Submission 1893

ಪುಸ್ತಕದ ಶೀರ್ಷಿಕೆ: ಕಾದನೋವ

ಪುಸ್ತಕದ ಲೇಖಕರು: ಮನೋಜ್ ಪಿ.ಎಂ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ದೀಪಿಕಾ ಬಾಬು

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

"ಮನೋವೈಜ್ಞಾನಿಕ/ಮಾನಸಿಕ ಮಾನವ ಶಾಸ್ತ್ರದ ಉಲ್ಲೇಖನವೇ ಈ ಕಾಸನೋವ" ಕಾಸನೋವ- ವಿಭಿನ್ನ ರೀತಿಯಲ್ಲಿ ಓದಿಗೆ ದಕ್ಕಿದ ಮನೋವೈಜ್ಞಾನಿಕ ಕಾದಂಬರಿ. ಕಾಸನೋವ ಈ ಪದದ ಒಳನೋಟಕ್ಕೆ ತೆರೆದುಕೊಳ್ಳುವವನೇ 17ನೇ ಶತಮಾನದಲ್ಲಿದ್ದ ಇಟಲಿಯ ಆ ವ್ಯಕ್ತಿ, ಅವನ ವ್ಯಕ್ತಿತ್ವವೇ ಈ ಕಾಸನೋವ. ರೂಪವತಿ ತರುಣಿಯರ ತನ್ನೆಡೆಗೆ ಸೆಳೆದು ಅವರೊಂದಿಗೆ ಆಟವಾಡುತ್ತಿದ್ದ ಹೆಣ್ಣು ಬಾಕ, ಆದರೆ ಸಭ್ಯತೆಯ ಮುಖವಾಡ ಧರಿಸಿಕೊಂಡು ಜಾಣನಂತಿದ್ದ ಅವನ ಚಾಲಕಿತನಕ್ಕೆ ಹೆಣ್ಣುಗಳ ಆಕರ್ಷಿಸುವ ಚಮತ್ಕಾರ ಕಲಿತಿದ್ದ ಮತ್ತು ಅವರ ಅವನತಿಗೆ ಕಾರಣ ಕರ್ತೃವಾಗುತಿದ್ದ ಹೀಗೆ ಇವನು ಪ್ರಖ್ಯಾತಿ ಹೊಂದಿ ಮಾನಸಿಕ ಬಳಕೆಯಲ್ಲಿ ತಾನಾಗಿಯೇ ಕಾಸನೋವಾಗಿ ಹೋದ ಇದರ ಅಸ್ತಿತ್ವಕ್ಕೆ ಇಂತಹ ಮಾನಸಿಕ ಬಳಲುವಿಕೆಯೇ ಇಲ್ಲಿನ ಕಾಸನೋವ. ಬಾಲ್ಯದಲ್ಲಿ ಕಲಿತದ್ದೇ ಬದುಕಿಗೆ ಬರೋದು ಅನ್ನುವಂತೆ, ವ್ಯಕ್ತಿತ್ವ ರೂಪುಗೊಳ್ಳುವುದು ಬಾಲ್ಯದಲ್ಲಿ ಅದರಲ್ಲೂ ಪ್ರಾಥಮಿಕ ಮತ್ತು ಪ್ರೌಢ ವ್ಯವಸ್ಥೆಯ ಹಂತದಲ್ಲಿ. ಬೆಳೆಯುವ ಪರಿಸರ, ಇತರರು ನಡೆದುಕೊಳ್ಳುವ ರೀತಿ, ನಮ್ಮಲ್ಲಾಗುವ ಬದಲಾವಣೆಗಳಿಗೆ ಕಾರಣವಾಗುತ್ತದೆ. ಮೊಳೆತ ಬೀಜಕ್ಕೆ ಅಗತ್ಯತೆಗಳನ್ನು ಒದಗಿಸಿದರೆ ಅದೊಂದು ಹೆಮ್ಮರವಾಗಿ ನೆರಳಾಗಿ ತನ್ನ ಅಸ್ತಿತ್ವವನ್ನು ಭದ್ರ ಮಾಡಿಕೊಳ್ಳುತ್ತದೆ. ಆದರೆ ಗಿಡವಾಗಿದ್ದಾಗಲೇ ಅದರ ಕಾಳಜಿ ಮಾಡದೆ ಹೋದರೆ ಬೀಸುವ ಬಿರುಗಾಳಿಗೆ ನಲುಗಿ ಆಹುತಿಗೆ ತುತ್ತಾಗುತ್ತದೆ. ಇಂತಹದೊಂದು ವಿಚಾರದಲ್ಲಿ ಮಕ್ಕಳ ಬಾಲ್ಯವೇ ರೂಪಿಸುವುದು ಭವಿಷ್ಯದಲ್ಲಿ ಅವರ ವ್ಯಕ್ತಿತ್ವವನ್ನು. ಸಾಮಾನ್ಯವೆನಿಸುವ ಎಷ್ಟೋ ವಿಚಾರಗಳು ಇಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಮಾನಸಿಕ ತೊಳಲಾಟಕ್ಕೆ ಸಾರವಾಗಿ ಈ ಕಾದಂಬರಿ ರೂಪುಗೊಂಡಿದೆ. ಈ ಮುಖ್ಯ ಭೂಮಿಗೆ ಪ್ರಧಾನ ಪಾತ್ರವೇ ಕಾಸನೋವ. ಮೊದಲೇ ಹೇಳಿದಂತೆ ಅದೊಂದು ಮಾನಸಿಕ ಬಳಲುವಿಕೆ. ಇದರಲ್ಲಿ ಪ್ರಧಾನ ಪಾತ್ರವೆಂದಿಲ್ಲ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರಗಳಲ್ಲಿ ಜೀವಿಸುತ್ತಾ ಹೋಗುತ್ತಾರೆ. ವೀರಾಪುತ್ರ, ನಚಿಕೇತ, ಚಾರುದತ್ತ ಹಾಗೆ ಈ ಮೂವರಿಗೆ ಸಂಬಂಧಿಸಿದಂತೆ ಸಿಂಧೂರಿ ಸಲೀನ ಪಾತ್ರ ಓದುಗಾರನ ಮನದಲ್ಲಿ ನೆಲೆಯೂರುವಂತೆ ಮಾಡುತ್ತದೆ. ಸರಿ-ತಪ್ಪು ಎಂದು ಎರಡು ಧೋರಣೆಗಳನ್ನು ಪ್ರತಿಪಾದಿಸುತ್ತಾ ಸಾಗುವ ಇಲ್ಲಿ 'ಸ' ಮತ್ತು 'ನ' ಕಾರಾತ್ಮಕ ಆಲೋಚನೆಯಲ್ಲಿ ವೀರ ನೆಂಬುವವನಿಂದ ನಚಿಕೇತನ ಕಥೆ ಆರಂಭಗೊಳ್ಳುತ್ತದೆ. ತಪ್ಪು ತನ್ನ ವಿರುದ್ಧ ಎಸಗುತ್ತದೆ ಮತ್ತು ಅದು ತಪ್ಪಾಗಿದ್ದ ಕಾರಣ ಅದನ್ನು ಕೊಲ್ಲಲಾಗುತ್ತದೆ. ಇಲ್ಲಿ ಗಮನಿಸಬೇಕಾದ ವಿಚಾರ ಓದುಗರಿಗೆ ಗೊಂದಲ ಒಡಮೂಡದಂತೆ ಕಥೆಗಾರರು ಅವರದೇ ಆಲೋಚನೆಯಲ್ಲಿ ವಿಭಿನ್ನವಾಗಿಯೇ ಕಥೆಯ ವೀರರಿಂದ ಬರಿಸುತ್ತ ಸಾಗುತ್ತಾರೆ. ಮತ್ತು ಅವರ ದೃಷ್ಟಿಕೋನದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಎಂಬುದು ನಿಶ್ಚಿತ ಎಂಬ ಸೂಚನೆಯನ್ನು ಬಿಂಬಿಸಿರುತ್ತಾರೆ. ಅದೊಂದು ಮುಸುಕಿನ ಮುಂಜಾನೆ ಹೆದರಿಕೊಂಡು ಮೇಲೇಳುವ ವೀರನಿಗೆ ಸಿಂಧೂರಿಯ ಪ್ರಶ್ನೆ, ನನ್ನ ವೀರ ಹೆದರಿದ್ದಾನೆ?, ನಿನ್ನ ಅಣ್ಣ ನಚಿಕೇತನನ್ನು ಕೊಂದ ಕನಸು ಕಣೆ! ಅಣ್ಣನಿಗೂ ನೆಚ್ಚಿಕೇತನಿಗೆ ಸಂಬಂಧವಿಲ್ಲ, ಎಂದು ಅವರಿಬ್ಬರ ಭೇಟಿ ಸಂಭವಿಸಿಯೂ ಇಲ್ಲ ಮತ್ತು ಅದು ಅಸಾಧ್ಯ ಆದರೆ ಇಂತಹದೊಂದು ಕನಸಿಗೆ ಬೆಚ್ಚಿದ ವೀರ ಸಿಂಧುರಿಯನ್ನು ಮಲಗಲು ಬಿಟ್ಟು ನಚಿಕೇತನ ಡೈರಿ ತರಲು ಹೋಗುತ್ತಾನೆ ಮತ್ತು ಡೈರಿಯಲ್ಲಿ ನಚಿಯ ಅನುಭವ ನಮ್ಮ ಮುಂದೆ ತೆರೆದಿಡುತ್ತಾರೆ. ಮಧ್ಯ ವರ್ಗದ ಜನರಲ್ಲಿ ಸಾಮಾನ್ಯ ಬದುಕುವಿಕೆ ಬಾಲ್ಯವೇ ನಚಿಯದು ಸಹ. ಅಪ್ಪ ಅಮ್ಮ ಅಕ್ಕ ತಾನೊಂದು ತುಂಬು ಸಂಸಾರದಲ್ಲಿದ್ದ ನಚಿ, ತನ್ನ ಸುತ್ತಮುತ್ತಲಿನ ವಾತಾವರಣ ಅವನ ಭವಿಷ್ಯಕ್ಕೆ, ವ್ಯಕ್ತಿತ್ವಕ್ಕೆ ಆಘಾತಕಾರಿ ಯಾಗುವುದೆಂಬ ವಿಚಾರದ ಪ್ರಸ್ತಾಪಗಳು ಸತ್ಯವೇ ಹೌದಾದರು ಅದನ್ನು ಅರ್ಥೈಸುವಷ್ಟು ಮನೋಸ್ಥಿತಿ ಪಕ್ವಗೊಂಡಿಲ್ಲ! ಹೋಗುತ್ತಿದ್ದಾಗ ಸಂಶಯದ ಹುತ್ತ ಬೆಳೆದು ತಾನೇ ಕಾಸ ನೋವಾಗಿ ಮಾರ್ಪಡಾಗುತ್ತಾ, ಆ ಹುತ್ತದಲ್ಲಿ ವಿಷಕಾರಿಯಾಗಿ ಬೇರೂರುತ್ತಾ ಸಾಗುತ್ತಾನೆ. ಕಾಣಸಿಕ್ಕುವ ವಿಚಾರಗಳಲ್ಲಿ ಅವನು ಜಗತ್ತನ್ನು ದ್ವೇಷಿಸುತ್ತಾ ಹೋಗುತ್ತಾನೆ. ಬಡತನದ ಮನೆಗಳಲ್ಲಿ ಗಂಡ ಹೆಂಡತಿಗೆ ಪ್ರತ್ಯೇಕ ಕೋಣೆಗಳಿರದೆ ಹೋದಾಗ ಉದ್ಭವಿಸುವ ಅವರ ಮಿಲನಗಳನ್ನು ಕಾಣುವ ಮಕ್ಕಳ ಮನಸ್ಸಲ್ಲಿ ಬೇರೂರುವ ಅವರ ಬದುಕಿನ ವಿಷಯ, ನೇರೆಹೊರೆಯ ಮನೆಗಳಲ್ಲಿ ಸಿಕ್ಕುವ ನಗ್ನ ಮ್ಯಾಗಜಿನ್ ಮತ್ತು ತನ್ನ ಗಂಡ ಅಥವಾ ಹೆಂಡತಿ ಅನ್ಯರೊಂದಿಗೆ ಬೆರೆಯುವ ಅವರ ಬದುಗಿನ ಧೋರಣೆ. ತನ್ನ ತಂದೆಯ ಗೆಳಯನ ತಂದೆಯ ಮುಂದೆಯೇ ಮಗಳ ಅತ್ಯಚಾರಮಾಡಿ ಕೊಲ್ಲುವುದೆಂದರೆ!? ಅಣ್ಣ-ತಂಗಿಯರ ಬಾಂಧವ್ಯದಲ್ಲಿ ಮೋಹಕತೆಯ ಮಜಲು ಹೀಗೆ ನಚಿಕೇತನಿಗೆ ಕಾಣಸಿಕ್ಕುವ ವಿಷಯಗಳೆಲ್ಲ ಗಂಡು ಹೆಣ್ಣಿಗೆ ಸಂಬಂಧಿಸಿದಂತಹ ಪ್ರಕೃತಿದತ್ತ ಕ್ರಿಯೆಯೆ ಆದರೂ ಅದರ ಬಗ್ಗೆ 'ಸ' ಬಗೆಗೆ ಅರ್ಥೈಸಲಾಗದವ "ನ" ಮಾನದಂಡಕ್ಕೆ ತಕ್ಕಂತೆ ರೂಪುಗೊಳ್ಳುತ್ತಾನೆ ಅಪ್ಪ ಅಕ್ಕ ನನ್ನ ತಾಯಿಯನ್ನು ಇಂತಹುದೇ ಸನ್ನಿವೇಶದಲ್ಲಿ ಕಾಣುವಾಗ ಅವರ ಮುಲುಕುಗಳ ಆಲಿಸಿದವನಿಗೆ ಹೆಣ್ಮನದ ರೂಪಕ ಅವರ ದೇಹಾಕರ್ಷಣೆ‌ ಸೆಳೆಯುತ್ತಾ ಹೋಗುತ್ತದೆ. ಮತ್ತು ಅಂತವರ ಬಗ್ಗೆ ಸೇಡು ತೀರಿಸಿಕೊಳ್ಳಲು ಇವನು ಮುಂದಾಗುತ್ತಾನೆ. ಹೆಣ್ಣುಗಳೆ ಕೇಂದ್ರ ಬಿಂದುಗಳು ಅವರೇ ಇವನೆಡೆಗೆ ಆಕರ್ಷಿತರಾದಾಗ ಇವ ಕಾಸನೋವ ನಾಗುತ್ತಾನೆ. ಸಾಗರದಂತಹ ದುಃಖಗಳಿದ್ದರೂ ಪ್ರಶಾಂತವಾಗಿರುವ ಅಂದರೆ ಅದು ವೀರಾಪುತ್ರ. ಅವನು ಹೀಗೆ ಬೆಳೆಯಲು ಕಾರಣವಾದವಳು ಸಲೀನ‌, ಇವಳು ಮುಸಲ್ಮಾನಳಾದರೂ ಅವರಿಬ್ಬರ ಸ್ನೇಹ ಸಂಬಂಧ ಅಗಾಧವಾದದ್ದು. ತಾಯಿ ಮಗುವಿನ ಬಂಧವದು. ತನ್ನ ತಂದೆಯನ್ನು ಕೊಂದು ತಾಯಿಯನ್ನು ಅತ್ಯಾಚಾರ ಎಸೆಗಲು ಬಂದವನ ಮೇಲೆ ವೀರನ ತಾಯಿಯೇ ಕೊಲ್ಲುವುದು! ತನ್ನ ಮಾನ ರಕ್ಷಣೆಗಾಗಿ. ಇದು ತಿಳಿಯದ ಸತ್ತವನ ಮಗನು, ವೀರ ಮತ್ತು ಅವನ ತಾಯಿಯ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿರುತ್ತಾನೆ. ಇತ್ತ ವೀರನ ಸಂಪೂರ್ಣ ರಕ್ಷಣೆಯ ಭಾರವನ್ನು ಸಲೀನಾ ಮತ್ತು ಅವಳ ತಂದೆಗೆ ನೀಡಿ ನದಿಯಲ್ಲಿ ಮುಳುಗಿ ಹೋದಂತೆ ಭಾಸವಾಗುತ್ತದೆ ವೀರನ ತಾಯಿ. ಆದರೆ ಅದೊಂದು ಅನುಮಾನಾಸ್ಪದ ಸಾವು! ‌‌‌ ಸಲೀನ ವೀರನಿಗಿಂತ ಏಳು ವರ್ಷ ಹಿರಿಯಳಾದರು, ಅವಳ ಮನಸಿಲ ಆಲೋಚನೆ ಬಹಳ ಪ್ರಬುದ್ಧವಾದದ್ದು ಮನಃಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪಡೆದವಳು. ವಿಚಾರವಂತಿಕೆ ಮತ್ತು ಗ್ರಹಿಸುವಿಕೆಯಲ್ಲಿ ಉತ್ತಮಳಾಗಿದ್ದ ಸಲೀನಾಳ ಬಳಿಯಲ್ಲಿ , ವೀರ ತನ್ನ ಗೆಳೆಯ ನಚಿಕೇತನ ಕಾಸನೋವಿನ ಮನಸ್ಥಿತಿಯನ್ನು ವಿವರಿಸುತ್ತಾನೆ. ಅವನ ಮನಸ್ಥಿತಿಯ ಸುಧಾರಣೆಗಾಗಿ ಸಲೀನಾಳ ಸಹಾಯ ಕೇಳುತ್ತಾಳೆ. ಅಷ್ಟರಲ್ಲಾಗಲೇ ನಚಿಯು ಮತ್ತಷ್ಟು ಕಾಸನೋವಾಗಿರುತ್ತಾನೆ. ಸಂಭ್ರಮ, ಸಮಕ್ಷಮ, ಕಲ್ಪತರು, ಹಾಗೂ ಕೀರ್ತನ ಬಂದಿರುತ್ತಾರೆ. ಇನ್ನು ಸಲೀನಳು ಹಾಗೆ ತನ್ನ ಆಕರ್ಷಣೆಗೆ ಬಲಿಯಾಗುತ್ತಾಳೆ ಅಂದುಕೊಳ್ಳುತ್ತಾನೆ. ಆದರೆ! ನಚಿಯ ಕಾಸನೋವಾಗಿ ಕಾಡಿದ ಸಿಂಧೂರಿಯ ವೀರನನ್ನ ಪ್ರೇಮಿಸುವುದಾಗಿ ತಿಳಿಸಿದಾಗ, ಅವಳನ್ನು ಕೊಲ್ಲುವಷ್ಟು ಆಕ್ರೋಶ ಬಂದರು, ಗೆಳೆಯನಿಗಾಗಿ ನಿಗ್ರಹಿಸಿಕೊಳ್ಳುತ್ತಾನೆ. ಅಂದರೆ ನಚಿ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಬಲ್ಲ! ಮತ್ತೊಂದು ಗ್ರಹಿಸಬೇಕಾದ ವಿಚಾರ ನಚಿಕೇತನ ಆಕರ್ಷಣೆಗೆ ಒಳಗಾಗುತಿದ್ದ ಹುಡುಗಿಯರು ಅವನ ತೆಕ್ಕೆಗೆ ಬೀಳುತ್ತಿರಲಿಲ್ಲ! ಅದು ಅವನನ್ನು ತೊಳಲಾಟಕ್ಕೆ ನೂಕಿತು. ಸಲೀನ ನಚಿಕೇತನಿಗೆ ತಾನು ಅವನಿಗೆ ಒಲಿಯಬೇಕೆಂದರೆ ಒಂದು ಕಾರ್ಯ ಮಾಡಬೇಕೆಂದು ಅವನಿಂದ ಸಂಕಲ್ಪ ಮಾಡಿಸಿಕೊಳ್ಳುತ್ತಾಳೆ. ನಚಿಕೇತ ಸಲೀನಾಳನ್ನು ಒಲಿಸಿಕೊಳ್ಳಲು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾನ? ಬದಲಾಗುತ್ತಾನ? ತಾನು ಕಾಸನೋವ ಪರದೆಯಿಂದ ದೂರ ಸರಿಯುವಂತೆ ಸಲೀನಾಳ ಅಗಾಧ ಪ್ರೇಮ ಅವನಲ್ಲಿ ಬಲವಾಗುತ್ತದ? ಅವಳ ಕನಸು ಗುರಿಗಳು ಇವನಲ್ಲಿ ಬೇರೂರಿ, ಪ್ರೀತಿಯೆಂದರೆ ಆಕರ್ಷಣೆಯ ಹೊರತು ಜೀವ ಕೊಡುವ ಮಟ್ಟಿಗೆ ಎಂದು ತಿಳಿದ ಮೇಲೆ ನಚಿ ಸಂಪೂರ್ಣ ಮನುಷ್ಯನಾಗುತ್ತಾನ? ಆದರೆ ಸಲೀನ ಬೇರೊಂದು ಅವಗಢಕ್ಕೆ ತುತ್ತಾಗಿರುತ್ತಾಳೆ. ‌‌ ಅಧ್ಯಯ ಅಂತ್ಯಗೊಳ್ಳುವ ಸಮಯಕ್ಕೆ, ಸತ್ಯಗಳು ಮುಖ್ಯ ಭೂಮಿಯಲ್ಲಿ ಬಯಲಾಗಬೇಕಲ್ಲವೇ? ಅವನಿಗೊಂದು ಪ್ರತ್ಯೇಕ ಅಧ್ಯಾಯ ಇದೀಗ. ಅಧ್ಯಾಯ-ಎರಡು ಕಾಸನೋವ ಮುಂದುವರಿದ ಭಾಗ. ‌ ಜಾರುದತ್ತನೆಂದು ಕಥೆಯ ಆರಂಭದಲ್ಲಿ ಸಿಂಧೂರಿಗೆ ವೀರ ಹೇಳುತ್ತಾನೆ ಚಾರುದತ್ತ ನಚಿಯನ್ನು ಕೊಲ್ಲುತ್ತಾನೆ!, ಕನಸು ಕಣೆ ಆ ಕನಸಿನ ಭಾಗವಿದು. ವೀರಪುತ್ರನ ತಾಯಿ ನದಿಯಲ್ಲಿ ಮುಳುಗಲಿಲ್ಲ ಮುಳುಗಿಸಿ ಕೊಂದದ್ದ!! ಅವನ ತಂದೆಯನ್ನು ವೀರನ ತಾಯಿ ಕೊಂದರೆಂಬ ಕಾರಣಕ್ಕೆ? ಆದರೆ ಅಸಲಿಯ ವಿಷಯ ಮತ್ತೊಂದು ಕಡೆ ಬಯಲಾಗಬೇಕಿತ್ತು. ತಂದೆಯನ್ನು ಕೊಂದವಳ ಮಗನಿಗಾಗಿ ಅಲೆಯುತ್ತಿದ್ದ ಜಾರುದತ್ತನಿಗೆ ಪರಿಚಯವಾದ ಹುಡುಗಿಯರೆಲ್ಲ ನೆಚ್ಚಿಕೇತನ ಗೆಳತಿಯರೇ ಒಬ್ಬೊಬ್ಬರಾಗಿ ಎಲ್ಲರೂ ಸಾಯುತ್ತಾರೆ ಅನುಮಾನ ಆಸ್ಪದವಾಗಿ, ತನ್ನ ಸುಳಿವು ಸಿಗದಂತೆ ಕೊಲ್ಲುತ್ತಾನೆ. ಹುಡುಗಿಯರೆಲ್ಲ ಮೋಸ ಗೈವವರು ಎಂಬುದಷ್ಟೇ ಅವನ ಆವೇಶ ಸನ್ನಿವೇಶವು ಅದೇ ಸ್ಥಿತಿಗೆ ಒಳಪಟ್ಟಿರುತ್ತದೆ. ಸಲೀನಳನ್ನು ಬಾಲ್ಯದಿಂದಲೂ ಮನದಲ್ಲಿ ಆರಾಧಿಸುತಿದ್ದ ಚಾರುದತ್ತನಿಗೆ ಅವಳು ನಚಿಯನ್ನು ಪ್ರೇಮಿಸುವುದಾಗಿ, ಮತ್ತು ನಚಿಯ ತಾಯಿಯೇ ತನ್ನ ತಂದೆಯನ್ನು ಕೊಂದರೆಂದು ತಿಳಿದು ಅವರನ್ನು ಸಂಚು ಮಾಡಿ ಕೊಲ್ಲುತ್ತಾನೆ? ಚಾರುದತ್ತ ತನ್ನ ಸೇಡಿನ ಅಧ್ಯಾಯಕ್ಕೆ ತೆರೆ ಎಳೆಯುತ್ತಾನೆ?. ಸಿಂದೂರಿ ಮತ್ತು ಅವನ ತಾಯಿ ವೀರನ ಬಗ್ಗೆ ವೀರನ ತಾಯಿಯ ಬಗ್ಗೆ ಕುಲಂಕುಶವಾಗಿ ಚಾರುದತ್ತನಿಗೆ ಮನವರಿಕೆ ಮಾಡಿಸಿದಾಗ, ಸತ್ಯದ ಅರಿವಾಗುತ್ತದೆಯಾ? ಸಲೀನ ಮತ್ತು ನಚಿಯ ಕನಸನ್ನು ನೆರವೇರಿಸಲು ಚಾರು ಮುಂದಾಗುತ್ತಾನ? ಓದಿಯೇ ತಿಳಿಯಬೇಕು. " ಹೇಳಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ, ನಿಜವು ತಿಳಿಯುವುದು. ಬಾಲ್ಯ, ಪ್ರೌಢ, ಕ್ರೌರ್ಯ, ಅಸುಹೆ, ದ್ವೇಷ, ಸೇಡು ಪ್ರೀತಿ, ವಾಂಛೆ ಎಲ್ಲವನ್ನು ನೈಜವಾಗಿ ಧನಾತ್ಮಕವಾಗಿ ಬದುಕಿನ ನೈಜತೆಯಲ್ಲಿ ಕುತೂಹಲ ಕೆರಳಿಸಿ, ಎಂತವರು ಸಹ ಇನ್ನೊಮ್ಮೆ ಬಾಲ್ಯವ ನೆನಪಿಸಿಕೊಳ್ಳುವಂತೆ ಮಾಡಿಬಿಡುವ ತಾಕತ್ತು ಈ ಕಾಸನೋವ ಕಾದಂಬರಿಗಿದೆ. ಇಲ್ಲಿ ಆಕರ್ಷಣೆ ಒಳಗಾಗಿ ಬಲಿಯಾದವರು ಹೆಣ್ಣು ಮಕ್ಕಳು ಅವರ ಪಾತ್ರವೇ ಮುಖ್ಯ ಭೂಮಿಯಲ್ಲಿ ತಿರುವು ಪಡೆಯುವಂತೆ ಮಾಡುವುದು. *ತಪ್ಪು ಮಾಡುತ್ತಾರೆ ಅವರಿಗೆ ಶಿಕ್ಷೆಯಾಗಬೇಕು!‌ಒಬ್ಬರ ತತ್ವ "ತಪ್ಪು ಮಾಡಿದವರಿಗೆ ನಾವೇ ಶಿಕ್ಷೆ ನೀಡಬೇಕು ಮತ್ತೊಬ್ಬರದ್ದು, ಮತ್ತು *ತಪ್ಪು ಮಾಡುತ್ತಾರೆ ಅಂತವರಿಗೆ ದೇವರಿದ್ದಾನೆ ಕಾನೂನಿದೆ. ಹೀಗೆ ಮೂರು ವಿಭಿನ್ನ ಪಾತ್ರಧಾರಿಗಳ ಅವರ ವ್ಯಕ್ತಿತ್ವ ನಿಲುವುಗಳನ್ನು ನಿಜವಾಗಿ ಮನೋಜ್ಞವಾಗಿ ತಮ್ಮ ಕಾಸನೋವ ಕಾದಂಬರಿಯಲ್ಲಿ ಬಿಂಬಿಸುತ್ತಾರೆ ಕಾದಂಬರಿಗಾರರು. ಇಲ್ಲಿ ನಿರೂಪಣೆಯು ಬಲು ಮನೋಜ್ಞವಾಗಿದ್ದು, ಪಾತ್ರಗಳ ಪೋಷಣೆಯೂ ಅಚ್ಚುಕಟ್ಟಾಗಿದೆ. ಪುಸ್ತಕ ಕೈಗೆತ್ತಿಕೊಂಡು ಓದಿನ ಧ್ಯಾನಕ್ಕಿಳಿದರೆ ಅದೊಂದು ಗುಪ್ತಗಾಮಿನಿಯ ಅನುಭವ ಮತ್ತು ಕುತೂಹಲಕರವಾದ ಋಣತ್ಮಕ ಹಾಗೂ ಧನತ್ಮಕ ವಿಚಾರ ಸಂಕೀರ್ಣಗಳ 'ಸ' ಹಾಗೂ 'ನ' ಕರಾತ್ಮಕತೆಯ ಧೋರಣೆಗಳು ತೆರೆದುಕೊಳ್ಳವ ರೀತಿ ಭಿನ್ನವಾಗಿದೆ. ಮಾನವ ಸಂಕುಲಕ್ಕೆ, ಸಂಬಂಧಗಳಲ್ಲಿ ಮಾನಸಿಕ ಕಿನ್ನತೆಗೊಳಪಟ್ಟ ಮನೋ ವೈಜ್ಞಾನಿಕ ಕಾದಂಬರಿ ಈ ಕಾಸನೋವ. ಕಾಸನೋವ ಇದು ಹೆಂಗೆಳೆಯರನ್ನು ತನ್ನಡೆಗೆ ಸೆಳೆದು ಮತ್ತೆ ಅವರಲ್ಲಿ ಬೇರೂರು ಬೇರುಸಮೇತ ಕಿತ್ತು ಹಾಕುವ ನರಭಕ್ಷಕ ಮಾನಸಿಕ ತೊಳಲಾಟಕ್ಕೆ ಬಿಂಬಿತವಾಗುವ ಕಥೆ. ದೀಪಿಕಾ ಬಾಬು

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ವೀರಾಪುತ್ರ, ನಚಿಕೇತ, ಚಾರುದತ್ತ ಮತ್ತು ಸಿಂಧೂರಿಯ ಪಾತ್ರಗಳು ಕಾಡುತ್ತವೆ. ಮಾನಸಿಕ ತೊಳಲಾಟಕ್ಕೆ ಹಿಡಾಗುವ ಪ್ರತಿಯೊಬ್ಬರ ಪರಿಸ್ಥಿಯ ಇಲ್ಲಿ ಕಾಣಬಹುದು ನಾವು. ಬಾಲ್ಯದಲ್ಲಿ ಕಲಿತದ್ದೆ ಬದುಕಿಗೆ ಬರುವುದು ಎಂಬುವಂತೆ ಅದರ ಸಂಪೂರ್ಣ ಸ್ವರೂಪ ಈ ಕಾಸನೋವ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಇದೊಂದು ಸಕರಾತ್ಮಕ ಮತ್ತು ನಕರಾತ್ಮಕತೆಯ ತೊಳಲಾಟದಲ್ಲಿ ಬಿಂಬಿತವಾಗುವ ಮನೋವೈಜ್ಞಾನಿಕ ಕಾದಂಬರಿಯಾಗಿದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಎಲ್ಲಾ ವಯೋಮಾನದವರು ಓದಾಬಹುದಾದ ಪುಸ್ತಕವಿದು. ಯುವಕರಿಗೆ ಹೆಚ್ಚು ಸೂಕ್ತವಾಗಿದೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

2
Votes
88
Views
3 Months
Since posted

Voting Closed!

Scroll to Top