ಆದರೆ ಶಾಂತ ಕಳೆದ ದಿನಗಳನ್ನು ನೆನೆದು ಮನದಲ್ಲೇ ಕಣ್ಣೀರನ್ನು ಹಾಕುತ್ತಾಳೆ. ತನ್ನ ಗಂಡ ಅವಳಿಂದ ದೂರ ಹೋದಾಗ ಅವಳು ಪಟ್ಟ ಕಷ್ಟ ಅಷ್ಟಿಷ್ಟು ಅಲ್ಲ ಮೂವರು ಮಕ್ಕಳು ಅವರ ಜವಾಬ್ದಾರಿ ಮತ್ತು ಮನೆಯ ಜವಾಬ್ದಾರಿ ಎಲ್ಲವನ್ನೂ ಹೇಗೆ ನಿಭಾಯಿಸಬೇಕು ಎಂದು ತಿಳಿಯದ ಅಸಾಯಕತೆ ಅವಳದ್ದಾಗಿತ್ತು. ಸಮಾಜದಲ್ಲಿ ಬದುಕಲು ಅವಳಿಗೆ ತುಂಬಾನೇ ಕಷ್ಟಕರವಾದ ಸ್ಥಿತಿ ಎದುರಾಗಿತ್ತು ಆದರೂ ಅವಳು ಧೈರ್ಯ ಗೆಡದೆ ಎಲ್ಲಾವನ್ನೂ ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಳು. ಅವಳಿಗೆ ಅನೇಕ ರೀತಿಯ ನೋವುಂಟಾಗುವ ಮಾತುಗಳನ್ನು ಆಡುತ್ತಿದ್ದರು ಆದರೂ ಅವಳು ಯಾವುದಕ್ಕೂ ಕಿವಿ ಕೊಡುತ್ತಿರಲ್ಲಿಲ್ಲ. ತನ್ನ ಮೂರು ಮಕ್ಕಳಿಗೂ ಯಾವುದೇ ರೀತಿಯ ಕೊರತೆ ಇಲ್ಲದ ಹಾಗೆ ಅವರನ್ನು ಕಷ್ಟಪಟ್ಟು ಸಾಕಿದಳು. ಶಾಂತಳ ಮೊದಲನೆಯ ಮಗಳು ಶೋಭಾ ಇವಳಿಗೆ ವಿದ್ಯೆಯಲ್ಲಿ ಅಷ್ಟು ಆಸಕ್ತಿ ಇರಲಿಲ್ಲ ಅವಳು ಕೆಲಸವನ್ನು ಮಾಡಿ ಅಮ್ಮನಿಗೆ ಸಹಾಯವನ್ನು ಮಾಡುತ್ತಿದ್ದಳು. ಇನ್ನೂ ಎರಡನೆಯವಳು ಸುಜಾತ ಇವಳು ಓದುವುದರಲ್ಲಿ ತುಂಬಾನೇ ಜಾಣೆ ಮತ್ತೆ ಪ್ರಕಾಶ ಇವನು ಓದುವದರಲ್ಲಿಯೂ ಇಲ್ಲ, ಕೆಲಸದಲ್ಲಿಯೂ ಇಲ್ಲ. ಈ ಇಡಿ ಸಂಸಾರದ ಜವಾಬ್ದಾರಿಯನ್ನು ಶಾಂತಳಳು ಒಬ್ಬಳೇ ನಿಭಾಯಿಸುತ್ತಿದ್ದಳು. ತನ್ನ ಜೊತೆಗೆ ಯಾರೂ ಇಲ್ಲದ್ದರೂ ಅವಳು ಅಲ್ಲಿ ಇಲ್ಲಿ ಅಡುಗೆ ಕೆಲಸವನ್ನು ಮಾಡಿ ಹೆಸರನ್ನು ಪಡೆದಿದ್ದಳು. ಮತ್ತೆ ಅದು ಅಲ್ಲದೆ ಮನೆಯಲ್ಲಿ ಹಪ್ಪಳಗಳನ್ನು ತಯಾರಿಸಿ ಮಾರುತ್ತಿದ್ದಳು. ಹೀಗೆ ತಾನು ಕಳೆದ ಒಂಟಿ ಜೀವನದ ಬಗ್ಗೆ ಮನದಲ್ಲೇ ಕೊರಗುತ್ತಾಳೆ. ನಂತರ ಅದರಿಂದ ಈಚೆಗೆ ಬಂದು ತನ್ನ ಗಂಡನ ಆಗಮನಕ್ಕೆ ಮನೆಯನ್ನು ಸ್ವಚ್ಛವಾಗಿಸುತ್ತಾಳೆ. ಎಲ್ಲರ ಮುಖದಲ್ಲಿಯೂ ಸಂತೋಷ ಮೂಡಿರುತ್ತದೆ. ಮನೆಯಲ್ಲಿ ಸಂಭ್ರಮವೂ ಇರುತ್ತದೆ. ನಂತರ ಶಾಂತ ಆ ಸಂತೋಷದಿಂದ ಆಚೆ ಬಂದು ನಿದ್ರೆಗೆ ಜಾರುತ್ತಾಳೆ. ನಿದ್ರೆಯನ್ನು ಮಾಡುತ್ತಾ ಕನಸಿನಲ್ಲಿ ತನ್ನ ಗಂಡನಿಗೆ ಹೇಳದಿರುವ ಮಾತುಗಳನ್ನು ಕನಸಿನಲ್ಲಿ ತನ್ನ ಮನಸ್ಸಿನ ಜೊತೆಗೆ ಮಾತನಾಡುತ್ತಾಳೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಪಾತ್ರಗಳು: ಶಾಂತ (ನಾರಾಯಣನ ಹೆಂಡತಿ), ಶೋಭಾ, ಸುಜಾತ, ಪ್ರಕಾಶ(ಶಾಂತಾಳ ಮಕ್ಕಳು) ಈ ಕಥೆಯಲ್ಲಿ ಶಾಂತ ತನ್ನ ಗಂಡ ತನ್ನನ್ನು ಬಿಟ್ಟು ಹೋದರೂ ಕೂಡಾ ಅವಳು ಧೈರ್ಯಗೆಡದೆ ಒಂಟಿಯಾಗಿ ತನ್ನ ಬದುಕಿನ ಹೋರಾಟವನ್ನು ಮಾಡುತ್ತಾಳೆ ಇದು ಎಲ್ಲಾ ಹೆಣ್ಣು ಮಕ್ಕಳಿಗೂ ಸ್ಪೂರ್ತಿ ದಾಯಕವಾಗಿದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಎಲ್ಲಾ ಮಹಿಳೆಯರಿಗೂ ಕೂಡಾ ಸಹಾಯಕವಾಗಿದೆ ಎಷ್ಟೆ ಕಷ್ಟ ಬಂದರು ಹೆದರದೆ ಹೇಗೆ ಬದುಕಬೇಕು ಎಂಬುದನ್ನು ಈ ಪುಸ್ತಕದಲ್ಲಿ ಓದಿ ತಿಳಿಯಬಹುದಾಗಿದೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

6
Votes
194
Views
7 Months
Since posted

Voting Closed!

Scroll to Top